ಉಪಾಸನ ಕೊನಿಡೆಲಾ ಅವರು ತೆಲುಗು ಸ್ಟಾರ್ ಹೀರೋ ರಾಮ್ ಚರಣ್ ತೇಜ್ ಅವರ ಪತ್ನಿ, ಮೆಗಾಸ್ಟಾರ್ ಕುಟುಂಬದ ಸೊಸೆ ಆಗಿರುವ ಈಕೆ ಹುಟ್ಟುವಾಗಲೇ ಅಗರ್ಭ ಶ್ರೀಮಂತೆಯಾಗಿ ಹುಟ್ಟಿ, ಈಗ ಅಂತಹದ್ದೇ ಒಂದು ಕುಟುಂಬಕ್ಕೆ ಸೊಸೆ ಆಗಿ ಹೋಗಿದ್ದಾರೆ. ಮಹಾರಾಣಿಯಂತೆ ಬದುಕುವುದಕ್ಕೆ ಯಾವುದೇ ತೊಂದರೆ ಇಲ್ಲದಿದ್ದರೂ ತನ್ನನ್ನು ಹಲವು ಕೆಲಸಗಳಲ್ಲಿ ತೊಡಗಿಸಿಕೊಂಡು ಸಮಾಜ ಮುಖಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ.
ಆದರೂ ಕೂಡ ಈಕೆಯ ಪ್ರತಿಯೊಂದು ವಿಷಯ ಕೂಡ ಟ್ರೋಲ್ ಆಗುತ್ತದೆ. ಇದಕ್ಕೆಲ್ಲ ಕುಗ್ಗದ ಉಪಾಸನ ಹಲವು ಬಾರಿ ಅವರಿಗೆಲ್ಲ ತಿರುಗೇಟು ಕೊಡುವ ಪ್ರಯತ್ನವನ್ನು ಮಾಡಿದ್ದಾರೆ. ಈಗ ವೇದಿಕೆ ಒಂದರ ಮೇಲೆ ಅದೇ ವಿಷಯದ ಬಗ್ಗೆ ಮಾತನಾಡಿದ್ದಾರೆ ಜೋಶ್ ಟಾಕ್ ಎನ್ನುವ ಯೂಟ್ಯೂಬ್ ಚಾನೆಲ್ ಬಹಳ ಖ್ಯಾತಿ ಹೊಂದಿದೆ. ಅನೇಕರು ತಮಗೆ ಬೇಸರವಾದಾಗ, ಜೀವನ ಉತ್ಸಾಹ ಕುಸಿದು ಹೋದಾಗ ಆ ಕಾರ್ಯಕ್ರಮದಲ್ಲಿ ಮಾತನಾಡಿರುವ ಮೋಟಿವೇಷನ್ ಮಾತುಗಳನ್ನು ಕೇಳಿ ಚೇತರಿಸಿಕೊಳ್ಳುತ್ತಾರೆ.
ಈಗಾಗಲೇ ಸಾಕಷ್ಟು ಜನಪ್ರಿಯ ತಾರೆಗಳು ಈಗಾಗಲೇ ಜೋಶ್ ಟಾಕ್ ವೇದಿಕೆ ಮೇಲೆ ಬಂದು ತಮ್ಮ ಜೀವನದ ಅನುಭವಗಳು, ತಾವು ಪಟ್ಟ ಶ್ರಮ ಹಾಗೂ ಸಾಧನೆ ಕುರಿತು ಮಾತನಾಡಿ ಇತರರಿಗೆ ಸ್ಪೂರ್ತಿ ಆಗಿದ್ದಾರೆ. ಇದೆ ಅವಕಾಶ ಉಪಾಸನ ಅವರ ಪಾಲಿಗೂ ಒಲಿದಿದ್ದು ಆ ವೇದಿಕೆ ಮೇಲೆ ಇಷ್ಟು ದಿನದಿಂದ ಮೌನವಾಗಿ ಇಟ್ಟುಕೊಂಡಿದ್ದ ಎಲ್ಲಾ ಮಾತುಗಳನ್ನು ಆಡಿದ್ದಾರೆ. ಜನ ನನ್ನನ್ನು ಬೆಲ್ಲಿ ತಟ್ಟೆಯಲ್ಲಿ ಚಿನ್ನದ ಸ್ಪೂನ್ ನಲ್ಲಿ ತಿಂದಿದ್ದೀರಾ ಎನ್ನುವ ರೀತಿ ಮಾತನಾಡುತ್ತಾರೆ, ಆದರೆ ನಾನು ಮನಸ್ಸು ಮಾಡಿದ್ದರೆ ಡೈಮಂಡ್ ಸ್ಪೂನ್ ಅಲ್ಲಿ ಬೇಕಾದರೂ ತಿನ್ನಬಹುದು.
ಆ ರೀತಿ ಎಲ್ಲಾ ಅನುಕೂಲತೆ ಕೂಡ ನಮ್ಮ ಮನೆಯಲ್ಲಿ ಇತ್ತು ಆದರೆ ನಾನು ಅಂಥ ವಾತಾವರಣದಲ್ಲಿ ಬೆಳೆಯಲಿಲ್ಲ. ನಾವೆಲ್ಲ ಸಂತೋಷದಿಂದ ಒಟ್ಟಿಗೆ ಕೂತು ಊಟ ಮಾಡುವುದನ್ನೇ ಸಂತೃಪ್ತಿ ಎಂದು ಅಂದುಕೊಂಡು ಬಂದ ಸಂಸ್ಕಾರ ನಮ್ಮದು. ಈಗ ಸಹ ನಾನು ಯಾವುದೇ ಶ್ರಮ ಇಲ್ಲದೆ ಆರಾಮಾಗಿ ಜೀವನವನ್ನು ನಡೆಸಬಹುದು ಆದರೂ ಕೂಡ ಇದುವರೆಗೆ ನಾನು ಹಲವೆಡೆ ತೊಡಗಿಸಿಕೊಂಡಿದ್ದೇನೆ, ನನ್ನ ಅಷ್ಟೆಲ್ಲಾ ಶ್ರಮಗಳ, ಯೋಚನೆಗಳ ಉದ್ದೇಶ ಇಷ್ಟೇ.
ನನ್ನ ಎರಡು ಕುಟುಂಬಗಳು ಕೂಡ ಅಂತದೊಂದು ವಾತಾವರಣ ಹೊಂದಿವೆ ಅಂತಹ ವಾತಾವರಣದಲ್ಲಿರುವ ನಾನು ಇಷ್ಟೆಲ್ಲಾ ಅನುಕೂಲತೆಗಳಿದ್ದರೂ ಕೂಡ ಏನನ್ನು ಮಾಡದೆ ಹೋದರೆ ಅದು ವ್ಯರ್ಥವಾಗುತ್ತದೆ. ಹಾಗೆ ನಾನು ಮನುಷ್ಯರಾಗಿ ಹುಟ್ಟಿ ಹೆಸರು ಪಡೆಯೋದು ಮಾತ್ರವಲ್ಲ ಬದುಕು ಸಾರ್ಥಕ ಗೊಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.
ನನ್ನ ಒಂದು ಕುಟುಂಬದಿಂದ ಜನರ ಆರೋಗ್ಯದಲ್ಲಿ ಬದಲಾವಣೆ ಸಿಗುತ್ತದೆ, ಮತ್ತೊಂದು ಕುಟುಂಬದಿಂದ ಒಳ್ಳೆ ಸಂದೇಶಗಳು ಸಮಾಜಕ್ಕೆ ಸಿಗುತ್ತಿದೆ ನಾನು ಇದರ ಒಂದು ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ. ನಾನು ಐದು ವರ್ಷದವಳು ಇದ್ದಾಗಲೇ ತಾತನ ಕೈ ಹಿಡಿದುಕೊಂಡು ಅಪೋಲೋ ಆಸ್ಪತ್ರೆಯಲ್ಲಿ ಓಡಾಡಿದ್ದೇನೆ. ನಂತರ ನನ್ನನ್ನ ನಾನು ಕಂಡುಕೊಳ್ಳಲು ಬೇರೆ ಕ್ಷೇತ್ರಗಳನ್ನು ಆರಿಸಿಕೊಂಡಿದ್ದೆ, ಎಲ್ಲಾ ಆದ ಬಳಿಕ ನನಗೆ ಅರ್ಥವಾಗಿದ್ದು.
ನನ್ನ ಮೊದಲ ಹಾದಿಯೇ ಸರಿ ಎಂದು ಈಗ ಅದನ್ನೇ ನನ್ನ ಬದುಕಿನ ಹಾದಿ ಹಾಕಿಸಿಕೊಳ್ಳುವ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ ಅವರು ಟ್ರೋಲ್ ಮಾಡುವವರಿಗೆ ಇನ್ನೊಂದು ರೀತಿಯ ಉತ್ತರವನ್ನು ಕೂಡ ಕೊಟ್ಟಿದ್ದಾರೆ. ಅದೇನೆಂದರೆ, ಟ್ರೋಲ್ ಮಾಡುವುದಾಗಲಿ ನೆಗೆಟಿವ್ ಆಗಿ ಮಾತನಾಡುವುದೆಲ್ಲಾ ನಾವು ಸೆಲೆಬ್ರಿಟಿ ಆಗಿ ಸಮಾಜದಲ್ಲಿ ಗುರುತಿಸಿಕೊಂಡ ಮೇಲೆ ಮಾಮೂಲು.
ಇದಕ್ಕೆಲ್ಲಾ ಅತಿಯಾಗಿ ತಲೆ ಕೆಡಿಸಿಕೊಂಡು ಧೃತಿಗೆಡುವ ವ್ಯಕ್ತಿತ್ವ ನನ್ನದಲ್ಲ, ಅವರು ಹೇಳುವ ವಿಷಯದಲ್ಲಿ ಒಳ್ಳೆಯದಿದ್ದರೆ ಖಂಡಿತ ತೆಗೆದುಕೊಳ್ಳುತ್ತೇನೆ ,ನೆಗೆಟಿವ್ ಆಗಿ ಹೇಳಿದಾಗಲೂ ಅದರಿಂದ ಕಲಿಯುವ ಪ್ರಯತ್ನ ಮಾಡುತ್ತೇನೆ. ಆದರೆ ನೆಗೆಟಿವ್ ಆಗಿ ಹೇಳುವವರು ಮೊದಲು ನನ್ನ ಈ ಸಲಹೆಯನ್ನು ಸ್ವೀಕರಿಸಿ ನೆಗೆಟಿವ್ ಆಗಿ ನೀವು ಕಮೆಂಟ್ ಮಾಡುವುದರಿಂದ ನೆಗಟಿವ್ ಎನರ್ಜಿ ನಿಮ್ಮಲ್ಲಿ ತುಂಬಿಕೊಳ್ಳುತ್ತದೆ, ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡಿ ಎಂದಿದ್ದಾರೆ.
ಜೊತೆಗೆ ಪತಿ ಜೊತೆಗಿನ ಭಾಂದವ್ಯದ ಕುರಿತು ಕೂಡ ಮಾಹಿತಿ ಹಂಚಿಕೊಂಡ ಅವರು ನಾನು ಮದುವೆ ಆದ ಮೇಲೆ ಬಿಜಿ ಆಗಿರುವೆ. ಆದರೂ ಕೂಡ ರಾಮ್ ಚರಣ್ ಅವರ ಟೈಮ್ ಜೊತೆ ಅವರ ಶೆಡ್ಯೂಲ್ ಜೊತೆ ಮ್ಯಾಚ್ ಮಾಡಿಕೊಳ್ಳುತ್ತೇನೆ. ಹಾಗಾಗಿ ಪ್ರೀತಿ ವಿಶ್ವಾಸ ನಂಬಿಕೆ ತುಂಬಿಕೊಂಡರೆ ಅದೇ ಎಲ್ಲದಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಹೇಳಿ ಪತಿಯ ಗುಣವನ್ನು ಕೂಡ ಹಾಡಿ ಹೊಗಳಿದ್ದಾರೆ.