ಕಿಚ್ಚ ಸುದೀಪ್ (Kicha Sudeep) ಅವರು ಇಂದು ಕರ್ನಾಟಕ ಮಾತ್ರವಲ್ಲದೆ ಇಡೀ ದೇಶದ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ನಟ. ಕನ್ನಡ ಸಿನಿಮಾ ಇಂಡಸ್ಟ್ರಿಯ ಬಹುಮುಖ್ಯ ಸ್ಟಾರ್ ಆಗಿರುವ ಇವರು ಪರಭಾಷೆ ಸಿನಿಮಾಗಳಲ್ಲಿ ನಟಿಸುವ ಮೂಲಕ ನ್ಯಾಷನಲ್ ಸ್ಟಾರ್ ಕೂಡ ಆಗಿದ್ದಾರೆ. ಇಂದು ಸುದೀಪ್ ಅವರ ಸಿನಿಮಾ ಬಿಡುಗಡೆ ಆಗುತ್ತದೆ ಎಂದರೆ ಕರ್ನಾಟಕದಲ್ಲಿ ಹಬ್ಬ, ಅಂತೇಯೇ ದೇಶದಾದ್ಯಂತ ಕೂಡ ಸಿನಿಮಾ ರಸಿಕರು ಸುದೀಪ್ ಸಿನಿಮಾ ನೋಡಲು ಕಾಯುತ್ತಿರುತ್ತಾರೆ.
ಅಷ್ಟರ ಮಟ್ಟಿಗೆ ಸುದೀಪ ಅವರ ಮೇಲೆ ನಿರೀಕ್ಷೆ ಇದೆ. ಆದರೆ ಒಂದು ಕಾಲದಲ್ಲಿ ಸುದೀಪ್ ಅವರ ಸಿನಿಮಾವನ್ನು ನೋಡಲಾಗದೆ ಅವರ ಪತ್ನಿ ಹಾಗೂ ಮಗಳೇ ಸಿನಿಮಾ ಶುರುವಾದ 30 ನಿಮಿಷಕ್ಕೆ ಥಿಯೇಟರ್ ನಿಂದ ಎದ್ದು ಆಚೆ ಹೋಗಿದ್ದರಂತೆ, ಆ ಬಗ್ಗೆ ಇತ್ತೀಚೆಗೆ ಸುದೀಪ್ ಅವರು ಹೇಳಿಕೊಂಡಿದ್ದಾರೆ. ಸಿ ಎನ್ ಎನ್ ನ್ಯೂಸ್ 18 (CNN NEWS18) ನಡೆಸಿದ ಟೌನ್ ಹಾಲ್ ಬೆಂಗಳೂರು ಲೈವ್ (Bangalore live) ಅಲ್ಲಿ ಮಾತನಾಡಿದ ಅವರು ಯಾವುದೋ ವಿಷಯದ ಉದಾಹರಣೆ ಹೇಳುವಾಗ ಇದನ್ನು ನೆನಪು ಮಾಡಿಕೊಂಡು ಹೇಳಿದ್ದಾರೆ.
ತಾವು ಕೆಟ್ಟ ಸಿನಿಮಾ ಮಾಡಿದಾಗ ಮಗಳು ಹೇಗೆ ರಿಯಾಕ್ಟ್ ಮಾಡುತ್ತಿದ್ದಳು ಎನ್ನುವುದನ್ನು ಈ ರೀತಿಯಾಗಿ ಹೇಳಿಕೊಂಡ ಸುದೀಪ ಅವರು ಮಗಳು ಸಾನ್ವಿ ಸುದೀಪ್ (Sanvi Sudeep) ಅವರ ಈ ನಡೆಯನ್ನು ಪ್ರಶಂಸಿದ್ದಾರೆ. ಒಂದು ಬಾರಿ ನನ್ನ ಮಗಳು ಆ ರೀತಿ ನನ್ನ ಸಿನಿಮಾ ಶುರುವಾದ 30 ನಿಮಿಷಗಳಲ್ಲೇ ಎದ್ದು ಆಚೆ ಹೋದಳು, ಅವಳ ಹಿಂದೆ ನನ್ನ ಪತ್ನಿ ಪ್ರಿಯಾ (Priya) ಕೂಡ ಹೊರನಡೆದು ಬಿಟ್ಟಳು.
ಅಂದು ಅವರಿಬ್ಬರು ಆ ರೀತಿ ಮಾಡಲಿಲ್ಲ ಎಂದರೆ ನನ್ನ ತಪ್ಪು ನನಗೆ ಗೊತ್ತಾಗುತ್ತಿರಲಿಲ್ಲ. ಮನೆಯಲ್ಲಿ ಈ ರೀತಿ ತಿದ್ದುವವರು ಯಾರು ಇಲ್ಲ ಎಂದರೆ ನಾವು ಪದೇಪದೇ ಆ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ. ಈ ರೀತಿ ಆಗುವುದು ಸಹಜ ಆದರೆ ಅದನ್ನು ತಿದ್ದಿಕೊಂಡು ನಡೆದಾಗಲೇ ಯಶಸ್ಸು ಸಾಧ್ಯ ಎಂದು ತಮ್ಮ ತಪ್ಪನ್ನು ತಿದ್ದುಕೊಂಡಿರುವ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ. ಆದರೆ ಆ ಸಿನಿಮಾ ಯಾವುದು ಎನ್ನುವುದನ್ನು ಮಾತ್ರ ಬಹಿರಂಗಪಡಿಸಿಲ್ಲ.
ಇನ್ನು ಈ ವಿಷಯ ಹೇಳಿಕೊಳ್ಳುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ಕೂಡ ಇವರ ಈ ಓಪನ್ ಮಾತುಗಳನ್ನು ಮೆಚ್ಚಿಕೊಂಡು ಕೊಂಡಾಡುತ್ತಿದ್ದಾರೆ. ಹೌದು ಸಿನಿಮಾ ಎಂದಾಗ ಸೋಲು ಕೆಲವು ಸಹಜ. ಆದರೆ ಆದ ತಪ್ಪುಗಳನ್ನು ತಿದ್ದುಕೊಂಡು ನಡೆದ ಕಾರಣದಿಂದಲೇ ಇಂದು ಸುದೀಪ್ ಅವರು ಇಷ್ಟು ಎತ್ತರಕ್ಕೆ ಹೋಗಿರುವುದು ಎಂದು ಮಾತನಾಡುತ್ತಿದ್ದಾರೆ. ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಗೆಲ್ಲುವುದಕ್ಕೆ ಸಿನಿಮಾದಲ್ಲಿ ಯಾವ ಅಂಶ ಮುಖ್ಯ ಎಂದು ಕೂಡ ಸಂದರ್ಶನದಲ್ಲಿ ಸುದೀಪ್ ಅವರನ್ನು ಪ್ರಶ್ನಿಸಲಾಗಿದೆ.
ಈ ಪ್ರಶ್ನೆಗೆ ಸುದೀಪ್ ಅವರು ಸಿನಿಮಾದ ಕಂಟೆಂಟ್ ಮುಖ್ಯ ಎಂದು ಉತ್ತರ ಕೊಟ್ಟಿದ್ದಾರೆ. ಜನ ಈಗ ಹೊಸದನ್ನು ಬಯಸುತ್ತಾರೆ. ಹೊಸ ತರದ ವಿಷಯಗಳು ಬಂದಾಗ ಯಾವುದೇ ಭಾಷೆಯಾಗಿದ್ದರೂ ಕೂಡ ಜನ ಅದನ್ನು ಒಪ್ಪಿಕೊಂಡು ಗೆಲ್ಲಿಸುತ್ತಾರೆ ಅದಕ್ಕೆ ಕಾಂತಾರ (Kanthara) ಒಂದು ಉತ್ತಮ ಉದಾಹರಣೆ ಎಂದು ನೆನಸಿಕೊಂಡಿದ್ದಾರೆ. ಯಾವುದೇ ಸ್ಟಾರ್ ಗಳ ಆದರೂ ಕೂಡ ಇಂತಹ ಸೋಲು ಗೆಲುವು ಇದ್ದೇ ಇರುತ್ತದೆ, ಆದರೆ ಸೋಲಿಗೆ ಕಾರಣವನ್ನು ಹುಡುಕಿ, ಸರಿಪಡಿಸಿಕೊಂಡರೆ ಮತ್ತೆ ಸೋಲದಂತೆ ಗೆಲುವನ್ನು ಸಂಪಾಳಿಸಬಹುದು ಆ ವಿಷಯದಲ್ಲಿ ಸುದೀಪ ಅವರು ಗೆದ್ದಿದ್ದಾರೆ ಎಂದೇ ಹೇಳಬಹುದು.