Thursday, September 28, 2023
Home News 1 ಲಕ್ಷ ಇದ್ದರೆ ಸಾಕು ಈತರಹದ ಮನೆ ಕಟ್ಟಿಕೊಳ್ಳಬಹುದು, ಕಡಿಮೆ ಬಂಡವಾಳದಲ್ಲಿ ಒಂದು ಕುಟುಂಬ ಇರುವ...

1 ಲಕ್ಷ ಇದ್ದರೆ ಸಾಕು ಈತರಹದ ಮನೆ ಕಟ್ಟಿಕೊಳ್ಳಬಹುದು, ಕಡಿಮೆ ಬಂಡವಾಳದಲ್ಲಿ ಒಂದು ಕುಟುಂಬ ಇರುವ ಹಾಗೆ ಮನೆಯಲ್ಲಿ ನಿರ್ಮಾಣ.

ಬಹಳ ಕಡಿಮೆ ಬಂಡವಾಳದಲ್ಲಿ ಅಚ್ಚುಕಟ್ಟಾಗಿ ಚಿಕ್ಕದಾಗಿ ಮನೆ ನಿರ್ಮಾಣದ ಬಗ್ಗೆ ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಕಡಿಮೆ ಬಂಡವಾಳದಲ್ಲಿ ಶೀಟ್ ಮನೆಯಾಗಿದೆ ಈ ಮನೆ ಹೊರಗಡೆಯಿಂದ ಸಿಂಪಲ್ಲಾಗಿ ಕಾಣಿಸುತ್ತದೆ ಆದರೆ ಮನೆಯ ಒಳಗೆ ತುಂಬಾ ಗ್ರಾಂಡ್ ಆಗಿ ಕಾಣಿಸುತ್ತದೆ.

ಚಿಕ್ಕ ಕುಟುಂಬಕ್ಕೆ ಸರಿಹೊಂದುವಂತಹ ಕಡಿಮೆ ಬಂಡವಾಳದ ಮನೆ ಇದಾಗಿದ್ದು ಪೂರ್ತಿ ಶೀಟ್ ಇಂದ ನಿರ್ಮಾಣ ಮಾಡುವಂತಹ ಮನೆ ಇದಾಗಿದ್ದು ಈ ಮನೆಯನ್ನು 23×22 ಅಳತೆಯಲ್ಲಿ ಮಾಡಲಾಗಿದೆ ಮುಂದೆಯಿಂದ ನೋಡಲು ಒಂದು ಡೋರ್ ಮತ್ತೆ ಒಂದು ಕಿಟಕಿ ನಿಮಗೆ ಕಾಣಸಿಗುತ್ತದೆ ನೋಡಲು ಸಣ್ಣ ಮನೆ ರೀತಿ ಕಾಣಿಸಿದರು ಸಹ ಒಳಗೆ ತುಂಬಾ ಅಚ್ಚುಕಟ್ಟಾಗಿ ಇರುತ್ತದೆ.

ಮುಂದೆ ಟೈಲ್ಸ್ ಅನ್ನು ಹಾಕುವುದರ ಮುಖಾಂತರ ಹೋರಾಂಡ ರೀತಿಯಲ್ಲಿ ಮಾಡಿ ನಿರ್ಮಾಣ ಮಾಡಲಾಗಿದೆ 10 ಫೀಟ್ ಹೋರಾಂಡ ನಿರ್ಮಾಣ ಮಾಡಲಾಗಿದೆ. ಈ ಮನೆ ನಿರ್ಮಾಣಕ್ಕೆ ಸಿಮೆಂಟಿಂದ ಮಾಡಿದಂತಹ ಶೀಟ್ ಗಳನ್ನು ಬಳಸಲಾಗಿದೆ ಹೊರಗೆ ಐರನ್ ಶೀಟ್ ಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಇದನ್ನು ಓದಿ:-ಸ್ವಂತ ಮನೆ ಕಟ್ಟುವ ಆಸೆ ಇದಿಯಾ ಹಾಗಾದರೆ ಈ ಒಂದು ಕೆಲಸವನ್ನು ಮಾಡಿದರೆ ಸಾಕು ಸದ್ಯದಲ್ಲಿಯೇ ಸ್ವಂತ ಮನೆಯನ್ನು ಕಟ್ಟುತ್ತೀರಿ.

ಈ ಮನೆಯನ್ನು ನೋಡಿದರೆ ಯಾರು ಕೂಡ ಶೀಟ್ ಮನೆ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಒಂದು ಒಳ್ಳೆಯ ಲುಕ್ ಕೊಡುವಂತಹ ಮನೆ ಇದಾಗಿದ್ದು, ಮನೆಯಲ್ಲಿ ಎರಡು ಬೆಡ್ ರೂಮ್ ಗಳು ಒಂದು ಕಿಚನ್ ಇದ್ದು ಬಾಗಿಲುಗಳು ತುಂಬಾ ಆಕರ್ಷಣೀಯವಾಗಿ ಕಾಣುತ್ತದೆ,

ಈ ಮನೆಗೆ ಆಗುವಂತಹ ಖರ್ಚು ಎಷ್ಟು? ಎಂದು ನೋಡುವುದಾದರೆ.

* ಈ ಮನೆಗೆ ಬಳಸಿರುವಂತಹ ಡೋರ್ ಮತ್ತು ಕಿಟಕಿಗಳಿಗೆ ಒಟ್ಟಾರೆಯಾಗಿ 25 ಸಾವಿರ ರೂಪಾಯಿಗಳು ಖರ್ಚಾಗಿದೆ.
* ಈ ಮನೆಗೆ ನಿರ್ಮಾಣ ಮಾಡಿರುವಂತಹ ಕಬೋರ್ಡ್ಗಳು ಸಿಮೆಂಟ್ ನಿಂದ ಮಾಡಲಾಗಿದೆ.
* ಮನೆಯ ಹಾಲನ್ನು 14×10 ಅಳತೆಯಲ್ಲಿ ವಿನ್ಯಾಸ ಮಾಡಲಾಗಿದೆ
* ಹಾಲ್ ನಲ್ಲಿ ಒಂದು ಪುಟ್ಟದಾಗಿ ದೇವರ ಕೋಣೆಯನ್ನು ಸಿಮೆಂಟ್ ನಿಂದ ನಿರ್ಮಾಣ ಮಾಡಿಕೊಂಡಿದ್ದಾರೆ.
* ಮೇಲೆ ಚಾಮಣ್ಣಿಗೆ ಹಾಕಿರುವಂತಹ ಎಲ್ಲಾ ಶೀಟ್ಗಳು ಸಿಮೆಂಟ್ ಶೀಟ್ ಗಳಾಗಿದೆ.
* ಅಡಿಗೆ ಮನೆಯನ್ನು 7×10 ಅಳತೆಯಲ್ಲಿ ನಿರ್ಮಾಣ ಮಾಡಿಕೊಳ್ಳಲಾಗಿದೆ
* ಅಡಿಗೆ ಮನೆಗೆ ಸೆಲ್ಫ್ ಗಳು ಹಾಗೆಯೇ ಪಾತ್ರೆಗಳು ಹಾಗೆ ಸಾಮಾನುಗಳನ್ನು ಇಟ್ಟುಕೊಳ್ಳಲು ಮಾಡಿಕೊಂಡಿರುವ ಸಿಮೆಂಟ್ ಸೆಲ್ಫ್ ಗಳು ಎಲ್ಲವೂ ಸಹ ಸುಂದರವಾಗಿದೆ.
* ಮನೆಯ ರೂಂಗಳು ಹಾಲ್ ಕಿಚನ್ ಎಲ್ಲದಕ್ಕೂ ಸಹ ಬೇರೆ ರೀತಿಯಾದಂತಹ ಟೈಲ್ಸ್ ಗಳನ್ನು ಉಪಯೋಗ ಮಾಡಲಾಗಿದೆ.

ಚಿಕ್ಕ ಕುಟುಂಬಕ್ಕೆ ಸರಿಹೊಂದುವಂತಹ ಮನೆ ಇದಾಗಿದೆ ಈ ಮನೆಯನ್ನು ನೀವು ಬಾಡಿಗೆಗೆ ಸಹ ಮಾಡಿ ಮಾಡಬಹುದು ಕಡಿಮೆ ಬಂಡವಾಳದಲ್ಲಿ ಮಾಡುವಂತಹ ಸಿಮೆಂಟ್ ಶೀಟ್ ನ ಮನೆ ಇದಾಗಿದೆ. ಮನೆ ಹೊರಗಡೆಯಿಂದ ನೋಡಲು ತುಂಬಾ ಸಿಂಪಲ್ ಆಗಿ ಕಾಣಿಸುತ್ತದೆ ಆದರೆ ಮನೆಯ ಒಳಗಡೆ ಬಂದು ನೋಡಿದರೆ ಎಲ್ಲಾ ರೀತಿಯ ಸೌಲಭ್ಯಗಳು ಇದೆ ಹಾಗೆಯೇ ಒಂದು ಒಳ್ಳೆಯ ಲುಕ್ ಸಹ ಸಿಗುತ್ತದೆ.

ಇದನ್ನು ಓದಿ:- ನಿಮ್ಮ ಕೃಷಿ ಭೂಮಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲು ಕೂಡಲೇ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಪಡೆದುಕೊಳ್ಳಿ.

ಈ ಮನೆಯನ್ನು ನಿರ್ಮಾಣ ಮಾಡಲು 1.5 ಲಕ್ಷದವರೆಗೆ ವೆಚ್ಚ ಆಗುತ್ತದೆ ಈ ರೀತಿಯಾದಂತಹ ಮನೆಯನ್ನು ಬಹಳ ಕಡಿಮೆ ಬಂಡವಾಳದಲ್ಲಿ ಯಾರಿಗೆಲ್ಲ ಆರ್ಥಿಕ ಸಮಸ್ಯೆ ಇರುತ್ತದೆಯೋ ಅಂತಹವರು ಇಂತಹ ಮನೆಗಳನ್ನು ನಿರ್ಮಾಣ ಮಾಡಿಕೊಂಡರೆ ಅವರ ಬಂಡಬಾಳಕ್ಕೆ ತಕ್ಕಂತೆ ಅಚ್ಚುಕಟ್ಟಾದ ಮನೆ ನಿರ್ಮಾಣ ಮಾಡಿಕೊಳ್ಳಬಹುದು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ ಹಾಗೆ ಈ ಮಾಹಿತಿ ಇಷ್ಟ ಆದ್ರೆ ತಪ್ಪದೆ ಲೈಕ್ ಮಾಡಿ ಮತ್ತು ಇತರರಿಗೂ ಶೇರ್ ಮಾಡಿ.

- Advertisment -