ಶಮಿಕಾಳನ್ನು ತಂಗಿಯೆಂದು ಒಪ್ಪಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ…ಎಂದಿದ್ದ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರಾಧಿಕಾ ಖಡಕ್ ಆಗಿ ಮಾತನಾಡಿದ್ದಾರೆ. ರಾಧಿಕಾ ಕುಮಾರಸ್ವಾಮಿ ಏನು ಹೇಳಿದ್ದಾರೆ? ಎಂದು ತಿಳಿಯುವ ಕುತೂಹಲ ಇದ್ದರೆ ಪೂರ್ತಿ ಓದಿ. ಓದಿದ ಬಳಿಕ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಸಿನಿಮಾ ಇಂಡಸ್ಟ್ರೀಯಲ್ಲಿ ರಾಧಿಕಾ ಅವರು ತಮ್ಮದೇ ಸ್ವಂತ ಛಾಪು ಮೂಡಿಸಿರುವವರು. ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಮತ್ತು ತಂಗಿಯ ಪಾತ್ರದಲ್ಲಿಯೂ ನಟಿಸಿದ್ದಾರೆ. ಈ ನಟಿ ಚಿತ್ರ ರಂಗದ ಯಾವುದೇ ಹಿನ್ನೆಲೆ ಇಲ್ಲದೇ, ಸ್ವಂತ ಕಾಲ ಮೇಲೆ ನಿಂತು ಅಭಿನಯದ ಮೂಲಕ ಅಭಿಮಾನಿಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಇವರ ಹೆಸರು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಅವರ ಹೆಸರಿನ ಜೊತೆಗೆ ತಳುಕು ಹಾಕಿಕೊಂಡಿರುವುದು ನಿಮಗೆಲ್ಲರಿಗೂ ತಿಳಿದಿದೆ.
ಈ ಜೋಡಿಯ ಕುರಿತಾದ ಅನೇಕ ಸುದ್ದಿಗಳು ಹರಡಿದ್ದವು. ಇವರಿಬ್ಬರು ಮದುವೆ ಆದ ಮೇಲೆ ಮತ್ತಷ್ಟು ಮನೆ ಮಾತಾದರು ಎಂದರೆ ತಪ್ಪೇನಿಲ್ಲ. ಸದಾ ಒಂದಿಲ್ಲೊಂದು ಸುದ್ದಿಯಲ್ಲಿಯೇ ಇರುತ್ತಾರೆ. ರಾಧಿಕಾ ಹಾಗೂ ಕುಮಾರಸ್ವಾಮಿ ದಂಪತಿಗಳ ಪ್ರೇಮದ ಸಂಕೇತವಾಗಿ ಮುದ್ದಿನ ಮಗಳಿದ್ದಾಳೆ. ಆಕೆಯ ಹೆಸರು ಶಮಿಕಾ. ರಾಧಿಕಾ ಹಾಗೂ ಕುಮಾರಸ್ವಾಮಿ ಅವರ ಸಂಬಂಧದಲ್ಲಿ ಬಿರುಕು ಮೂಡಿದ್ದು, ಬೇರೆ ಬೇರೆ ಬದುಕುತ್ತಿದ್ದಾರೆ.
ಈ ಜೋಡಿಯು ಮುಂದೆಂದೂ ಕೂಡ ಒಂದಾಗುವುದಿಲ್ಲ ಎಂಬ ವದಂತಿಯು ಕೇಳಿಬರುತ್ತಿದೆ. ಹೀಗೆ ಅನೇಕ ವಿಚಾರಗಳು ನೆಟ್ಟಿಗರನ್ನು ಸೆಳೆದಿದ್ದು , ಸಾಕಷ್ಟು ಚರ್ಚೆಗಳು ನಡೆದಿವೆ. ಮಾಧ್ಯಮಗಳ ಸಂವಾದದಲ್ಲಿ ಮಾತನಾಡಿದ್ದ, ನಿಖಿಲ್ ಕುಮಾರಸ್ವಾಮಿ ಅವರು, ‘ಶಮಿಕಾಳನ್ನು ನನ್ನ ತಂಗಿಯೆಂದು ಒಪ್ಪಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ… ಅಷ್ಟು ವಿಶಾಲ ಹೃದಯ ನನ್ನದಲ್ಲ” ಎಂದು ಕೂಡ ಹೇಳಿದ್ದರು. ಈ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲೆಡೆ ಹರಿದಾಡಿತ್ತು.
ಹಲವಾರು ಜನ ಅಚ್ಚರಿಯಿಂದ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಯ ವೀಡಿಯೊವನ್ವು ನೋಡಿದ್ದರು. ಇದೇ ಹೇಳಿಕೆಯ ವಿಷಯವಾಗಿ ರಾಧಿಕಾ ಅವರು ಪ್ರತಿಕ್ರಿಯಿಸಿದ್ದು, ಏನೇಳಿದ್ದಾರೆ ಓದಿ. ರಾಧಿಕಾ ಹಾಗೂ ಕುಮಾರಸ್ವಾಮಿ ಅವರ ಮಧ್ಯೆ ಮನಸ್ತಾಪಗಳು ಮಾಡಿವೆ. ಮೊದಲಿನ ಹಾಗೆ ಯಾವುದೇ ಸಂಬಂಧ ಉಳಿದುಕೊಂಡಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಇದೇ ಕಾರಣಕ್ಕಾಗಿ ರಾಧಿಕಾ ಬೆಂಗಳೂರಿನ ತಮ್ಮ ಮನೆಯನ್ನು ಬಿಟ್ಟು ಲಂಡನ್ ನಲ್ಲಿ ತಮ್ಮ ಹೆಣ್ಣು ಮಗುವಿನೊಂದಿಗೆ ನೆಲೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಆಗಾಗ ಕೇಳುತ್ತಲೇ ಇರುತ್ತವೆ.
ಈ ರೀತಿಯ ಊಹಾಪೋಹಗಳ ಕಥೆಯು ನಿಖಿಲ್ ಕುಮಾರಸ್ವಾಮಿ ಅವರ ವಿವಾಹದ ಸಂದರ್ಭದಲ್ಲಿ ಹೆಚ್ಚಾಗಿತ್ತು. ನಿಖಿಲ್ ಅವರು ನೀಡಿದ ಹೇಳಿಕೆಗೆ ರಾಧಿಕಾ ತಿರುಗೇಟು ನೀಡಿದ್ದಾರೆ. ಹೌದು. ತಮ್ಮ ಸಂಬಂಧದ ಬಗೆಗಿನ ಮಾಹಿತಿಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. “ನಾವು ಮೊದಲಿನ ಹಾಗೆ ಇಲ್ಲ ಎಂಬುದು ಶುದ್ಧ ಸುಳ್ಳು. ನಾವು ಮೊದಲಿನಂತೆಯೇ ಇದ್ದೇವೆ. ಹೇಗೆ ನನ್ನ ಹೆಸರಿನ ಜೊತೆಗೆ ಕುಮಾರಸ್ವಾಮಿ ಅವರ ಹೆಸರು ಇರತ್ತೋ ಹಾಗೆ ಜೀವನದ ಪೂರ್ತಿಯೂ ಅವರ ಪ್ರೀತಿಯು ನನ್ನ ಜೊತೆಯಲ್ಲಿ ಇರುತ್ತೆ.
ನಿಖಿಲ್ ಅವರು ಶಮಿಕಾಳನ್ನು ತನ್ನ ತಂಗಿ ಎಂದು ಒಪ್ಪಿಕೊಳ್ಳದೇ ಇದ್ರು, ನನ್ನ ಮಗಳು ಶಮಿಕಾ ಕುಮಾರಸ್ವಾಮಿ ಅವರ ಮಗಳು ಎಂಬ ವಿಷಯ ಎಂದಿಗೂ ಸುಳ್ಳಾಗುವುದಿಲ್ಲ…ಇಡೀ ಪ್ರಪಂಚಕ್ಕೆ ಗೊತ್ತು ಶಮಿಕಾ ಯಾರು, ಯಾರ ಮಗಳು ಅಂತಾ” ಎಂದು ರಾಧಿಕಾ ಕುಮಾರಸ್ವಾಮಿ ಅವರು ಎಲ್ಲಾ ಸುಳ್ಳು ಸುದ್ದಿಗಳಿಗೆ ಬರೆ ಎಳೆದಂತೆ ನುಡಿದಿದ್ದಾರೆ. ನಿಖಿಲ್ ಅವರ ಹೇಳಿಕೆಗೆ ಪ್ರತಿಯಾಗಿ ಖಡಕ್ ಹೇಳಿಕೆಯನ್ನು ನೀಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ