ರಾಜ್ಯದಲ್ಲಿ ಉಂಟಾಗಿರುವ ಬರದ ಪರಿಸ್ಥಿತಿ, ಕುಸಿದ ಮಳೆಯ ಪ್ರಮಾಣ ಮತ್ತೊಮ್ಮೆ ಕಾವೇರಿ ನದಿ (Cauvery contreversy) ನೀರಿನ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಮತ್ತೊಮ್ಮೆ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿಗಾಗಿ ಉಗ್ರ ಹೋರಾಟ ಶುರುವಾಗಿದ್ದು ತಕ್ಷಣವೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ರೈತ ಸಂಘಗಳು ಕನ್ನಡ ಪರ ಸಂಘಟನೆಗಳು ಹೋರಾಟ (Strike) ನಡೆಸುತ್ತಿದ್ದಾರೆ.
ರಾಜ್ಯದ ಪರಿಸ್ಥಿತಿ ದಯಾಹೀನವಾಗಿದ್ದೆ ಈ ಸಂದರ್ಭದಲ್ಲಿ ಕೂಡ ಆದೇಶದಂತೆ ನೀರು ಹರಿಸಬೇಕು ಎಂದು ಹೇಳುತ್ತಿರುವುದು ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ರಾಜ್ಯ ಸರ್ಕಾರವು ಇಲ್ಲಿನ ಪರಿಸ್ಥಿತಿಯನ್ನು ವಿವರಿಸುವುದರಲ್ಲಿ ವಿಫಲವಾಗಿದೆ ಇಂದು ಸರ್ಕಾರದ ವಿರುದ್ಧ (against government) ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಂದೇ ಒಂದು ಸೆಂಚುರಿ 8 ರೆಕಾರ್ಡ್ ಪುಡಿಪುಡಿ, ಗಿಲ್ ಅಬ್ಬರಕ್ಕೆ ವಿಶ್ವದ ದಿಗ್ಗಜ ಕ್ರಿಕೆಟಿಗರ ದಾಖಲೆಗಳೆ ಬ್ರೇಕ್.!
ಕರ್ನಾಟಕದಲ್ಲಿರುವ ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಹೋರಾಟಗಾರರ ಪರವಾಗಿ ನಿಲ್ಲಬೇಕು ಆದರೆ ಮುಖ್ಯವಾಗಿ ಈ ವಿಚಾರದಲ್ಲಿ ದನಿಯಾಗಬೇಕಿದ್ದ ಸ್ಯಾಂಡಲ್‌ವುಡ್ ತಾರೆಯರು ಸುಮ್ಮನಿದ್ದಾರೆ ಎಂದು ಸ್ಟಾರ್ ಗಳ (Sandalwood stars) ಮೇಲೆ ಆಕ್ರೋಶ ವ್ಯಕ್ತವಾಗಿತ್ತು.
ನೇರವಾಗಿ ದರ್ಶನ್, ಸುದೀಪ್, ಯಶ್, ಶಿವಣ್ಣ ಹೆಸರನ್ನು ಹೇಳಲಾಗಿತ್ತು ರಾಜ್‌ಕುಮಾರ್ ಅವರಂತೆ ಜನರ ಬಗ್ಗೆ ರೈತರ ಬಗ್ಗೆ ಕರ್ನಾಟಕದ ನಾಡು ನೆಲ ಜಲ ಭಾಷೆ ಬಗ್ಗೆ ಅಭಿಮಾನಿ ಇಲ್ಲ, ಇರುವುದೆಲ್ಲವೂ ಸಿನಿಮಾದಲ್ಲಿ ಹಣ ಗಳಿಸಲು ಮಾತ್ರ ಎಂದು ದೂರಲಾಗಿತ್ತು.
ಈಗ ದರ್ಶನ್ (Darshan) ಕಲಾವಿದರ ಬಗ್ಗೆ ಮಾತಾಡಿದವರಿಗೆ ತಿರುಗೇಟು ನೀಡಿದ್ದಾರೆ. ಕಾವೇರಿ ವಿಚಾರದಲ್ಲಿ ನಿಮ್ಮ ಕಣ್ಣಿಗೆ ನಾವು ನಾಲ್ಕು ಮಂದಿ ಮಾತ್ರ ಕಾಣುವುದಾ? ಬೇರೆ ಯಾರು ಕಾಣುವುದಿಲ್ಲವಾ? ಎಂದು ಪ್ರಶ್ನಿಸುವ ಮೂಲಕ ನಟ ದರ್ಶನ್, ಕಲಾವಿದರ ಪರ ಬ್ಯಾಟ್ ಬೀಸಿದ್ದಾರೆ.
ಬಂಡೂರು ಪಟ್ಟಣದಲ್ಲಿ ಗಂಗಾ ಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ಕೃಷಿಕರಿಗೆ 100 ಹಳ್ಳಿಕಾರ್ ತಳಿಯ ಗೋದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಟ ಕಾವೇರಿ ಹೋರಾಟ ಬಂದಾಗಲೆಲ್ಲಾ ದರ್ಶನ್, ಸುದೀಪ್, ಶಿವಣ್ಣ, ಯಶ್ ಮತ್ತೊಬ್ಬರು ಇವರು ಮಾತ್ರ ಕಾಣಿಸೋದಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮ್ಮ ಜಲ, ನಮ್ಮ ಹಕ್ಕು CM ಗೆ ಮನವಿ ಮಾಡಿದ ಕಿಚ್ಚ ಸುದೀಪ್.! ಕಾವೇರಿ ಹೋರಾಟಕ್ಕೆ ಬೆಂಬಲ
ಕಾವೇರಿ ಚಳವಳಿಗೆ ಕನ್ನಡ ಚಿತ್ರರಂಗದ ಸ್ಟಾರ್ಗಳು ಬರ್ತಿಲ್ಲ ಎನ್ನುವ ಆರೋಪಕ್ಕೆ ತಿರುಗೇಟು ನೀಡಿರುವ ದರ್ಶನ್ ಉದಾಹರಣೆಯೊಂದನ್ನು ನೀಡಿದ್ದಾರೆ. ಇತ್ತೀಚೆಗೆ ತಮಿಳು ಸಿನಿಮಾ ಒಂದು ಬಿಡುಗಡೆಯಾಯಿತು. ಆ ಸಿನಿಮಾವನ್ನು ಕನ್ನಡದ ವಿತರಕರೊಬ್ಬರು ಕರ್ನಾಟಕದಲ್ಲಿ ತಂದು ಹಂಚಿಕೆ ಮಾಡಲು 6 ಕೋಟಿಗೆ ಖರೀದಿ ಮಾಡಿದ್ದರು, ಅದರಿಂದ ಅವರು ಮಾಡಿದ ಲಾಭ ಎಷ್ಟು ಗೊತ್ತಾ? ಸುಮಾರು 36 ರಿಂದ 37 ಕೋಟಿ.
ಕನ್ನಡದವರು ತಮಿಳು ಸಿನಿಮಾಗೆ 37 ಕೋಟಿ ರೂಪಾಯಿ ಕೊಂಡೊಯ್ಯಲು ಬಿಟ್ಟು ಈಗ, ಕನ್ನಡ ಕಲಾವಿದರನ್ನು ಮಾತ್ರ ಹೋರಾಟಕ್ಕೆ ಕರೆಯೋದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು. ಎಲ್ಲೋ ಇದ್ದು ಏನೋ ಮಾಡಿದವರಿಗೆ ನೂರಾರು ಕೋಟಿ ಕೊಡ್ತೀರಾ ಅದನ್ನೇ ಕನ್ನಡ ಸಿನಿಮಾಗೆ ಯಾಕೆ ಕೊಡಲ್ಲ ಎಂದು ಪ್ರಶ್ನೆ ಮಾಡಿದ ಅವರು ದೊಡ್ಡ ನಟರು ಅವರ ವಿಷಯ ನಾನು ಮಾತನಾಡುತ್ತಿಲ್ಲ.
ನಮ್ಮ ಜಲ, ನಮ್ಮ ಹಕ್ಕು CM ಗೆ ಮನವಿ ಮಾಡಿದ ಕಿಚ್ಚ ಸುದೀಪ್.! ಕಾವೇರಿ ಹೋರಾಟಕ್ಕೆ ಬೆಂಬಲ
ಆದರೆ ಕರ್ನಾಟಕದಿಂದ 35-36 ಕೋಟಿ ಹೋಯ್ತಲ್ಲಾ ಸ್ವಾಮಿ, ಆ ದುಡ್ಡು ಕರ್ನಾಟಕದ್ದು ಅಲ್ವಾ? ತಮಿಳುನವರು ಬಂದು ಇಲ್ಲಿ ಸಿನಿಮಾ ನೋಡಿದ್ದರಾ ಅವರನ್ನೇಕೆ ಪ್ರಶ್ನಿಸುವುದಿಲ್ಲ ಎಂದು ಗರಂ ಆಗಿದ್ದಾರೆ. ನಾನು ಕೂಡ ರೈತ ನನ್ನ ಜಮೀನಿಗೂ ಕಾವೇರಿ ನೀರಿನಿಂದಲೇ ಬೆಳೆ ಬರುವುದು ನಾನು ಕೂಡ ಹಸುಗಳನ್ನು ಸಾಕುತ್ತೇನೆ ನೀರಿನ ಬೆಲೆ ನನಗೂ ಗೊತ್ತಿದೆ ಎಲ್ಲರೂ ಪ್ರತಿಭಟನೆ ಮಾಡೋಣ ಆದರೆ ಪರಿಹಾರ ಕೊಡುವುದು ಯಾರು ಎಂದಿದ್ದಾರೆ.
ಇದಕ್ಕೂ ಮುನ್ನ ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ ಎಂದು ಟ್ವೀಟ್ ಮಾಡಿದ್ದರು.
ಆರೋಗ್ಯ ಲೆಕ್ಕಿಸದೆ ಈ ವಯಸ್ಸಿನಲ್ಲೂ ಕಾವೇರಿ ಹೋರಾಟ ಮಾಡಲು ಮಂಡ್ಯಕ್ಕೆ ಹೊರಟ ನಟಿ ಲೀಲಾವತಿ.!