Thursday, September 28, 2023
Home Useful Information ರೇಷನ್ ಕಾರ್ಡ್‌ನಲ್ಲಿ ಅತ್ತೆಯೇ ಯಜಮಾನಿಯಾಗಿದ್ದರೆ, ಸೊಸೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಬರುವಂತೆ ಮಾಡಬಹುದಾ.?...

ರೇಷನ್ ಕಾರ್ಡ್‌ನಲ್ಲಿ ಅತ್ತೆಯೇ ಯಜಮಾನಿಯಾಗಿದ್ದರೆ, ಸೊಸೆಗೆ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಬರುವಂತೆ ಮಾಡಬಹುದಾ.? ಇಲ್ಲಿದೆ ಹೊಸ ರೂಲ್ಸ್

 

ಈಗಾಗಲೇ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಅಧಿಕಾರಕ್ಕೆ ಬಂದ ನಂತರ ತಾನು ನೀಡಿರುವಂತಹ ಆಶ್ವಾಸನೆ ರೂಪದಲ್ಲಿ 5 ಪ್ರಮುಖ ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಈಗಾಗಲೇ ಮಾಡುತ್ತಿದ್ದು, ಅದರಲ್ಲಿ ಸಾಕಷ್ಟು ಯೋಜನೆಗಳು ಈಗಾಗಲೇ ಅನುಷ್ಠಾನಕ್ಕೆ ಬಂದು ಜನರನ್ನು ತಲುಪುವಂತಹ ಕೆಲಸಗಳು ಕೂಡ ನಡೆಯುತ್ತಿವೆ ಎಂಬುದು ಕಳೆದ ಸಾಕಷ್ಟು ದಿನಗಳಿಂದ ನೀವು ಕೂಡ ನೋಡುತ್ತಿದ್ದೀರಿ.

ಅದರ ಕುರಿತಂತೆ ಇಂದಿನ ಲೇಖನದಲ್ಲಿ ನಾವು ಒಂದು ಪ್ರಶ್ನೆಗೆ ಉತ್ತರ ನೀಡುವಂತಹ ಕೆಲಸವನ್ನು ಮಾಡಲು ಹೊರಟಿದ್ದು, ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅನ್ಯ ಭಾಗ್ಯ ಯೋಜನೆ ಈ ತಿಂಗಳಿನಿಂದ ಪ್ರಾರಂಭವಾಗಿದ್ದು, ಪ್ರತಿಯೊಬ್ಬರೂ ಕೂಡ ತಮ್ಮ ಬ್ಯಾಂಕ್ ಖಾತೆಗೆ ಹಾಗೂ ರೇಷನ್ ಕಾರ್ಡಿಗೆ (Ration Card) ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತಹ ಪ್ರಕ್ರಿಯೆಯನ್ನು ಕೂಡ ಮಾಡುವಂತೆ ಈಗಾಗಲೇ ನಾಗರಿಕ ಆಹಾರ ಸರಬರಾಜು ಇಲಾಖೆ ಅಧಿಕೃತವಾಗಿ ಘೋಷಿಸಿದೆ.

ಈ ಮೊದಲು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವಂತಹ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿರುವುದು ನಿಮಗೆಲ್ಲರಿಗೂ ತಿಳಿದಿದೆ. ಆದರೆ, ನಂತರ ಅಕ್ಕಿಯ ಸರಬರಾಜು ಅಭಾವದ ಕಾರಣದಿಂದಾಗಿ 5 ಕೆಜಿ ಅಕ್ಕಿ ಹಾಗೂ ಉಳಿದ ಐದು ಕೆಜಿ ಅಕ್ಕಿಗೆ ಸರಿ ಹೊಂದುವಂತೆ ಪ್ರತಿ ಕೆಜಿಗೆ 34 ರೂಪಾಯಿಗಳ ಹಾಗೆ ಹಣವನ್ನು ಅವರ ಬ್ಯಾಂಕ್ ಖಾತೆಗೆ ಹಾಕುವಂತಹ ಯೋಜನೆಯನ್ನು ಕೂಡ ರಾಜ್ಯ ಸರ್ಕಾರ ಬಹಿರಂಗಪಡಿಸಿತು.

ರಾಜ್ಯದಲ್ಲಿ ಒಟ್ಟು 1.29 ಕೋಟಿ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿದೆ. ಹಣ ನೀಡುವ ಈ ಯೋಜನೆಯಿಂದ ಸರ್ಕಾರಕ್ಕೆ 750 ಕೋಟಿ ರೂಪಾಯಿ ವೆಚ್ಚ ತಲುಗಲಿದ್ದು, ಇನ್ನೂ ಜುಲೈ 1 ರಿಂದ 15ರ ವರೆಗೆ ಕೊಡಲು ಸರ್ಕಾರದಿಂದ ಮೌಖಿಕ ಆದೇಶ ನೀಡಲಾಗಿದೆ. ಅಕ್ಕಿ ಸಿಗುವರೆಗೆ ಮಾತ್ರ ಈ ಹಣ ವರ್ಗಾವಣೆಯಾಗಲಿದೆ. ಬಳಿಕ ಅಕ್ಕಿ ಕೊಡುತ್ತೇವೆ. ಸಿಎಂ ಕೂಡ ಧಾನ್ಯ ಕೊಡುತ್ತೇವೆ ಎಂದಿದ್ದಾರೆ.

ದಕ್ಷಿಣ ಕರ್ನಾಟಕದಲ್ಲಿ ರಾಗಿ ಕೊಡುತ್ತೇವೆ, ಉತ್ತರ ಕರ್ನಾಟಕ ಭಾಗಕ್ಕೆ ಜೋಳ ಕೊಡುತ್ತೇವೆ ರಾಗಿ ದಾಸ್ತಾನು ಇದೆ, ಜೋಳ ದಾಸ್ತಾನು ಇಲ್ಲ. ದಾಸ್ತಾನು ಆದ ಬಳಿಕ ಧಾನ್ಯಗಳ ಹಂಚಿಕೆ ಮಾಡುತ್ತೇವೆ. ಎಂಎಸ್ ಪಿ ಮೂಲಕ ಧಾನ್ಯ ಖರೀದಿ ಮಾಡುತ್ತೇವೆ. ಎರಡು ಕೆಜಿ, ಜೋಳ/ರಾಗಿ ಕೊಡುತ್ತೇವೆ. ಎಂಟು ಕೆಜಿ ಅಕ್ಕಿ ಕೊಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಈ ಜನಪ್ರಿಯ ಅನ್ನ ಭಾಗ್ಯ ಯೋಜನೆಯನ್ನು ಈಗಾಗಲೇ ಜುಲೈ ತಿಂಗಳಿನಿಂದಲೇ ಆರಂಭ ಮಾಡಿದ್ದು, ಈ ಹಣವನ್ನು ಯಾರಿಗೆ ಹಾಕಬೇಕು ಎನ್ನುವುದರ ಕುರಿತಂತೆ ಕೂಡ ಕಡ್ಡಾಯ ನಿಯಮವನ್ನು ರೂಪಿಸಿದೆ. ಹೌದು, ಮನೆಯ ಯಜಮಾನರ ಖಾತೆಗೆ ಅಂದರೆ, ರೇಷನ್ ಕಾರ್ಡ್ ನಲ್ಲಿ ನಮೂದಿಸಿರುವ ಹಾಗೆ ಮನೆಯ ಯಜಮಾನಿ ಅಂದ್ರೆ ಮಹಿಳೆಯರೇ ರೇಷನ್ ಕಾರ್ಡ್ ನಲ್ಲಿ ಯಜಮಾನಿಯಾಗಿರಬೇಕು.

ಅದಕ್ಕೆ ಸಾಕಷ್ಟು ಪ್ರಕ್ರಿಯೆಗಳು ಕೂಡ ಇವೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಪುರುಷ ಯಜಮಾನರು ಇದ್ದರೆ, ಆ ಸ್ಥಳದಲ್ಲಿ ನಿಮ್ಮ ತಾಯಿಯ ಅಥವಾ ಮನೆಯ ಅತ್ತೆಯ ಹೆಸರನ್ನು ನಮೂದಿಸುವಂತಹ ಪ್ರಕ್ರಿಯೆ ಕೂಡ ಇದ್ದು, ಅದಾದ ನಂತರ ಅವರ ಖಾತೆಗೆ ಅಂದರೆ, ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸುವಂತಹ ಪ್ರಕ್ರಿಯೆ ಕೂಡ ಇದೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಮನೆಯ ಸೊಸೆ ಸದಸ್ಯರ ಸ್ಥಾನದಲ್ಲಿ ಇದ್ದು, ಅವರ ಖಾತೆಗೆ ಹಣವನ್ನು ವರ್ಗಾಯಿಸುವಂತಹ ಯಾವುದೇ ಯೋಜನೆ ಇಲ್ಲವಾ ಎಂಬುದಾಗಿ ಕೂಡ ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ಎನ್ನುವಂತೆ ಕೂಡ ಪರಿಹಾರ ಸಿಕ್ಕಿದ್ದು, ಈಗಾಗಲೇ ಒಂದು ವೇಳೆ ರೇಷನ್ ಕಾರ್ಡ್ ನಲ್ಲಿ ಅತ್ತೆ ಮನೆಯ ಯಜಮಾನಿಯಾಗಿ ಕಾಣಿಸಿಕೊಂಡಿದ್ದರೆ, ಅವರು ಜೀವಂತವಾಗಿದ್ದರೆ ಅವರ ಹೊರತು ಸದಸ್ಯರ ಸ್ಥಾನದಲ್ಲಿರುವಂತಹ ಸೊಸೆಯ ಹೆಸರನ್ನು ಯಜಮಾನ ರೀತಿಯಲ್ಲಿ ಪ್ರತಿಬಿಂಬಿಸಿ ಉಚಿತ ಅಕ್ಕಿಯ ಹಣವನ್ನು ಅವರ ಖಾತೆಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ.

ಉಚಿತ ಅಕ್ಕಿಯ ಹಣವನ್ನು ಕೇವಲ ಮನೆಯ ಒಡತಿ ಆಗಿರುವಂತಹ ಅತ್ತೆಯ ಖಾತೆಗೆ ಮಾತ್ರ ವರ್ಗಾಯಿಸಲಾಗುತ್ತದೆ. ಇದು ಪ್ರತಿಯೊಬ್ಬ ರೇಷನ್ ಕಾರ್ಡ್‌ನಲ್ಲಿ ಇರುವಂತಹ ಮನೆಯ ಯಜಮಾನರ ಸ್ಥಾನವನ್ನು ಪ್ರಮುಖವಾಗಿ ಅವಲಂಬಿಸಿರುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾಗಿದೆ. ಮನೆಯ ಯಜಮಾನರ ಸ್ಥಾನದಲ್ಲಿ ಅತ್ತೆಯ ಹೆಸರು ಇದ್ದರೆ ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಹಾಗೂ ಇದಕ್ಕೆ ಪ್ರಮುಖವಾಗಿ ಅವರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿಕೊಳ್ಳುವುದು ಪ್ರಮುಖವಾಗಿರುತ್ತದೆ.

ಇದರ ಜೊತೆಗೆ ತಮ್ಮ ರೇಷನ್ ಕಾರ್ಡ್ (Ration Card) ಅನ್ನು ಕೂಡ ಆಧಾರ್ ಕಾರ್ಡ್ (Aadhaar Card) ಗೆ ಲಿಂಕ್ ಮಾಡಿಸಿಕೊಳ್ಳಬೇಕಾಗಿದೆ. ಆದಷ್ಟು ಶೀಘ್ರದಲ್ಲಿ ಈ ಪ್ರಕ್ರಿಯೆಯನ್ನು ಪೂರೈಸಿದ ನಂತರವೇ ನೀವು ಉಚಿತ ಅಕ್ಕಿ ಹಾಗೂ ಅಕ್ಕಿಯ ಬದಲಾಗಿ ಸಿಗುವಂತಹ ಹಣವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ ಎಂಬುದಾಗಿ ಇಲಾಖೆ ತಿಳಿಸಿದೆ.

- Advertisment -