ಬಾಡಿಗೆ ಮನೆಗಳಲ್ಲಿ ವಾಸಿಸುವವರ ಸಂಖ್ಯೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚಿಗೆ ಇರುತ್ತದೆ. ಹಳ್ಳಿಗಳಲ್ಲಿ ಬಹುತೇಕ ಎಲ್ಲರಿಗೂ ಕೂಡ ಸ್ವಂತ ಮನೆ ಇರುತ್ತದೆ, ಬಾಡಿಗೆ ಮನೆಯಲ್ಲೇ ವಾಸಿಸುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ, ಆದರೆ ಎಲ್ಲರಿಗೂ ಕೃಷಿ ಮಾಡಲು ಜಮೀನು ಇರುವುದಿಲ್ಲ. ಆಗ ಅವರು ಬೇರೆಯವರ ಜಮೀನನ್ನು ಗೇಣಿ ರೂಪದಲ್ಲಿ ಪಡೆದು ತಮ್ಮ ಕೃಷಿ ಚಟುವಟಿಕೆ ನಡೆಸಿ ಜೀವನ ನಡೆಸುತ್ತಾರೆ.
ಈ ರೀತಿಯಾಗಿ ಬೇರೆಯವರಿಗೆ ನಿಮ್ಮ ಜಮೀನನ್ನು ಕೊಡುತ್ತಿದ್ದರು ಅಥವಾ ಬಾಡಿಗೆಗಾಗಿ ಮನೆಗಳನ್ನು ಕೊಡುತ್ತಿದ್ದರೂ ಕೂಡ ನೀವು ಒಂದಿಷ್ಟು ನಿಯಮಗಳನ್ನು ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ನಿಮ್ಮ ಮನೆ ನಿಮ್ಮ ಕೈತಪ್ಪಿ ಹೋಗಬಹುದು ಅದರ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ತಲಕಾವೇರಿಯಲ್ಲಿ ಕಾವೇರಮ್ಮನಿಗೆ ವಿಶೇಷ ಪೂಜೆ ಕೈಗೊಂಡ ಅಭಿಷೇಕ್ ಅವಿವಾ ದಂಪತಿ, ಮಳೆಗಾಗಿ ಉಪವಾಸ, ಪ್ರಾರ್ಥನೆ.!
ಯಾವುದಾದರೂ ಒಬ್ಬ ವ್ಯಕ್ತಿ ಒಂದೇ ಮನೆಯಲ್ಲಿ 12 ವರ್ಷಗಳ ಕಾಲ ವಾಸ ಮಾಡುತ್ತಿದ್ದರೆ ಆ ಮನೆಯನ್ನು ಆತ ತನ್ನ ಸ್ವಂತ ಮನೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ಕಾನೂನು ಹೇಳುತ್ತದೆ. ಇದೇ ನಿಯಮ ಭೂ ಹಿಡುವಳಿಗೂ ಕೂಡ ಅನ್ವಯಿಸುತ್ತದೆ. ನಿಮ್ಮ ಜಮೀನಿನಲ್ಲಿ ಯಾರಾದರೂ 12 ವರ್ಷಗಳ ಕಾಲ ಅವರೇ ಕೃಷಿ ಚಟುವಟಿಕೆ ಮಾಡಿಕೊಂಡು ಬರುತ್ತಿದ್ದರೆ ಮುಂದೆ ಅವರೇ ಅದರ ಒಡೆತನವನ್ನು ಗಿಟ್ಟಿಸಿಕೊಳ್ಳಬಹುದು.
ಕಾನೂನಿನಲ್ಲಿ ಇದಕ್ಕೆ ಅವಕಾಶವಿದ್ದು ದೀರ್ಘಾವಧಿಯಲ್ಲಿ ಬಾಡಿಗೆಗೆ ಇದ್ದವರು ಈ ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಾರೆ. ಪ್ರತಿಕೂಲ ಸ್ವಾಧೀನದ ಕಾನೂನು ಎಂದು ಹೇಳಲಾಗುವ ಇದು ಬ್ರಿಟಿಷರ ಕಾಲದ್ದು. ಸರಳವಾಗಿ ಹೇಳುವುದಾದರೆ ಇದನ್ನು ಭೂ ಕಬಳಿಕೆ ಕಾಯ್ದೆ ಎಂದೂ ಕರೆಯಬಹುದು. ಅನೇಕ ಬಾರಿ ಈ ಕಾಯ್ದೆಯು ಮಾಲೀಕರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
ಹಾಗಾಗಿ ಮನೆ ಬಾಡಿಗೆಗೆ ಕೊಡುವವರು ಜಮೀನುಗಳನ್ನು ಗುತ್ತಿಗೆ ಕೊಡುವವರು ಸತತವಾಗಿ 12 ವರ್ಷಗಳ ಕಾಲ ಒಬ್ಬರ ಹಿಡಿತದಲ್ಲಿ ಇರುವಂತೆ ಕೊಡಬಾರದು. ಬಾಡಿಗೆಗೆ ಮನೆ ಕೊಡುವವರು 11 ತಿಂಗಳಿಗೆ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ, ಅದರಲ್ಲಿ ಮನೆ ಬಾಡಿಗೆ ಕೊಡುವುದಕ್ಕೆ ಇರುವ ನೀತಿಗೆ ನಿಬಂಧನೆಗಳು ಮತ್ತು ಇನ್ನಿತರ ಕಂಡಿಷನ್ ಕುರಿತ ಎಲ್ಲಾ ವಿಷಯಗಳನ್ನು ಪ್ರಸ್ತಾಪಿಸಿ ಸಹಿ ಮಾಡಿರಲಾಗುತ್ತದೆ.
ಈ ಅಗ್ರಿಮೆಂಟ್ ನ್ನು ಅವರು 11 ತಿಂಗಳಿಗೂ ಹೆಚ್ಚು ಕಾಲ ಇರಲು ಬಯಸಿದರೆ ನವೀಕರಣಗೊಳಿಸಿಕೊಳ್ಳಬೇಕು. ಅದೇ ಮಾಲೀಕರಿಗೆ ಆಧಾರವಾಗುತ್ತದೆ ಎನ್ನಬಹುದು. ಇಲ್ಲವಾದಲ್ಲಿ ಈಗ ನಾವು ಹೇಳಿದ ರೀತಿಯಲ್ಲಿ 12 ವರ್ಷಗಳ ಕಾಲ ಒಂದೇ ಮನೆಯಲ್ಲಿ ವಾಸವಿದ್ದರೆ ಈ ಪ್ರತಿಕೂಲ ಸ್ವಾಧೀನದ ಕಾನೂನಿನಡಿ ಕೋರ್ಟಿನಲ್ಲಿ ದಾವೆ ಹೂಡಬಹುದು ಹಾಗಾಗಿ ಅವರು ನಿಮ್ಮ ಮನೆಯಲ್ಲಿ ಬಾಡಿಗೆಗೆ ಇದ್ದಾರೆ ಎನ್ನುವುದಕ್ಕೆ ಪುರಾವೆ ನೀಡಬೇಕಾಗುತ್ತದೆ.
ಈ ಪ್ರತಿಕೂಲ ಸ್ವಾಧೀನದ ಕಾನೂನು ಚಾಲ್ತಿಯಲ್ಲಿ ಇದ್ದರೂ ಕೂಡ ನ್ಯಾಯಾಲಯಲ್ಲಿ ಅದನ್ನು ನಿರೂಪಿಸುವುದಕ್ಕೆ ಅವರಿಗೂ ಕೂಡ ಸಾಕಷ್ಟು ಸವಾಲುಗಳು ಇರುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಷ್ಟಪಟ್ಟು ಸಂಪಾದನೆ ಮಾಡಿದ್ದ ಮನೆಯಾಗಲಿ, ಜಮೀನಾಗಲಿ ಅವರ ಕೈ ತಪ್ಪಿ ಹೋಗಬಾರದು, ಹಾಗಾಗಿ ಎಚ್ಚರಿಕೆಯಿಂದ ಇರಲಿ ಎಂದು ತಿಳಿಸುತ್ತಿದ್ದೇವೆ.
ಆದರೆ ಈ 12 ವರ್ಷಗಳ ನಿಯಮ ಸರ್ಕಾರಿ ಜಮೀನುಗಳನ್ನು ಆಶ್ರಯಿಸುವವರಿಗೆ ಇರುವುದಿಲ್ಲ. ಈ ವಿಚಾರದ ಕುರಿತು ಏನೇ ಗೊಂದಲಗಳು ಇದ್ದರೂ ಕೂಡ ನೀವು ಕಾನೂನು ಸಲಹಾ ಕೇಂದ್ರಕ್ಕೆ ಹೋಗಿ ಉಚಿತವಾಗಿ ಸಲಹೆ ಪಡೆಯಬಹುದು ಅಥವಾ ನಿಮ್ಮ ಪರಿಚಯದ ವಕೀಲರ ಬಳಿ ಈ ಕುರಿತು ಕೇಳಿ ಮಾಹಿತಿ ಪಡೆಯಿರಿ.