ಕರ್ನಾಟಕದ ಮೇಲೆ ಅದ್ಯಾಕೋ ವರುಣಾ ದೇವ ಮುನಿಸಿಕೊಂಡಿದ್ದಾನೆ. ನಿರೀಕ್ಷೆಯಂತೆ ಈ ಬಾರಿ ಮುಂಗಾರು ಮಳೆ ಬಿದ್ದಿಲ್ಲ, ರಾಜ್ಯದಲ್ಲಿ 130 ವರ್ಷಗಳಲ್ಲೇ ಅತಿ ಕಡಿಮೆ ಮಳೆ ಬಿದ್ದಿರುವ ಉಲ್ಲೇಖವಾಗಿದೆ. ಪರಿಣಾಮವಾಗಿ ರಾಜ್ಯದ 195 ತಾಲೂಕು ಈಗಾಗಲೇ ಬರಘೋಷಿತ ತಾಲೂಕುಗಳಾಗಿವೆ. ಇನ್ನುಳಿದ ತಾಲೂಕುಗಳ ಪರಿಸ್ಥಿತಿಯು ಕೂಡ ಅಷ್ಟಕಷ್ಟೇ.
ಕಾವೇರಿ ಕೊಳ್ಳದ ರೈತರ ಪರಿಸ್ಥಿತಿ ಅಂತೂ ಹೇಳುತ್ತೀರದ್ದಾಗಿದೆ ಇಂತಹ ಪರಿಸ್ಥಿತಿಯಲ್ಲಿ ಕೂಡ ವಾಡಿಕೆಯಂತೆ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮೈಸೂರು ಮಂಡ್ಯ ಬೆಂಗಳೂರು ಭಾಗದಲ್ಲಿ ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು ಬಂದ್ ನಡೆಸುತ್ತಿವೆ. ಇದಕ್ಕೆ ರಾಜ್ಯದ ಎಲ್ಲಾ ಸಂಘ ಸಂಸ್ಥೆಗಳ ಸಮೇತ ಕನ್ನಡ ಚಲನಚಿತ್ರ ಮಂಡಳಿ ಕೂಡ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರ ಶೀಘ್ರವೇ ಪರಿಹಾರ ಸೂಚಿಸುವಂತೆ ಆಗ್ರಹಿಸುತ್ತಿದ್ದಾರೆ.
ಇಂತಹ ಸಂದರ್ಭದಲ್ಲಿ ಮಂಡ್ಯದ (Mandya) ಜನತೆ ಅಣ್ಣನಂತಿದ್ದ ಅಂಬರೀಶ್ (Ambarish) ಅವರನ್ನು ಮರೆಯದೇ ಇರಲಾರರು. ಯಾಕೆಂದರೆ ಕಾವೇರಿ ಹೋರಾಟ, ರೈತರ ಪ್ರತಿಭಟನೆ ಎಂದ ತಕ್ಷಣ ಮಂಡ್ಯದ ಜನತೆಗೆ ಮೊದಲು ನೆನಪಾಗುವುದು ರೆಬಲ್ ಸ್ಟಾರ್ (Rebel star) ತಮ್ಮ ರೆಬಲ್ ಮಾತುಗಳಿಂದ ಸರ್ಕಾರವನ್ನೇ ಆಗಲಿ ಯಾವುದೇ ಮಿನಿಸ್ಟರ್ನೇ ಆಗಲಿ ಗಡಗಡನೆ ನಡುಸುತ್ತಿದ್ದ ಬೆವರಿಳಿಸುತ್ತಿದ್ದ ಅಂಬರೀಶ್ ಅವರು ರೈತರ (Farmers) ಪರವಾಗಿ ಯಾವುದೇ ಹೋರಾಟ ಪ್ರತಿಭಟನೆ ಎಲ್ಲದಕ್ಕೂ ಕೂಡ ಬದ್ಧರಾಗಿದ್ದರು.
ಕನ್ನಡ ಚಲನಚಿತ್ರ ಮಂಡಳಿ ಕೂಡ ಅಂಬಿ ಅವರ ಮಾತಿಗೆ ಎದುರು ಮಾತಾಡದೆ ಹಿಂದೆ ಬರುತ್ತಿತ್ತು. ಅಂಬರೀಶ್ ಅವರು ಈಗ ಇದ್ದಿದ್ದರೆ ರೈತರ ಹೋರಾಟಕ್ಕೆ ಆನೆ ಬೆಂಬಲ ಸಿಗುತ್ತಿತ್ತು ಅವರಿಲ್ಲದೆ ಮಂಡ್ಯ ನಾಡಿನ ಜನತೆ ಅಕ್ಷರಶಃ ಅಸಹಾಯಕರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಮಗನಾಗಿ ಅಭಿಷೇಕ್ ಅಂಬರೀಶ್ (Abhishek Ambarish) ಅವರು ಅವರ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ವಾರದ ಹಿಂದಿನಿಂದಲೂ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಹೋರಾಟದಲ್ಲಿ ಪಾಲ್ಗೊಂಡು ತನ್ನ ಬೆಂಬಲವನ್ನು ಸೂಚಿಸಿದ ಅಭಿಷೇಕ್ ಅಂಬರೀಶ್ ವೇದಿಕೆಯಲ್ಲಿ ರಾಜ್ಯ ಸರ್ಕಾರವನ್ನು ಮನಪೂರ್ವಕವಾಗಿ ವಿನಾರಮಿಸಿಕೊಂಡಿಲ್ದಾರೆ. ನಮ್ಮ ಜಿಲ್ಲೆಯ ರೈತರ ಪರಿಸ್ಥಿತಿ ಹೀಗಾಗಿದೆ, ರಾಜ್ಯ ಸರ್ಕಾರಕ್ಕೆ ಕೈ ಕಾಲು ಹಿಡಿದು ಬೇಡಿಕೊಳ್ಳುತ್ತೇವೆ, ಅನ್ಯಾಯ ಮಾಡಬೇಡಿ ಇಂಥ ಸಂದರ್ಭದಲ್ಲಿ ಕೂಡ ತಮಿಳುನಾಡಿಗೆ ನೀರು ಹರಿಸುವುದು ತಪ್ಪು, ರಾಜ್ಯಕ್ಕೆ ಅನ್ಯಾಯವಾಗುತ್ತಿದೆ.
ದಯವಿಟ್ಟು ಈ ವಿವಾದಕ್ಕೆ ಒಂದು ಮುಕ್ತಿ ಕೊಡಿ ಇನ್ನು ಎಷ್ಟು ವರ್ಷ ಇದೇ ರೀತಿಯಾಗಿ ವಿವಾದದಲ್ಲೇ ಇರಬೇಕು. ನಮ್ಮ ರಾಜ್ಯದ ರೈತರ ಪರಿಸ್ಥಿತಿಯನ್ನು ಸುಪ್ರೀಂಕೋರ್ಟ್ ಗೆ ಮತ್ತು ಪ್ರಾಧಿಕಾರಕ್ಕೆ ಮನವರಿಕೆ ಮಾಡಿಕೊಡಿ ಎಂದು ಬೇಡಿಕೊಂಡರು. ಇಷ್ಟಲ್ಲದೆ ಕಾವೇರಮ್ಮನಿಗೆ ಕೂಡ ದಂಪತಿ ಸಮೇತ ಹೋಗಿ ಪೂಜೆ ಸಲ್ಲಿಸಿದ್ದಾರೆ. ತಲಕಾವೇರಿಗೆ ಹೋದ ಅಂಬರೀಶ್ ಹಾಗೂ ಅವಿವಾ ಅವರು ನಿಯಮ ಪ್ರಕಾರವಾಗಿ ಪೂಜಾ ಕಾಂಕರ್ಯ ಕೈಕೊಂಡು ಉಪವಾಸ ವೃತ ಆಚರಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ ಎಂದು ತಿಳಿದುಬಂದಿದೆ.
ದರ್ಶನ್ ವೇದಿಕೆ ಏರಿದ್ರು ಕ್ಯಾರೆ ಅನ್ನದ ಧ್ರುವ.! ಡಿ-ಬಾಸ್ & ಧ್ರುವ ಸರ್ಜಾ ನಡುವೆ ವೈಮನಸ್ಸು.?
ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ನವ ದಂಪತಿಗಳಾದ ಅವಿವಾ ಹಾಗೂ ಅಭಿಷೇಕ್ ಅಂಬರೀಶ್ ಹೋಮ ಆಚರಿಸಿ ಪ್ರಾರ್ಥನೆಯಲ್ಲಿ ತೊಡಗಿಕೊಂಡಿರುವುದು ಕಾಣಿಸುತ್ತಿದೆ. ಸ್ವತಃ ಸುಮಲತಾ ಅಂಬರೀಶ್ ಅವರು ತಮ್ಮ ಇನ್ಸ್ಟಾಗ್ರಾಂ (Sumalatha Ambarish) ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡು ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಅಂಬರೀಶ್ ಅವರು ಸದಾ ರೈತರನ್ನು ಬೆಂಬಲಿಸುತ್ತಿದ್ದರು ಅದನ್ನೇ ಪಾಲಿಸುತ್ತಿರುವ ಅಭಿಷೇಕ್ ಕೂಡ ಹೆಗಲಿಗೆ ಹಸಿರು ಟವಲು ಹಾಕಿಕೊಂಡೆ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಇನ್ನು ಅವಿವಾ ಮೊದಲೇ ಪ್ಯಾಶನ್ ಒಗ್ಗಿಕೊಂಡ ಕುಟುಂಬದವರು ಇವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಂಬಿಕೆ ಇಡುತ್ತಾರೆ, ಪಾಲ್ಗೊಳ್ಳುತ್ತಾರೆ ಎನ್ನುವುದು ಅನುಮಾನ ಹೀಗಾಗಿ ಸಂಪ್ರದಾಯಬದ್ದ ಗೌಡರ ಕುಟುಂಬಕ್ಕೆ ಸಲ್ಲುವುದಿಲ್ಲ ಎಂದವರು ಈಗ ಅವಿವಾ ಅವರನ್ನು ನೋಡಿ ತೆಪ್ಪಗಾಗಿದ್ದಾರೆ.