ಈ ಬಾರಿ ರಾಜ್ಯದ ಮೇಲೆ ವರುಣ ದೇವ ಮುನಿಸಿಕೊಂಡಿದ್ದಾನೆ. ಆದ ಕಾರಣ ಬರದ ಪರಿಸ್ಥಿತಿ ಎದುರಾಗಿತ್ತು, ಕಾವೇರಿ ಕೊಳ್ಳದ ರೈತರ ಗೋಳು ಹೇಳತೀರದಾಗಿದೆ. ಇದರ ನಡುವೆ ತಮಿಳುನಾಡು ಸರ್ಕಾರ ನಮಗೆ ವಾಯಿದೆಯಂತೆ ನೀರು ಬಿಡಬೇಕು ಎಂದು ಪಟ್ಟು ಹಿಡಿದಿದೆ. ಪ್ರಾಧಿಕಾರದ ಮುಂದೆ ಸುಪ್ರೀಂ ಕೋರ್ಟ್ ಎದುರು ರಾಜ್ಯದ ವಿರುದ್ಧ ಆರೋಪ ಮಾಡುತ್ತಿದೆ.
ನಮ್ಮ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ಕಡೆಯ ತೀರ್ಪಿನಂತೆ ನೀರು ಹರಿಸುತ್ತಿದೆ. ಆದರೆ ರಾಜ್ಯ ಸರ್ಕಾರ ಈ ವಿಚಾರದಲ್ಲಿ ಧೃಡ ನಿರ್ಧಾರ ತೆಗೆದುಕೊಳ್ಳಬೇಕು, ಮುಂದಿನ ದಿನಗಳಲ್ಲಿ ನಮ್ಮಲ್ಲೇ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿದೆ, ಆದರೆ ತಮಿಳುನಾಡಿನಲ್ಲಿ ಮಳೆಯಾಗುವ ಸಂಭವ ಇದೆ ಅವರು ಕೃಷಿಕಾರಣಕ್ಕಾಗಿ ನೀರು ಕೇಳುತ್ತಿದ್ದಾರೆ, ನೀರಿನ ಹರಿವು ಚೆನ್ನಾಗಿದ್ದಾಗಲೆಲ್ಲಾ ಯಾವುದೇ ತಕರಾರಿಲ್ಲದೆ ನೀರು ಕೊಡಲಾಗಿದೆ.
ಆದರೆ ಈಗ ನಾವೇ ಕ್ಷಾಮದಲ್ಲಿದ್ದೇವೆ ಇದನ್ನು ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟು ರಾಜ್ಯದ ವಸ್ತುಸ್ಥಿತಿಯನ್ನು ವಿವರಿಸಿ ಕಾವೇರಿ ಹನಿ ನೀರು ತಮಿಳುನಾಡಿಗೆ ಹರಿಯದಂತೆ ತಡೆ ಒಡ್ಡಬೇಕು ಎಂದು ರೈತ ಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿವೆ.
ಭದ್ರದಿಂದ ದಿನಕ್ಕೆ ಪ್ರತಿಭಟನೆ ಕಾವು ಹೆಚ್ಚಾಗುತ್ತಿತ್ತು ಮಂಡ್ಯ ಬಂದ್, ಬೆಂಗಳೂರು ಬಂದ್ ಯಶಸ್ವಿಯಾಗಿದೆ. ಕರ್ನಾಟಕ ಬಂದ್ ಗೂ ಕೂಡ ತಯಾರು ನಡೆಯುತ್ತಿದೆ. ಇದರ ನಡುವೆ ಸೆಲೆಬ್ರಿಟಿಗಳು ಕರ್ನಾಟಕದ ಪರ ಧ್ವನಿ ಎತ್ತುತ್ತಿಲ್ಲ ಎನ್ನುವ ಬೇಸರವನ್ನು ರೈತರು ಮತ್ತು ಕನ್ನಡಪರ ಸಂಘಟನೆಗಳು ವ್ಯಕ್ತಪಡಿಸುತ್ತಿವೆ. ನೇರವಾಗಿ ಸ್ಯಾಂಡಲ್ ವುಡ್ ತಾರೆಗಳನ್ನು ತರಾಟೆಗೆ ತೆಗೆದುಕೊಳ್ಳಲಾಗಿತ್ತು.
ಕಾವೇರಿ ವಿವಾದ, ಪ್ರಧಾನಿ ಮಧ್ಯಸ್ಥಿಕೆಗೆ ದೇವೇಗೌಡರ ಪತ್ರ, ಪತ್ರ ಸ್ವಾಗತಿಸಿದ ಸಿದ್ದರಾಮಯ್ಯ.!
ಈ ಬೆಳವಣಿಗೆಯ ನಂತರ ಸಿನಿಮಾ ಸ್ಟಾರ್ ಗಳು ಕೂಡ ಕಾವೇರಿ ಹೋರಾಟದ ಪರವಾಗಿ ಪಾಲ್ಗೊಂಡು ನಾಡು,ನೆಲ,ಜಲ,ಭಾಷೆ ವಿಚಾರದಲ್ಲಿ ಎಲ್ಲ ರೀತಿಯ ಹೋರಾಟಕ್ಕೂ ನಾವು ಎಂದು ಬದ್ದರು ಎಂದು ಹೇಳುತ್ತಿದ್ದಾರೆ. ಕೆಲವರು ವಿಭಿನ್ನವಾಗಿ ಟ್ವೀಟ್ ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಪತ್ರಗಳನ್ನು ಬರೆಯುವ ಮೂಲಕ ಅವರದ್ದೇ ರೀತಿಯಲ್ಲಿ ಹೋರಾಟಕ್ಕೆ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ.
ಕಾವೇರಿ ಹೋರಾಟದ ಕುರಿತಾಗಿ ಕನ್ನಡದ ಕ್ರಿಕೆಟಿಗ ಕೆ.ಎಲ್ ರಾಹುಲ್ (K.L Rahul) ಕೂಡ ತಮ್ಮ ಸೋಶಿಯಲ್ ವಿಡಿಯೋ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಕಾವೇರಿ ಎಂದೂ ನಮ್ಮದು, ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು ಇದು ನಮ್ಮ ದುರಂತ. ಕಾವೇರಿ ಇಡೀ ಕರ್ನಾಟಕದ ಆಸ್ತಿ ಎಂದು ಬರೆಯಲಾಗಿತ್ತು.
ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿಯುವ ಅಭ್ಯಾಸ ಇದೆಯೇ? ಇದು ಎಷ್ಟು ಡೇಂಜರ್ ಯಾವೆಲ್ಲಾ ಕಾಯಿಲೆಗಳು ಬರುತ್ತವೆ ಗೊತ್ತಾ.?
ಇದರ ನಡುವೆ ಕ್ರಿಕೆಟ್ ದಂತಕಥೆ ಎಂ.ಎಸ್ ಧೋನಿ (MS Dhoni statement about Cauvery) ಅವರು ಈ ಹಿಂದೆ ಕಾವೇರಿ ಹೋರಾಟದಲ್ಲಿ ಏನೆಂದಿದ್ದರು ಎನ್ನುವ ಸ್ಟೇಟ್ಮೆಂಟ್ ಈಗ ವೈರಲ್ ಆಗುತ್ತಿದೆ. 2018ರಲ್ಲಿ IPL ಸಮಯದಲ್ಲಿ ತಮಿಳುನಾಡು ಪರ ಕಾವೇರಿ ಹೋರಾಟ ಬೆಂಬಲಿಸಿ ಕಪ್ಪು ಪಟ್ಟಿ ಧರಿಸಿ ಆಡುವಂತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ.ಎಸ್ ಧೋನಿ ಅವರನ್ನು ಒತ್ತಾಯಿಸಲಾಯಿತು.
ಇದಕ್ಕೆ ಧೋನಿ ಅವರು ನೀಡಿದ್ದ ಪ್ರತಿಕ್ರಿಯೆ ಇಂದು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ನಾನಿಲ್ಲಿ ಆಟವಾಡುವುದಕ್ಕೆ ಬಂದವನು. ಯಾವುದೇ ಕಾರಣಕ್ಕೂ ಕರ್ನಾಟಕದ ವಿರೋಧಿಯಾಗಲಾರೆ. ನಾನು ಇಡೀ ದೇಶದ ಸ್ವತ್ತು ಎಂದು ಹೇಳಿ ಮಹೇಂದ್ರ ಸಿಂಗ್ ಧೋನಿ ಬಹಳ ಪ್ರಬುದ್ಧತೆ ಮೆರೆದಿದ್ದರು.