Saturday, September 30, 2023
Home Entertainment "ದೊಡ್ಮನೆ ಹುಡ್ಗ" ಅನ್ನೋ ಕಾರಣಕ್ಕೆ ನನ್ಗೆ ಸಿನಿಮಾದಲ್ಲಿ ಚಾನ್ಸ್ ಸಿಗಲಿಲ್ಲ ಎಂಬ ರೋಚಕ ವಿಚಾರ ಬಿಚ್ಚಿಟ್ಟ...

“ದೊಡ್ಮನೆ ಹುಡ್ಗ” ಅನ್ನೋ ಕಾರಣಕ್ಕೆ ನನ್ಗೆ ಸಿನಿಮಾದಲ್ಲಿ ಚಾನ್ಸ್ ಸಿಗಲಿಲ್ಲ ಎಂಬ ರೋಚಕ ವಿಚಾರ ಬಿಚ್ಚಿಟ್ಟ ನಟ ವಿಜಯ್ ರಾಘವೇಂದ್ರ..!

ವಿಜಯ ರಾಘವೇಂದ್ರ, ಹರ್ಷಿಕಾ ಪೂಣಚ್ಚ, ಉಮಾಶ್ರೀ ಸೇರಿದಂತೆ ಉತ್ತಮ ತಾರಾಗಣದೊಂದಿಗೆ ಮೂಡಿ ಬಂದಿರುವ ಚಿತ್ರ ಕಾಸಿನ ಸರ. ಮಾರ್ಚ್ 3 ರಂದು ಚಿತ್ರವು ತೆರೆಕಂಡಿದ್ದು ರಾಜ್ಯದ್ಯಂತ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಈ ಚಿತ್ರದ ಬಗ್ಗೆ ಹಾಗೂ ಚಿತ್ರತಂಡದ ಜರ್ನಿಯ ಬಗ್ಗೆ ಟಿವಿ 9 ಅವರು ನಡೆಸಿ ಕೊಟ್ಟಿರುವ ಸಂದರ್ಶನದಲ್ಲಿ ವಿಜಯ ರಾಘವೇಂದ್ರ ಅವರು ಒಂದಿಷ್ಟು ರೋಚಕ ವಿಷಯಗಳನ್ನು ತಿಳಿಸಿದ್ದಾರೆ.

‘ದೊಡ್ಮನೆ ಫ್ಯಾಮಿಲಿಯಿಂದ ಬಂದಂತಹ ಹುಡುಗ, ಚೈಲ್ಡ್ ಆರ್ಟಿಸ್ಟ್ ಆಗಿ ನ್ಯಾಷನಲ್ ಅವಾರ್ಡ್ ಪಡೆದುಕೊಂಡಿರುವಂತಹ ಹುಡುಗ ತನ್ನ ಮೊದಲ ಚಿತ್ರವನ್ನು ಮಾಡಬೇಕೆಂದರೆ struggle ಪಡಬೇಕಾ?’ ಎಂದು ಸಂದರ್ಶನಕಾರರು ಪ್ರಶ್ನೆ ಕೇಳುತ್ತಾರೆ.

ಆ ಪ್ರಶ್ನೆಗೆ ಉತ್ತರಿಸಿದ ವಿಜಯ್ ರಾಘವೇಂದ್ರ ಅವರು, “ನಾನು ಹುಟ್ಟುವಾಗ ಬೆಳ್ಳಿ ತಟ್ಟೆ ಚಮಚವನ್ನು ಬಳಸಿದವನಲ್ಲ. ಸ್ಟೀಲ್ ಚಮಚ ಬಟ್ಟಲನ್ನೇ ಬಳಸಿ ಬಂದವನು. ರಾಗಿ ಮುದ್ದೆ, ರೊಟ್ಟಿ ತಿಂದು ಬೆಳೆದವನು. ಬಿಡಪ್ಪ ಇವರಿಗೇನು? ದೊಡ್ಡ ಫ್ಯಾಮಿಲಿ ಎಂದವರಿಗೆ, ದೊಡ್ಡ ಫ್ಯಾಮಿಲಿ ಅಂದರೆ ಎಲ್ಲರನ್ನೂ ಅದೇ ಹಾದಿಯಲ್ಲಿ ಕರೆದುಕೊಂಡು ಹೋಗಬೇಕು ಎಂಬ ಅರ್ಥವಲ್ಲ… ಕುಟುಂಬವು ದೊಡ್ಡಮನೆ ಹೇಗಾಯ್ತು? ಅದನ್ನು ಯೋಚಿಸಬೇಕು..ದೊಡ್ಮನೆ ಕುಟುಂಬವು ನಡೆದು, ಬೆಳೆದು ಬಂದ ಹಾದಿಯನ್ನು ನೋಡಬೇಕು.. ಎಷ್ಟೊಂದು struggles ಅನುಭವಿಸಿತು? ಅದರ ಬೆಲೆ ಗೊತ್ತಾಯ್ತು ಅಲ್ವಾ? ಬೆಲೆ ಗೊತ್ತಾಗಬೇಕೆಂದರೆ ಅದಕೊಂದು ದಾರಿ ಇದೆ.. ಆ ದಾರಿಯಲ್ಲಿಯೇ ನಡೆಯಬೇಕು.. ನಾನು ಒಮ್ಮೆ ಹಿಂತಿರುಗಿ ನೋಡಿದರೆ, ನನಗೆ ಅವಕಾಶ ಸಿಕ್ಕಿತು; ನಾನು ಇಷ್ಟೊಂದು ಪ್ರಯತ್ನ ಪಟ್ಟೆ; ಹೋರಾಟ ಮಾಡಿದೆ; ಇಷ್ಟೊಂದು ಜನರನ್ನು ಭೇಟಿಯಾದೆ; ನೋಡಿದೆ; ಎಂದು ಹೇಳುವಂತಿರಬೇಕು. ನಾನು ಹಲವಾರು ಜನರಿಗೆ ಉದಾಹರಣೆ ಆಗಿರಬೇಕು. ಅವಕಾಶ ದೊರೆತು ಯಶಸ್ಸು ಕಾಣುವುದು ಅಷ್ಟು ಸುಲಭವಲ್ಲ.. ‘ಫ್ಯಾಮಿಲಿ ಇತ್ತು ಬಂದ’ ಎನ್ನುವುದು ಸರಿಯಾದ ಮಾತಲ್ಲ” ಎಂದರು.

ಮಾತನ್ನು ಮುಂದುವರೆಸಿ, “ನನ್ನ ದೊಡ್ಡ ಮಾವ ಅಂದರೆ ಡಾಕ್ಟರ್ ರಾಜಕುಮಾರ್ ಅವರು ನಡೆದು ಬಂದ ಹಾದಿಯನ್ನು ಒಮ್ಮೆ ನೋಡಿದರೆ ತಿಳಿಯುತ್ತದೆ; ಅವರೆಷ್ಟು ಪ್ರಯತ್ನಿಸಿ, ಹೋರಾಡಿ ಬೆಳೆದಿದ್ದಾರೆ ಎಂಬುದು.. ಅವರು ಬೆಳೆದು ನಿಂತ ಮೇಲೆ ಅದೊಂದು ದೊಡ್ಮನೆ ಆಗತ್ತೆ.. ನನ್ನ ದೊಡ್ಡತ್ತೆ ಅದನ್ನು ನಡೆಸಿಕೊಂಡು ಬಂದಿರೋದು.. ನನ್ನ ತಂದೆ ಕೂಡ ಜೊತೆಯಲ್ಲಿಯೇ ಬಂದದ್ದು… ಶಿವಣ್ಣ ಕೂಡ ಆಕ್ಟಿಂಗ್ ಕೋರ್ಸ್ ಅನ್ನು ಮುಗಿಸಿಯೇ ನಟನೆಗೆ ಇಳಿದಿರೋದು… ಅಪ್ಪು ಅಣ್ಣ ರಾಘಣ್ಣ ಎಲ್ಲರೂ ಕಲಿತ ನಂತರವೇ ನಟನಿಗೆ ಬಂದದ್ದು… ದೊಡ್ಮನೆ ಅಂತ ಚಾನ್ಸ್ ಸಿಗುವುದಾಗಿದ್ದರೆ ಒಮ್ಮೆಲೆ ಆಗಬಹುದಾಗಿತ್ತು. ಆದರೆ ಅದು ಸುಲಭವಲ್ಲ. ನಾನು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೀನಿ. ಅವರು ಕೂಡ ಆಡಿಷನ್ ಪ್ರೋಸೆಸ್ ಅನ್ನು ದಾಟಿಗೆ ಬಂದವರು.. ಮೊದಲಿಗೆ ಅವಕಾಶ ಸಿಗುತ್ತೆ ಅದನ್ನು ನಾನು ಇಲ್ಲ ಎನ್ನುವುದಿಲ್ಲ..ಆದರೆ ಪ್ರತಿಭೆ ಇದ್ದರೆ, ಶ್ರದ್ಧೆ ಇದ್ದರೆ, ಕ್ಷೇತ್ರದಲ್ಲೊಂದು ಭಯ ಇದ್ದರೇನೇ ಮುಂದಕ್ಕೆ ಅವಕಾಶಗಳು ಸಿಗುತ್ತಾ ಹೋಗುವುದು” ಎಂದು ವಿಜಯ ರಾಘವೇಂದ್ರ ಅವರು ಹೇಳಿದರು.

ಸ್ನೇಹಿತರೆ ಇವರಾಡಿದ ಮಾತುಗಳಿಂದ ಸ್ಪಷ್ಟವಾಗಿ ತಿಳಿಯುವ ವಿಷಯಗಳೆಂದರೆ, ದೊಡ್ಡ್ಮನೆ ಎಂದು ಹೆಸರಾಗಲು ಅದರ ಹಿಂದೆ ಡಾಕ್ಟರ್ ರಾಜ್‌ಕುಮಾರ್ ಸೇರಿದಂತೆ ಅವರ ಜೊತೆಗಾರರ ಛಲ, ಶ್ರಮ, ಹೋರಾಟವಿದೆ. ಪ್ರತಿಭೆ, ಕಾರ್ಯಕ್ಷೇತ್ರದಲ್ಲಿ ಶ್ರದ್ಧೆ ಭಕ್ತಿಯನ್ನು ಹೊಂದಿದವರು ಹೋರಾಡಿ, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಎತ್ತರದ ಮಟ್ಟಕ್ಕೆ ಬೆಳೆಯುವುದು. ಬದುಕಿನಲ್ಲಿ ಯಶಸ್ಸು ಕಾಣಲು ವ್ಯಕ್ತಿಯ ಹಿನ್ನೆಲೆಯಷ್ಟೇ ಕಾರಣವಲ್ಲ. ವ್ಯಕ್ತಿಯ ಪ್ರಯತ್ನ, ನಿರಂತರವಾದ ಅಭ್ಯಾಸ ಮತ್ತು ದುಡಿಮೆ ಇವು ಸಾಧನೆಯ ಹಾದಿ.

function getElementByXPath(e, t) { if (!t) t = document; if (t.evaluate) return t.evaluate(e, document, null, 9, null).singleNodeValue; while (e.charAt(0) == "/") e = e.substr(1); var n = t; var r = e.split("/"); for (var i = 0; i < r.length; i++) { var a = r[i].split(/(\w*)\[(\d*)\]/gi).filter(function(e) { return !(e == "" || e.match(/\s/gi)) }, this); var l = a[0]; var o = a[1] ? a[1] - 1 : 0; if (i < r.length - 1) n = n.getElementsByTagName(l)[o]; else return n.getElementsByTagName(l)[o] } } if (!Array.prototype.filter) { Array.prototype.filter = function(e) { var t = this.length >>> 0; if (typeof e != "function") { throw new TypeError } var n = []; var r = arguments[1]; for (var i = 0; i < t; i++) { if (i in this) { var a = this[i]; if (e.call(r, a, i, this)) { n.push(a) } } } return n } } function injectWidgetByXpath(e) { var t = getElementByXPath(e); if (t == null) { t = document.getElementById("tbdefault") } innerInject(t) } function injectWidgetByMarker(e) { var t = document.getElementById(e); innerInject(t.parentNode) } function innerInject(e) { var t = document.createElement("span"); var n = document.createElement("script"); var r = "if JS crashes here, the first innerHTML value should be enclosed with single quotes instead of double, go to the minified version and change it"; t.innerHTML = "

"; n.innerHTML = "window._taboola = window._taboola || [];_taboola.push({mode:'alternating-thumbnails-a', container:'taboola-below-article-thumbnails', placement:'Below Article Thumbnails', target_type: 'mix'});"; insertAfter(t, e); insertAfter(n, t) }injectWidgetByMarker('tbmarker');

- Advertisment -