ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸದ್ಯಕ್ಕೆ ಈಗ ಕರ್ನಾಟಕದ ಯೂಥ್ ಐಕಾನ್. ಮಾಜಿ ಪ್ರಧಾನಿಗಳ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಯ ಮಗನಾಗಿರುವ ಇವರು ತೆರೆ ಮೇಲೆ ಹೀರೋ ಆಗಬೇಕು ಎಂದು ಆಸೆಪಟ್ಟು ಸಿನಿಮಾ ರಂಗವನ್ನು ವೃತ್ತಿಯನ್ನಾಗಿ ಆಯ್ದುಕೊಂಡರು. ಜಾಗ್ವಾರ್ (Jaguar) ಎನ್ನುವ ಸಿನಿಮಾ ಮೂಲಕ ಹೀರೋ ಆಗಿ ಲಾಂಚ್ ಆದ ಇವರು ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಮತ್ತು ರೈಡರ್ ಅಲ್ಲೊ ಹೀರೋ ಆದರು ಇವರ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳಾಗಿವೆ.
ಮಾಡಿದ್ದು ಬೆರಳಣಿಕೆಯಷ್ಟು ಸಿನಿಮಾ ಅಷ್ಟೇ ಆದರೂ ಹೀರೋ ಆಗಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾರೆ. ರಾಜಕೀಯದಲ್ಲೂ (Politics) ಕೂಡ ಗುರುತಿಸಿಕೊಂಡಿರುವ ಇವರು ಕರ್ನಾಟಕದ ರಾಜಕೀಯ ಚಿತ್ರಣ ಬದಲಾಯಿಸುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಅಖಾಡಕ್ಕಿಳಿಯುವ ಸಾಧ್ಯತೆಗಳು ಇದ್ದು ಚುನಾವಣೆ ಸಮಯದಲ್ಲಿ ಹೆಚ್ಚಾಗಿ ತಂದೆ ಹಾಗೂ ಕುಟುಂಬದವರ ಜೊತೆ ಕಾಣಿಸಿಕೊಳ್ಳುತ್ತಾರೆ.
ಸೋಶಿಯಲ್ ಮೀಡಿಯಾದಲ್ಲೂ ಕೂಡ ತನ್ನದೇ ಆದ ಕ್ರೇಝ್ ಕ್ರಿಯೇಟ್ ಮಾಡಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಅವರ ವ್ಯಕ್ತಿತ್ವ ನೋಡಿ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಇವರಿಗೂ ಸಹ ಕರ್ನಾಟಕದಲ್ಲಿ ಲಕ್ಷಗಟ್ಟಲೆ ಅಭಿಮಾನಿಗಳು ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕುಟುಂಬದ ಕುರಿತ ಹೊಸ ವಿಷಯಗಳು ಹಾಗೂ ರಾಜಕೀಯ ಮತ್ತು ಸಿನಿ ಕ್ಷೇತ್ರದ ಕುರಿತ ವಿಷಯಗಳನ್ನು ಅಪ್ಲೋಡ್ ಮಾಡುವ ಇವರು ಈಗಷ್ಟೇ ಮುದ್ದು ಮಗುವಿನ ತಂದೆ ಕೂಡ ಆಗಿದ್ದಾರೆ.
ನಿಖಿಲ್ ಅವರ ಪತ್ನಿ ರೇವತಿ (Revathi) ಮಾತ್ರ ಬಹಳ ಸಿಂಪಲ್ ಕ್ಯಾಮೆರಾ ಕಂಡರೆ ಹಿಂದೆ ಹಿಂದೆ ಹೋಗುವ ಇವರು ಎಂದೂ ಸಿನಿಮಾರಂಗಕ್ಕೆ ಬರಬೇಕು ಎಂದು ಆಸೆ ಪಟ್ಟವರಲ್ಲ. ಇಂಟೀರಿಯರ್ ಡಿಸೈನಿಂಗ್ ಕಲಿತು, ಜೆವೆಲ್ಲರಿ ಡಿಸೈನಿಂಗ್ ಕಲಿಯಲು ಬೆಂಗಳೂರಿಗೆ ಬಂದ ಅವರು ಅಷ್ಟರಲ್ಲಿ ನಿಖಿಲ್ ಅವರ ಕಣ್ಣಿಗೆ ಬಿದ್ದು ಅವರಿಗೆ ಪತ್ನಿಯಾಗಿದ್ದಾರೆ. ರೇವತಿ ಅವರ ತಂದೆ ಕೂಡ ಪ್ರತಿಷ್ಠಿತ ಉದ್ಯಮಿ, ರಿಯಲ್ ಎಸ್ಟೇಟ್ ಬಿಸಿನೆಸ್ ಅಲ್ಲಿ ಒಳ್ಳೆ ಹೆಸರು ಮಾಡಿರುವ ಇವರಿಗೆ ರೇವತಿ ಹಾಗೂ ಸುಷ್ಮಾ ಇಬ್ಬರು ಮಕ್ಕಳಿದ್ದಾರೆ.
ರೇವತಿ ಅವರು ಹಿರಿಯರಾದರೆ ಸುಷ್ಮಾ (Sushma) ಅವರು ಕೊನೆಯ ಮಗಳ. ಸುಷ್ಮಾ ಅವರು ಈಗ 23 ವರ್ಷದವರಾಗಿದ್ದು ಅಕ್ಕನಂತೆ ಇವರು ಸಹ ಬೆಂಗಳೂರಿನ ಫೇಮಸ್ ಕಾಲೇಜ್ ಒಂದರಲ್ಲಿ ಜ್ಯುವೆಲರಿಂಗ್ ಆರ್ಟ್ ಶಿಕ್ಷಣ ಪಡೆಯುತ್ತಿದ್ದಾರೆ. ಆಗಾಗ ಅಕ್ಕನ ಕುಟುಂಬದವರ ಜೊತೆ ಕಾಣಿಸಿಕೊಳ್ಳುವ ಸುಷ್ಮಾ ಭಾವ ನಿಖಿಲ್ ಕುಮಾರಸ್ವಾಮಿ ಅವರ ಜೊತೆಗಿನ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
ನಿಖಿಲ್ ಹಾಗೂ ಸುಷ್ಮಾ ಅವರ ಸೋಶಿಯಲ್ ಮೀಡಿಯಾ ಫೋಟೋಗಳನ್ನು ನೋಡಿದ ಎಲ್ಲರೂ ಸುಷ್ಮಾ ಅವರು ಯಾವುದೇ ಹೀರೋಯಿನ್ ಗಿಂತ ಕಡಿಮೆ ಇಲ್ಲ. ಹಾಗಾಗಿ ಅವರು ಇಂಟರೆಸ್ಟ್ರಿ ಗೆ ಬರಬಹುದು ಎಂದು ಭವಿಷ್ಯ ಹೇಳಿದ್ದಾರೆ ಮತ್ತು ಕೆಲವು ಮೂಲಗಳ ಪ್ರಕಾರ ಸುಷ್ಮಾ ಅವರು ತಮ್ಮ ಶಿಕ್ಷಣ ಮುಗಿದ ನಂತರ ನಾಯಕಿಯಾಗಿ ಕೆರಿಯರ್ ಶುರು ಮಾಡಲೂಬಹುದು ಎನ್ನುವ ಸುಳಿವುಗಳು ಕೂಡ ಸಿಕ್ಕಿದೆ. ನಿಖಿಲ್ ಕುಮಾರಸ್ವಾಮಿ ಅವರ ಕುಟುಂಬದಲ್ಲಿ ಸಿನಿಮಾ ರಂಗಕ್ಕೆ ನಾಯಕನಾಗಿ ಅವರು ಒಬ್ಬರೇ ಎಂಟ್ರಿ ಕೊಟ್ಟಿದ್ದರು.
ತಾಯಿ ಹಾಗೂ ತಂದೆ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಚಂದ್ರಚಕೋರಿ, ಸೇವಂತಿ ಸೇವಂತಿ ಇನ್ನು ಮುಂತಾದ ಅನೇಕ ಸೂಪರ್ ಹಿಟ್ ಸಿನಿಮಾಗಳು ಅನಿತಾ ಕುಮಾರಸ್ವಾಮಿ ಅವರ ನಿರ್ಮಾಣದಲ್ಲಿ ಮೂಡಿ ಬಂದಿದೆ. ಹಾಗಾಗಿ ಸಿನಿಮಾ ರಂಗದಲ್ಲೂ ಕೂಡ ಸಾಕಷ್ಟು ಒಳ್ಳೆಯ ಸಂಪರ್ಕಗಳು ಇರುವುದರಿಂದ ಅಕ್ಕ ರೇವತಿ ಕುಟುಂಬದ ಇನ್ಫ್ಲುಯೆನ್ಸ್ ಇಂದ ಸುಷ್ಮಾ ಅವರು ಸಹ ಹಿರೋಯಿನ್ ಆಗಿ ಲಾಂಚ್ ಆದರೂ ಆಗಬಹುದು.