ಕನ್ನಡದ ಹೆಸರಾಂತ ಹಾಸ್ಯ ಕಲಾವಿದ ಬುಲೆಟ್ ಪ್ರಕಾಶ್ (Comedy actor Bullet Prakash) ಅವರು ಇನ್ನೂ ಹತ್ತಾರು ವರ್ಷಗಳು ಇದ್ದು ನಮ್ಮನ್ನು ನಕ್ಕು ನಲಿಸಬೇಕಾಗಿತ್ತು. ಆದರೆ ವಿಧಿ ಆಟಕ್ಕೆ ಅವರು ಬಹಳ ಕಡಿಮೆ ವಯಸ್ಸಿಗೆ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಬುಲೆಟ್ ಪ್ರಕಾಶ್ ಅವರು ತಮ್ಮ ಕನಸುಗಳು (dream) ನನಸಾಗುವ ಸಮಯದಲ್ಲಿ ಅದನ್ನು ನೋಡಿ ಕಣ್ತುಂಬಿಕೊಳ್ಳುವ ಮುನ್ನವೇ ಕಣ್ಮುಚ್ಚಿ ಬಿಟ್ಟಿದ್ದಾರೆ. ಅವರ ಆ ದೊಡ್ಡ ಕನಸುಗಳಲ್ಲಿ ಒಂದು ಅವರ ಮಗ ರಕ್ಷಕ್ ಹೀರೋ (son Rakshak upcoming hero) ಆಗಬೇಕು ಎನ್ನುವುದು.
ಇದನ್ನೇ ಅವರು ಮಜಾ ಟಾಕೀಸ್ ವೇದಿಕೆ ಮೇಲೆ ಕೂಡ ಒಮ್ಮೆ ಹೇಳಿಕೊಂಡಿದ್ದರು ನನ್ನ ಮಗ ಸ್ಯಾಂಡಲ್ ವುಡ್ ನ ಒಬ್ಬ ಸ್ಟಾರ್ ಆಗಬೇಕು ಅದೇ ನನ್ನ ಜೀವನದ ಗುರಿ ಮತ್ತು ಆಸೆ ಹಾಗೂ ಉದ್ದೇಶ ಎಲ್ಲವೂ ಎಂದು ಹೇಳಿಕೊಂಡಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಯಾಕೆಂದರೆ ರಕ್ಷಕ್ ಅವರು ಗುರು ಶಿಷ್ಯರು (Guru Shishyaru) ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಆ ಸಿನಿಮಾದಲ್ಲಿ ಅನೇಕ ಹೀರೋಗಳ ಮಕ್ಕಳು ಗುರು ಶರಣ್ ಅವರಿಗೆ ಶಿಷ್ಯಂದರಾಗಿ ಅಭಿನಯಿಸಿದ್ದರು.
ಅವರು ಆ ಚಿತ್ರದ ಪ್ರಮುಖ ಭಾಗವಾಗುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಹೀರೋ ಆಗಿ ಅಭಿನಯಿಸಲು ಬೇಕಾದ ಎಲ್ಲ ತಯಾರಿಯಲ್ಲಿ ತೆರೆ ಹಿಂದೆ ತೊಡಗಿಕೊಂಡಿದ್ದಾರೆ. ಈಗಾಗಲೇ ಜಿಮ್, ಡ್ಯಾನ್ಸ್ ಕರಗತ ಮಾಡಿಕೊಂಡಿರುವ ಇವರು ಒಬ್ಬ ಪಕ್ಕ ಮಾಸ್ ಹೀರೋ ಆಗಿ ಅಭಿನಯಿಸಿ ಅಪ್ಪನ ಆಸೆ ನೆರವೇರಿಸಬೇಕು ಎಂದು ಅಂದುಕೊಂಡಿದ್ದಾರೆ. ಸಂದರ್ಶನ ಒಂದರಲ್ಲಿ ರಕ್ಷಕ್ ಅವರನ್ನು ಅವರ ತಂದೆಯ ಕುರಿತು ಮತ್ತು ತಂದೆಯ ಕನಸಿನ ಕುರಿತು ಕೆಲ ಪ್ರಶ್ನೆಗಳನ್ನು ಕೇಳಲಾಗಿದೆ.
ಅದಕ್ಕೆ ಈ ರೀತಿ ಅವರು ಉತ್ತರ ಕೊಟ್ಟಿದ್ದಾರೆ ಅಪ್ಪನ ಆಕ್ಟಿಂಗ್ ನಿಮ್ಮ ಮೇಲೆ ಎಷ್ಟು ಪ್ರಭಾವ ಬೀರಿದೆ ಎಂದು ಕೇಳಿದ್ದಕ್ಕೆ ಈ ರೀತಿ ಉತ್ತರಿಸಿದ್ದಾರೆ. ನನ್ನ ತಂದೆ ಅಭಿನಯಿಸಿರುವ ಬಹುತೇಕ ಐವತ್ತು ಪರ್ಸೆಂಟ್ ಗಿಂತ ಹೆಚ್ಚು ಸಿನಿಮಾಗಳು ಅವರು ಸ್ಥಳದಲ್ಲಿ ಹೋಗಿ ಡೆವಲಪ್ ಮಾಡಿಕೊಂಡಿದ್ದು. ಯಾರು ಸ್ಕಿಪ್ ಕೊಟ್ಟರು ಅದನ್ನು ಪ್ರಾಕ್ಟೀಸ್ ಅಂತ ಏನು ಮಾಡುತ್ತಿರಲಿಲ್ಲ, ಒಮ್ಮೆ ನೋಡುತ್ತಿದ್ದರು ಅದರಲ್ಲಿ ಅವರದೇ ಆದ ರೀತಿಯ ಕೆಲವೊಂದು ವಿಷಯಗಳನ್ನು ಸೇರಿಸಿಕೊಂಡು ಅಭಿನಯಿಸುತ್ತಿದ್ದರು.
ಅದು ಡೈರೆಕ್ಟರ್ಗೂ ಇಷ್ಟ ಆಗಿ ಹಾಗೆ ಬಿಡುತ್ತಿದ್ದರು. ನಾನು ನನ್ನ ತಂದೆ ಶೂಟಿಂಗ್ ಸ್ಪಾಟ್ ಗಳಲ್ಲಿ ಇದನ್ನು ಗಮನಿಸಿದ್ದೇನೆ ಹಾಗಾಗಿ ಅದು ನನ್ನ ಮೇಲೆ ಸ್ವಲ್ಪ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಜೊತೆಗೆ ನೀವು ಹೀರೋ ಆಗಿ ಲಾಂಚ್ ಆದರೆ ಯಾವ ರೀತಿ ಆಗಬೇಕು ಎಂದುಕೊಂಡಿದ್ದೀರ ಎಂದು ಕೇಳಿದ್ದಕ್ಕೆ ನನಗೆ ರೋಮ್ಯಾಂಟಿಕ್ ಸಿನಿಮಾಗಳು ಆಗಿ ಬರುವುದಿಲ್ಲ ನನ್ನ ತಂದೆ ಕನಸು ಕೂಡ ನಾನೊಬ್ಬ ಮಾಸ್ ಹೀರೋ ಆಗಿ ಕಾಣಿಸಿಕೊಳ್ಳಬೇಕು ಎನ್ನುವುದಾಗಿತ್ತು.
ನನಗೂ ಅಷ್ಟೇ ನಿರ್ದೇಶಕರು ಎಂದು ಹೇಳುವುದಾದರೆ ಡೈರೆಕ್ಟರ್ ಸೂರಿ ಅವರ ಅಡಿಯಲ್ಲಿ ಕೆಲಸ ಮಾಡಲು ಇಷ್ಟ. ಅವರ ಮಾದರಿಯ ಸಿನಿಮಾಗಳಲ್ಲಿ ಲಾಂಗು ಹಿಡಿದು ಆಕ್ಟಿಂಗ್ ಮಾಡಲು ಬಯಸುತ್ತೇನೆ ಯಾಕೆಂದರೆ ಅಭಿನಯದಲ್ಲಿ ಅವರು ನಮ್ಮನ್ನು ಅಷ್ಟು ಚೆನ್ನಾಗಿ ಪಳಗಿಸುತ್ತಾರೆ ನಮ್ಮಲ್ಲಿ ಯಾವುದೇ ಅಹಂಕಾರ ದೌಲತ್ತು ಇದ್ದರು ಅದನ್ನು ಕರಗಿಸಿ ಬಿಡುತ್ತಾರೆ, ಪಾತ್ರಕ್ಕೆ ಮೋರಿ ಒಳಗೆ ಮುಳುಗಬೇಕು ಎಂದರೆ ಅದಕ್ಕೂ ಮುಳುಗಿಸಿ ಬಿಡುತ್ತಾರೆ ಅದಕ್ಕೆ ಅಂತ ಡೈರೆಕ್ಷನ್ ಟೀಮ್ ಜೊತೆ ಕೆಲಸ ಮಾಡಲು ಇಷ್ಟ ಎಂದು ಹೇಳಿಕೊಂಡಿದ್ದಾರೆ.
ಜೊತೆಗೆ ಮುಂದಿನ ಸಿನಿಮಾ ಬಗ್ಗೆ ಕೇಳಿದ್ದಕ್ಕೆ ಈಗಷ್ಟೇ ಗುರು ಶಿಷ್ಯರು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ, ಆದರೆ ನನ್ನ ತಂದೆ ಇರುವಷ್ಟು ದಿನ ಅದನ್ನೇ ಹಂಬಲಿಸುತ್ತಿದ್ದರು. ನಾನು ಹೀರೋ ಆಗದೆ ಇದ್ದರೂ ಅಟ್ಲೀಸ್ಟ್ ಬಣ್ಣ ಹಚ್ಚಿದ್ದು ನೋಡಿದ್ದರೆ ಸಂತೋಷದಿಂದ ಹೋಗುತ್ತಿದ್ದರೇನು ಆ ಬಗ್ಗೆ ಮಾತ್ರ ಸ್ವಲ್ಪ ಬೇಸರ ಇದೆ. ಸ್ವತಂತ್ರ ಹೀರೋ ಆಗಿ ಅಭಿನಯಿಸುವುದಕ್ಕೆ ಈಗಾಗಲೇ ಒಂದು ಕಥೆ ರೆಡಿ ಆಗಿದೆ ಎಲ್ಲವೂ ಫೈನಲ್ ಆದಮೇಲೆ ನಾನೇ ಅದರ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು ಹೇಳಿದ್ದಾರೆ.
ಇವರ ಮಾತಿನ ನಡುವೆ ದರ್ಶನ್ (Darshan) ಅವರು ಅವರ ಅಕ್ಕನ ವಿವಾಹದ ಜವಾಬ್ದಾರಿ ಹೊತ್ತುಕೊಂಡಿರುವ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅದನ್ನು ಕೂಡ ಮಾತನಾಡಿದ ರಕ್ಷಕ್ ನನ್ನ ತಂದೆ ನನ್ನನ್ನು ಕೂಡ ಜವಾಬ್ದಾರಿ ಮಾಡಿ ಹೋಗಿದ್ದಾರೆ ನಾನು ಈಗ ಮನೆ ವಾರಸ್ದಾರ. ನಾನು ತಮ್ಮನಾಗಿ ನನ್ನ ಕರ್ತವ್ಯ ಏನು ಅದನ್ನು ಮಾಡುತ್ತಿದ್ದೇನೆ. ದರ್ಶನ್ ಸರ್ ಮತ್ತು ನನ್ನ ತಂದೆಯ ಒಡನಾಟ ಹೇಗಿತ್ತು ಎಂದು ಎಲ್ಲರಿಗೂ ಗೊತ್ತು. ಒಬ್ಬ ಒಳ್ಳೆಯ ಸ್ನೇಹಿತನಾಗಿ ಸ್ನೇಹಿತನ ಮಗಳ ಮದುವೆಯ ಜವಾಬ್ದಾರಿಯನ್ನು ಯಾವ ರೀತಿ ತೆಗೆದುಕೊಳ್ಳಬೇಕು ಆ ಕೆಲಸ ಅವರು ಮಾಡುತ್ತಿದ್ದಾರೆ. ತಂದೆ ತೀರಿಕೊಂಡ ದಿನವೇ ಅವರು ಅದರ ಬಗ್ಗೆ ಧೈರ್ಯ ಹೇಳಿ ಮಾತು ನೀಡಿದ್ದರು ಎಂದು ಡಿ ಬಾಸ್ ಸಹಾಯವನ್ನು ಸಹ ನೆನೆದಿದ್ದಾರೆ.