ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan birthday) ಅವರ ಹುಟ್ಟುಹಬ್ಬ ಯಾವುದೇ ನಾಡ ಹಬ್ಬಕ್ಕೆ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ನಡೆದಿದೆ. ತಡರಾತ್ರಿಯಿಂದಲೇ ಮನೆ ಮುಂದೆ ಧಾವಿಸಿದ ಸಾವಿರಾರು ಅಭಿಮಾನಿಗಳು ನೆಚ್ಚಿನ ನಟನ ಕೈಕುಲುಕಿ, ಹತ್ತಿರದಿಂದ ಕಂಡುಕೊಂಡು ಸಂತಸಪಟ್ಟಿದ್ದಾರೆ. ಈ ಬಾರಿ ದರ್ಶನ್ ಹುಟ್ಟುಹಬ್ಬ ಬಹಳ ಅರ್ಥಪೂರ್ಣವಾಗಿ ಜರುಗಿತ್ತು. ಯಾಕೆಂದರೆ ಇಷ್ಟು ವರ್ಷ ದರ್ಶನ್ ಅವರ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡಿಸುವ ಮೂಲಕ ಕಟೌಟ್ ಗಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಹಾರ ತುರಾಯಿ ತಂದು ಕೊಡುವ ಮೂಲಕ ಆಚರಿಸುತ್ತಿದ್ದರು.
ಆದರೆ ಇದೆಲ್ಲದರಿಂದ ಹಣ ದುಂದು ವೆಚ್ಚವಾಗಿತ್ತಿದೆ ಎನ್ನುವುದನ್ನು ಅರಿತ ದಚ್ಚು ತನ್ನ ಸೆಲೆಬ್ರಿಟಿಸ್ ಗಳಿಗೆ ಈ ರೀತಿ ಹಣ ವ್ಯರ್ಥ ಮಾಡುವುದು ಬೇಡ ಬದಲಿಗೆ ದವಸ ಧಾನ್ಯ ತಂದು ಕೊಡಿ ಅಗತ್ಯ ಇರುವವರಿಗೆ ತಲುಪಿಸುತ್ತೇನೆ ಎಂದು ಮಾತು ಕೊಟ್ಟಿದ್ದರು. ಅದಕ್ಕೆ ಓಗೊಟ್ಟ ದರ್ಶನ್ ಅಭಿಮಾನಿಗಳು ಕ್ವಿಂಟಾಲ್ ಗಟ್ಟಲೆ ದವಸಧಾನ್ಯವನ್ನು ತಂದು ದರ್ಶನ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ದರ್ಶನ್ ಅವರು ಸಹ ಅದನ್ನೆಲ್ಲ ಅನಾಥಾಶ್ರಮ, ವೃದ್ಧಾಶ್ರಮ, ಮಠಗಳಿಗೆ ಮತ್ತು ದೇವಸ್ಥಾನಗಳಿಗೆ ಕೊಟ್ಟು ತನ್ನ ಅಭಿಮಾನಿಗಳಿಗೂ ಪುಣ್ಯ ಸೇರುವಂತೆ ಮಾಡಿದ್ದಾರೆ.
ದರ್ಶನ್ ಅವರಿಗೆ ಇಡೀ ಕರ್ನಾಟಕದಲ್ಲಿ ಅತಿ ದೊಡ್ಡ ಅಭಿಮಾನಿ ಬಳಗ ಇದೆ ಇದುವರೆಗೂ ಕೂಡ ಅಭಿಮಾನಿಗಳ ಅಭಿಮಾನದ ಮತ್ತು ಅಭಿಮಾನಿಗಳ ಸಂಖ್ಯೆಯ ವಿಚಾರವಾಗಿ ನಂಬರ್ ಸ್ಥಾನದಲ್ಲಿರುವ ದರ್ಶನ್ ಅವರ ಫ್ಯಾನ್ ಬೇಸ್ ಮೇಲೆ ಎಲ್ಲರ ಕಣ್ಣು ಇದೆ. ದರ್ಶನ್ ಅವರು ಇದುವರೆಗೆ ಸಾಕಷ್ಟು ವೈಯಕ್ತಿಕ ವಿಷಯದಲ್ಲಿ ವಿ’ವಾ’ದ ಮಾಡಿಕೊಂಡಿದ್ದಾರೆ. ಅದು ಮೀಡಿಯಾದಲ್ಲಿ ಪ್ರಸಾರವಾಗಿ ಜಗಜ್ಜಾಹಿರಾಗಿದೆ. ಇಂತಹದೇ ಒಂದು ವಿಷಯದಿಂದ ಹಿಂದೊಮ್ಮೆ ದರ್ಶನ್ ಜೈಲು ಸೇರುವ ಪರಿಸ್ಥಿತಿ ಕೂಡ ಎದುರಾಗಿತ್ತು.
ಅಭಿಮಾನಿಗಳು ಮತ್ತು ದರ್ಶನ್ ಅವರ ಸಂಬಂಧ ಹಾಗೂ ಅವರ ಸಿನಿಮಾಗಳು ಎಂದಿಗೂ ಕೂಡ ಎಲ್ಲರಿಗೂ ಮಾದರಿ ಆಗುವ ರೀತಿ ಇರುತ್ತವೆ ಆದರೆ ಅವರ ವೈಯಕ್ತಿಕ ವಿಚಾರಗಳು ಮಾತ್ರ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿ ಗಾ’ಸಿ’ಪ್ ಟಾಪಿಕ್ (Darshan gossips and controversies) ಆಗಿಬಿಡುತ್ತವೆ. ಅನೇಕ ನಟಿಮಣಿಯರ ಜೊತೆ ದರ್ಶನ್ ಅವರ ಹೆಸರು ತಳಕು ಹಾಕಿಕೊಂಡಿರುವುದರಿಂದ ದರ್ಶನ್ ವ್ಯಕ್ತಿತ್ವಕ್ಕೆ ಅದು ಒಂದು ಕ’ಪ್ಪು’ಚು’ಕ್ಕೆ (Black mark) ಆಗಿದೆ.
ಈ ಹಿಂದೆ ದರ್ಶನ್ ಪತ್ನಿ ಮೇಲೆ ಹ.ಲ್ಲೆ ಮಾಡಿ ಜೈ.ಲು ಸೇರಿದ ಸಂದರ್ಭದಲ್ಲಿ ಈ ಘಟನೆಗೆಲ್ಲ ಪ್ರಿನ್ಸ್ ಮತ್ತು ಯೋಧ ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸಿದ ನಾಯಕ ನಟಿ ನಿಖಿತ ಅವರೇ ಕಾರಣ ಎಂದು ಧೂಷಿಸಲಾಗಿತ್ತು. ಸಾಲದ್ದಕ್ಕೆ ಆ ನಟಿಯನ್ನು ಕನ್ನಡದಲ್ಲಿ ಕೆಲವು ವರ್ಷಗಳ ಕಾಲ ಬ್ಯಾನ್ ಕೂಡ ಮಾಡಲಾಗಿತ್ತು. ಆದರೆ ವಿಚಾರ ಈಗ ಮತ್ತೊಬ್ಬರ ಕಡೆ ತಿರುಗಿದೆ. ದರ್ಶನ್ ಅವರ ಈಗಿನ ವಿವಾದಗಳಲ್ಲೆಲ್ಲ ಪವಿತ್ರ ಗೌಡ ಹೆಸರು ತಪ್ಪಿಲ್ಲದೆ ಸೇರಿರುತ್ತದೆ.
ದರ್ಶನ್ ಸಂಸಾರದಲ್ಲಿ ಎಲ್ಲವೂ ಸರಿ ಹೋಗಿಲ್ಲ ಜೊತೆಗೆ ಪವಿತ್ರ ಗೌಡ ಅವರ ಜೊತೆ ಮಿತಿಮೀರಿದ ಸಲಿಗೆ ಇದೆ ಎನ್ನುವುದು ಎಲ್ಲಾ ಕಡೆ ಸುದ್ದಿ ಆಗುತ್ತಿದೆ. ಆಗಾಗ ಪವಿತ್ರ ಗೌಡ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ದರ್ಶನ್ ಜೊತೆಗೆ ಬಹಳ ಕ್ಲೋಸ್ ಆಗಿರುವ ಫೋಟೋಗಳನ್ನು ಕೂಡ ಶೇರ್ ಮಾಡುತ್ತಾರೆ. ಇದುವರೆಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ (Darshan wife Vijayalakshmi) ಅವರು ಎಲ್ಲೂ ನೇರವಾಗಿ ಈ ವಿಷಯದ ಬಗ್ಗೆ ಮಾತನಾಡಿರಲಿಲ್ಲ ಆದರೆ ಮೊದಲ ಬಾರಿಗೆ ನೆನ್ನೆ ದರ್ಶನ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಇಷ್ಟು ದಿನದ ಮೌನವನ್ನು ಮುರಿದು ಆ’ಕ್ರೋ’ಶ ಹೊರ ಹಾಕಿದ್ದಾರೆ.
ಅದೇನೆಂದರೆ ಕಿರುತೆರೆಯ ಜೊತೆಯಲ್ಲಿ ಧಾರಾವಾಹಿ ಖ್ಯಾತಿಯ ಮೇಘ ಶೆಟ್ಟಿ (Jothejotheyali Megha Shetty) ಅವರು ದರ್ಶನ್ ಅವರಿಗೆ ಹುಟ್ಟು ಹಬ್ಬದ ಪ್ರಯುಕ್ತ ಪಾರ್ಟಿ ಅರೇಂಜ್ ಮಾಡಿ ವಿಶೇಷವಾಗಿ ಸೆಲೆಬ್ರೇಟ್ ಮಾಡಿದ್ದರು. ಅಲ್ಲಿ ಮೇಘ ಶೆಟ್ಟಿ ಜೊತೆ ಪವಿತ್ರ ಗೌಡ (Pavithra gowda) ಕೂಡ ಕಾಣಿಸಿಕೊಂಡಿದ್ದರು. ಈ ವಿಡಿಯೋ ನೋಡಿದ ವಿಜಯಲಕ್ಷ್ಮಿ ಇನ್ಸ್ಟಾದಲ್ಲಿ ಮೇಘ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇನೆ ನನ್ನ ಸಂಸಾರ ಹಾಳು ಮಾಡುವ ವೀಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಹಾಗೂ ರೀ ಪೋಸ್ಟ್ ಮಾಡುವುದನ್ನು ನಿಲ್ಲಿಸಿ.
ಇದರಿಂದ ನನಗೂ ನನ್ನ ಮಗನಿಗೂ ತುಂಬಾ ನೋವಾಗುತ್ತಿದೆ. ಇದನ್ನು ಪೋಸ್ಟ್ ಮಾಡುವ ಅವರು ಸಹ ಒಂದು ಹೆಣ್ಣಾಗಿ ಇದರ ಬಗ್ಗೆ ಎರಡು ಬಾರಿ ಯೋಚನೆ ಮಾಡಬೇಕಿತ್ತು ಇದು ಅವರ ನೈತಿಕತೆಯನ್ನು ತೋರಿಸುತ್ತದೆ. ನಾನು ಸುಮ್ಮನಿದ್ದೇನೆ ಎನ್ನುವ ಮಾತ್ರಕ್ಕೆ ಈ ನಾನ್ಸೆನ್ಸ್ ಎಲ್ಲವನ್ನು ಸಹಿಸುವುದಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ. ಆ ಕೂಡಲೇ ಮೇಘ ಶೆಟ್ಟಿ ಅವರು ಎಚ್ಚೆತ್ತುಕೊಂಡು ಅದನ್ನು ಡಿಲೀಟ್ ಸಹ ಮಾಡಿದ್ದಾರೆ. ಈ ವಿಷಯದಲ್ಲಿ ಅಭಿಮಾನಿಗಳು ವಿಜಯಲಕ್ಷ್ಮಿ ಅವರ ಪರ ನಿಂತಿದ್ದು ಒಬ್ಬ ಹೆಂಡತಿಯಾಗಿ ನಿಮಗೆ ಕೇಳುವ ಹಕ್ಕು ಇದೆ ಎಂದು ಅವರಿಗೆ ಸಪೋರ್ಟ್ ಮಾಡುತ್ತಿದ್ದಾರೆ.