ದತ್ತಣ್ಣ (Daththanna) ಎಂದೇ ಕನ್ನಡಿಗರಿಗೆ ಪರಿಚಯ ಆಗಿರುವ ಇವರ ಪೂರ್ತಿ ನಾಮಧೇಯ ಎಚ್ ಜಿ ದತ್ತಾತ್ರೇಯ. ಬೆಳ್ಳಿತೆರೆಯ ಪಾತ್ರಗಳು ಹಾಗೂ ಕಿರುತರೆ ಕಾರ್ಯಕ್ರಮಗಳಿಂದ ಕನ್ನಡ ಪ್ರೇಕ್ಷಕರಿಗೆ ಬಹಳ ಹತ್ತಿರ ಆಗಿರುವ ಇವರು ತುಂಬಾ ನೈಜ ಅಭಿನಯದಿಂದ ಎಲ್ಲರ ಗಮನ ಸೆಳೆಯುತ್ತಾರೆ. ದತ್ತಣ್ಣ ಅವರನ್ನು ನಾವು ಅನೇಕ ದಶಕಗಳಿಂದ ಸಿನಿಮಾಗಳಲ್ಲಿ ನೋಡಿಕೊಂಡು ಬರುತ್ತಿದ್ದೇವೆ. ಆದರೆ ಅವರು ಸಿನಿಮಾ ಇಂಡಸ್ಟ್ರಿಗೆ ಪಾದಪಣೆ ಮಾಡಿದ್ದೆ 45 ವರ್ಷ ದಾಟಿದ ಮೇಲೆ ಅದಕ್ಕೂ ಮುನ್ನ ಅವರು ದೇಶದ ಅತ್ಯುನ್ನತ ಹುದ್ದೆಯೊಂದನ್ನು ವರಿಸಿದ್ದರು ಎನ್ನುವ ವಿಷಯ ಹೆಚ್ಚಿನ ಜನರಿಗೆ ತಿಳಿದಿಲ್ಲ.
ಚಿತ್ರದುರ್ಗದಲ್ಲಿ ಜನಿಸಿದ ದತ್ತಣ್ಣ ಅವರು ಬಾಲ್ಯದಿಂದಲೂ ಕೂಡ ಓದಿನಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಎಸ್ ಎಸ್ ಎಲ್ ಸಿ ಅಲ್ಲಿ ರಾಜ್ಯಕ್ಕೆ ಪ್ರಥಮರಾಗಿ ಅಂಕ ಪಡೆದ ಇವರು ಪಿಯುಸಿಯಲ್ಲಿ ಕೂಡ ಒಳ್ಳೆ ಮಾರ್ಕ್ ಗಳಿಸಿದ್ದರು. ಹೀಗಾಗಿ ಇಂಜಿನಿಯರ್ ಕ್ಷೇತ್ರವನ್ನು ಆಯ್ದುಕೊಂಡು ಮದ್ರಾಸಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇವರು ಇಂಜಿನಿಯರಿಂಗ್ ಅಂತ್ಯ ವರ್ಷದಲ್ಲಿ ಇರುವಾಗಲೇ ಭಾರತದ ಇತಿಹಾಸದಲ್ಲಿ ಒಂದು ಘಟನೆ ನಡೆಯುತ್ತದೆ.
ಭಾರತ (India) ಮತ್ತು ಚೀನಾ (Cheena) ಮಧ್ಯ ಬಿರುಕು ನೋಡಿ ಸಂಧಿಗ್ನ ಪರಿಸ್ಥಿತಿ (Emergency) ಉಂಟಾದಾಗ ಆಗಿನ ಪ್ರಧಾನಿ ಆಗಿದ್ದ ನೆಹರು (Neharu) ಅವರು ಒಂದು ಕರೆ ಕೊಡುತ್ತಾರೆ. ಯಾರು ಅಂತಿಮ ವರ್ಷದ ಪದವಿಗಳಲ್ಲಿ ಇರುತ್ತಾರೋ ಅವರು ಸೇನೆಗೆ ಸೇರಬಹುವುದು ಎಂದು ಅವಕಾಶ ನೀಡುತ್ತಾರೆ. ಆಗ ದೇಶ ಸೇವೆ ಮಾಡುವ ಆಸೆಯಿಂದ ವಾಯು ಸೇನೆ (Air force) ಸೇರಿಕೊಂಡ ದತ್ತಣ್ಣ ಅವರು ಹಲವು ವರ್ಷಗಳ ಕಾಲ ಅಲ್ಲಿ ವಿಂಗ್ ಕಮಾಂಡರ್ (Wing commandor) ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.
ನಿವೃತ್ತಿ ಆದ ಬಳಿಕ ದೆಹಲಿಯ ಹೆಚ್ಎಎಲ್ ಅಕಾಡೆಮಿಯಲ್ಲಿ ( Dehli HAL ) ಪ್ರಾಂಶುಪಾಲರು ಕೂಡ ಆಗಿದ್ದರು. ಏರ್ಪೋರ್ಸ್ ಅಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಇವರು ದೇಶದಾದ್ಯಂತ ಸಂಚರಿಸಬೇಕಿತ್ತು ಚಂಡಿಗಢ ದೆಹಲಿ ಮುಂಬೈ ಹೀಗೆ ನಾನಾ ಕಡೆ ಕೆಲಸ ಮಾಡುತ್ತಿದ್ದ ಈವರಿಗೆ ಬಣ್ಣದ ಹುಚ್ಚು ಬಾಲ್ಯದಿಂದಲೂ ಇತ್ತು. ಆದರೆ ಬೆಂಗಳೂರಿಗೆ ಬರುತ್ತಿದ್ದೇ ಕಡಿಮೆ ಆದ್ದರಿಂದ ಆ ಕಡೆ ಸಂಪೂರ್ಣವಾಗಿ ಗಮನ ಕೊಡಲು ಸಾಧ್ಯವಾಗಿರಲಿಲ್ಲ.
ನಂತರ 1987ರಲ್ಲಿ ಬೆಂಗಳೂರಿನ ಎಚ್ ಎ ಎಲ್ ಗೆ ವರ್ಗಾವಣೆ ಆಗಿ ಬರುತ್ತಾರೆ. ಅವರ ಊರಿಗೆ ಬರುತ್ತಿದ್ದ ಗುಬ್ಬಿ ವೀರಣ್ಣ (Gubbi veeranna) ಹಾಗೂ ಜಮಖಂಡಿ (Jamakhandi) ನಾಟಕ ಕಂಪನಿಗಳಿಂದ ಪ್ರಭಾವಿತರಾಗಿದ್ದ ಇವರು ನಟನೆ ಕಡೆ ಹೋಗಲು ನಿರ್ಧರಿಸುತ್ತಾರೆ. ಮೊದಲ ಬಾರಿಗೆ ಒಂದು ಗಂಟೆ ಸಮಯ ಉದ್ಭವ (Udbhava) ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ.
ಅದಾದ ಮೇಲೆ ಬಂದಿದ್ದೆ ಅವರ ಬದುಕು ಬದಲಾಯಿಸಿದ ಚಿತ್ರ ನಾಗಭರಣ (Nagabharana) ಅವರ ನಿರ್ದೇಶನದ ಆ ಸ್ಫೋಟ (A spota) ಚಿತ್ರ. ಈ ಚಿತ್ರದಲ್ಲಿ ಸಂಪೂರ್ಣ ನೆಗೆಟಿವ್ ಅಲ್ಲಿ ಆರ್ಭಟಿಸಿದ್ದ ಸಿದ್ದಣ್ಣ ಅವರಿಗೆ ರಾಷ್ಟ್ರಮಟ್ಟದ ಶ್ರೇಷ್ಠ ಪೋಷಕ ನಟ ಪ್ರಶಸ್ತಿ ದೊರೆಯುತ್ತದೆ. ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣವಾಗಿ ಸಿನಿಮಾ ಮತ್ತು ನಾಟಕ ಕಡೆ ವಾಲುತ್ತಾರೆ ತೊಂಬತ್ತರ ಹರೆಯದ ದತ್ತಣ್ಣ ಇನ್ನು ಸಹ ಅದೇ ಹಳೇ ಹುಮ್ಮಸ್ಸಿನಲ್ಲಿ ಕಾಣುತ್ತಾರೆ.
ಇವರನ್ನು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಬ್ರಹ್ಮಚಾರಿಯಾಗಿ ಯಾಕೆ ಉಳಿದಿರಿ ಮದುವೆ (Marriage) ಯಾಕೆ ಆಗಲಿಲ್ಲ ಎಂದು ಪ್ರಶ್ನೆ ಕೇಳಿದ್ದಕ್ಕೆ ಈ ರೀತಿ ಉತ್ತರ ಕೊಟ್ಟಿದ್ದಾರೆ. ಶೂಟಿಂಗ್ ಅಂತ ದಿನಗಟ್ಟಲೆ ನಾನು ಅಲ್ಲಿ ಇಲ್ಲಿ ಹೋಗುತ್ತಿದ್ದೆ ಹಾಗಾಗಿ ಮದುವೆ ಕಡೆ ಗಮನ ಕೊಡಲು ಆಗಲಿಲ್ಲ. ಮದುವೆ ಆಗುವುದಕ್ಕೆ ನನಗೆ ಎಲ್ಲೂ ಸ್ಪಷ್ಟ ಕಾರಣ ಸಿಗಲೇ ಇಲ್ಲ ನನ್ನ ವೃತ್ತಿ ಅದಕ್ಕೆ ಸಪೋರ್ಟ್ ಮಾಡುವುದು ಇಲ್ಲ ಹಾಗಾಗಿ ಮದುವೆ ಆಗಲಿಲ್ಲ ಎಂದಿದ್ದಾರೆ.