Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

“ನನ್ಗೆ ಫ್ರೀಡಂ ಬೇಕಿತ್ತು ಅದ್ಕೆ ಮದ್ವೆ ಮಾಡ್ಕೊಂಡೆ” ಎಂಬ ಶಾ-ಕಿಂಗ್ ಹೇಳಿಕೆ ನೀಡಿದ ನಿವೇದಿತಾ ಗೌಡ.

Posted on March 12, 2023 By Admin No Comments on “ನನ್ಗೆ ಫ್ರೀಡಂ ಬೇಕಿತ್ತು ಅದ್ಕೆ ಮದ್ವೆ ಮಾಡ್ಕೊಂಡೆ” ಎಂಬ ಶಾ-ಕಿಂಗ್ ಹೇಳಿಕೆ ನೀಡಿದ ನಿವೇದಿತಾ ಗೌಡ.

 

ಅಂತರಾಷ್ಟ್ರೀಯ ಮಹಿಳಾ ದಿನದಂದು ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮವು ವಿಶೇಷವಾದ ಭಾಗವನ್ನು ಆಯೋಜಿಸಿತ್ತು. ತಾಯಿಯ ಮಮತೆ ಒಲವಿನ ಬಗ್ಗೆ ಮಾತನಾಡುತ್ತಿದ್ದಂತೆ ವೇದಿಕೆಯ ಮೇಲೆ ನಿವೇದಿತಾ ಗೌಡ ಕಣ್ಣೀರು ಹಾಕಲು ಪ್ರಾರಂಭಿಸಿದರು. ತಾಯಿಯ ಪ್ರೀತಿಯನ್ನು ನೆನೆದರು. ತಮ್ಮ ಕಾಲೇಜ್ ಡೇಸ್ ಅನ್ನು ಮತ್ತು ಆಗಿನ ದಿನಗಳಲ್ಲಿ ತಾಯಿ ತಮ್ಮ ಮೇಲೆ ಇಟ್ಟಿರುವಂತಹ ಕಾಳಜಿಯನ್ನು ನೆನೆದರು.

ಸಾಮಾನ್ಯವಾಗಿ ಮಹಿಳಾ ದಿನಾಚರಣೆಯಂದು ದೂರದರ್ಶನದ ಕಾರ್ಯಕ್ರಮಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವ ಕಲಾವಿದರ ತಾಯಿಯನ್ನೋ ಅಥವಾ ಹೆಂಡತಿಯನ್ನೋ, ಅಕ್ಕ-ತಂಗಿಯರನ್ನೋ ಅಥವಾ ಅವರಿಗೆ ವಿದ್ಯಾಭ್ಯಾಸ ನೀಡಿದ ಶಿಕ್ಷಕಿಯರನ್ನೋ ಕರೆಸಲಾಗುತ್ತದೆ. ಅಂತಯೇ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದ ವೇದಿಕೆಯಲ್ಲಿ ನಿವೇದಿತಾ ಗೌಡ ಅವರ ತಾಯಿಯನ್ನು ಕರೆದಿದ್ದರು.

ನಿವೇದಿತಾ ಗೌಡ ಅವರಿಗೆ ಚಂದನ್ ಶೆಟ್ಟಿ ಅವರೊಂದಿಗೆ ವಿವಾಹವಾಗಿರುವ ವಿಚಾರ ನಮಗೆಲ್ಲರಿಗೂ ತಿಳಿದೇ ಇದೆ. ಇನ್ನು ವಿವಾಹದ ನಂತರ ಹೆಣ್ಣು ಮಕ್ಕಳಿಗೆ ತವರು ಮನೆಯ ಮೇಲೆ ಪ್ರೀತಿ ಹಾಗೂ ಗೌರವವು ಹೆಚ್ಚಾಗುವ ಕುರಿತಾಗಿಯೂ ನಮಗೆ ತಿಳಿದಿದೆ. ದಾಂಪತ್ಯ ಜೀವನದಲ್ಲಿ ಪತಿಯು ಪತ್ನಿಯನ್ನು ಅತ್ಯಂತ ಪ್ರೀತಿಯಿಂದ, ಯಾವುದೇ ಕೊಂದು ಕೊರತೆ ಬಾರದಂತೆ ನೋಡಿಕೊಂಡರೂ ಕೂಡ ಹೆಣ್ಣು ಮಕ್ಕಳಿಗೆ ತವರು ಮನೆಯ, ತಂದೆ ತಾಯಿ ತೋರಿಸಿದ ಪ್ರೀತಿ, ಕಾಳಜಿಯ ಬಗ್ಗೆ ಒಮ್ಮೆಯಾದರೂ ನೆನಪಾಗದೆ ಹೋಗದು.

ಕಲರ್ಸ್ ಕನ್ನಡ ವಾಹಿನಿಯವರು ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಸ್ಪೆಷಲ್ ಎಪಿಸೋಡ್ ನಲ್ಲಿ ನಿವೇದಿತಾ ಗೌಡ ಅವರು ತಮ್ಮ ತಾಯಿಯಾದ ಹೇಮಾ ಅವರೊಂದಿಗೆ ವೇದಿಕೆಯ ಮೇಲೆ ಹಾಡಿಗೆ ಹೆಜ್ಜೆಯನ್ನು ಹಾಕಿದರು. ತಾಯಿ ಮಗಳ ಕುಣಿತದ ದೃಶ್ಯವು ಎಲ್ಲರಿಗೂ ಆನಂದವನ್ನು ತರುವಂತಿತ್ತು. ಇದೆ ವೇಳೆಯಲ್ಲಿ ನಿವೇದಿತಾ ಗೌಡ ಅವರು ತಮ್ಮ ತಾಯಿ ತಮಗೆ ತೋರಿದ ಪ್ರೀತಿಯನ್ನು ಹಾಗೂ ಕಾಳಜಿಯನ್ನು ನೆನೆದಿದ್ದಾರೆ. ತಾಯಿ, ಯಾಕೆ ‘ಮದುವೆಯ ನಂತರ ಟ್ರಿಪ್ ಹೋಗು’ ಎನ್ನುತ್ತಿದ್ದರು ಎಂಬುದರ ಕುರಿತಾಗಿಯೂ ತಿಳಿಸಿದ್ದಾರೆ.

ನಿವೇದಿತಾ ಗೌಡ ಅವರು, ‘ ನನ್ನ ತಾಯಿ ಎಂದರೆ ನನಗೆ ತುಂಬಾನೇ ಇಷ್ಟ… ಅವರು ನನ್ನನ್ನು ಮದುವೆಗೂ ಮುನ್ನ ಮನೆಯಲ್ಲಿಯೇ ಇರುವಂತೆ ಒತ್ತಾಯಿಸುತ್ತಿದ್ದರು..ಸ್ನೇಹಿತೆಯರ ಜೊತೆಯಲ್ಲಿ ಟ್ರಿಪ್ ಹೋಗಲು, ಮನೆಯಿಂದ ಹೊರ ಹೋಗಲೂ ಸಹ ಅಷ್ಟಾಗಿ ಬಿಡುತ್ತಿರಲಿಲ್ಲ.. ಕಳ್ಳರ ಭಯದಿಂದ ನನ್ನನ್ನು ಮನೆಯಲ್ಲಿ ಕೂಡಿ ಹಾಕುತ್ತಿದ್ದರು’ ಎಂದು ವೇದಿಕೆ ಮೇಲೆ ತಮ್ಮ ಹಳೆಯ ದಿನಗಳ ನೆನಪನ್ನು ಹಂಚಿಕೊಂಡಿದ್ದಾರೆ.

‘ಮಗಳು ಹೊರಗಡೆ ಹೋದಾಗ ಯಾರಾದರೂ ಬಂದು ಎತ್ತಿಕೊಂಡು ಹೋದರೆ ಎಂಬ ಭಯ ಅವರಲ್ಲಿ ಕಾಡುತ್ತಿತ್ತು. ಅದಕ್ಕಾಗಿಯೇ ಅವರು ಮದುವೆಯಾದ ಮೇಲೆ ಟ್ರಿಪ್ ಹೋಗು. ನೀನು ಮದುವೆ ಆದ್ಮೇಲೆ ಎಲ್ಲಿ ಬೇಕಾದರೂ ಹೋಗಬಹುದು ಎಂದಿದ್ದರು. ಹೀಗಾಗಿ ಫ್ರೀಡಂ ಬೇಕೆಂದು ನಾನು ಮದುವೆಯಾದೆ. ಮದುವೆ ಆದ್ಮೇಲೆ ಸುತ್ತಾಡೋಣ ಎಂದುಕೊಂಡು ಮದುವೆ ಮಾಡಿಕೊಂಡೆ. ನಂತರದಲ್ಲಿಯೇ ನನಗೆ ನನ್ನ ಪೋಷಕರ ಬೆಲೆ ತಿಳಿದಿದ್ದು. ಹಿಂದಿನ ದಿನಗಳಲ್ಲಿ ನಾನು ಮನೆಯಲ್ಲಿಯೇ ಇದ್ದೀನಿ ಎಂದು ಬೇಜಾರಾಗುತ್ತಿತ್ತು.

ಈಗ ತಾಯಿಯನ್ನು ಒಮ್ಮೆ ನೋಡಿದರೂ ಸಾಕು ತುಂಬಾ ಖುಷಿಯಾಗುತ್ತದೆ’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ನಿವೇದಿತಾ ಗೌಡ ಹೇಳಿದ್ದಾರೆ. ಹೌದು, ತಾಯಿಯ ಪ್ರೀತಿಯನ್ನು ನೆನೆದು ನಿವೀ ಕಣ್ಣೀರು ಹಾಕಿದ್ದಾರೆ. ‘ಮೊದಲೆಲ್ಲಾ ನನ್ನ ತಾಯಿ ನಾನು ವೇದಿಕೆಯಲ್ಲಿ ಪರ್ಫಾರ್ಮ್ ಮಾಡುವುದನ್ನು ನೋಡುತ್ತಿದ್ದರು..ಇಂದು ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ತುಂಬಾ ಖುಷಿಯಾಗುತ್ತಿದೆ’ ಎಂದು ನಿವೇದಿತಾ ಗೌಡ ಅವರು ಭಾವುಕರಾಗಿ ನುಡಿದಿದ್ದಾರೆ.

Entertainment Tags:Chandan shetty, Niveditha gowda

Post navigation

Previous Post: ಅಂಬಿಗೆ ಸುಮಲತಾ ಮೇಲೆ ಪ್ರೀತಿ ಹುಟ್ಟಿದ್ದು ಯಾವ ಸಿನಿಮಾದಲ್ಲಿ ಗೊತ್ತ.? ಮೊದಲ ಬಾರಿಗೆ ತಮ್ಮ ಪ್ರೀತ ಬಗ್ಗೆ ಮನ ಬಿಚ್ಚಿ ಮಾತನಾಡಿದ ಸುಮಲತಾ ಅಂಬರೀಶ್…
Next Post: ಯಶ್ ರಾಧಿಕಾಗೆ ಕೊಟ್ಟ ಮೊದಲ ಗಿಫ್ಟ್ ಏನೂ ಗೊತ್ತ.? ನಿಜಕ್ಕೂ ಆಶ್ಚರ್ಯ ಪಡ್ತಿರಾ. ಈ ತರನೂ ಗಿಫ್ಟ್ ಕೊಡ್ತಾರ ಅಂತ

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme