Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಸುಪ್ರೀಂ ಕೋರ್ಟ್ ಆದೇಶ ಕೊಟ್ಟರು ಒಂದೇ ಒಂದು ಹನಿ ನೀರನ್ನು ತಮಿಳುನಾಡಿಗೆ ಬಿಡದ ಕರ್ನಾಟಕದ ಏಕೈಕ ನಾಯಕ ಯಾರು ಗೊತ್ತಾ.? ಎಲ್ಲರನ್ನು ಎದುರು ಹಾಕಿಕೊಂಡು ಇವರು ಗೆದ್ದಿದ್ದು ಹೇಗೆ ನೋಡಿ.!

Posted on September 28, 2023 By Admin No Comments on ಸುಪ್ರೀಂ ಕೋರ್ಟ್ ಆದೇಶ ಕೊಟ್ಟರು ಒಂದೇ ಒಂದು ಹನಿ ನೀರನ್ನು ತಮಿಳುನಾಡಿಗೆ ಬಿಡದ ಕರ್ನಾಟಕದ ಏಕೈಕ ನಾಯಕ ಯಾರು ಗೊತ್ತಾ.? ಎಲ್ಲರನ್ನು ಎದುರು ಹಾಕಿಕೊಂಡು ಇವರು ಗೆದ್ದಿದ್ದು ಹೇಗೆ ನೋಡಿ.!

 

ಸೆಪ್ಟೆಂಬರ್ 21ರಂದು ತಮಿಳುನಾಡಿಗೆ ನೀರು ಹರಿಸಿ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ, ಇದನ್ನು ವಿರೋಧಿಸಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ಭಾಗಗಳಲ್ಲಿ ಪ್ರತಿಭಟನೆಗಳು ಜೋರಾಗಿದೆ. ಸೆಪ್ಟೆಂಬರ್ 29ಕ್ಕೆ ಕರ್ನಾಟಕ ಬಂದ್ ಗೂ ಕೂಡ ಕರೆ ನೀಡಲಾಗಿದೆ.

ಕನ್ನಡಪರ ಸಂಘಟನೆಗಳು, ರೈತ ಸಂಘಗಳು ಈ ಹೋರಾಟಕ್ಕಿಳಿದು ಕಾವೇರಿ ವಿಚಾರದಲ್ಲಿ ಬಂಗಾರಪ್ಪನವರಂತೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಕೆಚ್ಚೆದೆಯ ನಾಯಕ ರಾಜ್ಯದಲ್ಲಿ ಇಲ್ಲವಲ್ಲ ಎಂದು ಕೂಗಿ ಹೇಳುತ್ತಿದ್ದಾರೆ. ಹಾಗಾದರೆ, ಬಂಗಾರಪ್ಪನವರು ಮತ್ತು ಕಾವೇರಿ ನೀರಿನ ವಿವಾದಕ್ಕೆ ಏನು ಸಂಬಂಧ ಎನ್ನುವುದನ್ನು ಅರಿಯದವರಿಗೆ ಈ ಅಂಕಣದಲ್ಲಿ ಅದರ ಕುರಿತು ಮಾಹಿತಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಕಾವೇರಿ ವಿವಾದ, ಪ್ರಧಾನಿ ಮಧ್ಯಸ್ಥಿಕೆಗೆ ದೇವೇಗೌಡರ ಪತ್ರ, ಪತ್ರ ಸ್ವಾಗತಿಸಿದ ಸಿದ್ದರಾಮಯ್ಯ.!

ಅದೇನೆಂದರೆ, ಎಲ್ಲರಿಗೂ ತಿಳಿದಿರುವಂತೆ ಕಾವೇರಿ ನದಿ ನೀರಿನ ವಿವಾದ ಇಂದು ನೆನ್ನೆಯದಲ್ಲ. ಮಳೆಯ ಕೊರತೆ ಉಂಟಾದ ಸಮಯದಲ್ಲೆಲ್ಲ ಈ ನದಿ ನೀರಿನ ಹಂಚಿಕೆ ವಿಚಾರ ಭುಗಿಲೇಳುತ್ತದೆ. ಈ ಹಿಂದೆ ಕೂಡ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಇಂತಹದೇ ಪರಿಸ್ಥಿತಿ ಎದುರಾಗಿತ್ತು.

ಆಗ ತೆಗೆದುಕೊಂಡ ದಿಟ್ಟ ನಿರ್ಧಾರ, ಕಾಡು ನೆಲ ಜಲದ ಬಗ್ಗೆ ಗಟ್ಟಿತನ, ರೈತಪರ ಹಾಗೂ ಜನಪರ ಕಾಳಜಿ ಇಂದು ಇಷ್ಟು ವರ್ಷಗಳಾದ ಬಳಿಕವೂ ಜನರ ಬಾಯಿಯಿಂದ ಕೊಂಡಾಡಿಸಿಕೊಳ್ಳುವಂತೆ ಮಾಡಿದೆ. ಅಂದಿನ ಆ ಪರಿಸ್ಥಿತಿಯ ವಿವರವನ್ನು ಈ ಅಂಕಣದ ಮೂಲಕ ವಿವರಿಸುತ್ತಿದ್ದೇವೆ 1991 ರಲ್ಲಿ ರಾಜ್ಯದಲ್ಲಿ ಎಸ್ ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದರು ಆ ವೇಳೆ ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿದ್ದವರು ಜಯಲಲಿತಾ.

ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿಯುವ ಅಭ್ಯಾಸ ಇದೆಯೇ? ಇದು ಎಷ್ಟು ಡೇಂಜರ್ ಯಾವೆಲ್ಲಾ ಕಾಯಿಲೆಗಳು ಬರುತ್ತವೆ ಗೊತ್ತಾ.?

ಆ ವರ್ಷದಲ್ಲೂ ಇದೇ ಪರಿಸ್ಥಿತಿ ಎದುರಾಗಿತ್ತು ಮಿಳುನಾಡು ಸರ್ಕಾರ, ತಮ್ಮ ರಾಜ್ಯದ ಕಾವೇರಿ ಕಣಿವೆಯ ಬೆಳೆಗಳು ಒಣಗುತ್ತಿವೆ, ಸಂಧಾನ ಸೂತ್ರದ ಪ್ರಕಾರ ಕರ್ನಾಟಕದಿಂದ ತಮಿಳುನಾಡಿಗೆ ಬರಬೇಕಾದ ಕಾವೇರಿ ನೀರನ್ನು ಹರಿಸುವಂತೆ ಸೂಚಿಸಬೇಕು ಎಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗಿತ್ತು. ಆಗ, ಪ್ರಾಧಿಕಾರವು ಎರಡೂ ರಾಜ್ಯಗಳ ವಾದವಿವಾದಗಳನ್ನು ಆಲಿಸಿ ಕರ್ನಾಟಕಕ್ಕೆ 205 TMC ನೀರು ಬಿಡುವಂತೆ ಸೂಚಿಸಿತ್ತು.

ಆದರೆ, ನಮ್ಮ ಹೆಮ್ಮೆಯ ಜನನಾಯಕ ಬಂಗಾರಪ್ಪನವರು ಅದನ್ನು ಒಪ್ಪಲಿಲ್ಲ. ಇದರ ಬಗ್ಗೆ ಸದನದಲ್ಲಿ ಚರ್ಚೆ ನಡೆಯಿತು. ಆಗ, ಸದನದಲ್ಲಿ ಭಾಷಣ ಮಾಡಿದ ಶಾಸಕ ವಾಟಾಳ್ ನಾಗರಾಜ್ ಅವರು ರಕ್ತ ಕೊಟ್ಟೇವು, ಆದರೆ, ಕಾವೇರಿ ಮಾತ್ರ ಬಿಡೆವು ಎಂದು ಘೋಷಿಸಿದರು. ಆ ನಂತರ ಮಾತನಾಡಿದ ರೈತ ಸಂಘದ ಪ್ರೊ. ನಂಜುಂಡಯ್ಯ, ಪ್ರಾಧಿಕಾರದ ಆದೇಶ ಕೇವಲ ಆದೇಶವಷ್ಟೇ, ಅದೇ ತೀರ್ಪಲ್ಲ.

ರೈತನಿಗೆ ಗುಡ್ ನ್ಯೂಸ್, ಜಮೀನಿನ ಪಹಣಿ ಪತ್ರ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಯಾವುದೇ ದಾಖಲೆ ಹೆಸರು ಬದಲಾಯಿಸಿಕೊಳ್ಳಬಹುದು.!

ತೀರ್ಪನ್ನು ಪಾಲಿಸಬಹುದು ಆದರೆ, ಆ ಆದೇಶಕ್ಕೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಲು ರಾಜ್ಯ ಸರ್ಕಾರಗಳಿಗೂ ಅಧಿಕಾರವಿರುತ್ತದೆ ಎಂದು ಸಲಹೆ ನೀಡಿದರು ಬಳಿಕ ಬಂಗಾರಪ್ಪನವರು ತಡ ಮಾಡದೆ ಮರು ದಿನವೇ ಕ್ಯಾಬಿನೆಟ್ ಸಭೆ ನಡೆಸಿ, ಪ್ರಾಧಿಕಾರದ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂಬ ಸುಗ್ರೀವಾಜ್ಞೆ ಜಾರಿಗೆ ತಂದರು ನಂತರ ನಡೆದದ್ದು ಇತಿಹಾಸವಾಯಿತು.

ಯಾರಿಂದ ಎಷ್ಟೇ ಒತ್ತಡ ಬಂದರೂ ಕಾವೇರಿಯ ಹನಿ ನೀರನ್ನು ತಮಿಳುನಾಡಿಗೆ ಹರಿಸಕೂಡದು ಎಂದು ಕಾವೇರಿ ನದಿಯ ಎಲ್ಲಾ ಅಣೆಕಟ್ಟುಗಳ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಸ್ಪಷ್ಟವಾದ ನೀಡಿದರು. ಆದರೆ, ಇದರ ವಿರುದ್ಧ ತಮಿಳುನಾಡು ಸರ್ಕಾರ, ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಹಾಕಿತು. ಆ ಸಮಯದಲ್ಲಿದ್ದ ಕೇಂದ್ರ ಸರ್ಕಾರವೇ ಈ ವಿವಾದದಲ್ಲಿ ಮಧ್ಯ ಪ್ರವೇಶಿಸಿ, ಪ್ರಾಧಿಕಾರವು ತಮಿಳುನಾಡಿಗೆ 205TMC ನೀಡುವಂತೆ ಮಾಡಿದ್ದ ಆದೇಶವನ್ನೇ ತನ್ನ ಗೆಜೆಟ್ ನಲ್ಲಿ ಹೊರಡಿಸಿ, ಕರ್ನಾಟಕದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿತು.

ರೈತನಿಗೆ ಗುಡ್ ನ್ಯೂಸ್, ಜಮೀನಿನ ಪಹಣಿ ಪತ್ರ ತಂದೆ ಅಥವಾ ತಾತನ ಹೆಸರಿನಲ್ಲಿ ಇದ್ದರೆ ಯಾವುದೇ ದಾಖಲೆ ಹೆಸರು ಬದಲಾಯಿಸಿಕೊಳ್ಳಬಹುದು.!

ಆದರೆ ಬಂಗಾರಪ್ಪನವರು ಅದಕ್ಕೂ ಬಗ್ಗಲಿಲ್ಲ. ಸುಪ್ರೀಂಕೋರ್ಟ್ ನಲ್ಲಿ ತಮಿಳುನಾಡು ಸಲ್ಲಿಸಿದ ಆಕ್ಷೇಪಕ್ಕೆ, ರಾಜ್ಯ ಸರ್ಕಾರದಿಂದಲೂ ಅಹವಾಲು ಸಲ್ಲಿಸಿದರು. ಜೊತೆಗೆ, 1991ರ ಡಿ. 13ರಂದು ಕಾವೇರಿ ಕೊಳ್ಳ ರೈತರು ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಬಾಹ್ಯವಾಗಿಯೇ ಬೆಂಬಲ ಘೋಷಿಸಿ, ಕಾವೇರಿ ನಮ್ಮದು ನಮಗೆ ಕೊರತೆ ಇರುವಾಗ ನೀರು ಬಿಡಲು ಆಗದು ನೀವು ಧೈರ್ಯವಾಗಿರಿ ನಿಮ್ಮ ಹೋರಾಟ ಮುಂದುವರಿಸಿ ಎಂದು ಬಾಹ್ಯ ನೀಡಿದ್ದರು.

Viral News

Post navigation

Previous Post: ಕಾವೇರಿ ವಿವಾದ, ಪ್ರಧಾನಿ ಮಧ್ಯಸ್ಥಿಕೆಗೆ ದೇವೇಗೌಡರ ಪತ್ರ, ಪತ್ರ ಸ್ವಾಗತಿಸಿದ ಸಿದ್ದರಾಮಯ್ಯ.!
Next Post: ನಾನು ಇಲ್ಲಿಗೆ ಆಟ ಆಡಲು ಬಂದವನು, ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ ಎಂದ ಎಂ.ಎಸ್ ಧೋನಿ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme