ಸಾಮಾನ್ಯವಾಗಿ ತಮ್ಮ ನೆಚ್ಚಿನ ನಟರ ಸಿನಿಮಾಗಳು ಯಶಸ್ವಿಯಾಗಲೆಂದು ಅವರ ಅಭಿಮಾನಿಗಳು ಇಂತಹ ಹರಕೆಗಳನ್ನು ಹೊರುತ್ತಾರೆ. ಅದರಲ್ಲಿಯೂ ಕರಾನಾಟಕದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಸೆಲೆಬ್ರಿಟಿಗಳ ಸ್ಟಾರ್ ದರ್ಶನ್ (Darshan) ಅವರ ಅಭಿಮಾನಿಗಳಂತೂ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಅವರ ಸಿನಿಮಾ ರಿಲೀಸ್ ದಿನ ಇನ್ನು ಅನೇಕ ಸಾಹಸಗಳನ್ನು ಮಾಡುತ್ತಾ ವಿಚಿತ್ರ ಹರಕೆಗಳನ್ನು ಕೋರಿಕೊಳ್ಳುತ್ತಾರೆ.
ಈ ರೀತಿ ಪ್ರೀತಿಯ ಹೀರೋಗಾಗಿ ದೊಡ್ಡ ದೊಡ್ಡ ಕಟೌಟ್ ಹಾಕುವುದು, ಹಾಲಿನ ಅಭಿಷೇಕ ಮಾಡುವುದು, ಹಾರ ಹಾಕುವುದು, ಕರ್ಪೂರ ಹಚ್ಚುವುದು, ಕಾಯಿ ಹೊಡೆಯುವುದು ಇದ್ದಿದ್ದೆ. ಆದರೆ ಇಂದು ಒಂದು ವಿಚಿತ್ರ ಪ್ರಕರಣಕ್ಕೆ ಅಭಿಮಾನ ಸಾಕ್ಷಿಯಾಗಿದೆ. ಅದೇನೆಂದರೆ ನಟ ದರ್ಶನ್ ಅವರನ್ನು ನಿಂದಿಸಿದವರನ್ನು ಹುಡುಕಿ ಅವರ ಕೈಯಿಂದ ಕೈ ಮೇಲೆ ಕರ್ಪೂರ ಹಚ್ಚಿಸಿ ಆತ ಕ್ಷಮೆ ಯಾಚಿಸುವಂತೆ ಮಾಡಿದ್ದಾರೆ ದರ್ಶನ್ ಫ್ಯಾನ್ಸ್.
ಬಿಗ್ ಬಾಸ್ ಮನೆಯಿಂದ ವರ್ತೂರ್ ಸಂತೋಷ್ ಔಟ್.! ಬೇಸರ ವ್ಯಕ್ತ ಪಡಿಸಿದ ಅಭಿಮಾನಿಗಳು.!
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಬಗ್ಗೆ ಬಹಳ ನೆಗೆಟಿವ್ ಆಗಿ ಮಾತನಾಡಿದ್ದ ವ್ಯಕ್ತಿಗಳನ್ನು ಕರೆ ತಂದು ದರ್ಶನ್ ಅವರ ಕಾಟೇರ ಸಿನಿಮಾ (Katera) ಪೋಸ್ಟರ್ ಮುಂದೆ ಕೈಯಲ್ಲಿ ಕರ್ಪೂರ ಹಚ್ಚಿಸಿ ಕ್ಷಮೆ ಕೇಳಿಸಿದ್ದಾರೆ ದರ್ಶನ್ ಫ್ಯಾನ್ಸ್ ಮತ್ತು ಮತ್ತೊಂದು ಕಡೆಯಲ್ಲಿ ಇದೇ ರೀತಿ ಪ್ರಕರಣ ನಡೆದಿದ್ದು ಅಲ್ಲೂ ಕೂಡ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ರಾಜ ರೋಷವಾಗಿ ನಮಗೆ ಪುನೀತ್ ರಾಜಕುಮಾರ್ ಬಾಸ್ ಸಾವಿನ ಸಿಂಪತಿ ಇದೆ.
ನಾವು ನಿಮ್ಮ ಹೀರೋನ ಟ್ರೊಲ್ ಮಾಡಿದರು, ಬೈದರು, ನೀವು ಏನು ಮಾಡಲು ಆಗುವುದಿಲ್ಲ ಎಂದು ಅವಾಜ್ ಹಾಕಿದ್ದ ಪುನೀತ್ ಅಭಿಮಾನಿಗಳನ್ನು ಪತ್ತೆ ಹಚ್ಚಿ ಎಳೆದುಕೊಂಡು ಗೂಸ ಕೊಟ್ಟು ಡಿ ಬಾಸ್ ಫೋಟೋಕ್ಕೆ ಪೂಜೆ ಮಾಡಿಸಿದ್ದಾರೆ ದರ್ಶನ್ ಅಭಿಮಾನಿಗಳು ಈ ಎರಡು ಘಟನೆಗೆ ಸಂಬಂಧಿಸಿದಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿವೆ.
ಇದೊಂದು ಗೆಟಪ್ ಗಾಗಿ ದರ್ಶನ್ ಮಧ್ಯಾಹ್ನದ ಸಮಯ ಊಟನೇ ಮಾಡ್ತ ಇರ್ಲಿಲ್ಲ.! ಕಾಟೇರ ಸಕ್ಸಸ್ ಬಿಚ್ಚಿಟ್ಟ ನಿರ್ದೇಶಕ ತರುಣ್.!
ಇದಕ್ಕೆ ಪ್ರತಿಯಾಗಿ ಇಂತಹದೆ ಮತ್ತೊಂದು ಪ್ರಕರಣದ ಬೆಳಕಿಗೆ ಬಂದು ಅದರ ಸಂಬಂಧಿತ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ ಮುಂದೆ ನಿಲ್ಲಿಸಿ ವ್ಯಕ್ತಿಯೊಬ್ಬನ ಬಳಿ ಪುನೀತ್ ರಾಜಕುಮಾರ್ ಅವರ ಬಗ್ಗೆ ತಪ್ಪು ಮಾತನಾಡಿದ್ದಕ್ಕಾಗಿ ಕ್ಷಮೆ ಕೇಳಿಸಿ ಇನ್ನು ಮುಂದೆ ಈ ರೀತಿ ಎಂದು ಮಾಡುವುದಿಲ್ಲ ಎಂದು ಒಪ್ಪಿಕೊಳ್ಳುವ ರೀತಿ ಮಾಡಲಾಗಿದೆ.
ಅದ್ಯಾಕೋ ಏನೋ ದರ್ಶನ ಮತ್ತು ಪುನೀತ್ ಅವರ ನಡುವೆ ಅಷ್ಟು ಒಳ್ಳೆಯ ಭಾಂದವ್ಯ ಇತ್ತಾದರೂ ಹಾಗೂ ದರ್ಶನ್ ಕುಟುಂಬ ಮತ್ತು ದೊಡ್ಮನೆ ಮಧ್ಯೆ ಅಗಾಧವಾದ ನಂಬಿಕೆ ಪ್ರೀತಿ ಸ್ನೇಹ ಸಂಬಂಧ ಎಲ್ಲವೂ ಇದ್ದರೂ ದಚ್ಚು ಮತ್ತು ಅಪ್ಪು ಫ್ಯಾನ್ಸ್ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರಿಗೊಬ್ಬರು ವಿರುದ್ಧವಾಗಿ ಕಾಮೆಂಟ್ ಮಾಡುವ ಮೂಲಕ ಕಿತ್ತಾಡಿಕೊಳ್ಳುತ್ತಿರುತ್ತಾರೆ.
ಕಳೆದ ಬಾರಿ ಕ್ರಾಂತಿ ಸಿನಿಮಾ ರಿಲೀಸ್ ಮೇಲೆ ಆದ ಕಹಿ ಘಟನೆ ಇನ್ನು ಮರೆಯಲು ಸಾಧ್ಯವಾಗಿಲ್ಲ. ಆ ಘಟನೆಯನ್ನು ಯಾರು ಉದ್ದೇಶಪೂರ್ವಕವಾಗಿ ಮಾಡಿದ್ದಾರೋ ಗೊತ್ತಿಲ್ಲ ಆದರೆ ದರ್ಶನ್ ಅಭಿಮಾನಿಗಳ ಬೆರಳು ಪುನೀತ್ ಅಭಿಮಾನಿಗಳತ್ತ ತೋರಿಸುತ್ತಿತ್ತು. ಬಳಿಕ ಶಿವಣ್ಣ ದರ್ಶನ್ ಎಲ್ಲರೂ ಎಷ್ಟೇ ಕೇಳಿಕೊಂಡರೆ ಫ್ಯಾನ್ಸ್ ಫಾರ್ ಮಾತ್ರ ನಿಲ್ಲುತ್ತಿಲ್ಲ ಮತ್ತು ನಟರುಗಳು ಎಷ್ಟು ಬುದ್ಧಿ ಹೇಳಿದರು ಫ್ಯಾನ್ಸ್ ಕೇಳುತ್ತಿಲ್ಲ.
ಹೀರೋಗಳು ಕೇಳಿಕೊಳ್ಳುವುದು ಒಂದೇ, ನೀವು ನಿಜವಾಗಿಯೂ ಅಭಿಮಾನಿಗಳಾಗಿದ್ದರೆ ಕನ್ನಡ ಚಿತ್ರರಂಗಕ್ಕೆ ಸಪೋರ್ಟ್ ಮಾಡಿ ಈ ಹುಚ್ಚಾಟಗಳನ್ನು ಬಿಡಿ ಎಂದು ಆದರೂ ಈ ಕೋಲ್ಡ್ ಫಾರ್ ನಡೆಯುತ್ತಲೇ ಇರುತ್ತದೆ ಆಗಾಗ ಸ್ಪೋಟಿಸಿ ಸುದ್ದಿ ಆಗುತ್ತವೆ. ಇನ್ನಾದರೂ ಫ್ಯಾನ್ಸ್ ವಾರ್ ಕಡಿಮೆಯಾಗಲಿ ಎನ್ನುವುದು ನಮ್ಮ ಅಂಕಣದ ಆಶಯ.
https://x.com/RDH_Official__/status/1746081958890021183?t=04pXRJ_vLaAtZn38AkwWZw&s=08