ಮಧುರೈ ಮೀನಾಕ್ಷಿ(Madurai Meenakshi) ಅಮ್ಮನವರ ದೇವಾಲಯ ತಮಿಳುನಾಡಿನ ಮಧುರೈ ಅಲ್ಲಿ ಬರುತ್ತದೆ. ಇದೊಂದು ಐತಿಹಾಸಿಕ ಹಿಂದೂ ದೇವಾಲಯ ಆಗಿದೆ. ಇದು ಅನೇಕ ಪವಾಡಗಳನ್ನು ಒಳಗೊಂಡ ದೇವಾಲಯವಾಗಿದೆ. ಪ್ರತಿದಿನ 20ರಿಂದ 30 ಸಾವಿರದ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ದೇವಸ್ಥಾನದ ಸುತ್ತಲಿನ ಗೋಡೆಗಳು, ರಸ್ತೆಗಳು ಮತ್ತು ಕೊನೆಯದಾಗಿ ನಗರದ ಗೋಡೆಗಳನ್ನು ಏಕಕೇಂದ್ರೀಯ ಕೋಟೆಯ ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ.
ಪ್ರತಿಯೊಬ್ಬರೂ ಸಹ ಕಷ್ಟ ಎಂತಾ ಬಂದಾಗ ಪರಿಚಯಸ್ತರಿಗೆ, ಹತ್ತಿರದವರಿಗೆ, ಸಂಬಂಧಿಗಳಿಗೆ ಹಾಗೂ ಸ್ನೇಹಿತರಿಗೆ ಹಣ ಹಾಗೂ ಒಡವೆ ಹಾಗೂ ಸಾಲದ ರೂಪದಲ್ಲಿ ಒಂದು ಸಮಯದಲ್ಲಿ ಸಹಾಯ ಮಾಡುತ್ತಾರೆ. ಆದರೆ, ಕೆಲವರು ಮರಳಿ ಹಣ ಹಾಗೂ ಒಡವೆಯನ್ನು ಸಾಲದ ರೂಪದಲ್ಲಿ ಹಿಂದುರಿಗಿಸಲು ಕೆಲವರು ವಂಚಿಸುತ್ತಾರೆ.
ಈ ತರದ ಕಷ್ಟಗಳು ಬಂದಾಗ ಮಧುರೈ ಮೀನಾಕ್ಷಿ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ ದೇವರಲ್ಲಿ ಪ್ರಾಥನೆ ಮಾಡಿ, ನಮ್ಮ ಕಷ್ಟದ ಬಗ್ಗೆ ಚೀಟಿ ಬರೆದು ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಹಾಕಬೇಕು. ದೇವರೇ ಯಾವುದೋ ರೂಪದಲ್ಲಿ ನಿಮ್ಮ ಹಣವನ್ನು ನೀಡುತ್ತಾಳೆ. ಈ ಮೀನಾಕ್ಷಿ ದೇವಾಲಯ ಎಲ್ಲರಿಗೂ ಗೊತ್ತು. ಆದರೆ, ಅಲ್ಲಿ ನಡೆಯುವ ಪವಾಡದ ಬಗ್ಗೆ ಯಾರಿಗೂ ತಿಳಿದಿಲ್ಲ. ಇಂದಿನ ಈ ಲೇಖನದ ಮೂಲಕ ಮೀನಾಕ್ಷಿ ಅಮ್ಮನವರ ಪವಾಡದ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡಲಿದ್ದೇವೆ. ಕೊನೆವರೆಗೂ ಮಿಸ್ ಮಾಡದೇ ಈ ಲೇಖನಬನ್ನು ಓದಿ.
ಬೇರೆಯವರಿಗೆ ದುಡ್ಡು, ಒಡವೆ ಸಾಲದ ರೂಪದಲ್ಲಿ ಹಣವನ್ನು ಕೊಟ್ಟಿದ್ದು, ಅವರು ಹಿಂದುರಿಗಿಸದೆ ಇದ್ದಾಗ ಮಧುರೈ ಮೀನಾಕ್ಷಿ ಅಮ್ಮನವರಲ್ಲಿ ಬೇಡಿಕೊಂಡು ಕಷ್ಟಗಳನ್ನು ಒಂದು ಚೀಟಿಯಲ್ಲಿ ಬರೆದು ಹುಂಡಿಗೆ ಹಾಕಬೇಕು. ನಂತರದಲ್ಲಿ ಯಾವುದೋ ಒಂದು ರೂಪದಲ್ಲಿ ನಿಮ್ಮ ಹಣ ಮರಳಿ ನಮ್ಮ ಕೈ ಸೇರಲಿದೆ. ಸಾವಿರಾರು ವರ್ಷಗಳಿಂದ ಕಷ್ಟಗಳ ಚೀಟಿಯ ಪವಾಡ ಇಲ್ಲಿ ನಡೆಯುತ್ತಿದೆ. ದೇವಸ್ಥಾನಕ್ಕೆ ಬರುವ ಹೆಚ್ಚಿನ ಭಕ್ತರಿಗೆ ಇದರ ಬಗ್ಗೆ ಮಾಹಿತಿ ತಿಳಿದಿರುವುದಿಲ್ಲ. ಸಾಲದ ಕಷ್ಟದ ಚೀಟಿಯನ್ನು ಹಾಕಿದ ಕೆಲವು ಗಂಟೆಗಳಲ್ಲಿ ಪರಿಹಾರ ಸಿಗುತ್ತದೆ. ತಮಿಳುನಾಡಿನ ಮಧುರೈ ಎನ್ನುವ ಊರಿನಲ್ಲಿ ನೆಲೆಸಿರುವ ಮಧುರೈ ಮೀನಾಕ್ಷಿ ಅಮ್ಮನವರ ದೇವಸ್ಥಾನ ಇದಾಗಿದೆ.
ಮಧುರೈನಿಂದ 10 ಕಿಲೋಮೀಟರ್ ದೂರದಲ್ಲಿ ಈ ದೇವಸ್ಥಾನ ಕಂಡು ಬರುತ್ತದೆ. ಪ್ರಪಂಚದ ಅತ್ಯಂತ ಸುಂದರವಾದ ಹಾಗೂ ಪ್ರಸಿದ್ದ ದೇವಾಲಯ ಇದಾಗಿದೆ. ಮಧುರೈ ಮೀನಾಕ್ಷಿ ದೇವಾಲಯ ಎಲ್ಲರಿಗೂ ಗೊತ್ತು. ಆದರೆ, ಅಲ್ಲಿ ನಡೆಯುವ ಪವಾಡದ ಬಗ್ಗೆ 90 ಪರ್ಸೆಂಟ್ ಜನರಿಗೆ ತಿಳಿದಿಲ್ಲ. ಕಷ್ಟ ಪಟ್ಟು ದುಡಿದ ದುಡ್ಡು ಯಾರಿಗೂ ಸಾಲದ ರೂಪದಲ್ಲಿ ಕೊಟ್ಟಿದ್ದು, ಮರಳಿ ಬಾರದೆ ಇದ್ದರೆ ಒಂದು ಚೀಟಿಯಲ್ಲಿ ಕಷ್ಟವನ್ನು ಬರೆದು ದೇವರ ಹುಂಡಿಯಲ್ಲಿ ಹಾಕಬೇಕು ಚೀಟಿ ಹಾಕಿದ ಕೆಲವೇ ಗಂಟೆಗಳಲ್ಲಿ ಮರಳಿ ಬರುತ್ತದೆ. ಹೀಗಾಗಿ ಹಲವರು ಮಧುರೈ ಮೀನಾಕ್ಷಿ ಅಮ್ಮನವರ ಮೊರೆ ಹೋಗುತ್ತಾರೆ.
ಸುಮಾರು ಸಾವಿರ ವರ್ಷದ ಹಿಂದೆ ಈ ದೇವಸ್ಥಾನದಲ್ಲಿ ಕೆಲಸ ಮಾಡುತಿದ್ದ ನಟಸ್ವರ ಎನ್ನುವ ವ್ಯಕ್ತಿ ತನ್ನ ಸ್ನೇಹಿತನಿಗೆ ತನ್ನ ಜೀವನದಲ್ಲಿ ದುಡಿದ ಎಲ್ಲ ದುಡ್ಡನ್ನು ಸಾಲದ ರೂಪದಲ್ಲಿ ಕೊಡುತ್ತಾನೆ. ಸ್ವಲ್ಪ ದಿನದ ಬಳಿಕ ನಟಸ್ವರ ಸ್ನೇಹಿತನ ಬಳಿ ಹಣವನ್ನು ಕೇಳಿದ್ದನು. ಆಗ ಸ್ನೇಹಿತ ನನ್ನ ಹತ್ತಿರ ಏನು ಇಲ್ಲ. ನಿನ್ನ ದುಡ್ಡನ್ನು ಕೊಡಲು ಸಾಧ್ಯ ಇಲ್ಲ ಎಂದು ಹೇಳುತ್ತಾನೆ. ದುಡಿದ ದುಡ್ಡನ್ನು ಕಳೆದುಕೊಂಡೆ ಎನ್ನುವ ದುಃಖದಲ್ಲಿ ಬೇರೆ ದಾರಿ ಇಲ್ಲದೆ ನಟಸ್ವರ ಮೀನಾಕ್ಷಿ ಅಮ್ಮನವರ ಜಪ ಮಾಡಿಕೊಂಡು ಮಲಗಿದ್ದ.
ಆಗ ಕನಸಿನಲ್ಲಿ ಬಂದ ಅಮ್ಮನವರು ನಿನ್ನ ಕಷ್ಟಗಳನ್ನು ಒಂದು ಚೀಟಿಯಲ್ಲಿ ಬರೆದು ಹುಂಡಿಯಲ್ಲಿ ಹಾಕು ನಿನ್ನ ಕಷ್ಟಕ್ಕೆ ನಾನೇ ಪರಿಹಾರ ಕೊಡುತ್ತೇನೆ ಎಂದು ಹೇಳುತ್ತಾರೆ. ನಂತರ ನಟಸ್ವರ ತನ್ನ ಕಷ್ಟಗಳನ್ನು ಬರೆದು ಹುಂಡಿಯಲ್ಲಿ ಹಾಕಿದನು. ಚೀಟಿಯನ್ನು ಹಾಕಿದ ಕೆಲವು ಗಂಟೆಗಳಲ್ಲಿ ರಾಜನ ಆಸ್ಥಾನದಲ್ಲಿ ಕೆಲಸ ಮಾಡುವ ಅವಕಾಶ ಬರುತ್ತದೆ.
ದೇವಸ್ಥಾನದಲ್ಲಿ ನಟಸ್ವರನಿಗೆ ಸಂಬಳವಾಗಿ ಎರಡು ವರಾಹ ಕೊಡುತ್ತಿದ್ದರು. ಹಾಗೆಯೇ ರಾಜನ ಆಸ್ಥಾನದಲ್ಲಿ ಮುನ್ನೂರು ಬಂಗಾರದ ನಾಣ್ಯಗಳು ಕೊಡುತ್ತಿದ್ದರು. ಇದು ಆತ ಕಳೆದುಕೊಂಡ ಹಣಕ್ಕಿಂತ ಐದು ನೂರು ಪಟ್ಟು ಜಾಸ್ತಿ ಆಗಿತ್ತು. ಈ ಮಹಿಮೆಯನ್ನು ಮೀನಾಕ್ಷಿ ಅಮ್ಮನರ ಮಹಿಮೆಯ ಪುಸ್ತಕದಲ್ಲಿ ಪುರಾವೆಗಳಿವೆ. ದೇವಸ್ಥಾನದ ಪ್ರಧಾನ ಅರ್ಚಕರ ಕನಸಿನಲ್ಲಿ ಅಮ್ಮನವರು ಬಂದು ದೇವಸ್ಥಾನಕ್ಕೆ ಭಕ್ತರ ಕಷ್ಟಗಳ ಚೀಟಿ ಬರುತ್ತದೆ. ಈ ಚೀಟಿಯನ್ನು ಮುಟ್ಟುವಂತಿಲ್ಲ ಹಾಗೂ ಓದುವಂತಿಲ್ಲ ಈ ಚೀಟಿಗಳನ್ನು ನಾನು ಓದುತ್ತೇನೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ ಚೀಟಿಯ ಪವಾಡದ ಬಗ್ಗೆ ಯಾರಿಗೂ ಹೇಳುವಂತಿಲ್ಲ ಎಂದು ಹೇಳಿದ್ದರು.
ನಿಮ್ಮ ಮುಂಬರುವ ಪೀಳಿಗೆ ಸಹ ಇದೆ ನಿಯಮವನ್ನು ಅನುಸರಿಸಬೇಕು ಎಂದು ಹೇಳಿ ಅರ್ಚಕರ ಬಳಿ ಅಮ್ಮನವರು ಪ್ರಮಾಣ ಮಾಡಿಸಿಕೊಂಡಿದ್ದರು. ಮೀನಾಕ್ಷಿ ಅಮ್ಮನವರ ಪವಾಡ ಎರಡು ವಿಭಾಗವಾಗಿ ವಿಂಗಡಣೆ ಆಗಿದೆ. ಹೀಗೆ ಮಧುರೈ ಮೀನಾಕ್ಷಿ ಅಮ್ಮನವರ ಪವಾಡ ಹೇಳತೀರದು ಹಾಗೂ ತುಂಬಾ ಜನರಿಗೆ ಈ ದೇವಾಲಯದ ಬಗ್ಗೆ ಗೊತ್ತಿದ್ದರೂ ಸಹ ಪವಾಡದ ಬಗ್ಗೆ ತಿಳಿದಿರುವುದಿಲ್ಲ.