35 ವರ್ಷಗಳ ಹಿಂದಿನ ಅದೊಂದು ಸಿನಿಮಾ ಕೋಟಿ ಕೋಟಿ ಹಣವನ್ನು ಸಂಪಾದನೆ ಮಾಡಿತ್ತಂತೆ. ಅದಕ್ಕೆ ಚಾಲನೆ ನೀಡಿದ ಡಾಕ್ಟರ್ ರಾಜಕುಮಾರ್ ಅವರ ಅಮೃತ ಹಸ್ತವೇ ಅಷ್ಟೊಂದು ಲಾಭಗಳಿಸಲು ಕಾರಣವಾಯಿತು ಎನ್ನಲಾಗುತ್ತದೆ. ಆ ಚಿತ್ರವು ಕಮಲಹಾಸನ್ ಅವರದ್ದು. ಚಿತ್ರ ಯಾವುದೆಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಬರಹವನ್ನು ಸಂಪೂರ್ಣವಾಗಿ ಓದಿ..ನಂತರ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಡಾಕ್ಟರ್ ರಾಜಕುಮಾರ್ ಅವರ ಕುರಿತಾಗಿ ಕರ್ನಾಟಕದ ಜನತೆಗೆ ಹೇಳುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಅವರ ನಡೆ ನುಡಿಗಳು ಇಂದಿಗೂ ಕನ್ನಡಿಗರಿಗೆ ಮಾದರಿಯಾಗಿದೆ. ರಾಜಕುಮಾರ್ ಅವರು ಸಿನಿಮಾ ರಂಗವನ್ನು ಪ್ರವೇಶಿಸಿದ ಬಳಿಕ ಹಾಡು, ನೃತ್ಯ, ಅಭಿನಯಗಳ ಮೂಲಕ ಜನರ ಮನಸ್ಸನ್ನು ಗೆದ್ದವರು. ಅಗಾದ ಜನಪ್ರಿಯತೆಯನ್ನು ಗಳಿಸಿಯೂ ಕೂಡ ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಅವರ ಒಳ್ಳೆಯ ತನವು ಎಂತಹ ವ್ಯಕ್ತಿಯನ್ನಾದರೂ ಆಕರ್ಷಿಸುತ್ತಿತ್ತು.
ತಮ್ಮ ಕ್ಷೇತ್ರದಲ್ಲಿ ಇತರರು ಮುನ್ನಡೆಯುವುದನ್ನು ನೋಡಲು ಸಾಧ್ಯವಾಗದೆ ಇರುವವರು ಹಲವಾರು ಮಂದಿ ಇರುತ್ತಾರೆ. ಆದರೆ ರಾಜಕುಮಾರ್ ಅವರು ಆ ಗುಂಪಿಗೆ ಸೇರಲ್ಲ. ತಮ್ಮಂತೆ ಇತರರು ಮುಂಬರಬೇಕು ಎಂಬ ಹಂಬಲವುಳ್ಳವರು. ಸಿನಿಮಾಗಳನ್ನು ಮಾಡುವ ಮೂಲಕ ತಾವು ಯಶಸ್ಸನ್ನು ಗಳಿಸಿರುವುದು ಅಷ್ಟೇ ಅಲ್ಲದೆ ಹೊಸದಾಗಿ ಸಿನಿಮಾಗಳನ್ನು ಮಾಡುವವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ‘ನಿಮ್ಮ ಸಿನೆಮಾ ಚೆನ್ನಾಗಿ ಮೂಡಿಬಂದು, ಒಳ್ಳೆ ಲಾಭ ತಂದು ಕೊಡಲಿ’ ಎಂದು ಮನಸಾರೆ ಹರಿಸುತ್ತಿದ್ದರು.
ಹೊಸ ಹೊಸ ಕಲೆಗಳಿಗೆ ಬೆಲೆ ನೀಡುತ್ತಿದ್ದರು. ಅದೆಷ್ಟೋ ಹೊಸ ಪ್ರತಿಭೆಗಳನ್ನು ಕನ್ನಡ ಚಿತ್ರರಂಗಕ್ಕೆ ಎಳೆದು ತಂದಿದ್ದಾರೆ. ತಾವು ಎಷ್ಟೇ ಬ್ಯುಸಿ ಆಗಿದ್ದರು ಕೂಡ ಇತರ ಸ್ಟಾರ್ ನಟರ ಚಿತ್ರದ ಮುಹೂರ್ತಕ್ಕೆ ಕ್ಲಾಪ್ಸ್ ನೀಡಿ ಬರುತ್ತಿದ್ದರು. ಇವರ ಈ ಗುಣವು ಕೇವಲ ಕನ್ನಡ ಚಿತ್ರರಂಗದ ಕಲಾವಿದರನ್ನು ಸೆಳೆಯುದಷ್ಟೇ ಅಲ್ಲದೆ ಪರಭಾಷೆಯ ನಟರನ್ನು ಸೆಳೆಯಿತು.
ಕಮಲ ಹಾಸನ್ ಅವರು ಒಬ್ಬ ಅದ್ಭುತ ನಟ. ಬಾಲ್ಯದಲ್ಲಿಯೇ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಇವರು ಇಂದಿಗೂ ವಿಭಿನ್ನವಾದ ಚಿತ್ರಗಳ ಮೂಲಕ ಅಭಿಮಾನಿಗಳನ್ನು ತಮ್ಮತ್ತ ಸೆಳೆಯುತ್ತಲೇ ಇರುತ್ತಾರೆ. ವಯಸ್ಸಿನ ಭೇದವಿಲ್ಲದೆ ಸಾಹಸಮಯ ಚಿತ್ರವನ್ನು ಸಾರಾಗವಾಗಿ ಮಾಡಿ ಮುಗಿಸುತ್ತಾರೆ. ವಿಶಿಷ್ಟವಾದ ಸ್ಟಂಟ್ ಪ್ರಯೋಗಗಳನ್ನು ಹಿಂದಿನಿಂದಲೂ ಮಾಡುತ್ತಾ ಸಿನಿ ವೀಕ್ಷಕರನ್ನು ಮನರಂಜಿಸುತ್ತಲೇ ಬಂದವರು ಇವರು.
ಪುಷ್ಪಕ ವಿಮಾನ ಚಿತ್ರದ ಬಗ್ಗೆ ನಿಮಗೆಲ್ಲರಿಗೂ ತಿಳಿದಿರಬಹುದು. ಸದ್ದಿಲ್ಲದ ಮೂಕ ಚಿತ್ರವಾಗಿದ್ದರೂ, ಬಿಡುಗಡೆಯ ದಿನದಿಂದಲೇ ಸದ್ದು ಮಾಡಿತ್ತು. ಈ ಚಿತ್ರವನ್ನು ಬೆಂಗಳೂರಿನಲ್ಲಿ ಚಿತ್ರಿಕರಿಸಲಾಗಿತ್ತು. ಡಿಸೆಂಬರ್ 27 1986 ರಂದು ಪುಷ್ಪಕ ವಿಮಾನ ಸಿನಿಮಾ ಬಿಡುಗಡೆಯಾಗಿ, ಭಾರತದ ಯಶಸ್ವಿ ಚಿತ್ರಗಳ ಸಾಲಿನಲ್ಲಿ ಸೇರಿತು. ಚಿತ್ರದ ನಿರ್ದೇಶಕರಾಗಿ ಶ್ರೀನಿವಾಸ್ ಅವರು ಕಾರ್ಯನಿರ್ವಹಿಸಿದ್ದರೆ ಕಮಲ್ ಹಾಸನ್ ಅವರು ನಟಿಸಿದ್ದರು.
ಕಡಿಮೆ ಬಜೆಟ್ಟಿನಲ್ಲಿ ಸಿದ್ದಗೊಂಡ ಪುಷ್ಪಕ ವಿಮಾನ ಚಿತ್ರವು 35 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿತ್ತು. ಬಿಡುಗಡೆಯಾಗಿ ಪ್ರದರ್ಶನ ನೀಡಿದ ಬಳಿಕ ಅತ್ಯುತ್ತಮ ಚಿತ್ರ ಎನಿಸಿಕೊಂಡು ಭಾರಿ ಲಾಭವನ್ನು ಗಳಿಸಿಕೊಟ್ಟಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ ಮೂಕ ಚಿತ್ರವೊಂದು ದೇಶದೆಲ್ಲೆಡೆ ಸದ್ದು ಮಾಡಿ, ಹಿಂದಿನ ಚಿತ್ರಗಳ ದಾಖಲೆಗಳನ್ನು ಮುರಿದಿತ್ತು. ಇಷ್ಟೊಂದು ಯಶಸ್ಸು ಕಾಣಲು, ಸಹಕಾರಿಯದ ಕೈಗಳ ಬಗ್ಗೆ ಕಮಲ್ ಹಾಸನ್ ಅವರು ವೇದಿಕೆಯ ಮೇಲೆ ಹಾಡಿ ಹೊಗಳಿದ್ದರು. ‘ಬಿಡುಗಡೆಯ ಸಂದರ್ಭದಲ್ಲಿ ಅಣ್ಣಾವ್ರು ತಮ್ಮ ಅಮೃತ ಹಸ್ತದಿಂದ ಕ್ಲಾಪ್ಸ್ ನೀಡಿರುವುದಕ್ಕಾಗಿ ಚಿತ್ರವು ಇಷ್ಟೊಂದು ಗೆಲುವು ಕಂಡಿದೆ’ ಎಂದಿದ್ದರು. ಹೌದು. ಡಾಕ್ಟರ್ ರಾಜಕುಮಾರ್ ಅವರು ಎಲ್ಲರ ಚಿತ್ರಗಳನ್ನು ಪೂರ್ಣ ಮನಸ್ಸಿನಿಂದ ಹರಿಸುತ್ತಿದ್ದರು.