ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ ದೇಶದ ಯಾವುದೇ ಚಿತ್ರರಂಗ ಆದರೂ ಸಹ ಸಿನಿಮಾದಲ್ಲಿ ಕಂಟೆಂಟ್ ಇದ್ದರೆ ಮಾತ್ರ ಗೆಲ್ಲುವುದು ಎನ್ನುವ ತಂತ್ರ ಎಲ್ಲರಿಗೂ ಅರಿವಾಗಿದೆ. ಹಾಗಾಗಿ ಜನ ಮೆಚ್ಚುವಂತಹ ವಿಭಿನ್ನ ಮಾದರಿಯ ಪ್ರಯೋಗಾತ್ಮಕ ಸಿನಿಮಾಗಳ ತಯಾರಿಕೆಗೆ ಮತ್ತು ನಿರ್ಮಾಣಕ್ಕೆ ಎಲ್ಲರೂ ಶ್ರಮ ಹಾಕುತ್ತಿದ್ದಾರೆ. ಕಂಟೆಂಟ್ ಇದ್ದ ಸಿನಿಮಾಗಳಲ್ಲಿ ಯಾವುದೇ ಸಿಂಪಲ್ ಸ್ಟಾರ್ ನಟಿಸಿದರು ಕೂಡ ಅದು ದೊಡ್ಡ ದೊಡ್ಡ ಸಕ್ಸಸ್ ಕಾಣುತ್ತದೆ.
ಹಾಗೆಯೇ ದೊಡ್ಡ ಸ್ಟಾರ್ ಸಿನಿಮಾದಲ್ಲಿ ಕಥೆಯೇ ಮಿಸ್ ಆದರೆ ಯಾವುದೇ ಸ್ಟಾರ್ ಹೀರೋ ಅದರಲ್ಲಿ ಅಭಿನಯಿಸಿದರು ನಂತರ ತನ್ನ ಸ್ಟಾರ್ ಡಂ ಉಳಿಸಿಕೊಳ್ಳಲು ಒದ್ದಾಡುವಂತಾಗುತ್ತದೆ. ಹೀಗಾಗಿ ಇತ್ತೀಚೆಗೆ ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಶುರುವಾದ ಮೇಲೆ ಎಲ್ಲರೂ ಸಹ ತಮ್ಮ ಸಿನಿಮಾ ಕಥೆಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ.
ಇಂತಹ ಒಂದು ರೇಸಲ್ಲಿ ಓಡುತ್ತಿರುವಾಗ ದೊಡ್ಡ ದೊಡ್ಡ ಸ್ಟಾರ್ ನಟರುಗಳು ಕಾರಣಾಂತರಗಳಿಂದ ಅನೇಕ ಸಿನಿಮಾಗಳನ್ನು ರಿಜೆಕ್ಟ್ ಮಾಡಲೇ ಬೇಕಾಗುತ್ತದೆ. ಕೆಲವೊಂದು ಸಿನಿಮಾಗಳ ಕಥೆಗಳು ಬಹಳ ಚೆನ್ನಾಗಿದ್ದರೂ ಕೂಡ ಆ ಪಾತ್ರ ತಮಗೆ ಅಥವಾ ತಮ್ಮ ಸ್ಟಾರ್ ಗಿರಿಗೆ ಒಪ್ಪುವುದಿಲ್ಲ ಎನ್ನುವ ಕಾರಣಕ್ಕೋ ಇಲ್ಲ ಒಮ್ಮೊಮ್ಮೆ ಇಂತಹ ಹೀರೋಗಳ ಸಿನಿಮಾಗಳಿಗೆ ಬೇಕಾದ ಬಜೆಟ್ ಅಷ್ಟು ಬಂಡವಾಳ ಸುರಿಯುವ ನಿರ್ಮಾಪಕರು ಇಲ್ಲ ಎನ್ನುವ ಕಾರಣಕ್ಕೋ ಹಲವು ಸಿನಿಮಾ ಕಥೆಗಳು ಹಾಗೆ ಉಳಿದುಕೊಂಡು ಬಿಡುತ್ತವೆ.
ಈ ರೀತಿ ಹಲವು ತಾರೆಗಳು ಕಥೆ ಕೇಳಿ ಬಿಟ್ಟಿದ್ದ ಸಿನಿಮಾಗಳನ್ನು ಒಪ್ಪಿಕೊಂಡು ಮತ್ತೊಬ್ಬ ನಾಯಕ ಅದನ್ನು ಮಾಡಿರುವ ಉದಾಹರಣೆಗಳು ಕನ್ನಡದಲ್ಲಿ ಹಲವಿವೆ. ಮತ್ತೊಮ್ಮೆ ಈ ರೀತಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ರಾಕಿಂಗ್ ಸ್ಟಾರ್ ಯಶ್ ರಿಜೆಕ್ಟ್ ಮಾಡಿದ್ದ ಕಥೆ ಒಂದನ್ನು ಸಿಂಪಲ್ ಸ್ಟಾರ್ ರಕ್ಷಿತ್ ಒಪ್ಪಿಕೊಂಡಿದ್ದಾರೆ.
ಕನ್ನಡದ ಪ್ರತಿಭಾವಂತ ನಿರ್ದೇಶಕ ಎಂದು ಕರೆಸಿಕೊಂಡಿರುವ ಹೇಮಂತ್ ರಾವ್ (director Hemanth rao) ಅವರ ನಿರ್ದೇಶನದ ಸಿಂಪಲ್ ಸ್ಟಾರ್ ರಕ್ಷಿತ್ (Simple star Raskshith) ಹಾಗೂ ರುಕ್ಮಿಣಿ ವಸಂತ್ (Rukmini Vasanth) ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ, ಸಿನಿಮಾ ಆರಂಭದ ದಿನದಿಂದಲೂ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ, ಸಿನಿಮಾದ ಪೋಸ್ಟರ್ ಹಾಗೂ ಫೋಟೋಶೂಟ್ ವಿಶುವಲ್ಸ್ ಮೂಲಕವೇ ವಿಶ್ವಾಸ ಮೂಡಿಸಿರುವ “ಸಪ್ತಸಾಗರದಾಚೆ ಎಲ್ಲೋ” ಎನ್ನುವ ಸಿನಿಮಾ ಕಥೆಯು ರಕ್ಷಿತ್ ಶೆಟ್ಟಿ ಅವರಿಗೂ ಮೊದಲು ಪುನೀತ್ ಹಾಗೂ ಯಶ್ ಅವರ ಬಳಿ ಹೋಗಿತ್ತಂತೆ.
ಈ ಕುರಿತು ನಿರ್ದೇಶಕರಾದ ಹೇಮಂತ್ ರಾವ್ ಅವರು ಸಂದರ್ಶನ ಒಂದರಲ್ಲಿ ಮಾತನಾಡಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆ ಸ್ಟಾರ್ ಹೀರೋಗಳೇ ರಿಜೆಕ್ಟ್ ಮಾಡಿದ್ದ ಕಥೆಯನ್ನು ರಕ್ಷಿತ್ ಒಪ್ಪಿಕೊಂಡರೆ ಎಂದು ಪ್ರಶ್ನಿಸುತ್ತಿದ್ದಾರೆ ಹಾಗೂ ಸಿನಿಮಾದಲ್ಲಿ ಏನಾದರೂ ಕೊರತೆ ಇದೆಯಾ ಎನ್ನುವ ಅನುಮಾನವನ್ನು ಸಹ ವ್ಯಕ್ತಪಡಿಸುತ್ತಿದ್ದಾರೆ.
ಇದಕ್ಕೆ ಸ್ಪಷ್ಟನೆ ಕೊಟ್ಟಿರುವ ಹೇಮಂತ್ ರಾವ್ ಅವರು ಈ ಸಿನಿಮಾ ರಕ್ಷಿತ್ ಅವರ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾಗೂ ಮುಂಚೆಯೇ ಸ್ಕ್ರಿಪ್ಟ್ ಮಾಡಿ ಇಟ್ಟುಕೊಂಡಿದ್ದ ಸಿನಿಮಾ ಆಗಿತ್ತು. ನಿರ್ಮಾಪಕರ ಕೊರತೆಯಿಂದ ಯಶ್ ಹಾಗೂ ಪುನೀತ್ ಅವರ ಬಳಿ ಸಿನಿಮಾ ಕಥೆ ಹೇಳಿದಾಗ ಅವರು ಒಪ್ಪಿಕೊಂಡಿದ್ದರೂ ಆ ಸಿನಿಮಾಗೆ ಬಂಡವಾಳ ಹೂಡುವ ನಿರ್ಮಾಪಕರು ಇರದ ಕಾರಣ ಅದು ಅಲ್ಲಿಗೆ ನಿಂತಿತ್ತು ಎಂದು ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ.