ವಿಷ್ಣುಗೆ ಸಿಗಬೇಕಾದ ಗೌರವ ಈ ನಾಡಲ್ಲಿ ಇನ್ನು ಸಿಕ್ಕಿಲ್ಲ ಎಂಬ ಆ.ಕ್ರೋ.ಶ ಹೊರಹಾಕಿ ವೇದಿಕೆಯಿಂದ ಹೊರ ನಡೆದ ನಟ ರಮೇಶ್ ಭಟ್

 

ಕನ್ನಡದ ಹಿರಿಯ ಕಲಾವಿದ ರಮೇಶ್ ಭಟ್ ಅವರು ಹಲವು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಸಕ್ರಿಯರಾಗಿದ್ದಾರೆ. ಈಗಲೂ ಸಹ ಕಿರುತೆರೆ ಧಾರವಾಹಿಗಳು ಮತ್ತು ಸಿನಿಮಾಗಳಲ್ಲಿ ಪೋಷಕ ಪಾತ್ರಕ್ಕೆ ಬಹಳ ಬೇಡಿಕೆ ಇರುವ ಇವರು ಡಾಕ್ಟರ್ ವಿಷ್ಣುವರ್ಧನ್ ಅವರ ಆತ್ಮೀಯ ಬಳಗದಲ್ಲಿ ಒಬ್ಬರು. ವಿಷ್ಣುವರ್ಧನ್ ಅವರ ಹತ್ತಾರು ಸಿನಿಮಾಗಳಲ್ಲಿ ಪಾತ್ರ ಮಾಡಿದ್ದ ರಮೇಶ್ ಭಟ್ ಅವರು ಅವರ ಕೊನೆಯ ಆಪ್ತರಕ್ಷಕ ಸಿನಿಮಾದಲ್ಲೂ ಕೂಡ ಇದ್ದರು.

ಈ ರೀತಿ ಅವರ ಆಪ್ತ ಸ್ನೇಹಿತ ಮತ್ತು ಹಿತೈಷಿ ಆಗಿದ್ದ ರಮೇಶ್ ಭಟ್ ಅವರು ವಿಷ್ಣುದಾದಾ ಅವರಿಗೆ ಆದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಾರೆ. ವಿಷ್ಣು ಸೇವಾ ಸಮಿತಿ ಅವರು ವಿಷ್ಣುವರ್ಧನ್ ಅವರ ಉತ್ಸವ ಮಾಡುವ ಯೋಜನೆ ಹಾಕಿಕೊಂಡಿದ್ದರು. ಅದರ ಸಂಬಂಧ ಕಾರ್ಯಕ್ರಮವನ್ನು ಏರ್ಪಡಿಸಿದ್ದರು ಆ ಕಾರ್ಯಕ್ರಮದ ವೇದಿಕೆ ಮೇಲೆ ವಿಷ್ಣುವರ್ಧನ್ ಅವರ ಆತ್ಮೀಯರಾಗಿದ್ದ ಅನೇಕರು ಆಸೀನರಾಗಿದ್ದರು. ರಮೇಶ್ ಭಟ್ ಅವರು ಸಹ ಇದರಲ್ಲಿ ಒಬ್ಬರಾಗಿದ್ದು ವಿಷ್ಣು ದಾದಾ ಅವರ ಬಗ್ಗೆ ಅಷ್ಟು ವರ್ಷದ ಅವರ ಜೊತೆಯಲ್ಲಿದ್ದ ಒಡನಾಟದ ಬಗ್ಗೆ ಅವರ ವ್ಯಕ್ತಿತ್ವ ಬಗ್ಗೆ ಮಾತನಾಡುತ್ತಾ ಅಂತ್ಯದಲ್ಲಿ ನಾವು ಅವರಿಗೆ ಕೊಡಬೇಕಾದ ಗೌರವವನ್ನು ಸರಿಯಾಗಿ ಸಲ್ಲಿಸಲಿಲ್ಲ ಬಹಳ ದೊಡ್ಡ ಅನ್ಯಾಯ ಅವರಿಗೆ ಆಗಿದೆ ಎಂದು ಭಾವುಕರಾಗಿದ್ದಾರೆ.

ಈ ವಿಷಯ ಮುಖ್ಯವಾಗಿ ಪ್ರಸ್ತಾಪ ಆಗಿದ್ದು ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗುವ ವಿಷಯವಾಗಿ. ವಿಷ್ಣುವರ್ಧನ್ ಅವರು ಇ’ಹ’ಲೋ’ಕ ತ್ಯಜಿಸಿ, ದಶಕಕ್ಕಿಂತಲೂ ಹೆಚ್ಚಿನ ವರ್ಷವಾಯಿತು, ಇನ್ನು ಸಹ ಅವರ ಸಮಾಧಿ ಮತ್ತು ಸ್ಮಾರಕದ ವಿ’ವಾ’ದ ಹಾಗೆ ಇದೆ ಎನ್ನುವುದು ರಮೇಶ್ ಭಟ್ ಅವರ ಆ.ಕ್ರೋ.ಶ.ಕ್ಕೆ ಕಾರಣ ಆಗಿತ್ತು. ಪ್ರತಿ ವರ್ಷ ಅಭಿಮಾನಿಗಳೆಲ್ಲ ಅವರ ಹುಟ್ಟು ಹಬ್ಬದ ದಿನ ಮತ್ತು ಅವರ ಪುಣ್ಯಸ್ಮರಣೆ ದಿನ ಸ.ಮಾ.ಧಿ ಬಳಿ ಹೋಗುತ್ತೇವೆ, ಹೂ ಬಿಟ್ಟು ಕೈಮುಗಿದು ಬರುತ್ತೇವೆ.

ಇನ್ನು ಸಹ ಎಷ್ಟು ಸರ್ಕಾರಗಳು ಬದಲಾದರೂ ಅವರ ಸ್ಮಾರಕ ನಿರ್ಮಾಣದ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಆಗಲಿಲ್ಲ ಈ ರಾಜ್ಯ ಕಂಡ ಮಹಾ ನಟನ ವಿಷಯದಲ್ಲಿ ಆಗಿರುವ ತಾತ್ಸಾರ ಇದು, ಆದಷ್ಟು ಬೇಗ ಎಲ್ಲಾ ಒಗ್ಗಟ್ಟಾಗಿ ಇದನ್ನು ಇತ್ಯರ್ಥ ಮಾಡಲೇಬೇಕು ಎನ್ನುತ್ತಾ ಬಹಳ ಆ.ಕ್ರೋ.ಶ.ದಿಂದ ಮಾತು ಶುರುಮಾಡಿದ ಇವರು ಅಂತ್ಯದಲ್ಲಿ ಭಾವುಕರಾಗಿ ಹೋದರು. ಇದೇ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ಬಹಳ ಶ್ರೇಷ್ಠ ವ್ಯಕ್ತಿತ್ವ ಹೊಂದಿದ್ದರು ಮತ್ತು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಅಪಾರ ಹೆಸರು ತಂದುಕೊಟ್ಟು ಹೋಗಿದ್ದಾರೆ.

ಈ ಕಾಲದ ಮಕ್ಕಳಿಗೆ ಅವರ ಬಗ್ಗೆ ತಿಳಿಸಿ ಅವರ ಹೆಸರು ಅಜರಾಮರವಾಗಿ ಉಳಿವಂತೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಸಹ ಹೇಳಿದರು. ಇದು ಕಳೆದ ವರ್ಷದ ಕಾರ್ಯಕ್ರಮ ಮಾತನಾಡಿದ ವಿಡಿಯೋ ಆಗಿದ್ದು ಸದ್ಯ ಈಗ ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಆಗಿದೆ. ಈ ವಿಷಯದ ಬಗ್ಗೆ ಕೂಡ ಕೆಲ ಅಭಿಮಾನಿಗಳಿಗೆ ಅಸಮಾಧಾನ ಇದ್ದು ಅವರ ಪುಣ್ಯ ಭೂಮಿ ಇರುವಲ್ಲಿ ಸ್ಮಾರಕ ಆಗಬೇಕು ಎನ್ನುವುದು ಎಲ್ಲರ ಕನಸಾಗಿತ್ತು. ಆದರೆ ಎಷ್ಟು ವರ್ಷ ಆಗಿದ್ದರು ಆ ವಿವಾದ ಬಗೆಹರಿಯದ ಕಾರಣ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ವಿಷ್ಣುವರ್ಧನ್ ಅವರ ಕುಟುಂಬವೂ ಕೂಡ ಸಮ್ಮತಿ ಸೂಚಿಸಲೇಬೇಕಾಯಿತು. ರಮೇಶ್ ಭಟ್ ಅವರು ಅಂದಿನ ಕಾರ್ಯಕ್ರಮದಲ್ಲಿ ಆಡಿದ ಆ ಎಲ್ಲ ಮಾತುಗಳನ್ನು ಪೂರ್ತಿಯಾಗಿ ಕೇಳಲು ಈ ವಿಡಿಯೋವನ್ನು ನೋಡಿ.

Leave a Comment