Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ರವಿಚಂದ್ರನ್ ತಮ್ಮ ನಟ ಬಾಲಾಜಿ, ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದು ಯಾಕೆ ಗೊತ್ತಾ.? ಇವರ ತ್ಯಾಗದ ಹಿಂದಿರುವ ಉದ್ದೇಶ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.

Posted on February 25, 2023 By Admin No Comments on ರವಿಚಂದ್ರನ್ ತಮ್ಮ ನಟ ಬಾಲಾಜಿ, ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದು ಯಾಕೆ ಗೊತ್ತಾ.? ಇವರ ತ್ಯಾಗದ ಹಿಂದಿರುವ ಉದ್ದೇಶ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹುಟ್ಟುವಾಗಲೇ ಸಿನಿಮಾ ವಾತಾವರಣವಿದ್ದ ಕುಟುಂಬದಲ್ಲಿ ಹುಟ್ಟಿದ ಕಾರಣ ಹೀರೋ ಆಗಿ ತೀರುವುದೇ ಅವರ ಗುರಿ, ಸಿನಿಮಾ ಮಾಡುವುದೇ ಅವರ ಜೀವನದ ಉದ್ದೇಶ ಎನ್ನುವ ರೀತಿಯಲ್ಲಿ ಬದುಕನ್ನು ಸಿನಿಮಾಗೆ ಅರ್ಪಿಸಿಕೊಂಡರು. ಕನ್ನಡ ಚಲನಚಿತ್ರರಂಗದ ನಾಯಕನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ, ಸಂಗೀತ ನಿರ್ದೇಶಕನಾಗಿ, ಸ್ಕ್ರಿಪ್ ರೈಟರ್ ಆಗಿ ರವಿಚಂದ್ರನ್ ಅವರು ತಮ್ಮನ್ನು ತಾವು ಸಿನಿಮಾ ರಂಗಕ್ಕೆ ತೊಡಗಿಸಿಕೊಂಡಿದ್ದಾರೆ.

ಕನ್ನಡ ಚಲನಚಿತ್ರ ರಂಗದ ಒಬ್ಬ ದಂತಕಥೆ ಎಂದರೆ ಅದು ರವಿಚಂದ್ರನ್. ಅವರು ಪ್ರೇಮಲೋಕ ಎನ್ನುವ ಸಿನಿಮಾ ತಂದು ಕನ್ನಡ ಇಂಡಸ್ಟ್ರಿಯನ್ನು ಬೇರೆ ಲೆವೆಲ್ ಗೆ ಆ ದಶಕದಲ್ಲೇ ಕೊಂಡು ಹೋಗಿದ್ದ ನಟ. ರವಿಚಂದ್ರನ್ ಅವರಿಗೆ ತಾವು ಹೀರೋ ಆಗಬೇಕು ಎನ್ನುವ ಕನಸಿನ ಜೊತೆ ತಮ್ಮ ತಮ್ಮನನ್ನು ಕೂಡ ಅದೇ ರೀತಿ ದೊಡ್ಡ ಹೀರೋ ಮಾಡಬೇಕು ಎನ್ನುವ ಹಂಬಲ ಇತ್ತು. ರವಿಚಂದ್ರನ್ ಅವರ ತಂದೆ ಈಶ್ವರಿ ಪ್ರೊಡಕ್ಷನ್ ಮಾಲಿಕರಾದ ವೀರಸ್ವಾಮಿ ಅವರಿಗೆ ಇಬ್ಬರು ಗಂಡು ಮಕ್ಕಳು. ಮೊದಲ ಮಗ ರವಿಚಂದ್ರನ್, ಎರಡನೇ ಮಗ ಬಾಲಾಜಿ.

ಬಾಲಾಜಿ ಕೂಡ ನೋಡೋದಕ್ಕೆ ರವಿಚಂದ್ರನ್ ಅವರನ್ನೇ ಹೋಲುತ್ತಾರೆ. ಅವರಂತೆ ಗುಂಗುರು ಕೂದಲು ಹಾಗೂ ಲಕ್ಷಣವಾದ ಚಹರೆವುಳ್ಳ ಇವರು ಕೂಡ ಹೀರೋ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರು. ಹಾಗಾಗಿ ತಮ್ಮನನ್ನು ಸಹ ಇಂಡಸ್ಟ್ರಿಗೆ ಕರೆ ತಂದು ಹೀರೊ ಮಾಡಿ ಬೆಳೆಸಬೇಕು ಎಂದು ರವಿಚಂದ್ರನ್ ಅವರು ಆಸೆಪಟ್ಟು ಇಂಡಸ್ಟ್ರಿಗೆ ಅವರನ್ನು ಕರೆತರುತ್ತಾರೆ. 1994ರಲ್ಲಿ ಕಾಲೇಜು ಎನ್ನುವ ಟೈಟಲ್ ನ ಸಿನಿಮಾ ಒಂದು ಸೆಟ್ಟೇರುತ್ತದೆ. ಇದಕ್ಕೆ ಮೊದಲ ಬಾರಿಗೆ ಹೀರೋ ಆಗಿ ಬಾಲಾಜಿಯವರು ಬಣ್ಣ ಹಚ್ಚುತ್ತಾರೆ.

ಒಂದು ತಿಂಗಳುಗಳ ಕಾಲ ಸಿನಿಮಾ ಚೆನ್ನಾಗಿ ಚಿತ್ರೀಕರಣ ಕೂಡ ಆಗುತ್ತದೆ. ಆದರೆ ಯಾಕೋ ಆನಂತರ ಆ ಸಿನಿಮಾ ಮುಂದುವರೆಯುವುದೇ ಇಲ್ಲ. ಸಿನಿಮಾ ಅರ್ಧಕ್ಕೆ ನಿಂತು ಹೋಗಿ ಎಲ್ಲರೂ ಅದನ್ನು ಮರೆತೇ ಬಿಡುತ್ತಾರೆ. ನಂತರ ಬಹಳ ವರ್ಷಗಳಾದ ಮೇಲೆ ರವಿಚಂದ್ರನ್ ಅವರ ತಮ್ಮನಿಗೆ ನಿರ್ದೇಶನ ಮತ್ತು ನಿರ್ಮಾಣ ಮಾಡಿ ಅಹಂ ಪ್ರೇಮಾಸ್ಮಿ ಎನ್ನುವ ಪ್ರೇಮಕಥೆಯನ್ನು ಸೃಷ್ಟಿಸುತ್ತಾರೆ. ಈ ಸಿನಿಮಾದಲ್ಲಿ ರವಿಚಂದ್ರನ್ ಅವರು ಸಹ ಪ್ರೇಮ ಬ್ರಹ್ಮ ಅಲಿಯಾಸ್ ಮನಸ್ಸು ಎನ್ನುವ ರೀತಿ ಕಾಣಿಸಿಕೊಂಡಿರುತ್ತಾರೆ.

ಅಹಂ ಪ್ರೇಮಾಸ್ಮಿ ಚಿತ್ರದ ಎಲ್ಲಾ ಹಾಡುಗಳು ಕೂಡ ಸೂಪರ್ ಹಿಟ್ ಆಗುತ್ತವೆ. ಸಿನಿಮಾ ಕೂಡ ಕಾಲೇಜು ಹುಡುಗರ ಪ್ರೇಮಕಥೆಯನ್ನು ಹೇಳುತ್ತಿದ್ದ ಕಾರಣ ಯುವಕರಿಗೆಲ್ಲಾ ಇಷ್ಟ ಆಗುತ್ತದೆ. ಆದರೂ ಕೂಡ ಅದು ಬಾಲಾಜಿ ಅವರ ಸಕ್ಸಸ್ ಬೆಳೆಯಲು ಕಾರಣವಾಗುವುದಿಲ್ಲ. ಯಾಕೆಂದರೆ ಈ ಚಿತ್ರ ಸ್ವಲ್ಪ ಹೆಸರು ಮಾಡಿದರು ಕೂಡ ಹೆಚ್ಚಿನ ಅವಕಾಶಗಳು ಅವರಿಗೆ ಬರಲಿಲ್ಲ. ನಂತರ ಕಾಣಿಸಿಕೊಂಡ ತುಂಟ ಮತ್ತು ಇನಿಯ ಸಿನಿಮಾಗಳು ಕೂಡ ಅದೇ ರೀತಿ ಆಗುತ್ತದೆ. ಕೊನೆಗೆ ರಾಜಕುಮಾರಿ ಎನ್ನುವ ಸಿನಿಮಾ ಅವೇ ಅವರು ಹೀರೋ ಆಗಿ ಕಾಣಿಸಿಕೊಂಡ ಕೊನೆ ಸಿನಿಮಾ ಆಗುತ್ತದೆ ಅದು ಕೂಡ ಅಂದುಕೊಂಡಂತೆ ಯಶಸ್ಸು ನೀಡುವುದಿಲ್ಲ.

ಈ ಎಲ್ಲಾ ಕಾರಣದಿಂದ ನಿಧಾನವಾಗಿ ಬಾಲಾಜಿ ಅವರು ಬೆಳ್ಳಿ ಪರದೆಯಿಂದ ಕಾಣೆ ಆಗುತ್ತಾರೆ. ಆದರೆ ಅವರು ಚಿತ್ರರಂಗದಿಂದ ದೂರ ಉಳಿಯುವುದಿಲ್ಲ. ವಿತರಕನಾಗಿ ಸಿನಿಮಾಗಳಿಗೆ ಕೆಲಸ ಮಾಡುತ್ತಾರೆ. ಈಶ್ವರ ಪ್ರೊಡಕ್ಷನ್ ಮಾಲೀಕರಾಗಿದ್ದ ವೀರಸ್ವಾಮಿ ಅವರು 1992ರಲ್ಲಿ ನಿ’ಧ’ನ’ರಾದಾಗ ರವಿಚಂದ್ರನ್ ಅವರು ಸಕ್ಸಸ್ ಅಲ್ಲಿ ಇದ್ದರು. ಅವರು ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು ನಿರ್ದೇಶಕರಾಗಿ ಕೂಡ ಅವರು ಬಹಳ ಬಿಝಿ ಇರುತ್ತಿದ್ದರು ಹಾಗಾಗಿ ಎಲ್ಲರೂ ಈಶ್ವರಿ ಪ್ರೊಡಕ್ಷನ್ ಕಥೆ ಮುಗಿಯಿತು, ಜವಾಬ್ದಾರಿ ತೆಗೆದುಕೊಳ್ಳುವವರು ಯಾರು ಇಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದರು.

ಆಗ 17ನೇ ಹರೆಯದವರಾಗಿದ್ದ ಬಾಲಾಜಿ ಅವರೇ ಈಶ್ವರಿ ಪ್ರೊಡಕ್ಷನ್ ನ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡರು. ಅಣ್ಣ ಸಿನಿಮಾಗಳನ್ನು ತಯಾರಿಸಿ ತೆರೆ ಮೇಲೆ ಕಂಡ ಕನಸನ್ನು ಅಚ್ಚಿಳಿಸುತ್ತಿದ್ದರೆ ತಮ್ಮ ಅದನ್ನು ಪ್ರೇಕ್ಷಕರಿಗೆ ತಲುಪಿಸುವ ವಿತರಕರ ಕೆಲಸ ಮಾಡಲು ಶುರು ಮಾಡಿದರು. ಮೊದಲಿಗೆ ಶಿವಮೊಗ್ಗ ಮೈಸೂರು ಈ ಭಾಗದ ಥಿಯೇಟರ್ಗಳಿಗೆ ವಿತರಕರಾಗಿದ್ದ ಇವರು ನಂತರ ನಿಧಾನವಾಗಿ ಕರ್ನಾಟಕದ ಪೂರ್ತಿ ವಿತಕರಾಗಿ ಕೆಲಸ ಮಾಡುತ್ತಾರೆ. ಈಗಲೂ ಕೂಡ ಅದೇ ಕೆಲಸದಲ್ಲಿ ಮುಂದುವರೆದಿದ್ದು ಬಹಳ ಲಾಭದಲ್ಲಿದ್ದಾರೆ. ಈ ರೀತಿ ಹೀರೋ ಆಗಿ ಸಿನಿಮಾದಲ್ಲಿ ಗೆಲ್ಲಲು ಆಗದೆ ಇದ್ದರೂ ತೆರೆ ಹಿಂದೆ ಸಕ್ಸಸ್ ಕಂಡಿದ್ದಾರೆ.

cinema news Tags:Actor Balaji, Balaji Kannada hero, Balaji Ravichandran, Balaji Veeraswamy, Ravichandran

Post navigation

Previous Post: ಬೆಳ್ಳಿ ಅಲ್ಲ ಡೈಮಂಡ್ ಸ್ಪೂನ್ ನಲ್ಲಿ ತಿಂದು ಬೆಳೆದವಳು ನಾನು ಎಂದು ನೆಟ್ಟಿಗರಿಗೆ ತಿರುಗೇಟು ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ. ಇದ್ದಕ್ಕಿದ್ದ ಹಾಗೇ ಉಪಾಸನಾ ಗರಂ ಆಗಲು ಕಾರಣವೇನು ಗೊತ್ತ
Next Post: ಅಪ್ಪು ಜೊತೆ ಆಕ್ಟ್ ಮಾಡಲು ಚಾನ್ಸ್ ಸಿಕ್ರು ನಟಿ ಮೇಘಾನ ರಾಜ್ ರೆಜೆಕ್ಟ್ ಮಾಡಿದ್ಯಾಕೆ ಗೊತ್ತ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme