ರಾಜ್ಯದಾದ್ಯಂತ ಕ್ರಾಂತಿಯೋತ್ಸವ ಜೋರಾಗಿ ನಡೆಯುತ್ತಿದೆ. ಡಿ ಬಾಸ್ (D Boss) ಅವರ ಬಹು ನಿರೀಕ್ಷಿತ ಚಿತ್ರ ಕ್ರಾಂತಿ (Kranthi) ಎಲ್ಲಾ ಅಡೆ ತಡೆ ನಡುವೆ ಗ್ರಾಂಡ್ ಆಗಿ ರಿಲೀಸ್ ಆಗಿದ್ದು ಕಲೆಕ್ಷನ್ ವಿಚಾರದಲ್ಲೂ ಮುನ್ನುಗುತ್ತಿದೆ. ಇನ್ನೇನು ಫೆಬ್ರವರಿ 16 ದರ್ಶನ್ (Darshan) ಅವರ ಹುಟ್ಟುಹಬ್ಬ (birthday) ಕೂಡ ಬರುತ್ತಿದೆ, ಹಾಗಾಗಿ ಅಭಿಮಾನಿಗಳ ಕಡೆಯಿಂದ ಮತ್ತೊಂದು ಅಭಿಮಾನೋತ್ಸವ ನಡೆಯುವ ಸಾಧ್ಯತೆ ಇದೆ. ಕಳೆದ ಮೂರು ವರ್ಷಗಳಿಂದ ದರ್ಶನ್ ಅವರು ಹುಟ್ಟು ಹಬ್ಬವನ್ನು ಗ್ರಾಂಡ್ ಆಗಿ ಆಚರಿಸಿಕೊಂಡರಲಿಲ್ಲ.
ದರ್ಶನ್ ಅವರ ಹುಟ್ಟುಹಬ್ಬ ಆಚರಿಸಿಕೊಳ್ಳುವುದರಿಂದ ಎಷ್ಟೋ ಜನರಿಗೆ ಹೊಟ್ಟೆ ತುಂಬುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಯಾಕೆಂದರೆ ಇಡೀ ಕರ್ನಾಟಕದಲ್ಲಿ ದರ್ಶನ್ ಅವರಿಗೆ ಅಷ್ಟು ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಕೊರೋನ ಕಾರಣದಿಂದ ಎರಡು ವರ್ಷ ಹಾಗೂ ಪುನೀತ್ ರಾಜಕುಮಾರ್ ಅವರ ಅ’ಗ’ಲಿ’.ಕೆ ನೋವಿನಿಂದ ಒಂದು ವರ್ಷ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿಲ್ಲ.
ಈ ಬಾರಿ ಕ್ರಾಂತಿ ಕೂಡ ರಿಲೀಸ್ ಆಗಿ ಒಳ್ಳೆ ಪ್ರದರ್ಶನ ಕಾಣುತ್ತಿರುವುದರಿಂದ ಎಲ್ಲಾ ರೀಸನ್ ಸೇರಿಸಿ ಅಭಿಮಾನಿಗಳು ಅದ್ದೂರಿಯಾಗಿ ಹುಟ್ಟು ಹಬ್ಬ ಮಾಡುವ ನಿರ್ಧಾರ ಮಾಡಿದ್ದಾರೆ. ಆದರೆ ಇದಕ್ಕೂ ಮೊದಲೇ ಡಿ ಬಾಸ್ ಅಭಿಮಾನಿಗಳಿಗೆ ಕರೆಯೊಂದನ್ನು ಕೊಟ್ಟಿದ್ದಾರೆ. ನನ್ನ ಹುಟ್ಟುಹಬ್ಬಕ್ಕೆ ಕೇಕು ಹಾರ ತುಲಾಯಿ ತರುವ ಬದಲು ಸಾಧ್ಯವಾದರೆ ಅಕ್ಕಿ ದಿನಸಿ ತನ್ನಿ ಅಗತ್ಯವಿರುವವರಿಗೆ ಹಂಚೋಣ ಎಂದು.
ಸದ್ಯಕ್ಕೆ ಅಭಿಮಾನಿಗಳು ಕೂಡ ಇದೇ ರೀತಿ ಅರ್ಥಪೂರ್ಣವಾಗಿ ಡಿ ಬಾಸ್ ಹುಟ್ಟು ಹಬ್ಬ ಮಾಡುವ ನಿರ್ಧಾರ ಮಾಡಿದ್ದಾರೆ. ಹುಟ್ಟು ಹಬ್ಬ ಅಂದಮೇಲೆ ಡಿ ಬಾಸ್ ಬಗ್ಗೆ ಕೂಡ ಅಭಿಮಾನಿಗಳಿಗೆ ಸಂತಸದ ಸುದ್ದಿ ಸಿಗಲೇಬೇಕು. ಹಾಗಾಗಿ ಬಾರಿ ಡಿ56 (D56) ಸಿನಿಮಾ ಬಗ್ಗೆ ಅಪ್ಡೇಟ್ಸ್ ಸಿಗುವ ಸಾಧ್ಯತೆ ಇದೆ. ತರುಣ್ ಸುಧೀರ್ (Tharun Sudheer) ಅವರ ನಿರ್ದೇಶನದಲ್ಲಿ, ರಾಕ್ ಲೈನ್ ವೆಂಕಟೇಶ್ (Rockline Venkatesh) ಅವರ ನಿರ್ಮಾಣದಲ್ಲಿ ಮತ್ತು ಮಾಲಾಶ್ರೀ ಅವರ ಮುದ್ದಿನ ಪುತ್ರಿ ರಾಧನರಾಮ್ (Radhanram) ಲಾಂಚ್ ಆಗುತ್ತಿರುವ ಡಿ 56 ಸಿನಿಮಾ ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದಂದು ರವಿಶಂಕರ್ ಗುರೂಜಿ ಅವರ ಆಶ್ರಮದಲ್ಲಿ (Ravishankar guruji ashrama) ಮುಹೂರ್ತ ಮಾಡಿಕೊಂಡಿತ್ತು.
ಸಿನಿಮಾ ಬಗ್ಗೆ ಎಲ್ಲಿ ಕೇಳಿದರೂ ದರ್ಶನ್ ಅವರು ಕ್ರಾಂತಿ ಸಿನಿಮಾ ಮುಗಿಯವರೆಗೂ ಈ ಸಿನಿಮಾ ಬಗ್ಗೆ ಅಪ್ಡೇಟ್ ಕೊಡುವುದಿಲ್ಲ ಈ ಸಿನಿಮಾದಿಂದ ಕ್ರಾಂತಿ ಪ್ರಚಾರಕ್ಕೆ ತೊಂದರೆ ಆಗಬಾರದು ಎಂದು ಹೇಳಿಕೊಂಡು ಬರುತ್ತಿದ್ದರು. ಈಗ ಕ್ರಾಂತಿ ಸಿನಿಮಾ ರಿಲೀಸ್ ಆಗಿದ್ದು, ಇದೆ ಹುಟ್ಟುಹಬ್ಬದಂದು ಡಿ56 ಚಿ.ತ್ರ ತಂಡದಿಂದ ಚಿತ್ರದ ಬಗ್ಗೆ ಮಾಹಿತಿ ನಿರೀಕ್ಷಿಸುತ್ತಿದ್ದಾರೆ ಈ ಚಿತ್ರದ ಟೈಟಲ್ ಜೊತೆ ಸಣ್ಣ ಟೀಸರ್ ಕೂಡ ರಿಲೀಸ್ ಮಾಡಲು ನಿರ್ಧರಿಸಿದೆಯಂತೆ ಡಿ56 ತಂಡ.
ಕಳೆದ ವರ್ಷ ದಚ್ಚು ಹುಟ್ಟುಹಬ್ಬದ ಪ್ರಯುಕ್ತ ಮೆಜೆಸ್ಟಿಕ್ (Mejestic) ಹೊಸ ರೂಪದಲ್ಲಿ ಬಂದಿತ್ತು, ಈ ಬಾರಿ ಡಿ೫೬ ಸಿನಿಮಾ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಾಗುತ್ತಿರುವುದರಿಂದ ಅದರ ಕುರಿತೇ ಅಪ್ಡೇಟ್ ಕೊಡಲು ಚಿತ್ರತಂಡ ತಯಾರಿ ನಡೆಸುತ್ತಿದೆಯಂತೆ. ಕೆಲ ಮೂಲಗಳ ಪ್ರಕಾರ ಸಿನಿಮಾಗೆ ಚೌಡಯ್ಯ (Choudai) ಎಂದು ಹೆಸರಿಡಲಾಗಿದೆ ಎನ್ನುವ ಮಾಹಿತಿಗಳು ಕೂಡ ಹರಿದಾಡುತ್ತಿವೆ. ಹಂಪಿಯ ಬಳಿ ನಡೆದ ಸತ್ಯ ಘಟನೆ ಆಧಾರಿತ ಚಿತ್ರವನ್ನು ಕಥೆ ವಸ್ತು ಇಟ್ಟುಕೊಂಡು ಈ ಸಿನಿಮಾ ತಯಾರಾಗುತ್ತಿದೆಯಂತೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ಕುರಿತು ಸಂಪೂರ್ಣ ಮಾಹಿತಿಯೇ ಅಭಿಮಾನಿಗಳಿಗೆ ಸಿಗಲಿದೆ.