ಬಾಲ ನಟಿಯಾಗಿ ಸಿನಿಮಾ ರಂಗಕ್ಕೆ ಬಂದು ಬಳಿಕ ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚಿ ಬಾರಿ ಡಿಮ್ಯಾಂಡ್ ನಲ್ಲಿ ಇದ್ದ ನಟಿ ಮೀನಾ (Actress Meena) ರವರು ಈಗ ಪೋಷಕ ನಟಿಯಾಗಿ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿ ಈಗಲೂ ಸಹ ಬಹಳಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಆದರೆ ಇತ್ತೀಚೆಗೆ ಅವರು ಸಿನಿಮಾ ವಿಚಾರಕ್ಕಿಂತ ಹೆಚ್ಚಿಗೆ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿ ಇರುತ್ತಾರೆ ಎಂದು ಹೇಳಬಹುದು. ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ರವರು ಎರಡು ವರ್ಷದ ಹಿಂದೆ ಅ’ನಾ’ರೋ’ಗ್ಯದಿಂದ ಮೃ’ತಪಟ್ಟರು. ಆ ಸಮಯದಿಂದ ನಟಿ ಮರುಮದುವೆ ಬಗ್ಗೆ ಹೆಚ್ಚು ಮಾಧ್ಯಮಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿ ಪ್ರಸಾರವಾಗುತ್ತಲೇ ಇದೆ.
ನಟಿ ಮೀನಾರವರ ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಲವು ಬಾರಿ ಗಾಳಿ ಸುದ್ದಿ ಹಬ್ಬಿದೆ. ಹಿಂದೊಮ್ಮೆ ಸ್ಟಾರ್ ನಟ ಧನುಷ್ ಅವರೊಂದಿಗೆ ನಟಿ ಮೀನಾ 2ನೇ ಮದುವೆ ಆಗುತ್ತಿದ್ದಾರೆ ಎನ್ನುವ ಗಾಳಿ ಸುದ್ದಿ ಬಾರಿ ಜೋರಾಗಿ ಹಬ್ಬಿತ್ತು, ಬಳಿಕ ಸಿನಿಮಾ ರಂಗದಲ್ಲದವರ ಜೊತೆಗೆ ಕೂಡ ನಟಿ ಹೆಸರು ತಳಕು ಹಾಕಿಕೊಂಡಿತ್ತು.
ಬಳಿಕ ಖ್ಯಾತ ಉದ್ಯಮಿ ದೊಡ್ಡ ಹೆಸರು ಹೊಂದಿರುವ ವ್ಯಕ್ತಿಯೊಬ್ಬರ ಜೊತೆ ನಟಿ ಎರಡನೇ ಮದುವೆ ಆಗುವುದಕ್ಕೆ ಯೋಚನೆ ಮಾಡಿದ್ದಾರೆ ಎನ್ನುವ ರೀತಿ ಬಲವಾಗಿ ಸುದ್ದಿ ಹರಿದಾಡಿತ್ತು. ಈಗ ಸ್ವತಃ ಮೀನಾ ಅವರೇ ಈ ಬಗ್ಗೆ ಮಾತನಾಡುವ ಮೂಲಕ ಎಲ್ಲ ವಿಷಯಗಳಿಗೂ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಚಾನಲ್ ಒಂದಕ್ಕೆ ಸಂದರ್ಶನ ಕೊಟ್ಟ ನಟಿ ಮೀನಾರವರು ಅಲ್ಲೂ ಕೂಡ ಇದೇ ಪ್ರಶ್ನೆ ಎದುರಿಸಬೇಕಾಗಿ ಬಂತು. ಹಲವು ಬಾರಿ ತಮ್ಮ ಮಾತಿನ ನಡುವೆ ನನಗೆ ಗೊತ್ತಿಲ್ಲ ನನಗೆ ಗೊತ್ತಿಲ್ಲ ಅನ್ನುವ ಮಾತುಗಳನ್ನು ಮರುಕಳಿಸಿದ ಅವರು ಮನಬಿಚ್ಚಿ ಮೊದಲ ಬಾರಿಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಜೀವನದಲ್ಲಿ ಏನು ಆಗುತ್ತದೆ ಎಂದು ಮೊದಲೇ ನಿರೀಕ್ಷೆ ಮಾಡಲು ಆಗುವುದಿಲ್ಲ, ಅದೇ ರೀತಿ ಮುಂದಿನ ಎರಡು ಮೂರು ವರ್ಷಗಳಲ್ಲಿ ಏನಾಗಬಹುದು ಎಂದು ನನಗೆ ಗೊತ್ತಿಲ್ಲ ಆದರೆ ನಾನಂತೂ ಸದ್ಯಕ್ಕೆ ಮದುವೆ ಆಗುವ ಬಗ್ಗೆ ಯೋಚನೆ ಮಾಡುತ್ತಿಲ್ಲ.
ಯಾಕೆಂದರೆ ಮದುವೆ ಎನ್ನುವುದು ಸಣ್ಣ ವಿಚಾರ ಅಲ್ಲ ನನ್ನ ಜೊತೆ ಈಗ ನನ್ನ ಮಗಳಿದ್ದಾಳೆ ಮತ್ತು ನನ್ನ ಮಗಳೇ ನನ್ನ ಮೊದಲ ಆದ್ಯತೆ ಹಾಗಾಗಿ ನನ್ನ ಮಗಳನ್ನು ಬೆಳೆಸುವುದು ನನ್ನ ಕಣ್ಣ ಮುಂದೆ ಇದೆ ಅದನ್ನು ಅಷ್ಟೇ ಯೋಚಿಸುತ್ತಿದ್ದೇನೆ ಎಂದಿದ್ದಾರೆ.
ಕುಟುಂಬಸ್ಥರು ಕೂಡ ಮದುವೆ ಬಗ್ಗೆ ಮಾತನಾಡುತ್ತಾರೆ ಮತ್ತೊಂದು ಮದುವೆಯಾಗುವುದು ಸೂಕ್ತ ಎಂದು ಸಲಹೆ ನೀಡುತ್ತಾರೆ. ನಾನು ಯಾವುದೇ ನಿರ್ಧಾರಕ್ಕೆ ಖಂಡಿತ ಬಂದಿಲ್ಲ ಆದರೆ ಮೀಡಿಯಾ ಗಳಲ್ಲಿ ಅಂತೂ ಬೇಕಾಬಿಟ್ಟಿ ಸುದ್ದಿ ಪ್ರಚಾರವಾಗುತ್ತದೆ. ಈ ರೀತಿ ಗಾಳಿ ಸುದ್ದಿಗಳಿಂದ ಮನಸ್ಸಿಗೆ ಬಹಳ ನೋ’ವಾಗುತ್ತದೆ ಆದರೆ ಅದು ಯಾವುದು ನಿಜ ಅಲ್ಲ ಎಂದು ನಟಿ ನೊಂ’ದುಕೊಂಡು ಮಾತನಾಡಿದ್ದಾರೆ.
ಕಾಲ ಹೇಗೆ ಕರೆದುಕೊಂಡು ಹೋಗುತ್ತದೆ ಹಾಗೆ ಹೋಗಬೇಕು ಅಷ್ಟೇ ನಮ್ಮ ಕೈಯಲ್ಲಿ ಏನು ಇರುವುದಿಲ್ಲ ಎಂದು ಹೇಳುವ ಮೂಲಕ ಇದುವರೆಗೂ ಹಬ್ಬಿರುವ ಸುದ್ದಿಗಳೆಲ್ಲಾ ಸುಳ್ಳು ಎಂದು ಸ್ಪಷ್ಟತೆ ಕೊಟ್ಟಿದ್ದಾರೆ. ನೀವು ಕೂಡ ನಟಿ ಮೀನಾರವರ ಸಿನಿಮಾ ನೋಡಿದ್ದರೆ ಕನ್ನಡದ ಅವರ ಯಾವ ಸಿನಿಮಾ ಇಷ್ಟ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.