ರೆಬೆಲ್ ಸ್ಟಾರ್ ಅಂಬರೀಶ್ ಅವರು ಕನ್ನಡ ಚಿತ್ರರಂಗ ಕಂಡ ಒಳ್ಳೆಯ ಹಾಗೂ ಜನಪ್ರಿಯ ನಟರು. ಕಷ್ಟದಲ್ಲಿರುವವರಿಗೆ ಹೆಗಲಾಗಿ ನಿಂತು ಬಡವರಿಗೆ ದಾನ ಧರ್ಮವೆಂದು ಮಾಡುತ್ತಾ, ತಮ್ಮ ಉತ್ತಮ ಸ್ವಭಾವದಿಂದ ಜನತೆಯ ಮನ ಗೆದ್ದುಗೆದ್ದು, “ಕರ್ಣ” ಎಂಬ ಮತ್ತೊಂದು ಹೆಸರನ್ನು ಪಡೆದಿದ್ದರು. ಮತ್ತೆ ಮತ್ತೆ ನೋಡುವಂತೆ ಸೆಳೆಯುವ ಸೌಂದರ್ಯ, ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಮೆಚ್ಚುವಂತೆ ಹಾವ ಭಾವಗಳನ್ನು ವ್ಯಕ್ತಪಡಿಸುವ ಅಭಿನಯ, ಉತ್ತಮ ಗುಣ ನಡತೆಯೊಂದಿಗೆ ಎಂತಹ ಸವಾಲನ್ನು ಎದುರಿಸುವ ದಿಟ್ಟ ಹೆಜ್ಜೆ ಈ ಎಲ್ಲಾ ಅಂಶಗಳನ್ನು ಒಳಗೊಂಡ ನಟಿ ಸುಮಲತಾ ಅವರನ್ನು ಕಂಡಾಗ ಅಂಬರೀಶ್ ಅವರಿಗೆ ಆಕರ್ಷಣೆ ಆಗಿರುವುದರಲ್ಲಿ ಯಾವುದೇ ಸಂದೇಹವೇ ಇಲ್ಲ.
ಅಂಬರೀಶ್ ಹಾಗೂ ಸುಮಲತಾ ಜೋಡಿಯು ಅನೇಕ ಚಿತ್ರಗಳಲ್ಲಿ ಒಟ್ಟಾಗಿ ತೆರೆಯನ್ನು ಹಂಚಿಕೊಂಡಿದೆ. ಇವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಯು ಜನರ ಮೆಚ್ಚುಗೆಗೆ ಪಾತ್ರವಾಯಿತು. ಇವರಿಬ್ಬರನ್ನು ಬೆಳ್ಳಿ ಪರದೆಯ ಮೇಲೆ ನೋಡಲು ಅಂದಿನ ಕಾಲದ ಜನರು ಕಾದು ಕುಳಿತಿರುತ್ತಿದ್ದರಂತೆ. ಇವರಿಬ್ಬರ ಚಿತ್ರವು ತೆರೆಕಂಡಾಗ ಹೇಗೆ ಮೋಡಿ ಮಾಡುತ್ತಿತ್ತೊ ಹಾಗೆ ಸುಮಲತಾ ಅವರನ್ನು ಕಂಡಾಗ ಅಂಬರೀಷ್ ಅವರಿಗೆ ಖುಷಿಯಾಗುತ್ತಿತ್ತಂತೆ.
ನವದೆಹಲಿ ಎಂಬ ಚಿತ್ರವು ಸಾಹಸಮಯ ಚಿತ್ರವಾಗಿದ್ದು ಜೋಶಿ ಅವರು ನಿರ್ದೇಶಿಸಿದ್ದಾರೆ. 1988 ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಅಂಬರೀಷ್, ಸುರೇಶ್ ಗೋಪಿ ಹಾಗೂ ಸುಮಲತಾ ನಟಿಸಿದ್ದಾರೆ. ಇದನ್ನು ಸಂಯುಕ್ತ ಪ್ರೊಡಕ್ಷನ್ ಬ್ಯಾನರ್ ನ ಅಡಿಯಲ್ಲಿ ನಿರ್ಮಿಸಲಾಗಿದೆ. ಇದು ನಿರ್ದೇಶಕರ ಸ್ವಂತ ಮಲಯಾಳಂ ಚಿತ್ರದ ರಿಮೇಕ್ ಆಗಿದೆ.
ದೆಹಲಿ ಮೂಲದ ಪತ್ರಕರ್ತರೊಬ್ಬರು, ಎರಡು ಭ್ರಷ್ಟ ರಾಜಕಾರಣಿಗಳ ಮೋಸದ ಬಳ್ಳಿಯನ್ನು ಬಯಲಿಗಳೆದು ಜನರ ಎದುರು ಬಹಿರಂಗ ಪಡಿಸಲು ಸಾಹಸಿಯಾಗುತ್ತಾರೆ. ಆದರೆ ತಪ್ಪಾಗಿ ಆರೋಪಿಸಲ್ಪಟ್ಟು, ಸೆರೆಮನೆ ವಾಸವನ್ನು ಅನುಭವಿಸಿ ಮಾನಸಿಕವಾಗಿ ನೊಂದು, ತಾವು ಸೇಡು ತೀರಿಸಿಕೊಳ್ಳಲು ಪ್ರೀತಿಸಿದ ಮಹಿಳೆಯ ಸಹಾಯವನ್ನು ಪಡೆದುಕೊಳ್ಳುತ್ತಾರೆ. ಸಮಾಜಕ್ಕೆ ನ್ಯಾಯ ಒದಗಿಸಲು ಶ್ರಮಿಸುತ್ತಾರೆ. ಇದು ಚಿತ್ರದ ಕಥಾ ವಸ್ತು. ಈ ಚಲನಚಿತ್ರವು ಚಿತ್ರತಂಡಕ್ಕೆ ಯಶಸ್ಸನ್ನು ಗಳಿಸಿ ಕೊಟ್ಟಿರುವುದಷ್ಟೇ ಅಲ್ಲದೆ ಚಿತ್ರದ ನಾಯಕ ನಾಯಕಿಯ ಹೊಸ ಜೀವನದ ಆರಂಭಕ್ಕೆ ಭದ್ರ ಬುನಾದಿಯನ್ನು ಕಲ್ಪಿಸಿ ಕೊಟ್ಟಿತು.
ಈ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೇ ಅಂಬರೀಶ್ ಹಾಗೂ ಸುಮಲತಾ ಅವರ ನಡುವೆ ಪರಸ್ಪರ ಆಕರ್ಷಣೆ ಉಂಟಾಗಿ ಪ್ರೀತಿಯ ವಿಷಯವು ವಿನಿಮಯಗೊಂಡಿತು. ಇತರರಿಗೆ ಕೈಲಾದಷ್ಟು ಸಹಾಯ ಮಾಡುತ್ತಾ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ನಡೆಯುತ್ತಿದ್ದ ಅಂಬರೀಷ್ ಅವರನ್ನು ವಿವಾಹ ಕಾರ್ಯಕ್ಕೆ ತುಂಬಾ ಯೋಚಿಸಿ ಒಪ್ಪಿಕೊಂಡರಂತೆ. ಬಳಿಕ ಎರಡು ಕುಟುಂಬಗಳ ನಡುವೆ ವಿವಾಹದ ಪ್ರಸ್ತಾಪವು ಎದ್ದು, ಮಾತುಕತೆಗಳು ನಡೆದು ಸಮ್ಮತಿಯನ್ನು ಸೂಚಿಸಿದರಂತೆ.
ತೆರೆಯ ಮೇಲೆ ನಟ ಅಂಬರೀಶ್ ಹಾಗೂ ಸುಮಲತಾ ಜೋಡಿಯ ಮೋಡಿಯನ್ನು ಕಂಡಾಗಲೇ ಕೇಕೆ ಹಾಕುತ್ತಿದ್ದ ಅಭಿಮಾನಿಗಳು, ಇವರಿಬ್ಬರ ವಿವಾಹದ ಸುದ್ದಿಯನ್ನು ಕೇಳುತ್ತಲೇ ಹರ್ಷಗೊಂಡರಂತೆ. ಬಳಿಕ ಮದುವೆ ಕಾರ್ಯವು ನೆರವೇರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಿತ್ರರಂಗದಲ್ಲಿ ಭಾರಿ ಯಶಸ್ಸನ್ನು ಕಂಡಿದ್ದರು ಕೂಡ ಅಂಬರೀಷ್ ಅವರದ್ದು ಉದಾರ ಮನಸ್ಸು.
ಎದುರಲ್ಲಿ ಇರುವವರು ಕಷ್ಟದಲ್ಲಿ ಇದ್ದಾರೆ ಎಂದು ತಿಳಿದರೆ ಸಾಕು. ಸಮಸ್ಯೆಯನ್ನು ತಳ್ಳಿ ಹಾಕಲು ಹೆಗಲಾಗಿ ನಿಂತು, ನಟನೆಯಿಂದ ಅಭಿಮಾನಿಗಳನ್ನು ಗಳಿಸಿದಂತೆ, ನಡತೆಯಿಂದಲೂ ಜನರನ್ನು ಗಳಿಸಿದ್ದಾರೆ. ಅಂಬರೀಶ್ ಹಾಗೂ ಸುಮಲತಾ ಜೋಡಿಯು ಒಬ್ಬರನ್ನೊಬ್ಬರು ಪರಸ್ಪರ ಗೌರವಿಸುತ್ತಾ ಪ್ರೀತಿಸುತ್ತಿದ್ದ ರೀತಿ ಎಲ್ಲರಿಗೂ ಮಾದರಿ ಎಂದು ಹೇಳಿದರೆ ಒಪ್ಪಲೇಬೇಕು. ಚಿತ್ರರಂಗವೇ ಇವರ ಪ್ರೀತಿಗೆ ನಾಂದಿ ಹಾಡಿತು ಎಂದರೆ ತಪ್ಪಾಗಲಾರದು.