ಬೃಂದಾವನ ಸಿನಿಮಾ (Brundavana movie) ಮೂಲಕ ಸ್ಯಾಂಡಲ್ ಗೆ ಎಂಟ್ರಿ ಕೊಟ್ಟಿದ್ದ ನಟಿ ಕಾರ್ತಿಕ ಬೃಂದಾವನ ಚಿತ್ರವಾದ ಬಳಿಕ ಕನ್ನಡದಲ್ಲಿ ಮತ್ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲಿಲ್ಲ. ಆದರೆ ಕಾರ್ತಿಕ ಮತ್ತು ಕನ್ನಡ ಸಿನಿಮಾರಂಗಕ್ಕೆ (Sandalwood) ನಂಟಿದೆ. ಅವರು ಕನ್ನಡದಲ್ಲಿ ಅಭಿನಯಿಸಿದ ಏಕೈಕ ಚಿತ್ರ ಬೃಂದಾವನ ಸಿನಿಮಾದ ಕಾರಣ ಮಾತ್ರವಲ್ಲದೇ ಕನ್ನಡದ ಹೆಸರಾಂತ ನಟಿ ಒಬ್ಬರ ಕುಟುಂಬಕ್ಕೆ ಸೇರಿದವರು ಎನ್ನುವ ಕಾರಣಕ್ಕಾಗಿ ನಟಿ ಕನ್ನಡಿಗರಿಗೆ ಹತ್ತಿರದವರು.
ಚಳಿ ಚಳಿ ಹಾಡಿನ ಖ್ಯಾತಿಯ ನಟಿ ಅಂಬಿಕಾ (Actress Ambika) ಅವರು ಕಾರ್ತಿಕ ಅವರ ತಾಯಿಯ ಸಹೋದರಿ, ಕಾರ್ತಿಕಾರವರ ತಾಯಿ ರಾಧಾ ಅವರು ಕೂಡ ಬಹುಭಾಷ ನಟಿ. ಕನ್ನಡದಲ್ಲಿ ಸಾವಿರ ಸುಳ್ಳು, ದಿಗ್ವಿಜಯ, ರಣ ಚಂಡಿ, ಸೌಭಾಗ್ಯ ಲಕ್ಷ್ಮಿ ಮುಂತಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಇವರು ನಂತರ ತಮಿಳು ಮತ್ತು ಮಲಯಾಳಂ ಸಿನಿಮಾ ರಂಗದಲ್ಲಿ ಬಿಸಿಯಾಗಿದ್ದರು.
ಇವರ ಹಿರಿಯ ಪುತ್ರಿಯೇ ಕಾರ್ತಿಕ, ಅವರೂ ಕೂಡ ಅದೇ ಸಿನಿಮಾ ಹಾದಿಯನ್ನೇ ತುಳಿದಿದ್ದಾರೆ. ತೆಲುಗಿನಲ್ಲಿ ಜೋಶ್ ಸಿನಿಮಾ (Telugu Josh movie) ಮೂಲಕ ಬಣ್ಣದ ಲೋಕಕ್ಕೆ ಎಂಟಿಕೊಟ್ಟ ಇವರು ನಂತರ ತಮಿಳು ಹಾಗೂ ಮಲಯಾಳಂ ಚಿತ್ರಗಳನ್ನು ಬಿಜಿಯಾದರು. ಹಿಂದಿಯ ಆರಂಭ್ ಎನ್ನುವ ಧಾರವಾಹಿಯಲ್ಲೂ (Hindi Arambh Serial) ಕೂಡ ಮುಖ್ಯಪಾತ್ರ ನಿರ್ವಹಿಸಿದ್ದ ಇವರು ಕನ್ನಡದಲ್ಲಿ ಬೃಂದಾವನ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದರು.
ಆದರೆ ನಿರೀಕ್ಷೆಯಂತಹ ಸಕ್ಸಸ್ ಸಿಗದೇ ಒಂದೇ ಸಿನಿಮಾಗೆ ಕನ್ನಡದಲ್ಲಿ ಅವರ ಅವಕಾಶಗಳು ಕೊನೆಯಾಗಿ ಹೋಗಿದೆ. ಸಾಮಾನ್ಯವಾಗಿ ಸಿನಿಮಾದಲ್ಲಿ ಸಕ್ಸಸ್ ಇಲ್ಲದೇ ಹೋದಾಗ ನಟಿಯರು ಕಿರುತೆರೆ ಆರಿಸಿಕೊಳ್ಳುತ್ತಾರೆ ಅಥವಾ ಮತ್ತೊಂದು ಕೆರಿಯರ್ ನಲ್ಲಿ ತೊಡಗಿ ಕೊಳ್ಳುತ್ತಾರೆ ಯಾವ ರೀತಿ ಮುಂದುವರೆದರು ವೈವಾಹಿಕ ಘಟ್ಟ ತಲುಪಲೇಬೇಕು ಹಾಗಾಗಿ ಅನೇಕರು ಮದುವೆಯಾಗಿ ವೈಯಕ್ತಿಕ ಜೀವನದಲ್ಲಿ ಸಕ್ರಿಯರಾಗುತ್ತಾರೆ ಈಗ ಕಾರ್ತಿಕಾರವರಿಗೂ ಕೂಡ ಕಂಕಣ ಬಲ ಕೂಡಿ ಬಂದಂತಿದೆ.
ನಟಿ ಕಾರ್ತಿಕಾರವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ (Instagram photo) ಶೇರ್ ಆಗಿರುವ ಒಂದು ಫೋಟೋ ಈ ಚರ್ಚೆಗೆ ಕಾರಣವಾಗಿದೆ. ಇದ್ದಕ್ಕಿದ್ದ ಹಾಗೆ ಯಾವುದೇ ಕ್ಯಾಪ್ಶನ್ ಕೂಡ ನೀಡದೆ ಈ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಯುವಕನೋರ್ವನನ್ನು ಹಗ್ ಮಾಡಿಕೊಂಡು ರಿಂಗ್ ಫಿಂಗರ್ ನಲ್ಲಿರುವ ಉಂಗುರವನ್ನು ಕ್ಯಾಮೆರಾಗೆ ತೋರಿಸಿದ್ದಾರೆ.
ಈ ಫೋಟೋದಲ್ಲಿ ಎಂಗೇಜ್ಮೆಂಟ್ (Engagement) ಆಗಿರಬಹುದು ಎನ್ನುವುದನ್ನೇ ಫೋಟೋ ಫೋಕಸ್ ಮಾಡುತ್ತಿದ್ದೆ ಎನ್ನುವ ರೀತಿ ಇದೆ. ಹಾಗಾಗಿ ಎಲ್ಲರೂ ಇದನ್ನು ಎಂಗೇಜ್ಮೆಂಟ್ ಎಂದೇ ಭಾವಿಸಿ, ಶುಭಾಶಯಗಳ ಮಳೆಗರೆಯುತ್ತಿದ್ದಾರೆ ಫಾಲೋವರ್ಸ್, ಅಭಿಮಾನಿಗಳು ಎಲ್ಲರೂ ಕೂಡ ಇದೇ ರೀತಿ ಭಾವಿಸಿದ್ದಾರೆ ಇನ್ನು ಸಹ ನಟಿ ಅಥವಾ ನಟಿ ಕುಟುಂಬದವರಿಂದ ಈ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ.
ಸಾಮಾನ್ಯವಾಗಿ ತಮ್ಮ ಜೀವನದ ಪ್ರಮುಖ ಘಟ್ಟವಾದ ವಿವಾಹ ಹಾಗೂ ಮಗುವಿನ ವಿಷಯವನ್ನು ಡಿಫ್ರೆಂಟ್ ಆಗಿ ಹೇಳುವುದು ಈಗಿನ ಕಾಲದ ಟ್ರೆಂಡ್, ಹಾಗಾಗಿ ನಟಿ ಈ ಫೋಟೋ ಮೂಲಕ ಇದನ್ನು ವಿಭಿನ್ನವಾಗಿ ಹೇಳಲು ಪ್ರಯತ್ನಿಸುತ್ತಿದ್ದಾರೆ ಎಂದು ಭಾವಿಸಬಹುದಾಗಿದೆ.
ಇವರ ಫೋಟೋ ಶೇರ್ ಆದ ಬೆನ್ನಲ್ಲೇ ಇದು ಅರೆಂಜ್ ಮ್ಯಾರೇಜ್ ಅಥವಾ ಲವ್ ಮ್ಯಾನೇಜ್ ಆ? ಹುಡುಗ ಯಾರು ಉದ್ಯಮಿಯೋ ಅಥವಾ ನಟನೋ, ಸಂಬಂಧಿಕನೋ ಅಥವಾ ಸ್ನೇಹಿತನೋ ಎನ್ನುವ ವಿಚಾರ ತಿಳಿದುಕೊಳ್ಳಲು ನೆಟ್ಟಿಗರು ಬಹಳ ಕುತೂಹಲ ತೋರುತ್ತಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಇಲ್ಲದೆ ಸೈಲೆಂಟಾಗಿದ ನಟಿ ಇದೀಗ ಎಂಗೇಜ್ಮೆಂಟ್ ಸುದ್ದಿಯಿಂದ ಬಾರಿ ಚರ್ಚೆಯಲ್ಲಿದ್ದಾರೆ. ಇದು ಎಂಗೇಜ್ಮೆಂಟ್ ಆಗಿದ್ದಲ್ಲಿ ಅವರ ವಿವಾಹ ಜೀವನಕ್ಕೆ ಶುಭವಾಗಲಿ ಎಂದು ನಾವು ಕೂಡ ಅಶಿಸೋಣ.