ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಒದಗಿಸಲು ರಾಜ್ಯ ಸರ್ಕಾರವು ʻಶಕ್ತಿ ಯೋಜನೆʼಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ ʻಶಕ್ತಿ ಸ್ಮಾರ್ಟ್ ಕಾರ್ಡ್ʼ ಕೂಡ ಬಿಡುಗಡೆಯಾಗಿದೆ. ಈ ಯೋಜನೆಯ ಮೂಲಕ ಈಗ ರಾಜ್ಯದ ಎಲ್ಲಾ ಮಹಿಳೆಯರು ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ.
ಇದರ ಅಡಿಯಲ್ಲಿ, ಈ ಕಾರ್ಡ್ ಬಳಸುವ ಪುರುಷರಿಗೆ 50% ಸೀಟುಗಳನ್ನು ಕಾಯ್ದಿರಿಸುವಿಕೆಯನ್ನು ಸಹ ಸರ್ಕಾರ ಮಾಡಿದೆ ಇಂದಿನ ಲೇಖನದಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಬಗ್ಗೆ ಹಾಗೂ ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಕೊನೆವರೆಗೂ ಮಿಸ್ ಮಾಡದೇ ಓದಿ, ಈ ಉಪಯುಕ್ತ ಮಾಹಿತಿ ತಿಳಿದುಕೊಳ್ಳಿ…
ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆ 2023
ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವುದು ಕಡ್ಡಾಯವಾಗಿದೆ. ಈ ಕಾರ್ಡ್‌ನ ಸಹಾಯದಿಂದ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯ ಸರ್ಕಾರ ನಿರ್ವಹಿಸುವ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಇದೀಗ, ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಬಿಡುಗಡೆ ಮಾಡಲಾಗಿದ್ದು, ಮಹಿಳೆಯರು ಅದಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲಿಯವರೆಗೂ ಮಹಿಳೆಯರು ಆಧಾರ್ ಕಾರ್ಡ್ ಅಥವಾ ಸರ್ಕಾರ ನೀಡಿದ ಇತರೆ ದಾಖಲೆ ತೋರಿಸುವ ಮೂಲಕ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದರು. ಆದ್ರೆ, ಇನ್ಮುಂದೆ ಈ ಶಕ್ತಿ ಸ್ಮಾರ್ಟ್ ಕಾರ್ಡ್ ಬಳಕೆ ಮಾಡುವುದು ಕಡ್ಡಾಯವಾಗಿರುತ್ತದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಬಯಸುವ ರಾಜ್ಯದ ಎಲ್ಲಾ ನಾಗರಿಕರು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡ್‌ನ ಪ್ರಯೋಜನಗಳು
* ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡ್‌ನ ಸಹಾಯದಿಂದ ರಾಜ್ಯದ ಎಲ್ಲಾ ಮಹಿಳೆಯರು ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
* ಈ ಯೋಜನೆಯಡಿ ಒದಗಿಸಲಾದ ಈ ಕಾರ್ಡ್‌ನ ಸಹಾಯದಿಂದ, ರಾಜ್ಯದಲ್ಲಿನ ಫಲಾನುಭವಿಯ ಗುರುತು ತಿಳಿಯುತ್ತದೆ.
* ಇದಲ್ಲದೆ, ಈ ಕಾರ್ಡ್‌ನ ಪ್ರಯೋಜನವನ್ನು ಪಡೆಯುವ ವ್ಯಕ್ತಿಯು ಕರ್ನಾಟಕ ರಾಜ್ಯದ ಮೂಲದವರು ಎಂಬುದಕ್ಕೆ ರಾಜ್ಯ ಸರ್ಕಾರವು ನೀಡಿದ ಈ ಕಾರ್ಡ್ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.
* ಇದರೊಂದಿಗೆ, ಸರ್ಕಾರವು ಪ್ರಾರಂಭಿಸಿರುವ ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡ್ 2023 ಮೂಲಕ ನಿವಾಸಿಯ ಹೆಸರು, ಲಿಂಗ ಮತ್ತು ವಿಳಾಸವನ್ನು ಸುಲಭವಾಗಿ ಪ್ರದರ್ಶಿಸಲಾಗುತ್ತದೆ.
ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ
* ಮೊದಲನೆಯದಾಗಿ ಕರ್ನಾಟಕ ಸರ್ಕಾರದ ಖಾತರಿ ಯೋಜನೆಗಳ ವೆಬ್‌ಸೈಟ್ ತೆರೆಯಿರಿ.
* ಇಲ್ಲಿ ʻಖಾತರಿ ಯೋಜನೆಗಳ ಕುರಿತುʼ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಎಲ್ಲಾ ಯೋಜನೆಗಳ ಪಟ್ಟಿ ಸ್ಕ್ರೀನ್ ಮೇಲೆ ಕಾಣಿಸುತ್ತದೆ.
* ಇಲ್ಲಿ ʻಶಕ್ತಿʼ ಎನ್ನುವ ಪಟ್ಟಿ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ಇದುವರೆಗೂ ಕೆಲವೊಂದು ಆಯ್ಕೆಗಳು ಓಪನ್ ಆಗುತ್ತಿರಲಿಲ್ಲ. ಆದರೆ, ಈಗ ಆ ವೆಬ್ಸೈಟ್ ಓಪನ್ ಮಾಡಿದರೆ, ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾಲಂ ಓಪನ್ ಆಗುತ್ತದೆ, ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ, ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ನಿಯಮಗಳು ಹಾಗೂ ಕಂಡಿಷನ್‌ಗಳು, ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ ಎನ್ನುವ ಆಯ್ಕೆಗಳು ಕಾಣಿಸುತ್ತವೆ.
ಆದ್ರೆ, ಅವುಗಳನ್ನು ಕ್ಲಿಕ್ ಮಾಡಿದರೆ. ಮುಂದಿನ ಹಂತಗಳು ಲಭ್ಯವಾಗುತ್ತಿಲ್ಲ. ಇದರರ್ಥ ಸರ್ಕಾರ ವೆಬ್ಸೈಟ್ ಅಭಿವೃದ್ಧಿ ಪಡಿಸುತ್ತಿದೆ ಎಂದರ್ಥ. ಇನ್ನು ಕೆಲವೇ ದಿನಗಳಲ್ಲಿ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೂ ಕೂಡ ಚಾಲನೆ ನೀಡಲಿದೆ. ಹೀಗಾಗಿ, ಕೆಲವೊಮ್ಮೆ ಇಲ್ಲಿ ನೀಡಿರುವ ಮಾಹಿತಿ ಪ್ರಕಾರ, ಆಗಾಗ್ಗೆ ಒಮ್ಮೆ ಚೆಕ್ ಮಾಡುತ್ತಿರಿ. ಮದಲೇ ಇದಕ್ಕೆ ಬೇಕಾದ ದಾಖಲೆಗಳನ್ನೆಲ್ಲಾ ಸಿದ್ಧಪಡಿಸಿಕೊಂಡು, ಅರ್ಜಿ ಸಲ್ಲಿಕೆ ಪ್ರಾರಂಭವಾದ ತಕ್ಷಣವೇ ನೀವೂ ಅರ್ಜಿ ಸಲ್ಲಿಸಿ.