Tuesday, October 3, 2023
Home Viral News ಅಪ್ಪು ಅಗಲಿದ ಒಂದೇ ವರ್ಷಕ್ಕೆ ಆಸ್ತಿ ಎಲ್ಲವನ್ನೂ ಅಶ್ವಿನಿ ಏನೂ ಮಾಡಿದ್ದಾರೆ ಗೊತ್ತ.? ನಿಜಕ್ಕೂ ಶಾ-ಕ್...

ಅಪ್ಪು ಅಗಲಿದ ಒಂದೇ ವರ್ಷಕ್ಕೆ ಆಸ್ತಿ ಎಲ್ಲವನ್ನೂ ಅಶ್ವಿನಿ ಏನೂ ಮಾಡಿದ್ದಾರೆ ಗೊತ್ತ.? ನಿಜಕ್ಕೂ ಶಾ-ಕ್ ಆಗುತ್ತೆ ಅಶ್ವಿನಿ ತೆಗೆದುಕೊಂಡಿರುವ ಈ ನಿರ್ಧಾರ ಕೇಳಿದ್ರೆ.

 

ಪುನೀತ್ ರಾಜಕುಮಾರ್ ( Puneeth rajkumar) ಇಂದು ಇಡೀ ಕರ್ನಾಟಕ ದೇವರು ಎಂದು ಪೂಜಿಸುತ್ತಿರುವ ಒಬ್ಬ ಶ್ರೇಷ್ಠ ಆದರ್ಶ ಪುರುಷ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದವರು ಇಷ್ಟ ಪಡುತ್ತಿದ್ದ ಸ್ಟಾರ್ ನಟ. ಅಪ್ಪು ಎಂದು ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ನಮ್ಮೆಲ್ಲರ ಪವರ್ ಸ್ಟಾರ್ ಅಕಾಲಿಕ ಮ’ರ’ಣ ಕ್ಕೆ ತ್ತುತ್ತಾಗಿ ಇಡೀ ಕರುನಾಡನ್ನೇ ನೋವಿನ ಮಡುವಿಗೆ ಹಾಕಿದ್ದಾರೆ. ಇನ್ನು ಎಷ್ಟೇ ವರ್ಷ ಕಳೆದರೂ ಈ ನೋವು ಕನ್ನಡಿಗರ ಮನದಲ್ಲಿ ಎಂದೂ ಮಾಸದು. ಪುನೀತ್ ರಾಜಕುಮಾರ್ ಅವರನ್ನು ಬಾಲ್ಯದಿಂದಲೂ ಕನ್ನಡಿಗರು ನೋಡಿಕೊಂಡು ಬರುತ್ತಿದ್ದಾರೆ.

ಶಾಲೆಗೆ ಹೋಗುವ ವಯಸ್ಸಿನಲ್ಲಿಯೇ ಅಣ್ಣಾವ್ರ ಸಮಕ್ಕೆ ಡೈಲಾಗ್ ಹೇಳುತ್ತಿದ್ದ ಈ ಮುದ್ದು ಹುಡುಗನ ಮುದ್ದಾದ ಮಾತುಗಳಿಗೆ ಮಾರುಹೋಗದವರೇ ಇಲ್ಲ. ಬಾಲ ನಟನಾಗಿಯೇ ಕನ್ನಡಿಗರ ಮನ ಗೆದ್ದಿದ್ದ ಅಪ್ಪು ಮಾಡಿದ್ದ ಅಷ್ಟು ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ. ಅಣ್ಣಾವ್ರ ಜೊತೆ ಅಪ್ಪು ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪೌರಾಣಿಕ ಸಿನಿಮಾ, ಐತಿಹಾಸಿಕ ಸಿನಿಮಾ ಎನ್ನುವ ವ್ಯತ್ಯಾಸವಿಲ್ಲದೆ ಎಲ್ಲಾ ಬಗೆಯ ಪಾತ್ರಗಳನ್ನು ಆವರಿಸಿಕೊಂಡು ನಿಭಾಯಿಸುತ್ತಿದ್ದ ಚತುರ. ಅಪ್ಪು ಬೆಳೆದ ಮೇಲೂ ಕೂಡ ಅದರಲ್ಲೂ ಇತ್ತೀಚಿಗೆ ಆಯ್ಕೆ ಮಾಡಿಕೊಳ್ಳುತ್ತಿದ್ದ ಪಾತ್ರಗಳು ಬಹಳ ಜನ ಮೆಚ್ಚಿಗೆ ಪಡೆದಿದ್ದವು.

ರಾಜ್ ಕುಮಾರ ಸಿನಿಮಾದಲ್ಲಿ ಆರೋಗ್ಯದ ವಿಚಾರದಲ್ಲಿ ಆಗುತ್ತಿರುವ ಅನ್ಯಾಯವನ್ನು ಮತ್ತು ಭ್ರಷ್ಟಾಚಾರವನ್ನು ಸಿನಿಮಾ ಮೂಲಕ ಸಮಾಜಕ್ಕೆ ತೋರಿಸಿದ್ದರು ಮತ್ತು ಯುವರತ್ನ ಸಿನಿಮಾ ಶಿಕ್ಷಣ ಹೆಸರಿನಲ್ಲಿ ನಡೆಯುತ್ತಿರುವ ದಂಧೆಯನ್ನು ಬೀದಿಗೆಳೆದು ಯುವಜನತೆಯಲ್ಲಿ ಎಚ್ಚರ ಮೂಡಿಸುವಂತಿತ್ತು. ಪೃಥ್ವಿ ವಂಶಿ ಸಿನಿಮಾಗಳಂತೂ ಇನ್ನು ಹತ್ತು ವರ್ಷಗಳ ಬಳಿಕ ಕೇಳಿದರು ನಮ್ಮ ರಾಜ್ಯದ ಐಎಎಸ್ ಐಪಿಎಸ್ ಆಕಾಂಕ್ಷಿಗಳಿಗೆ ಆ ಸಿನಿಮಾಗಳೇ ಸ್ಪೂರ್ತಿ. ಜೊತೆಗೆ ಮಿಲನ, ಅರಸು ಇಂತಹ ಸಿನಿಮಾಗಳನ್ನು ಈಗ ಟಿವಿಗೆ ಕೊಟ್ಟರು ಜನ ಚಾನೆಲ್ ಚೇಂಜ್ ಮಾಡದೆ ನೋಡುತ್ತಾರೆ ಎಂದರೆ ಅವರನ್ನು ಹಿಡಿದಿಟ್ಟಿರುವ ಶಕ್ತಿ ಅಪ್ಪು.

ಇಂತಹ ಅಪ್ಪುವನ್ನು ಕಳೆದುಕೊಂಡು ಕರ್ನಾಟಕ ಚಿತ್ರರಂಗ ಬಡವಾಗಿದ್ದರೆ ಅಪ್ಪುಅಂತಹ ಪ್ರಚಾರವಿಲ್ಲದೆ ಸಮಾಜ ಸೇವೆ ಮಾಡುವ ದೇವ ಮಾನವನನ್ನು ಕಳೆದುಕೊಂಡ ಕರ್ನಾಟಕ ಅನಾಥವಾಗಿದೆ. ಅಪ್ಪು ಸಮಾಜಕ್ಕಾಗಿರುವ ಮಾಡಿರುವ ಸೇವೆಯನ್ನು ಹೇಳುತ್ತಾ ಹೋದರೆ ಆ ಪಟ್ಟಿ ನಿಲ್ಲದು. ಅದೆಷ್ಟೋ ಶಾಲೆಗಳು, ಅದೆಷ್ಟು ಅನಾಥಾಶ್ರಮಗಳು, ಅದೆಷ್ಟೋ ಗೋ ಶಾಲೆಗಳು, ವೃದ್ಧಾಶ್ರಮಗಳು ಅಪ್ಪು ಕೈಯಿಂದ ದೇಣಿಗೆ ಪಡೆಯುತ್ತಿದ್ದವು. ಇನ್ನು ಮೈಸೂರಿನ ಶಕ್ತಿಧಾಮದಲ್ಲಿರುವ ಹೆಣ್ಣು ಮಕ್ಕಳ ಪಾಲಿಗೆ ತಂದೆ ತಾಯಿ ಅಣ್ಣ ಗುರು ಎಲ್ಲವೂ ಅಪ್ಪು ಅವರೇ ಆಗಿದ್ದರು.

ಅಷ್ಟು ಮಕ್ಕಳ ಸಂಪೂರ್ಣ ಶಿಕ್ಷಣ ಮತ್ತು ವಸತಿ ಹಾಗೂ ಆಹಾರದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದರು. ಅಪ್ಪು ಅವರು ಇನ್ನು ರೈತರ ಪಾಲಿಗಂತು ಯಾವಾಗಲೂ ತನ್ನಿಂದ ಆದಷ್ಟು ಪ್ರಚಾರವನ್ನು ಉಚಿತವಾಗಿ ಮಾಡಿಕೊಡುತ್ತಿದ್ದರು. ಅದಕ್ಕೆ ನಂದಿನ ಹಾಲಿನ ಜಾಹೀರಾತು ಸಾಕ್ಷಿ. ಹೀಗೆ ಸಾಲು ಸಾಲು ಸಮಾಜ ಸೇವೆ ಮಾಡಿದ ಅಪ್ಪುವನ್ನು ಕಳೆದುಕೊಂಡು ನಾವೇ ಇಷ್ಟು ದುಃಖ ಪಡುತ್ತಿದ್ದರೆ ಇನ್ನು ಕುಟುಂಬದ ಪಾಲಿಗಂತೂ ಆ ದುಃಖವನ್ನು ಅಳೆಯಲಾಗದು. ಆ ರಾಜವಂಶದ ಕೀರ್ತಿ ಕಳಶವಾಗಿದ್ದ ರಾಜ್ ಕುಮಾರ ಅವರನ್ನು ಇಡೀ ಕುಟುಂಬ ಈಗ ಸಹ ಮುದ್ದು ಮಗನಂತೆ ನೋಡುತ್ತಿತ್ತು.

ಇನ್ನು ಪ್ರೀತಿಸಿ ಕೈಹಿಡಿದ ಪತ್ನಿಯ ಪಾಲಿಗಂತೂ ಬೇರೆ ಪ್ರಪಂಚವೇ ಗೊತ್ತಿರಲಿಲ್ಲ. ಯಾವಾಗ ಕ್ಯಾಮರಾ ಕಂಡರೂ ಅಪ್ಪು ಹಿಂದೆ ಪುಟ್ಟ ಮಗುವಂತೆ ಅಶ್ವಿನಿ ಅವರು ಬಚ್ಚಿಟ್ಟು ಕೊಳ್ಳುತ್ತಿದ್ದವರು. ಇಂದು ಅಪ್ಪು ಅಗಲಿಕೆ ನೋವಲ್ಲೇ ಅವರು ಹೊಂದಿದ್ದ ಎಲ್ಲಾ ಕನಸುಗಳನ್ನು ಸಾಕಾರಗೊಳಿಸುವ ದೊಡ್ಡ ನಿರ್ಧಾರ ಮಾಡಿ ಬದುಕುತ್ತಿದ್ದಾರೆ. ಅಪ್ಪು ಅವರಿಗೆ ಸಮಾಜಕ್ಕೆ ಇನ್ನು ಸಾಕಷ್ಟು ಕೊಡುಗೆಗಳನ್ನು ಮತ್ತು ಕನ್ನಡ ಚಿತ್ರರಂಗಕ್ಕಾಗಿ ಸಾಕಷ್ಟು ಸೇವೆಯನ್ನು ಮಾಡುವ ಹಂಬಲ ಇತ್ತು.

ಈಗ ಎಲ್ಲಾ ಜವಬ್ದಾರಿ ಅಶ್ವಿನಿ ಅವರ ಪಾಲಿಗಿದೆ ಅಶ್ವಿನಿ (Ashwini) ಅವರು ಅಪ್ಪುವನ್ನು ಕಳೆದುಕೊಂಡ ಕೆಲವೇ ತಿಂಗಳಲ್ಲಿ ತಂದೆಯನ್ನು ಕೂಡ ಕಳೆದುಕೊಂಡಿದ್ದಾರೆ. ತಂದೆ ಹಾಗೂ ಅಪ್ಪು ಅವರ ಅಗಲಿಕೆ ನೋವು ಅಶ್ವಿನಿ ಅವರನ್ನು ಇನ್ನಿಲ್ಲದಂತೆ ಕಾಣುತ್ತಿದೆ. ಜೊತೆಗೆ ಇತ್ತೀಚೆಗೆ ಬಂದ ಮಾಹಿತಿಗಳ ಪ್ರಕಾರ ಅಶ್ವಿನಿ ಅವರ ತಂದೆ ರೇವನಾಥ್ ಅವರು ಬೆಂಗಳೂರಿನಲ್ಲಿ ಬಿಬಿಎಂಪಿಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡಿದ್ದರು. ಹೀಗಾಗಿ ಬೆಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ದೊಡ್ಡ ಮಟ್ಟದ ಆಸ್ತಿಯನ್ನು ಸಂಪಾದನೆ ಮಾಡಿದ್ದರು.

ಅಶ್ವಿನಿ ಅವರು ಸೇರಿದಂತೆ ಅವರಿಗೆ ಮೂರು ಮಕ್ಕಳು ಅದರಲ್ಲಿ ಅಶ್ವಿನಿ ಅವರೇ ಹಿರಿಯರು. ಈಗ ಅಶ್ವಿನಿ ಅವರು ಅಪ್ಪನ ಸಾ.ವಿ.ನ ನಂತರ ಇಡೀ ತವರು ಮನೆ ಜವಾಬ್ದಾರಿಯನ್ನು ತಮ್ಮ ತಂಗಿಗೆ ವಹಿಸಿಕೊಟ್ಟಿದ್ದಾರೆ. ದೇವರು ಅಪ್ಪು ಅಂತ ಆಸ್ತಿಯನ್ನು ಕಿತ್ತುಕೊಂಡ ಮೇಲೆ ನನಗೆ ಬೇರೆ ಯಾವ ಆಸ್ತಿಯ ಮೇಲೂ ಆಸೆ ಇಲ್ಲ. ಇದನ್ನು ತಮ್ಮ ತಂಗಿಯೇ ಹಂಚಿಕೊಳ್ಳಲಿ ಎಂದು ಹೇಳಿ ಮತ್ತೊಮ್ಮೆ ದೊಡ್ಮನೆ ಸೊಸೆಯಾಗಿ ದೊಡ್ಡತನ ತೋರಿದ್ದಾರೆ.

 

- Advertisment -