ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿದವರಿಗೆ ಒಂದು ದೊಡ್ಡ ಸಿಹಿ ಸುದ್ದಿ ನೀವು ಹೂಡಿಕೆ ಮಾಡಿದಂತಹ ಹಣಕ್ಕೆ ಅತಿ ಹೆಚ್ಚು ಬಡ್ಡಿ ದರವನ್ನು ವಿಧಿಸುವುದಾಗಿ ಸರ್ಕಾರವು ಮುಂದಾಗಿದೆ ಕೇಂದ್ರ ಹಣಕಾಸು ಸಚಿವಾಲಯವು ಹೂಡಿಕೆದಾರರಿಗೆ ತೆರಿಗೆ ಪ್ರಯೋಜನಗಳನ್ನು ವಿಸ್ತರಿಸಿದೆ ಹೆಚ್ಚಿನ ರಾಷ್ಟ್ರೀಯ ಸಣ್ಣ ಉರಿತಾಯ ನಿಧಿ ಯೋಜನೆಗಳ ಮೇಲಿನ ಬಡ್ಡಿ ದರವರನ್ನು 23 ಅಂಕಗಳಿಂದ 110 ಬಿಪಿಎಸ್ ಗೆ ಹೆಚ್ಚಿಸಿದೆ.
ಈ ಎರಡು ಸ್ಕೀಮ್ ನಲ್ಲಿ ಅಕೌಂಟ್ ಓಪನ್ ಮಾಡಲು ಎಲಿಜಿಬಿಲಿಟಿ ನೋಡುವುದಾದರೆ ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಹೆಣ್ಣು ಮಕ್ಕಳು ಮಾತ್ರ ಅಕೌಂಟ್ ಓಪನ್ ಮಾಡಿಕೊಳ್ಳಬಹುದು 10 ವರ್ಷದ ಒಳಗೆ ಇರುವ ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಒಂದು ಯೋಜನೆಯ ಅಡಿಯಲ್ಲಿ ನೀವು ಅಕೌಂಟ್ ಓಪನ್ ಮಾಡಿಕೊಳ್ಳಬಹುದು. ಒಂದು ಹೆಣ್ಣು ಮಗುವಿನ ಹೆಸರಲ್ಲಿ ಒಂದು ಅಕೌಂಟ್ ಮಾತ್ರ ಓಪನ್ ಮಾಡಿಕೊಳ್ಳಬಹುದು ಸುಕನ್ಯಾ ಸಮೃದ್ಧಿ ಯೋಜನೆಯ ಮೆಚುರಿಟಿ ಪಿರಿಯಡ್ 21 ವರ್ಷ ನೀವು 14 ವರ್ಷ ಮಾತ್ರ ಪ್ರೀಮಿಯಂ ಅಮೌಂಟ್ ಕಟ್ಟಬೇಕು.
ಈ ಸ್ಕೀಮ್ ನಲ್ಲಿ ನೀವು 250 ರೂಪಾಯಿಯನ್ನು ಡೆಪಾಸಿಟ್ ಮಾಡಬೇಕು ಮ್ಯಾಕ್ಸಿಮಮ್ ನೀವು 150000 ಹಣವನ್ನು ಒಂದು ವರ್ಷಕ್ಕೆ ಡೆಪಾಸಿಟ್ ಮಾಡಬಹುದು ಇದಕ್ಕಿಂತ ಹೆಚ್ಚು ಹಣವನ್ನು ನೀವು ಡೆಪಾಸಿಟ್ ಮಾಡಿದರೆ ಅದರ ಮೇಲೆ ನಿಮಗೆ ಬಡ್ಡಿಯ ಹಣ ದೊರಕುವುದಿಲ್ಲ. ಸುಕನ್ಯ ಸಮೃದ್ಧಿ ಯೋಜನೆ ಯಲ್ಲಿ ಯಾವುದೇ ರೀತಿಯಾದಂತಹ ಲೋನ್ ಫೆಸಿಲಿಟೀಸ್ ಇರುವುದಿಲ್ಲ. ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಿಮೆಚೂರ್ ಪಿರಿಯಡ್ ನೋಡುವುದಾದರೆ ಅಕೌಂಟ್ ಓಪನ್ ಮಾಡಿದ ಹೆಣ್ಣು ಮಗುವಿಗೆ 18 ವರ್ಷ ಕಂಪ್ಲೀಟ್ ಆದ ಮೇಲೆ ಅವರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಥವಾ ಅವರ ಮದುವೆಗಾಗಿ 50% ಅಮೌಂಟ್ ಅನ್ನು ನೀವು ವಿತ್ ಡ್ರಾ ಮಾಡಬಹುದು. ಸುಕನ್ಯಾ ಸಮೃದ್ಧಿ ಯೋಜನೆಯ ರೇಟ್ ಆಫ್ ಇಂಟರೆಸ್ಟ್ ನೋಡುವುದಾದರೆ 7.6% ಇರುತ್ತದೆ.
ಪಿಪಿಎಫ್ ಅಕೌಂಟ್ ನಲ್ಲಿ ಅಕೌಂಟ್ ಓಪನ್ ಮಾಡಬೇಕಾದರೆ ಗಂಡು ಮಕ್ಕಳು ಹೆಣ್ಣು ಮಕ್ಕಳು ಇದರಲ್ಲಿ ಯಾವುದೇ ರೀತಿಯ ವಯಸ್ಸಿನ ಅಂತರ ಇರುವುದಿಲ್ಲ ಹಾಗೆಯೇ ಒಬ್ಬ ವ್ಯಕ್ತಿಗೆ ಒಂದು ಅಕೌಂಟ್ ಓಪನ್ ಮಾಡಲು ಮಾತ್ರ ಅವಕಾಶ ಇರುತ್ತದೆ ಪಬ್ಲಿಕ್ ಪ್ರಾವಿಡೆಂಟ್ ಮೆಚುರಿಟಿ ಪಿರಿಯಡ್ 15 ವರ್ಷ ನೀವು 15 ವರ್ಷವೂ ಕೂಡ ಪ್ರೀಮಿಯಂ ಅಮೌಂಟ್ ಕಟ್ಟಬೇಕು ನೀವು ಇದೇ ಸ್ಕೀಮ್ ನಲ್ಲಿ ಮುಂದುವರೆಯಬೇಕು ಎಂದರೆ ಐದು ವರ್ಷಗಳವರೆಗೆ ಮುಂದುವರಿಸಿಕೊಳ್ಳಬಹುದು. ಪಿಪಿಎಫ್ ಅಕೌಂಟ್ ನಲ್ಲಿ ನೀವು ಮಿನಿಮಮ್ 500 ರೂಪಾಯಿ ಡೆಪಾಸಿಟ್ ಮಾಡಬೇಕು ವರ್ಷಕ್ಕೆ ನೀವು 150000 ಹಣವನ್ನು ಡೆಪಾಸಿಟ್ ಮಾಡಬಹುದು.
ಪಿಪಿಎಫ್ ಅಕೌಂಟ್ ನಲ್ಲಿ ನೀವು ಅಕೌಂಟ್ ಓಪನ್ ಮಾಡಿ ಮೂರು ವರ್ಷ ಕಂಪ್ಲೀಟ್ ಆದಮೇಲೆ ನೀವು ಲೋನ್ ಗೆ ಅಪ್ಲೈ ಮಾಡಿ ಲೋನ್ ಪಡೆದುಕೊಳ್ಳಬಹುದು. ಪಿಪಿಎಫ್ ಅಕೌಂಟ್ ನಲ್ಲಿ ನೀವು ಖಾತೆ ತೆರೆದ ಐದು ವರ್ಷಗಳ ನಂತರ 50% ಹಣವನ್ನು ನೀವು ವಿತ್ ಡ್ರಾ ಮಾಡಿಕೊಳ್ಳಬಹುದು. ಪಿಪಿಎಫ್ ಅಕೌಂಟ್ ನಲ್ಲಿ ರೇಟ್ ಆಫ್ ಇಂಟರೆಸ್ಟ್ ನೋಡುವುದಾದರೆ 7.1% ದರದಲ್ಲಿ ನಿಮಗೆ ಬಡ್ಡಿಯನ್ನು ನೀಡಲಾಗುತ್ತದೆ. ಈ ಎರಡು ಸ್ಕೀಮ್ ನಲ್ಲಿ ನೀವು 150000 ಹಣವನ್ನು ಡೆಪಾಸಿಟ್ ಮಾಡಬೇಕಾಗುತ್ತದೆ ಇದರ ಮೇಲೆ ನಿಮ್ಮ ಬಡ್ಡಿಯ ದರಗಳು ಹೆಚ್ಚುತ್ತದೆ.
ಈ ಎರಡು ಯೋಜನೆಗಳಲ್ಲಿ ನೀವು ಹಣವನ್ನು ಡೆಪಾಸಿಟ್ ಮಾಡಿ ಬಡ್ಡಿಯ ದರವನ್ನು ನೀವು ಪಡೆದುಕೊಳ್ಳಬಹುದು ಒಂದು ಉತ್ತಮವಾದಂತಹ ಹಾಗೆಯೇ ಯಾವುದೇ ರೀತಿಯ ಮೋಸ ಇಲ್ಲದ ಯೋಜನೆ ಇದಾಗಿದ್ದು ಇದರ ಅಡಿಯಲ್ಲಿ ನೀವು ಡೆಪಾಸಿಟ್ ಮಾಡಿದರೆ ನಿಮ್ಮ ಹಣ ಸೇಫ್ ಆಗಿ ಇರುವುದು ಮಾತ್ರವಲ್ಲದೆ ನಿಮ್ಮ ಹಣಕ್ಕೆ ಇಂಟರೆಸ್ಟ್ ಸೇರಿಸಿ ನಿಮ್ಮ ಹಣವನ್ನು ದುಪ್ಪಟ್ಟು ಮಾಡಿಕೊಳ್ಳಬಹುದು. ಮನೆಯಲ್ಲಿ ಹಣವನ್ನು ಇಟ್ಟುಕೊಳ್ಳುವ ಬದಲು ಅಥವಾ ಬೇರೆ ಯಾರಿಗೂ ಹಣವನ್ನು ನೀಡಿ ಮೋಸ ಹೋಗುವ ಬದಲು ನೀವು ಈ ಸ್ಕೀಮ್ಗಳಲ್ಲಿ ಹಣವನ್ನು ಡೆಪಾಸಿಟ್ ಮಾಡಿ ನಿಮ್ಮ ಹಣವನ್ನು ಸೇಫ್ ಆಗಿ ಇರಿಸಿಕೊಳ್ಳಬಹುದು ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.