ಕನ್ನಡ ಚಲನಚಿತ್ರರಂಗ ಅದು ಶುರುವಾದ ದಿನದಿಂದಲೂ ಕೂಡ ಸಾಕಷ್ಟು ಹಾಸ್ಯ ಕಲಾವಿದರನ್ನು ಕಂಡಿದೆ. ಸಿನಿಮಾದಲ್ಲಿ ಹೇಗೆ ನಾಯಕ, ಸಂಗೀತ, ಸಾಹಸ ಎಲ್ಲವೂ ಮುಖ್ಯವೋ ಹಾಗೆ ಹಾಸ್ಯ ಕೂಡ ಸಿನಿಮಾದ ಒಂದು ಭಾಗ. ಹಾಗಾಗಿ ಪ್ರತಿ ಸಿನಿಮಾದಲ್ಲೂ ಕೂಡ ಹಾಸ್ಯ ಕಲಾವಿದರು ಮುಖ್ಯವಾಗುತ್ತಾರೆ. ಅಣ್ಣಾವ್ರ ಸಿನಿಮಾಗಳಲ್ಲಿ ಇರುತ್ತಿದ್ದ ನರಸಿಂಹರಾಜು, ಮುಸರಿ ಕೃಷ್ಣಮೂರ್ತಿ, ಬಾಲಕೃಷ್ಣ ಇವರಿಂದ ಹಿಡಿದು ಈಗಿನ ಕಾಮಿಡಿ ನಟರಾದ ಶರಣ್, ಸಾಧುಕೋಕಿಲ, ಚಿಕ್ಕಣ್ಣ ಇವರುಗಳವರೆಗೆ ನೂರಾರು ಹಾಸ್ಯ ಕಲಾವಿದರು ಹಾಸ್ಯದಲ್ಲಿ ಹೆಸರುವಾಸಿಯಾಗಿದ್ದಾರೆ.
ಇವರ ನಡುವೆ ತಮ್ಮದೇ ಆದ ವಿಭಿನ್ನ ಶೈಲಿಯ ಮೂಲಕ ಹಾಸ್ಯದಲ್ಲಿ ಬೆಂಚ್ಮಾರ್ಕ್ ಸೃಷ್ಟಿಸಿ ಜಗ್ಗೇಶ್ ದಶಕಗಳವರೆಗೆ ಕಾಮಿಡಿಯಲ್ಲಿ ಸಾಮ್ರಾಟನಾಗಿ ಮೆರೆದವರು. ತಮ್ಮದೇ ಆದ ವಿಶೇಷ ಹಾವಭಾವ, ಡೈಲಾಗ್ ಡೆಲಿವರಿ ಇವುಗಳ ಕಾರಣದಿಂದಾಗಿ ಜಗ್ಗೇಶ್ ಜನರನ್ನು ಮುಟ್ಟುತ್ತಿದ್ದರು. ಯಾವುದೇ ಚಿತ್ರರಂಗಕ್ಕೆ ಸಂಪರ್ಕ ಇಲ್ಲದ ಕುಟುಂಬದಿಂದ ಬಂದು ಇಂದು ಇವರು ಈ ಹಂತದವರೆಗೆ ತಲುಪುವ ತನಕ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಅದಕ್ಕೆ ಕಾರಣ ಅವರ ತಂದೆ ಅವರು ಬಹಳ ಕಟ್ಟುನಿಟ್ಟಾಗಿದ್ದರು. ಸಿನಿಮಾ ಎನ್ನುವುದೇ ಅವರಿಗೆ ಇಷ್ಟ ಇರಲಿಲ್ಲ.
ತನ್ನ ಮಗನ ಸಿನಿಮಾಗೆ ಹೋಗುತ್ತಾನೆ ಎನ್ನುವುದನ್ನು ಅವರು ಬಹಳ ಖಂಡಿಸಿದ್ದರು. ಆದರೆ ಕುಟುಂಬದವರ ವಿರೋಧ ಕಟ್ಟಿಕೊಂಡು ಬೆಂಗಳೂರಿಗೆ ಬಂದು ಸಿನಿಮಾ ಇಂಡಸ್ಟ್ರಿಯಲ್ಲೇ ಬದುಕು ಕಂಡುಕೊಳ್ಳಬೇಕು ಎಂದು ಹಠತೊಟ್ಟ ಇವರು ಅದೇ ರೀತಿ ಇಂದು ತಮ್ಮ ಕನಸನ್ನು ಸಾಧಿಸಿ ಬಿಟ್ಟಿದ್ದಾರೆ. ಮೊದಲಿಗೆ ಇಬ್ಬನಿ ಕರಗಿತು ಎನ್ನುವ ಸಿನಿಮಾ ಮೂಲಕ ಬಣ್ಣ ಹಚ್ಚಿದ ಇವರು ರಣರಂಗ, ಬಜಾರಿ ಹೆಣ್ಣು ಕಿಲಾಡಿ ಗಂಡು, ಯುದ್ಧ ಕಾಂಡ ಇನ್ನು ಮುಂತಾದ ಅನೇಕ ಸಿನಿಮಾಗಳಲ್ಲಿ ಖಳ ನಾಯಕನಾಗಿ ಬಣ್ಣ ಹಚ್ಚಿದ್ದಾರೆ
ನಂತರ ತರ್ಲೆ ನನ್ ಮಗ ಎನ್ನುವ ಉಪೇಂದ್ರ ಡೈರೆಕ್ಷನ್ ಅವರ ಸಿನಿಮಾ ಇವರ ಸಿನಿ ಬದುಕನ್ನೇ ಬದಲಾಯಿಸಿ ಬಿಡುತ್ತದೆ.
ಮೊದಲ ಬಾರಿಗೆ ಹೀರೋ ಆಗಿ ಅವರು ಆ ಸಿನಿಮಾದಲ್ಲಿ ಅಭಿನಯಿಸುತ್ತಾರೆ. ಆನಂತರ ಸರ್ವರ್ ಸೋಮಣ್ಣ, ವೀರಣ್ಣ, ಬೇವುಬೆಲ್ಲ ಇಂತಹ ಹಾಸ್ಯ ಆಧಾರಿತ ಸಿನಿಮಾಗಳಿಂದ ಕೂಡ ಹೆಸರುವಾಸಿ ಆಗುತ್ತಾರೆ . ಶಿವಣ್ಣ, ರವಿಚಂದ್ರನ್, ಅಭಿಜಿತ್ ಇನ್ನು ಮುಂತಾದ ನಟರೊಂದಿಗೆ ಮಲ್ಟಿ ಸ್ಟಾರ್ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇಂದಿಗೂ ಸಹ ಕನ್ನಡ ಚಲನಚಿತ್ರ ರಂಗದಲ್ಲಿ ನಿರ್ಮಾಪಕನಾಗಿ ನಟನಾಗಿ, ಪೋಷಕ ಪಾತ್ರದಾರಿಯಾಗಿ, ಹಾಡುಗಾರನಾಗಿ ಕೂಡ ಇವರು ಫೇಮಸ್ ಆಗಿದ್ದಾರೆ.
ಈಗಲೂ ಜನ ಜಗ್ಗೇಶ್ ಅವರ ಸಿನಿಮಾ ರಿಲೀಸ್ ಆಗುತ್ತದೆ ಎಂದರೆ ಅಷ್ಟೇ ಕಾತುರದಿಂದ ಕಾಯುತ್ತಿರುತ್ತಾರೆ. ಕಿರುತೆರೆ ಹಾಸ್ಯ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡ ಜನರಿಗೆ ಹತ್ತಿರವಾಗಿರುವುದರ ಜೊತೆಗೆ ಇವರು ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿ ಕೂಡ ಆಯ್ಕೆ ಆಗಿ ಹೆಮ್ಮೆಯ ಕನ್ನಡಿಗನಾಗಿದ್ದಾರೆ. ಸಿನಿಮಾ ಮತ್ತು ರಾಜಕೀಯ ವಿಚಾರವಾಗಿ ಹಲವು ವಿವಾದಗಳು ಇವರನ್ನು ಬೆನ್ನತ್ತಿದ್ದರು.
ಕೌಟುಂಬಿಕ ವಿಚಾರವಾಗಿ ಮಾತ್ರ ಜಗ್ಗೇಶ್ ಅವರು ಯಾವಾಗಲೂ ಉದಾಹರಣೆ ಆಗುವಂತೆ ಬದುಕಿದ್ದಾರೆ. ಪರಿಮಳ ಎನ್ನುವವರನ್ನು ಕುಟುಂಬದ ವಿರೋಧದಿಂದಲೇ ಪ್ರೀತಿಸಿ ವಿವಾಹವಾದ ಜಗ್ಗೇಶ್ ಇವರು ಇಡೀ ನಾಡೆ ಪ್ರೀತಿಗೆ ಉದಾಹರಣೆ ಕೊಡುವಂತೆ, ಸಂಸಾರವನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ. ಇವರಿಬ್ಬರ ದಾಂಪತ್ಯಕ್ಕೆ ಯತಿರಾಜ್ ಮತ್ತು ಗುರುರಾಜ್ ಎನ್ನುವ ಇಬ್ಬರು ಮಕ್ಕಳು ಸಾಕ್ಷಿಯಾಗಿದ್ದಾರೆ. ಮತ್ತು ಇಬ್ಬರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಗುರುರಾಜ್ ಅವರು ಗಿಲ್ಲಿ ಎನ್ನುವ ಸಿನಿಮಾ ಮೂಲಕ ನಾಯಕನಾಗಿ ಕಾಣಿಸಿಕೊಂಡಿದ್ದರು, ನಂತರ ಇವರ ಸಿನಿಮಾಗಳು ಹಿಟ್ ಆದ ಕಾರಣ ಚಿತ್ರರಂಗ ಬಿಟ್ಟು ಬೇರೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಯತಿರಾಜ್ ಬಾಲಕಲಾವಿದನಾಗಿ ತಂದೆಯ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಗುರುರಾಜ್ ಅವರ ಮತ್ತೊಂದು ವಿಷಯ ಎಲ್ಲರ ಗಮನ ಸೆಳೆಯುತ್ತದೆ ಅದೇನೆಂದರೆ, ಗುರುರಾಜ್ ಅವರು ವಿದೇಶಿ ಮಹಿಳೆಯನ್ನು ಮದುವೆ ಆಗಿದ್ದಾರೆ. ಎಲ್ಲರೂ ಕೂಡ ಈ ವಿಷಯ ಬಹಳ ಆಸಕ್ತಿ ತರಿಸುತ್ತದೆ ಮತ್ತು ಇದು ಪ್ರೇಮ ವಿವಾಹ ಆಗಿರುವುದರಿಂದ ಇವರ ಪ್ರೇಮ ಹೇಗೆ ಶುರುವಾಯಿತು ಎನ್ನುವ ಕುತೂಹಲ ಹಲವರಿಗೆ. ಮುಯೆ ಥಾಮ್ ಎನ್ನುವ ಸಮರಕಲೆ ರೀತಿಯ ವಿದ್ಯೆ ಕಲಿಯುವುದಕ್ಕಾಗಿ ಥೈಲ್ಯಾಂಡ್ ಗೆ ಹೋಗಿದ್ದ ಗುರುರಾಜ್ ಅವರಿಗೆ ಅಲ್ಲೊಮ್ಮೆ ಕ್ರೆಡಿಟ್ ಕಾರ್ಡ್ ಸಮಸ್ಯೆ ಅದ ಸಮಯದಲ್ಲಿ ಕ್ಯಾಟಿ ಸಹಾಯಕ್ಕೆ ಬರುತ್ತಾರೆ.
ಕ್ಯಾಟಿಯವರು ಕೂಡ ಅದೇ ಕ್ಯಾಂಪಿನಲ್ಲಿ ಇರುತ್ತಾರೆ. ಆಗ ಪರಿಚಯ ಆದ ಅವರ ಸ್ನೇಹ ನಂತರ ಪ್ರೀತಿಯಾಗಿ ಬದಲಾಗುತ್ತದೆ. ಅದನ್ನು ತಾಯಿಗೆ ತಿಳಿಸಿದಾಗ ಪರಿಮಳ ಅವರು ಜಗ್ಗೇಶ್ ಅವರಿಗೆ ಇವರಿಬ್ಬರಿಗೂ ಮದುವೆ ಮಾಡುವಂತೆ ಕೇಳಿಕೊಳ್ಳುತ್ತಾರೆ. ಮುಂದೆ ಏನೇ ಸಮಸ್ಯೆ ಬಂದರೂ ಇಬ್ಬರು ಬೇರೆ ಆಗುವುದಿಲ್ಲ ಎಂದು ಮಾತು ತೆಗೆದುಕೊಂಡು ಜಗ್ಗೇಶ್ ಇಬ್ಬರಿಗೂ ಮದುವೆ ಸಹ ಮಾಡುತ್ತಾರೆ. ಇಂದು ಕ್ಯಾಟಿ ಮತ್ತು ಗುರುರಾಜ್ ಅವರು ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಇವರಿಗೆ ಒಬ್ಬ ಮಗ ಸಹ ಇದ್ದಾನೆ. ಕ್ಯಾಟಿ ಅವರು ಖ್ಯಾತ ಈಜು ಪಟು ಸಹ ಆಗಿರುವುದರಿಂದ ಕ್ರೀಡೆಯಲ್ಲಿ ದೇಶಕ್ಕೆ ಹೆಸರು ತರುವ ಮಹದಾಸೆ ಹೊಂದಿದ್ದಾರೆ.