ಕಳೆದ ವರ್ಷ ತೆರೆಕಂಡ ಕನ್ನಡ ಚಲನಚಿತ್ರ ಕಾಂತಾರ (Kanthara) ನಿರೀಕ್ಷೆಗೂ ಮೀರಿದ ಗೆಲುವನ್ನು ಗಿಟ್ಟಿಸಿಕೊಂಡು ದೇಶ ಭಾಷೆ ಗಡಿ ದಾಟಿ ವಿಶ್ವದೆಲ್ಲೆಡೆ ಹೆಸರು ಮಾಡಿದೆ. ಕನ್ನಡದ ಸ್ಮಾಲ್ ಬಜೆಟ್ ಸಿನಿಮವಾಗಿ ತಯಾರದ ಈ ಚಿತ್ರ ದೈವದ ಆಶೀರ್ವಾದದೊಂದಿಗೆ ಹೊಸ ದಾಖಲೆಯನ್ನೇ ಬರೆದಿದೆ. ಅಭಿಮಾನಿಗಳ ನಿರೀಕ್ಷೆ ಮೇರೆಗೆ ಪ್ಯಾನ್ ಇಂಡಿಯಾ (PAN INDIA) ಸಿನಿಮಾವಾಗಿ ಬದಲಾಗಿದ್ದು, ಕನ್ನಡದ ಸಿನಿಮಾ ಹಾದಿಯಲ್ಲಿ ಮೈಲಿಗನ್ನು ಸೃಷ್ಟಿಸಿದೆ ಎನ್ನುಬಹುದು.
ಈ ಸಿನಿಮಾದ ನಿರ್ದೇಶಕರಾಗಿರುವ ರಿಷಬ್ ಶೆಟ್ಟಿ (Director and hero Rishabh Shetty) ತಾವೇ ಸಿನಿಮಾವನ್ನು ನಿರ್ದೇಶಿಸಿ ನಟನೆ ಮಾಡಿ ಈ ಸಿನಿಮಾದ ಮೂಲಕ ಡಿವೈಸ್ ಸ್ಟಾರ್ (Divine star) ಎನ್ನುವ ಟೈಟಲ್ ಪಡೆದುಕೊಂಡಿದ್ದಾರೆ. ಕಳೆದ ವರ್ಷ ಬಾಕ್ಸ್ ಆಫೀಸ್ ಉಡೀಸ್ ಮಾಡಿ, ಎಲ್ಲಾ ದಾಖಲೆಗಳನ್ನು ಮುರಿದಿದ್ದ ಸಿನಿಮಾ ಪ್ರಶಸ್ತಿಗಳನ್ನು (awards) ಬಾಚಿಕೊಳ್ಳುವುದನ್ನು ಕೂಡ ಹಿಂದೆ ಉಳಿದಿಲ್ಲ.
BJP ಮತ್ತು JDS ಮೈತ್ರಿ ಬೆನ್ನೆಲ್ಲೇ ಬೆಂಗಳೂರಿನಲ್ಲಿ ಯಡಿಯೂರಪ್ಪ ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ.!
ಕಳೆದ ವರ್ಷ ದೇಶದಾದ್ಯಂತ ಘೋಷಣೆಯಾದ ಎಲ್ಲಾ ಪ್ರಶಸ್ತಿಗಳಲ್ಲೂ ಪಾಲು ಪಡೆದಿದ್ದ ಕಾಂತರಾ ಸಿನಿಮಾ ಗೆ SIIMA ದಲ್ಲೂ ಕೂಡ ಹತ್ತು ಅವಾರ್ಡ್ ಗಳು ಸಂದಿವೆ. ಈ ಸಂಭ್ರಮವನ್ನು ಚಿತ್ರತಂಡ ಹಂಚಿಕೊಂಡಿದ್ದು ಸ್ವತಃ ನಾಯಕ ಮತ್ತು ನಿರ್ದೇಶಕರಾದ ಆ ಸಿನಿಮಾದ ಶಕ್ತಿಯಾಗಿದ್ದ ರಿಷಬ್ ಶೆಟ್ಟಿ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಕುರಿತು ಸಂತಸದ ಬರಹವನ್ನು ಬರೆದು ಧನ್ಯವಾದ ಅರ್ಪಿಸಿದ್ದಾರೆ.
ಹಾಗೆಯೇ ಕಾಂತಾರ 2 ಬಗ್ಗೆ ಕೆಲ ಸುಳಿವು ಬಿಟ್ಟು ಕೊಟ್ಟಿದ್ದಾರೆ ಈ ಕುರಿತು ಅವರು ಹಂಚಿಕೊಂಡಿರುವ ವಿಷಯ ಹೀಗಿದೆ. ಈ ಪ್ರಭಾವಶಾಲಿ ಪ್ರಶಸ್ತಿಗಳು ಚಲನಚಿತ್ರದ ರಾಷ್ಟ್ರೀಯ ಮನ್ನಣೆ ಸೂಚಿಸುವುದಲ್ಲದೆ ಇಡೀ ತಂಡದ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಮನೆಯಲ್ಲೂ ಪ್ರತಿದಿನ ಪ್ಯಾಕೆಟ್ ಹಾಲು ತರುತ್ತಿದ್ದೀರಾ.? ಆಗಿದ್ರೆ ಈ ವಿಷಯ ತಿಳಿದುಕೊಂಡಿರಲೇಬೇಕು.!
ಜನರ ಮನ್ನಣೆಯಿಂದ ಸಿಕ್ಕ ಪ್ರೀತಿ ಕಾಂತಾರದ ಯಶಸ್ಸಿಗೆ ಕಾರಣ, ಸೈಮಾ ಅವಾರ್ಡ್ಸ್ನಲ್ಲಿ ಅತ್ಯುತ್ತಮ ನಿರ್ದೇಶನ, ಪಾಥ್ ಬ್ರೇಕಿಂಗ್ ಸ್ಟೋರಿ ಹಾಗು ಅತ್ಯುತ್ತಮ ನಟ, ನಟಿ, ಖಳನಟ, ಹಾಸ್ಯ ನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಸೇರಿದಂತೆ ಒಟ್ಟು ಹತ್ತು ಪ್ರಶಸ್ತಿಗಳನ್ನು ಪಡೆದಿದೆ. ಮನ ತುಂಬಿ ಬಂದಿದೆ, ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೇ ಇರಲಿ. ಈ ಎಲ್ಲಾ ಯಶಸ್ಸನ್ನು ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ ಸಮರ್ಪಣೆ ಎಂದು ಹೇಳಿದ್ದಾರೆ.
SIIMA ಮೂಲಕ ನಾನು ಹಲವು ತಂತ್ರಜ್ಞರು, ನಟರು ಮತ್ತು ಹಿರಿಯ ಚಲನಚಿತ್ರ ನಿರ್ಮಾಪಕರು ಸೇರಿದಂತೆ ವೈವಿಧ್ಯಮಯ ವ್ಯಕ್ತಿಗಳನ್ನು ನಾವು ಭೇಟಿಯಾದೆ. ಕಮಲ್ ಹಾಸನ್, ನಿರ್ದೇಶಕ ಮಣಿರತ್ನಂ, ಲೋಕೇಶ್ ಕನಕರಾಜ್, ಗಾಯತ್ರಿ ಪುಷ್ಕರ್, ಎಸ್ಜೆ ಸೂರ್ಯ ಮತ್ತು ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಚಲನಚಿತ್ರ ನಿರ್ಮಾಪಕರನ್ನು ಭೇಟಿಯಾಗುವ ಅವಕಾಶ ದೊರೆಯಿತು ಎಂದು ತಿಳಿಸಿದ್ದಾರೆ.
BJP 25 ಸಂಸದರು ಕೂಡ ದಂಡಪಿಂಡಗಳು ಎಂದು ಆ.ಕ್ರೋ.ಶ ಹೊರ ಹಾಕಿದ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ವಿ ಶ್ರೀನಿವಾಸ್.!
ಕಾಂತಾರ 2 ಚಿತ್ರದ ಬಗ್ಗೆ ಕುತೂಹಲ ಹೆಚ್ಚುತ್ತಿರುವುದರಿಂದ ಇದರ ಬಗ್ಗೆ ಕೂಡ ಮಾತನಾಡಿದ ಅವರು ನಾನು ಮತ್ತು ತನ್ನ ಪ್ರತಿಭಾವಂತ ಬರಹಗಾರರಾದ ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ತಂಡವು ಕಥೆಯನ್ನು ಉತ್ತಮವಾಗಿ ಹೊಂದಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ, ಶೂಟಿಂಗ್ ವೇಳಾಪಟ್ಟಿ ತೆರೆದುಕೊಳ್ಳುತ್ತಿದ್ದಂತೆ ವಿವರಗಳನ್ನು ಬಹಿರಂಗಪಡಿಸುವ ಭರವಸೆ ಸಹಾ ನೀಡಿದ್ದಾರೆ.
ಸದ್ತಕ್ಕೀಗ ಕಾಂತಾರಾ 2 (Kanthara 2) ಶೂಟಿಂಗ್ ಗಾಗಿ, ಸ್ಥಳಗಳನ್ನು ಅಂತಿಮಗೊಳಿಸುವುದು ಮತ್ತು ಹೊಸ ಮುಖಗಳನ್ನು ಹುಡುಕುವತ್ತ ಗಮನ ಹರಿಸಲಾಗುವುದು, ಅದರಲ್ಲೂ ವಿಶೇಷವಾಗಿ ಕನ್ನಡ ಚಲನಚಿತ್ರೋದ್ಯಮದಿಂದ ಬಂದ ನಾಯಕಿಯರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಸಿನಿಮಾದಲ್ಲಿ ಮೂಲ ಕಾಂತಾರದ ಕೆಲವು ನಟರು ಸಹ ಸೇರುವ ನಿರೀಕ್ಷೆಯಿದೆ, ನವೆಂಬರ್ ಅಂತ್ಯದ ವೇಳೆಗೆ ಅಥವಾ ಬಹುಶಃ ಡಿಸೆಂಬರ್ನಲ್ಲಿ ಚಿತ್ರೀಕರಣ ಪ್ರಾರಂಭಿಸಲು ನಾವು ಯೋಜಿಸಿದ್ದೇವೆ ಎಂದು ರಿಷಭ್ ಶೆಟ್ಟಿ ತಿಳಿಸಿದ್ದಾರೆ.
ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್.!