ಹಸಿದ ಹೊಟ್ಟೆಯಲ್ಲಿ ಇರುವವನಿಗೆ ಉಪದೇಶ ಮಾಡಬಾರದು ಎನ್ನುವ ಗಾದೆ ಇದೆ. ಇನ್ನು ವಿದ್ಯೆ ಕಲಿಸುವುದು ಹೇಗೆ ಹಾಗಾಗಿ ಮಕ್ಕಳು ಹಸಿದ ಹೊಟ್ಟೆಯಲ್ಲಿ ಶಾಲೆಗೆ ಬರಬಾರದು ಮತ್ತು ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಸಿಗಬೇಕು ಎಂದು ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿವರೆಗೆ ಮಧ್ಯಾಹ್ನದ ಊಟ ನೀಡುವ ಬಿಸಿ ಊಟ ಕಾರ್ಯಕ್ರಮವು (Bisi Uta program) ದಶಕಗಳ ಹಿಂದೆಯೇ ಕರ್ನಾಟಕದಲ್ಲಿ (Karnataka) ಜಾರಿಗೆ ಬಂದಿದೆ.
ಇದರ ಸಾರ್ಥಕತೆಯ ಹೆಮ್ಮೆಯಿಂದ ಇನ್ನು ವಿಶೇಷ ರೀತಿಯಲ್ಲಿ ಪ್ರತಿ ವರ್ಷವೂ ಇನ್ನಷ್ಟು ಹೆಚ್ಚು ಕಾಳಜಿಯಿಂದ ಇದನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದನ್ನೇ ಹೋಲುವ ಮತ್ತೊಂದು ಯೋಜನೆಯು ಜಾರಿಗೆ ಬಂದಿದೆ. ಈ ಯೋಜನೆಗೆ ಮುಖ್ಯಮಂತ್ರಿ ಉಪಹಾರ ಯೋಜನೆ (Mukyamantri Upahara yojane) ಎಂದು ಹೆಸರಿಡಲಾಗಿದೆ. ಈ ನೂತನ ಯೋಜನೆ ಮೂಲಕ 1 ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗಿನ ಉಪಹಾರ ಕೊಡಲು ನಿರ್ಧರಿಸಲಾಗಿದೆ.
ಗೃಹಲಕ್ಷ್ಮಿ ಹಣವನ್ನು ನಿಮ್ಮ ಗಂಡಂದಿರಿಗೆ ಕೊಡಬೇಡಿ ಮಹಿಳೆಯರಿಗೆ ಅಡ್ವೈಸ್ ಮಾಡಿದ – DK ಶಿವಕುಮಾರ್
ಆದರೆ ಈ ಯೋಜನೆ ಜಾರಿಗೆ ಬರುತ್ತಿರುವುದು ನೆರೆಯ ರಾಜ್ಯ ತೆಲಂಗಾಣದಲ್ಲಿ (Telangana). ಅಕ್ಟೋಬರ್ 6ರಂದು ಮಾಹಿತಿ ತಂತ್ರಜ್ಞಾನ ಮತ್ತು ಕೈಗಾರಿಕಾ ಖಾತೆ ಸಚಿವ ಕೆ.ಟಿ.ರಾಮ ರಾವ್ (Minister KT Ram Rao) ಅವರು ತೆಲಂಗಾಣದ ವೆಸ್ಟ್ ಮಾರೆಡ್ ಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಿದರು. ಅದೇ ದಿನ ತೆಲಂಗಾಣ ರಾಜ್ಯದ ಬಹುತೇಕ ಶಾಲೆಗಳಲ್ಲಿ ಕಾರ್ಯಕ್ರಮ ಶುರು ಶುರುವಾಗಿದೆ.
ಅದು ಶಾಲಾ ಮಕ್ಕಳ ಜೊತೆ ಸಚಿವರು ಕೂಡ ಕುಳಿತು ಊಟ ಮಾಡಿದರು ಹಾಗೂ ಮಕ್ಕಳನ್ನು ಜೊತೆ ಊಟದ ರುಚಿ ರುಚಿ-ಶುಚಿ ಬಗ್ಗೆ ಪ್ರಶ್ನೆ ಮಾಡಿ ತಿಳಿದುಕೊಂಡರು. ಬಳಿಕ ಕಾರ್ಯಕ್ರಮದ ವೇದಿಕೆ ಮೇಲೆ ಮಾತನಾಡಿದ ಸಚಿವ ಕೆ ಟಿ ರಾಮರಾವ್ ಅವರು ಈ ಯೋಚನೆ ಮೂಲಕ ತೆಲಂಗಾಣ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 23 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ.
ಅಕ್ಕ ತಂಗಿಯರ ಆರೈಕೆಯಷ್ಟೇ ಸಾಕೇನಗೆ ಶಕ್ತಿ ಯೋಜನೆ ಬಗ್ಗೆ ಹರ್ಷ ವ್ಯಕ್ತ ಪಡಿಸಿ ವಿಡಿಯೋ ರಿಲೀಸ್ ಮಾಡಿದ – ಸಿದ್ದರಾಮಯ್ಯ
ಪಂಚಾಯತ್ ರಾಜ್ ಇಲಾಖೆಯಿಂದ ನಡೆಯುವ ಶಾಲೆಗಳು ಸೇರಿದಂತೆ ರಾಜ್ಯದಾದ್ಯಂತ ಇರುವ 27,147 ಶಾಲೆಗಳಲ್ಲಿಯೂ ದಸರಾ ರಜೆಯ ನಂತರ 1 ರಿಂದ 10 ನೇ ತರಗತಿಯ ಎಲ್ಲಾ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೂ ಯೋಜನೆಯನ್ನು ವಿಸ್ತರಿಸಲಾಗುವುದು ಎಂದರು.
ಈ ಯೋಜನೆಯ ಮೂಲಕ ಪೌಷ್ಠಿಕಾಂಶವುಳ್ಳ ಹಾಗೂ ರುಚಿಕಟ್ಟಾದ ಉಪಹಾರ ನೀಡಲಾಗುವುದು ಸಂಬಂಧಿಸಿದ ಅಧಿಕಾರಿಗಳು ಇದರ ಬಗ್ಗೆ ಹೆಚ್ಚು ಗಮನ ತೋರಿ ಆಹಾರದ ಗುಣಮಟ್ಟ ಕಾಪಾಡಬೇಕು, ಅದಕ್ಕಾಗಿ ನಿಯಮಿತವಾಗಿ ಹಾಗೂ ನಿರಂತರವಾಗಿ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ದೇವಸ್ಥಾನಕ್ಕೆ ಆಫ್ರಿಕಾ ಕ್ರಿಕೆಟ್ ಆಟಗಾರ ಭೇಟಿ, ಹೆಮ್ಮೆಯ ಸನಾತನಿ ಎಂದ ಭಾರತೀಯರು.!
ನಂತರ ವೇದಿಕೆಯಲ್ಲಿದ್ದ ತೆಲಂಗಾಣದ ಆರೋಗ್ಯ ಸಚಿವರಾದ ಶ್ರೀ ಹರೀಶ್ ರಾವ್ (Shee Harish Rao) ಅವರು ಸಹ ಮಾತನಾಡಿ ಮುಖ್ಯಮಂತ್ರಿಯ ಉಪಹಾರ ಯೋಜನೆ ಮಾದರಿ ಯೋಜನೆಯಾಗಿದೆ, ದೇಶದಲ್ಲಿ ತೆಲಂಗಾಣ ರಾಜ್ಯದಲ್ಲಿಯೇ ಇಂತಹದೊಂದು ವಿಭಿನ್ನ ಪ್ರಯತ್ನವನ್ನು ಮಾಡಲಾಗಿದೆ. ಸರ್ಕಾರಿ ಶಾಲೆಗಳಿಗೆ ಖಂಡಿತವಾಗಿಯೂ ಇಂತಹ ಒಂದು ಯೋಜನೆ ಅವಶ್ಯಕತೆ ಇತ್ತು ಯಾಕೆಂದರೆ, ಸರ್ಕಾರಿ ಶಾಲೆಗೆ ಬಯಸುವವರು ಹೆಚ್ಚಾಗಿ ಬಡವರ ಮಕ್ಕಳಾಗಿರುತ್ತಾರೆ.
ತಂದೆ-ತಾಯಿಗಳು ಮಕ್ಕಳ ಆಹಾರದ ಬಗ್ಗೆ ಯೋಚಿಸದೆ ಸರಿಯಾದ ಸಮಯಕ್ಕೆ ಶಾಲೆಗೆ ಕಳುಹಿಸಲು ಈ ಯೋಜನೆ ಅನಕೂಲವಾಗುತ್ತದೆ. ಯೋಜನೆಯಿಂದ ವಿದ್ಯಾರ್ಥಿಗಳಿಗೆ ಪ್ರತಿದಿನ ಪೌಷ್ಟಿಕ ಆಹಾರ ಸಿಗುತ್ತದೆ, ಇದು ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ಕೂಡ ತಪ್ಪಿಸುತ್ತದೆ.
ಮೂರು ವರ್ಷಗಳ ನಂತರ ಮತಗಳ ಮರು ಎಣಿಕೆ, ಮತ್ತೆ ಗೆದ್ದ ಗ್ರಾಮ ಪಂಚಾಯತಿ ಸದಸ್ಯೆ.!
ಸಾಮಾನ್ಯವಾಗಿ ಪರಿಸ್ಥಿತಿ ಹೇಗಿದೆಯೆಂದರೆ ಪ್ರತಿ 10 ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಮಾತ್ರ ಉಪಹಾರ ಸೇವಿಸಿ ಶಾಲೆಗೆ ಬಂದರೆ ಉಳಿದವರು ಖಾಲಿ ಹೊಟ್ಟೆಯಲ್ಲಿ ಶಾಲೆಗಳಿಗೆ ಬರುತ್ತಿದ್ದರು. ಶಾಲಾ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ರೀತಿ ಸೂಕ್ಷ್ಮ ವಿಚಾರಗಳು ನನಗೆ ತಿಳಿದು ಬಂತು. ಇಂತಹ ವಿದ್ಯಾರ್ಥಿಗಳ ನೋವನ್ನು ಅರ್ಥ ಮಾಡಿಕೊಂಡ ಯೋಜನೆ ಸಿದ್ಧಪಡಿಸಿದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರಿಗೆ ಕೃತಜ್ಞತೆಗಳು ಎಂದರು.