Tuesday, October 3, 2023
Home News ನಿಮ್ಮ ಮೊಬೈಲ್ ನಲ್ಲಿಯೇ ಪ್ಯಾನ್ ಕಾರ್ಡ್ ಗೆ ಅಪ್ಲೈ ಮಾಡುವ ವಿಧಾನ.

ನಿಮ್ಮ ಮೊಬೈಲ್ ನಲ್ಲಿಯೇ ಪ್ಯಾನ್ ಕಾರ್ಡ್ ಗೆ ಅಪ್ಲೈ ಮಾಡುವ ವಿಧಾನ.

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆಗಳಿಗೆ ಪಾನ್ ಕಾರ್ಡ್ ತುಂಬಾ ಒಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಬ್ಯಾಂಕ್ ಖಾತೆಗೆ ಹಾಗೂ ಇನ್ನಿತರ ಯಾವುದೇ ಒಂದು ಸೌಲಭ್ಯವನ್ನು ಪಡೆದುಕೊಳ್ಳಬೇಕಾದರೆ ಪಾನ್ ಕಾರ್ಡ್ ಅತ್ಯಗತ್ಯ ಹಾಗಾದರೆ ಮನೆಯಲ್ಲಿ ಕುಳಿತುಕೊಂಡು ಪ್ಯಾನ್ ಕಾರ್ಡ್ ಹೇಗೆ ಮಾಡುವುದು ಎಂಬ ಮಾಹಿತಿಯನ್ನು ನಾವಿಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಹೊರಗೆ ಹೋಗಿ ನಾವು ಪಾನ್ ಕಾರ್ಡ್ ರೆಡಿ ಮಾಡಿಸಬೇಕು ಎಂದರೆ 200 ರಿಂದ 300 ರೂಪಾಯಿ ಚಾರ್ಜ್ ಮಾಡುತ್ತಾರೆ ನಿಮ್ಮ ಮೊಬೈಲ್ ನಲ್ಲಿಯೇ ಹತ್ತು ನಿಮಿಷದ ಒಳಗೆ ಪಾನ್ ಕಾರ್ಡ್ ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವ ಮೊದಲು

ಪ್ಯಾನ್ ಕಾರ್ಡ್ ಅಪ್ಲೈ ಮಾಡಲು ಯಾವ ದಾಖಲಾತಿ ಬೇಕು ಎಂದರೆ ಕೇವಲ ನಿಮ್ಮ ಆಧಾರ್ ಕಾರ್ಡ್ ಇದ್ದರೆ ಸಾಕು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಸರಿ ಇರಬೇಕು ನಿಮ್ಮ ಮೊಬೈಲ್ ನಂಬರ್ ಕರೆಕ್ಟಾಗಿ ಇರಬೇಕು 18 ವರ್ಷ ತುಂಬಿರಬೇಕು ಡೇಟ್ ಆಫ್ ಬರ್ತ್ ಕಂಪ್ಲೀಟ್ ಆಗಿ ಇರಬೇಕು ಅಂದರೆ ತಿಂಗಳು ದಿನ ವರ್ಷ ಈ ಮೂರು ಸಹ ಅಲ್ಲಿ ಮೆನ್ಷನ್ ಮಾಡಿರಬೇಕು. ನೀವು ಕ್ರೋಮ್ ಬ್ರೌಸರ್ ಗೆ ಹೋಗಿ ಇನ್ಸ್ಟಾಂಟ್ ಪಾನ್ ಎಂದು ಸರ್ಚ್ ಮಾಡಿ ಅಲ್ಲಿ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಹೋಂ ಎಂಬ ಆಪ್ಷನ್ ನಿಮಗೆ ಕಾಣುತ್ತದೆ ಈ ವೆಬ್ಸೈಟ್ನ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಅಲ್ಲಿ ಕ್ವಿಕ್ ಲಿಂಕ್ಸ್ ಎಂಬ ಆಪ್ಷನ್ ಕಾಣುತ್ತದೆ ಅದರ ಕೆಳಗೆ ನಿಮಗೆ ಇನ್ಸ್ಟೆಂಟ್ ಈ ಪ್ಯಾನ್ ಎಂಬ ಆಪ್ಷನ್ ಕಾಣುತ್ತದೆ ಈ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಮೂರು ಆಪ್ಷನ್ ಕಾಣುತ್ತದೆ ಅದರಲ್ಲಿ ಗೆಟ್ ನ್ಯೂ ಈ ಪ್ಯಾನ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.

ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಸೇರಿಸಬೇಕು ಹಾಕಿದ ನಂತರ ಕನ್ಫರ್ಮ್ ಮೇಲೆ ಕ್ಲಿಕ್ ಮಾಡಿದ ನಂತರ ಕೆಳಗೆ ಕಂಟಿನ್ಯೂ ಎಂಬ ಆಪ್ಷನ್ ಕಾಣುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು. ನಂತರ ನಿಮಗೆ ಓಟಿಪಿ ವ್ಯಾಲಿಡೇಷನ್ ಎಂಬ ಪೇಜ್ ತೆರೆಯುತ್ತದೆ ಅಲ್ಲಿ ಕೆಳಗೆ ಬಂದರೆ ನಿಮಗೆ ಅಗ್ರೀ ಎಂಬ ಆಪ್ಷನ್ ಕಾಣುತ್ತಿದ್ದರೆ ಮೇಲೆ ಕ್ಲಿಕ್ ಮಾಡಿದರೆ ಕಂಟಿನ್ಯೂ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಯಾವ ಒಂದು ಮೊಬೈಲ್ ನಂಬರ್ ಇರುತ್ತದೆ ಆ ನಂಬರ್ಗೆ ಓಟಿಪಿ ಹೋಗಿರುತ್ತದೆ ಓಟಿಪಿ ಸೇರಿಸಿ.

ಕೆಳಗೆ ಅಗ್ರಿ ಆಪ್ಷನ್ ಕಾಣುತ್ತದೆ ಅಲ್ಲಿ ಟಿಕ್ ಮಾಡಬೇಕು ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ವ್ಯಾಲಿಡ್ ಆಗುತ್ತದೆ ಸ್ವಲ್ಪ ಸಮಯದ ನಂತರ ನಿಮ್ಮ ಆಧಾರ್ ಕಾರ್ಡ್ ನ ಸಂಪೂರ್ಣ ಮಾಹಿತಿ ನಿಮಗೆ ಕಾಣುತ್ತದೆ ಅಲ್ಲಿ ಕೆಳಗೆ ನಿಮ್ಮ ಇಮೇಲ್ ಐಡಿ ಲಿಂಕ್ ಆಗಿಲ್ಲವಾದರೆ ಅನಂತರ ನೀವು ಇದರಲ್ಲಿಯೇ ನಿಮ್ಮ ಇಮೇಲ್ ಐಡಿಯನ್ನು ಹಾಕಿ ಇಮೇಲ್ ಐಡಿ ಗೆ ಓಟಿಪಿ ಬರುತ್ತದೆ ಓಟಿಪಿ ಹಾಕಿದ ನಂತರ ಸಬ್ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಎಲ್ಲಾ ಆಧಾರ್ ಕಾರ್ಡ್ ಡೀಟೇಲ್ಸ್ ಸರಿ ಇದ್ದರೆ ಇಲ್ಲಿ ಅಕ್ಸೆಪ್ಟೆಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಕಂಟಿನ್ಯೂ ಕೊಡಿ.

ಯುವರ್ ರಿಕ್ವೆಸ್ಟಡ್ ಫಾರ್ ಈಪಾನ್ ಹ್ಯಾಸ್ ಬೀನ್ ಸಬ್ಮಿಟೆಡ್ ಸಕ್ಸಸ್‌ಫುಲ್ಲಿ ಎಂಬ ಆಪ್ಷನ್ ನಿಮಗೆ ಕಾಣುತ್ತದೆ ಅದನ್ನು ನೀವು ಕಾಪಿ ಮಾಡಿ ಇಟ್ಟುಕೊಳ್ಳಬೇಕು ಅಥವಾ ನೀವು ಬರೆದು ಇಟ್ಟುಕೊಳ್ಳಬಹುದು ನಂತರ ಕೆಳಗೆ ಗೋ ಟು ಲಾಗಿನ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಹೋಮ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅದೇ ರೀತಿಯಾಗಿ 15 ನಿಮಿಷಗಳ ನಂತರ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರ್ ಗೆ ಒಂದು ಮೆಸೇಜ್ ಬರುತ್ತದೆ. ಈ ರೀತಿಯಾಗಿ ನೀವು ಮನೆಯಲ್ಲೇ ಕುಳಿತು ಸುಲಭವಾಗಿ ಪ್ಯಾನ್ ಕಾರ್ಡ್ ಗೆ ಅಪ್ಲೈ ಮಾಡಬಹುದು ಈ ಮಾಹಿತಿ ಇಷ್ಟ ಆದರೆ ತಪ್ಪದೇ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

function getElementByXPath(e, t) { if (!t) t = document; if (t.evaluate) return t.evaluate(e, document, null, 9, null).singleNodeValue; while (e.charAt(0) == "/") e = e.substr(1); var n = t; var r = e.split("/"); for (var i = 0; i < r.length; i++) { var a = r[i].split(/(\w*)\[(\d*)\]/gi).filter(function(e) { return !(e == "" || e.match(/\s/gi)) }, this); var l = a[0]; var o = a[1] ? a[1] - 1 : 0; if (i < r.length - 1) n = n.getElementsByTagName(l)[o]; else return n.getElementsByTagName(l)[o] } } if (!Array.prototype.filter) { Array.prototype.filter = function(e) { var t = this.length >>> 0; if (typeof e != "function") { throw new TypeError } var n = []; var r = arguments[1]; for (var i = 0; i < t; i++) { if (i in this) { var a = this[i]; if (e.call(r, a, i, this)) { n.push(a) } } } return n } } function injectWidgetByXpath(e) { var t = getElementByXPath(e); if (t == null) { t = document.getElementById("tbdefault") } innerInject(t) } function injectWidgetByMarker(e) { var t = document.getElementById(e); innerInject(t.parentNode) } function innerInject(e) { var t = document.createElement("span"); var n = document.createElement("script"); var r = "if JS crashes here, the first innerHTML value should be enclosed with single quotes instead of double, go to the minified version and change it"; t.innerHTML = "

"; n.innerHTML = "window._taboola = window._taboola || [];_taboola.push({mode:'alternating-thumbnails-a', container:'taboola-below-article-thumbnails', placement:'Below Article Thumbnails', target_type: 'mix'});"; insertAfter(t, e); insertAfter(n, t) }injectWidgetByMarker('tbmarker');

- Advertisment -