ನೂತನ ಸರ್ಕಾರದ ಉಪಮುಖ್ಯಮಂತ್ರಿಗಳಾಗಿರುವ ಡಿ.ಕೆ ಶಿವಕುಮಾರ್ (DCM D.K Shivakumar) ಅವರು ಅಕ್ಟೋಬರ್ 6 ರಂದು ರಾಮನಗರ ಬಳಿ ಮಾಗಡಿಯ ಕುದೂರಿನಲ್ಲಿ (Kudoor) ಕರ್ನಾಟಕ ಪಬ್ಲಿಕ್ ಶಾಲೆ (Karnataka Public School) ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಕಿವಿಮಾತು ಹೇಳಿ, ಕರ್ನಾಟಕದಲ್ಲಿ ಎಲ್ಲಾ ಪಂಚಾಯಿತಿಗಳಲ್ಲೂ ಕೂಡ ಅಂತರಾಷ್ಟ್ರೀಯ ಶಾಲೆ ಆರಂಭಿಸಬೇಕು ಎಂದು ಅಂದುಕೊಂಡಿರುವ ಕನಸಿನ ಬಗ್ಗೆ ಕೂಡ ಮಾತನಾಡಿದರು. ಇದೇ ವೇಳೆಯಲ್ಲಿ ರಾಮನಗರ ಜಿಲ್ಲೆಯ ನೀರಿನ ಯೋಜನೆಯಾದ ಶ್ರೀರಂಗ ಯೋಜನೆ (Ramanagara Sriranga yojane) ಬಗ್ಗೆ ಕೂಡ ಮಾಹಿತಿ ಹಂಚಿಕೊಂಡು.
ಅಕ್ಕ ತಂಗಿಯರ ಆರೈಕೆಯಷ್ಟೇ ಸಾಕೇನಗೆ ಶಕ್ತಿ ಯೋಜನೆ ಬಗ್ಗೆ ಹರ್ಷ ವ್ಯಕ್ತ ಪಡಿಸಿ ವಿಡಿಯೋ ರಿಲೀಸ್ ಮಾಡಿದ – ಸಿದ್ದರಾಮಯ್ಯ
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಂದ ರಾಜ್ಯಕ್ಕೆ ಎಷ್ಟು ಅನುಕೂಲವಾಗಿದೆ ಮತ್ತು ಇದನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಕೂಡ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದರು. ಮೊದಲಿಗೆ ಕುದುರಿನಲ್ಲಿ 16 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯನ್ನು ನಿರ್ಮಾಣ ಮಾಡಿಕೊಡುತ್ತಿರುವ ಟೊಯೋಟಾ ಕಿಲೋಸ್ಕರ್ (Toyota Kiloskar) ಕಂಪನಿಗೆ ವಂದಿಸಿದ ಅವರು ರಾಮನಗರ ಜಿಲ್ಲೆಯಲ್ಲಿ 4 ಭಾಗಗಳಲ್ಲಿ ಕಂಪನಿ ಸುಸಜ್ಜಿತ ವ್ಯವಸ್ಥೆಯುಳ್ಳ ಶಾಲೆಗಳ ನಿರ್ಮಾಣ ಮಾಡುತ್ತಿದೆ ಇದಕ್ಕಾಗಿ ಇಂದು ನಾವು ಸಂಸ್ಥೆಗೆ ಅಭಾರಿಯಾಗಿರುತ್ತೇವೆ ಎಂದರು.
ಇದೇ ರೀತಿ ಕರ್ನಾಟಕದಾದ್ಯಂತ 3,000 ಅಂತರಾಷ್ಟ್ರೀಯ ಗುಣಮಟ್ಟದ ಶಾಲೆಗಳನ್ನು ಆರಂಭಿಸಿ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸದ ಕಾರಣಕ್ಕಾಗಿ ದೂರದ ಊರುಗಳಿಗೆ ವಲಸೆ ಬೇಕಾಗಿರುವ ಅನಾನುಕೂಲತೆಯಲ್ಲಿ ತಪ್ಪಿಸಬೇಕು ಎನ್ನುವುದು ನನ್ನ ಕನಸಾಗಿದೆ, ಶೀಘ್ರದಲ್ಲಿಯೇ ನಮ್ಮ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳಿದ ಉಪಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗೆ ಶಿಕ್ಷಣದ ಮೌಲ್ಯಗಳ ಕುರಿತು ತಿಳಿ ಹೇಳಿದರು.
ದೇವಸ್ಥಾನಕ್ಕೆ ಆಫ್ರಿಕಾ ಕ್ರಿಕೆಟ್ ಆಟಗಾರ ಭೇಟಿ, ಹೆಮ್ಮೆಯ ಸನಾತನಿ ಎಂದ ಭಾರತೀಯರು.!
ಒಂದು ಬಾರಿ ಮೀರಿ ಹೋದ ಸಮಯ ಮರಳಿ ಬರುವುದಿಲ್ಲ, ಹಾಗಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅವಕಾಶ ಮಾಡಿಕೊಟ್ಟಿರುವ ಈ ಸಮಯವನ್ನು ಚೆನ್ನಾಗಿ ಓದಿ ತಂದೆ-ತಾಯಿ ಕನಸನ್ನು ನನಸು ಮಾಡಿಕೊಳ್ಳಲು ವಿನಿಯೋಗಿಸಬೇಕು ಎಂದು ಹೇಳಿದರು. ರಾಮನಗರ ಜಿಲ್ಲೆಯಲ್ಲಿ ಇರುವ ಎಲ್ಲಾ ಕೈಗಾರಿಕೆಗಳ CSR ಹಣವನ್ನು ಶಿಕ್ಷಣದ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.
ಹಾಗೆಯೇ ಜಿಲ್ಲೆಯ ಶ್ರೀರಂಗ ನೀರಾವರಿ ಯೋಜನೆಗೆ ಮತ್ತೆ ಮರುಜೀವ ಬರಲಿದೆ, ಇದರ ಮೂಲಕ ಕೃಷಿ ಹಾಗೂ ಕುಡಿಯುವ ನೀರಿನ ಕೊರತೆಯನ್ನು ಬಗೆಹರಿಸಲಿದ್ದೇವೆ. ಬಕುರ್ ಹುಕುಂ ಜಮೀನುಗಳ ಸಮಸ್ಯೆಗಳ ಬಗ್ಗೆ ಕೂಡ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು. ಅದೇ ರೀತಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಕೂಡ ಮಾತನಾಡಿದ ಅವರು ರಾಜ್ಯದಲ್ಲಿ ಜನರು ಬೆಲೆ ಏರಿಕೆ ಬಿಸಿಯಿಂದ ಕತ್ತರಿಸಿ ಹೋಗಿದ್ದರು.
ಮೂರು ವರ್ಷಗಳ ನಂತರ ಮತಗಳ ಮರು ಎಣಿಕೆ, ಮತ್ತೆ ಗೆದ್ದ ಗ್ರಾಮ ಪಂಚಾಯತಿ ಸದಸ್ಯೆ.!
ನಮ್ಮ ಗ್ಯಾರಂಟಿ ಯೋಜನೆಗಳು (Guarantee Schemes) ಜನರಿಗೆ ಸಾಕಷ್ಟು ಅನುಕೂಲತೆ ಮಾಡಿಕೊಟ್ಟಿದೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚಿನ ಅನುಕೂಲತೆ ಇದೆ. ಅನ್ನಭಾಗ್ಯ ಯೋಜನೆಯಿಂದ ಎಷ್ಟೋ ಕುಟುಂಬಗಳಿಗೆ ನೆರವಾಗಿದೆ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆ ಸಹಾಯಧನ ನೀಡಲಾಗುತ್ತಿದೆ.
ಈಗಾಗಲೇ 88% ಮಹಿಳೆಯರು ಮೊದಲನೇ ಕಂತಿನ ಹಣವನ್ನು ಪಡೆದಿದ್ದಾರೆ. ಉಳಿದವರು ಅವರ ಬ್ಯಾಂಕ್ ಖಾತೆ ಸಮಸ್ಯೆಯಿಂದ ಪಡೆಯಲಾಗಿಲ್ಲ, ಶೀಘ್ರದಲ್ಲಿ ಆ ಸಮಸ್ಯೆಯನ್ನು ಕೂಡ ಪರಿಹರಿಸಿ ಅವರಿಗೂ ಸಹಾಯಧನ ತಲುಪುವಂತೆ ಮಾಡಲಾಗುವುದು. ಆದರೆ ಮಹಿಳೆಯರು ಈ ಹಣವನ್ನು ಉಳಿತಾಯ ಮಾಡಿ ಅಥವಾ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಉಪಯೋಗಿಸಿಕೊಳ್ಳಿ ನಿಮ್ಮ ಗಂಡಂದಿರಿಗೆ ಈ ಹಣವನ್ನು ಕೊಡಬೇಡಿ ಎಂದು ಕಿವಿಮಾತು ಹೇಳಿದರು.
ಶೀಘ್ರದಲ್ಲೇ ರಾಜ್ಯದಲ್ಲಿ 3000 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡುತ್ತೆನೆ – ಡಿ.ಕೆ ಶಿವಕುಮಾರ್