ನಟಿ ಶಕೀಲ (Shakhila) ಹೆಸರನ್ನು ಪ್ರತಿಯೊಬ್ಬರು ಕೂಡ ಕೇಳಿರುತ್ತಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹೀಗೆ ಸೌತ್ ಇಂಡಿಯಾದ ಎಲ್ಲಾ ಭಾಷೆಗಳ ಸಿನಿಮಾದಲ್ಲೂ ಬಣ್ಣ ಹಚ್ಚಿರುವ ಇವರು ಮಾದಕ ಪಾತ್ರಗಳಿಂದಲೇ ಗುರುತಿಸಿಕೊಂಡಿದ್ದಾರೆ. ಬಣ್ಣದ ಪ್ರಪಂಚದಲ್ಲಿ ಸಾಕಷ್ಟು ಹೆಸರು ಹಾಗೂ ಹಣ ಗಳಿಸಿರುವ ಇವರು ಅಷ್ಟೇ ಪ್ರಮಾಣದ ನೋ’ವು ಕೂಡ ತಿಂದಿದ್ದಾರೆ.
ಇವರು ಸಿನಿಮಾದಲ್ಲಿ ಅಭಿನಯಿಸಿದರು ಅಥವಾ ಪಾತ್ರಗಳಲ್ಲಿ ಕಾಣಿಸಿಕೊಂಡರು ಎನ್ನುವುದಕ್ಕಿಂತ ಇವರನ್ನು ನಿರ್ಮಾಪಕರು ಬಳಸಿಕೊಂಡರು ಎಂದೇ ಹೇಳಬಹುದು ಯಾಕೆಂದರೆ ಬಹುತೇಕ ಇವರಿಗೆ ಸಿಕ್ಕಿದ್ದು ಇಂತಹ ಪಾತ್ರಗಳೇ. ಒಂದು ಕಾಲದಲ್ಲಿ ಇವರ ಈ ಖ್ಯಾತಿ ಹೇಗಿತ್ತು ಎಂದರೆ ಯಾವುದೇ ನಿರ್ಮಾಪಕ ಲಾಸ್ ಆಗುತ್ತಿದ್ದರು ಶಕೀಲಾ ಅವರನ್ನು ಸಿನಿಮಾಗೆ ಹಾಕಿಕೊಂಡರೆ ಸುಧಾರಿಸಿಕೊಳ್ಳುತ್ತಿದ್ದರಂತೆ.
ಈ ರೀತಿ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿರುತ್ತಿದ್ದ ಶಕೀಲ ಈಗಲೂ ಕೂಡ ಅಷ್ಟೇ ಬೇಡಿಕೆ ಉಳಿಸಿಕೊಂಡಿದ್ದಾರೆ ಮತ್ತು ಈಗ ಹಿರಿತೆರೆಯಿಂದ ಕಿರುತೆರೆ ಕಡೆ ಮುಖ ಮಾಡಿರುವ ಇವರು ರಿಯಾಲಿಟಿ ಶೋ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಏನೆಂದರೆ, ಇವರು ಕನ್ನಡದ ಬಿಗ್ ಬಾಸ್ ಸೀಸನ್ (Bigboss Kannada) ನಲ್ಲಿಯೂ ಕೂಡ ಕಂಟೆಸ್ಟೆಂಟ್ ಆಗಿ ಭಾಗಿಯಾಗಿದ್ದರು.
ಶಕೀಲಾ ಅವರು ಎಷ್ಟೇ ಮಟ್ಟಕ್ಕೆ ಹೆಸರು ಮಾಡಿದರು ವೈಯುಕ್ತಿಕ ಜೀವನದಲ್ಲಿ ಅವರಿಗೆ ಆಗಿರುವಂತಹ ನೋ’ವುಗಳನ್ನು ಮರೆಯಲಾಗುತ್ತಿಲ್ಲವಂತೆ. ಅದೆಷ್ಟೇ ದುಡ್ಡು ಮಾಡಿದ್ದರು ಹಳೆಯ ಕಹಿ ಘಟನೆಗಳು ಇವರನ್ನು ಕೆಣಕುತ್ತಲೇ ಇರುತ್ತವೆಯಂತೆ. ಯಾಕೆಂದರೆ ಈ ನಟಿಯು ಜೀವನದಲ್ಲಿ ಅಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಈಗ ಇದೆಲ್ಲವನ್ನು ನೆನೆದು ಮತ್ತೊಮ್ಮೆ ಸಂದರ್ಶನದಲ್ಲಿ ನೆನಪಿನ ಬುತ್ತಿ ತೆರೆದಿಟ್ಟಿದ್ದಾರೆ.
ಈ ಸಮಯದಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ಅವರು ತಮ್ಮ ಮೊದಲ ಪ್ರೇಮದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಆತ ಯಾರು ಎಂದು ನಾನು ಹೇಳಲು ಇಷ್ಟಪಡುವುದಿಲ್ಲ. ನಾವಿಬ್ಬರಕ ಪರಸ್ಪರ ಪ್ರೀತಿಸುತ್ತಿದ್ದೆವು, ಆದರೆ ನಮ್ಮ ಪ್ರೀತಿ ನಡುವೆ ಜಾತಿ ಅಡ್ಡಿ ಬಂದಿತು. ನಾನು ಅವನನ್ನೇ ಮದುವೆ ಆಗಬೇಕು ಎಂದುಕೊಂಡಿದ್ದೆ, ಅದೇ ರೀತಿ ಆಗಿದ್ದರೆ ಚೆನ್ನಾಗಿರುತ್ತಿತ್ತು.
ಆದರೆ ಮದುವೆ ಹಂತಕ್ಕೆ ಬಂದಾಗ ಇಬ್ಬರ ಕುಟುಂಬಕ್ಕೂ ತಿಳಿದಾಗ ಇಬ್ಬರೂ ಒಪ್ಪಲಿಲ್ಲ. ಅದರಲ್ಲೂ ಅವರ ಮನೆಯಲ್ಲಿ ಈ ವಿಚಾರ ಬಹಳ ದೊಡ್ಡ ಮಟ್ಟಕ್ಕೆ ಮನಸ್ತಾಪ ತರುತ್ತಾ ಹೋಯಿತು. ಯಾಕೆಂದರೆ ನಾನು ಮುಸ್ಲಿಂ ಆಗಿದ್ದೆ, ಆತ ಹಿಂದೂ ಆಗಿದ್ದ ಕೊನೆಗೆ ಎಷ್ಟೇ ಪ್ರಯತ್ನ ಪಟ್ಟರು ಕುಟುಂಬದಲ್ಲಿ ಒಪ್ಪದೆ ಇದ್ದಾಗ ಆತ ಬಂದು ನನ್ನ ಬಳಿ ಇರುವುದನ್ನು ಹೇಳಿಕೊಂಡ ಮತ್ತು ತನ್ನ ಮನೆಯಲ್ಲಿ ತನಗೆ ಬೇರೆ ಮದುವೆ ಮಾಡಲು ರೆಡಿ ಮಾಡಿರುವುದನ್ನು ಹೇಳಿಕೊಂಡ.
ನಾನು ಅವನನ್ನು ತಡೆಯಲು ಇಷ್ಟಪಡಲಿಲ್ಲ. ಯಾಕೆಂದರೆ ಎಲ್ಲೇ ಇದ್ದರೂ ಕೂಡ ಪ್ರೀತಿಸಿದವರು ಚೆನ್ನಾಗಿರಬೇಕು ಎಂದು ಬಯಸಬೇಕು ಹೊರತು ಅವರಿಗೆ ಕಷ್ಟ ಕೊಡಬಾರದು ಬೇಜಾರು ಮಾಡಬಾರದು ಎಂದು ಸುಮ್ಮನಾದೆ ಈಗ ಅವನ ಹೆಸರನ್ನು ಹೇಳುವುದರಿಂದ ಆತನ ಬದುಕನ್ನು ಹಾಳು ಮಾಡಿದ ರೀತಿ ಆಗುತ್ತದೆ.
ಹಾಗಾಗಿ ಅವರ ಹೆಸರನ್ನು ಹೇಳಲು ಇಷ್ಟಪಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ನಂತರ ಇಂತಹದೇ ವಿಚಾರವಾಗಿ ಅನೇಕ ಬಾರಿ ನಟಿ ಮೋ’ಸ ಹೋಗಿದ್ದಾರೆ. ಹೀಗೆ ಎಲ್ಲಾ ನೋವನ್ನು ತಿಂದ ನಟಿ ಶಕೀಲಾರವರ ತುಳಿದ ಮುಳ್ಳಿನ ಹಾದಿಯಾಗಿದ್ದರೂ ಸಿನಿ ಪ್ರಿಯರ ಪ್ರೀತಿಯೊಂದೇ ಅವರು ಸಂಪಾದಿಸಿದ ನಿಜವಾದ ಪ್ರೀತಿಯಾಯಿತು.