ರಾಕಿಂಗ್ ಸ್ಟಾರ್ ಯಶ್ ಇಂದು ಸ್ಯಾಂಡಲ್ವುಡ್(Sandalwood) ಮಾತ್ರ ಅಲ್ಲದೆ ಹಾಲಿವುಡ್(Hollywood) ರೇಂಜ್ ಗೆ ಬೆಳೆದಿರುವ ನಟ ಎನ್ನಬಹುದು. ಈ ವರ್ಷ ಕೆಜಿಎಫ್(KGF) ಸರಣಿಗಳ ಮೂಲಕ ಬಾಲಿವುಡ್ ಹೋಗಿ ಬಾಕ್ಸಾಫೀಸ್ ಉ-ಡೀ-ಸ್ ಮಾಡಿ ಬಂದಿರುವ ರಾಕಿಂಗ್ ಸ್ಟಾರ್ ಯಶ್ ಅವರು ಶೀಘ್ರದಲ್ಲೇ ಹಾಲಿವುಡ್ ಅಲ್ಲೂ ಮಿಂಚುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಮತ್ತು ಅದಕ್ಕೆ ಸಂಬಂಧಪಟ್ಟ ಹಾಗೆ ಸೋಶಿಯಲ್ ಮೀಡಿಯಾದಿಂದ ಒಂದೊಂದೇ ವಿಚಾರ ಹೊರ ಬರುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ವೃತ್ತಿಜೀವನದಲ್ಲಿ ಉತ್ತುಂಗಕ್ಕೆ ಏರುತ್ತಿದ್ದಾರೆ, ವರ್ಷದಿಂದ ವರ್ಷಕ್ಕೆ ಯಶ್ ಅವರ ಗಳಿಕೆ ಮತ್ತು ಫೇಮ್ ನ ಗ್ರಾಫ್ ಏರುತ್ತಿದ್ದು ಈ ವಿಷಯದಲ್ಲಿ ಯಶ್ ಅವರು ಅನೇಕರಿಗೆ ರೋಲ್ ಮಾಡೆಲ್(Roll Model) ಆಗಿದ್ದಾರೆ. ವೈಯಕ್ತಿಕ ಬದುಕದಲ್ಲೂ ಕೂಡ ಅಷ್ಟೇ ಸುಂದರವಾಗಿ ಸಂಸಾರ ಕಟ್ಟಿಕೊಂಡಿರುವ ಇವರು ಆ ವಿಷಯದಲ್ಲೂ ಅನೇಕರಿಗೆ ಮಾದರಿಯಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ಅವರ ಬಹುದಿನಗಳ ಗೆಳತಿ ರಾಧಿಕಾ ಪಂಡಿತ್(Radhika Pandith) ಅವರ ಕೈಹಿಡಿದು ಮಡದಿ ಮಾಡಿಕೊಂಡಿದ್ದಾರೆ. ಕುಟುಂಬಸ್ಥರವ ಒಪ್ಪಿಗೆ ಮೇರೆಗೆ ಯಶ್ ಅವರ ಕಲ್ಯಾಣವು ಜರುಗಿ,ದ್ದು ಈಗ ಈ ಮುದ್ದಾದ ಜೋಡಿಗೆ ಐರಾ(Aira)ಹಾಗೂ ಯಥರ್ವ(Yatharv) ಎನ್ನುವ ಇಬ್ಬರು ಮಕ್ಕಳಿದ್ದಾರೆ.
ಕೆರಿಯರ್ ಶುರು ಮಾಡಿದ ದಿನದಿಂದಲೂ ಒಟ್ಟಿಗೆ ಕೆಲಸ ಮಾಡಿದ ಇವರಿಬ್ಬಗೂ ಧಾರಾವಾಹಿಯಲ್ಲಿ ಅಭಿನಯಿಸಿದ ದಿನದಿಂದಲೂ ಕೂಡ ಸ್ನೇಹವಿತ್ತು. ಡ್ರಾಮಾ(Drama) ಸಿನಿಮಾದಲ್ಲಿ ಅದು ಪ್ರೀತಿ ಆಗಿ ತಿರುಗಿದೆ. ಕನ್ನಡದಲ್ಲಿ ಇವರಿಬ್ಬರ ಕಾಂಬಿನೇಷನ್ ಅಲ್ಲಿ ನಾಲ್ಕು ಸೂಪರ್ ಹಿಟ್ ಸಿನಿಮಾಗಳು ಬಂದಿವೆ. ಇದೀಗ ಮದುವೆಯಾದ ಬಳಿಕ ರಾಧಿಕಾ ಪಂಡಿತ್ ಅವರು ಸಿನಿಮಾ ರಂಗದಿಂದ ದೂ-ರ ಉಳಿದು, ಐರಾ ಮತ್ತು ಅಥರ್ವ ಅವರ ಲಾಲನೆ ಪಾಲನೆ ಮಾಡುತ್ತಾ ಯಶ್ ಅವರಿಗೆ ಅವರ ಕನಸುಗಳಿಗೆ ಬೆಂಗಾವಲಾಗಿ ನಿಂತಿದ್ದಾರೆ.
ರಾಧಿಕಾ ಪಂಡಿತ್ ಅವರ ಈ ಗುಣ ಯಶ್ ಅವರಿಗೆ ಮಾತ್ರ ಅಲ್ಲದೆ ಅವರ ಕುಟುಂಬದಲ್ಲೂ ಎಲ್ಲರಿಗೂ ಹಿಡಿಸಿದೆ. ಅದರಲ್ಲೂ ಅತ್ತೆ ಅವರಿಂದ ಮೆಚ್ಚಿಸಕೊಳ್ಳಬೇಕು ಎಂದರೆ ಅದು ಸುಲಭದ ಮಾತಲ್ಲ ಆದರೂ ಕೂಡ ಯಶ್ ಅವರ ತಾಯಿ ಪುಷ್ಪ(Pushpa) ಅವರ ಸೊಸೆ ರಾಧಿಕಾ ಪಂಡಿತ್ ಅವರ ಗುಣಗಾನವನ್ನು ಸಂದರ್ಶನ ಒಂದರಲ್ಲಿ ಮಾಡಿದ್ದಾರೆ.
ಆ ಸಂದರ್ಶನದಲ್ಲಿ ಅವರ ಕುಟುಂಬಕ್ಕೆ ಸಂಬಂಧಪಟ್ಟ ಹಲವು ವಿಷಯಗಳನ್ನು ಹಂಚಿಕೊಂಡ ಅವರು ನಿರೂಪಕರು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಹ ನೀಡಿದ್ದಾರೆ. ಹೀಗೆ ಮಾತಿಪ ಬರದಲ್ಲಿ ನಿರೂಪಕರು ಯಶ್ ಅವರ ಇಬ್ಬರು ಮಕ್ಕಳಲ್ಲಿ ನಿಮಗೆ ಯಾರು ಹೆಚ್ಚು ಇಷ್ಟ ಎನ್ನುವ ಪ್ರಶ್ನೆಯನ್ನು ಸಹ ಕೇಳಿದ್ದಾರೆ. ಆ ಪ್ರಶ್ನೆಗೆ ಪುಷ್ಪ ಅವರು ನನ್ನ ಇಬ್ಬರು ಮೊಮ್ಮಕ್ಕಳು ನನ್ನ ಎರಡು ಕಣ್ಣುಗಳು ಇದ್ದಾಗೆ ಇಬ್ಬರು ಸಹ ನನಗೆ ಬಹಳ ಇಷ್ಟ ಎಂದಿದ್ದಾರೆ.
ಆದರೆ ಯಥರ್ವ ಮಾತ್ರ ಬಹಳ ಚೂಟಿ ಅವನನ್ನು ನೋಡುತ್ತಿದ್ದರೆ ನಮ್ಮ ಮಾವನವರ ಅಂದರೆ ಪತಿ ಅರುಣ್ ಕುಮಾರ್(Arun kumar) ಅವರ ತಂದೆಯ ರೀತಿ ಕಾಣುತ್ತಾನೆ, ಅವನು ಬೆಳೆದ ಮೇಲೆ ಅದೇ ರೀತಿ ಆಗುತ್ತಾನೆ ಎಂದು ಮೊಮ್ಮಗನ ಭವಿಷ್ಯವನ್ನು ಸಹ ಹೇಳಿದ್ದಾರೆ. ಇತ್ತೀಚೆಗೆ ಯಶ್ ಅವರು ತಮ್ಮ ಸ್ವಂತ ತೋಟದಲ್ಲಿ ಸಂಕ್ರಾಂತಿ(Sankranthi) ಹಬ್ಬವನ್ನು ಆಚರಿಸಿದ್ದಾರೆ. ರಾಧಿಕಾ ಪಂಡಿತ್ ಅವರು ಆ ಸೆಲೆಬ್ರೇಶನ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅತ್ತೆ ಮಾವ ಪತಿ ಹಾಗೂ ಮಕ್ಕಳೊಂದಿಗೆ ರಾಧಿಕಾ ಪಂಡಿತ್ ಬಹಳ ಸಡಗರದಿಂದ ಹಬ್ಬ ಆಚರಿಸಿದ್ದಾರೆ.