ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿ (Education Minister Madhu Bangarappa) ಪದವಿ ಅಲಂಕರಿಸಿರುವ ಮಧು ಬಂಗಾರಪ್ಪನವರು ಈ ಹಿಂದೆ BJP ಸರ್ಕಾರ ಜಾರಿಗೆ ತಂದಿದ್ದ ಶಿಕ್ಷಣ ನೀತಿಯನ್ನು ರದ್ದುಪಡಿಸಿ ಹೊಸ ಶಿಕ್ಷಣ ನೀತಿಯಲ್ಲಿ ಜಾರಿಗೆ ತಂದಿದ್ದಾರೆ. ಇನ್ನು ಅನೇಕ ಕ್ರಮಗಳನ್ನು ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವ ಇವರು ಮೊನ್ನೆ ಮಂಗಳೂರಿನಲ್ಲಿ ನಡೆದ ಸಭೆಯೊಂದರ ಬಳಿಕ ಇನ್ನು ಮುಂದೆ ರಾಜ್ಯದಲ್ಲಿ SSLC ವಿದ್ಯಾರ್ಥಿಗಳಿಗೆ ಮೂರು ಬಾರಿ ಮುಖ್ಯ ಪರೀಕ್ಷೆಗಳನ್ನು (3 main exams for SSLC Students) ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಜೊತೆಗೆ ಮಕ್ಕಳ ಬ್ಯಾಗ್ ಹೊರೆ ಇಳಿಸುವುದರ ಬಗ್ಗೆ ಮತ್ತು ಹೆಚ್ಚಿನ ಶಿಕ್ಷಕರ ನೇಮಕಾತಿಯ ಬಗ್ಗೆ ಕೂಡ ಮಾತನಾಡಿದ್ದಾರೆ. ಆ ಕುರಿತದ ಕೆಲ ಪ್ರಮುಖ ವಿಷಯಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. SSLC ಯಲ್ಲಿ ಅನುತ್ತೀರ್ಣರಾದವರಿಗೆ ಮತ್ತೊಮ್ಮೆ ಪೂರಕ ಪರೀಕ್ಷೆ ನಡೆಸಿ ಉತ್ತೀರ್ಣರಾಗಲು ಅವಕಾಶ ನೀಡಲಾಗುತ್ತಿದೆ. ಆದರೆ ಪೂರಕ ಪರೀಕ್ಷೆ ಒಂದೇ ಬಾರಿ ಇರುವುದರಿಂದ ಅದರಲ್ಲಿ ಅನುತ್ತೀರ್ಣರಾದವರು ಆ ವರ್ಷ ಕಾಲೇಜು ಶಿಕ್ಷಣದಿಂದ ವಂಚಿತರಾಗಿ ಮತ್ತೊಂದು ವರ್ಷ ಕಾಯಬೇಕಾದ ಪರಿಸ್ಥಿತಿ ಇದೆ.
ಇದನ್ನು ತಪ್ಪಿಸುವ ಸಲುವಾಗಿ ಹೊಸದೊಂದು ಕ್ರಮ ಕೈಗೊಂಡಿರುವ ಬಗ್ಗೆ ತಿಳಿಸಿದ ಮಧು ಬಂಗಾರಪ್ಪರವರು ಈ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ಮೂರು ಮುಖ್ಯ ಪರೀಕ್ಷೆ ನಡೆಸಲಾಗುವುದು. ಅನುತ್ತೀರ್ಣರಾದವರು ಹಾಗೂ ಇನ್ನು ಹೆಚ್ಚಿನ ಅಂಕ ಗಳಿಸುವ ಉದ್ದೇಶ ಇರುವವರು ಎರಡನೇ ಪರೀಕ್ಷೆಯಲ್ಲಿ ಭಾಗಿಯಾಗಬಹುದು, ಅದರಲ್ಲೂ ಅನುತ್ತೀರ್ಣರಾಗಿ ಇನಕ ಹೆಚ್ಚು ಅಂಕ ಪಡೆಯಲು ಬಯಸುವವರು ಮತ್ತೆ ಮೂರನೇ ಪರೀಕ್ಷೆಯಲ್ಲಿ ಕೂಡ ಬಾಗಿಯಾಗಬಹುದು.
ಒಂದು ಪರೀಕ್ಷೆಗಿಂತ ಮತ್ತೊಂದು ಪರೀಕ್ಷೆಗೆ 15 ರಿಂದ 20 ದಿನಗಳ ಅಂತರ ಇರುತ್ತದೆ. ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿಗೆ ಸೇರುವುದಕ್ಕೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಈ ಕ್ರಮ ಕೈಗೊಂಡಿದ್ದೇವೆ, ಮೂರನೇ ಬಾರಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಕಾಲೇಜಿಗೆ ಸೇರುವವರೆಗೆ 26 ದಿನಗಳ ತಡವಾಗಬಹುದು ಎಂದು ಅಂದಾಜಿಸಲಾಗಿದೆ.
ಮುಸ್ಲಿಂ ಸದಸ್ಯರನ್ನು ಸಂಸತ್ತಿನಲ್ಲಿ ತಳಿಸುವ ದಿನ ದೂರವಿಲ್ಲ – ಓವೈಸಿ ಇಂದ ಅಚ್ಚರಿಯ ಹೇಳಿಕೆ
ಈ ವಿದ್ಯಾರ್ಥಿಗಳಿಗೆ ಕಾಲೇಜಿನ ವಿದ್ಯಾಭ್ಯಾಸದಲ್ಲಿ ಅನಾನುಕೂಲವಾಗಬಾರದು ಎನ್ನುವ ಕಾರಣಕ್ಕೆ ಅವರಿಗಾಗಿ ವಿಶೇಷವಾಗಿ ತರಗತಿ ತೆಗೆದುಕೊಂಡು ಬ್ರಿಡ್ಜ್ ಕೋರ್ಸ್ ಆರಂಭಿಸಬೇಕು ಎನ್ನುವ ಸೂಚನೆ ಕೊಟ್ಟಿದ್ದೇವೆ ಎನ್ನುವ ವಿಷಯವನ್ನು ಹಂಚಿಕೊಂಡಿದ್ದಾರೆ.
ಅದೇ ರೀತಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಬ್ಯಾಗ್ ಹೊರೆ ಹೆಚ್ಚುತ್ತಿರುವುದರ ಬಗ್ಗೆ ಕೂಡ ಮಾತನಾಡಿದ ಅವರು ಶೀಘ್ರವೇ ಮಕ್ಕಳಿಗೆ ಹೊರೆ ಕಡಿಮೆ ಆಗುವಂತಹ ಯೋಜನೆಗಳನ್ನು ರೂಪಿಸಲಾಗುವುದು, ಸರಿಯಾದ ತಜ್ಞರ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವೆ ಎನ್ನುವ ಭರವಸೆ ನೀಡಿದರು. ಈ ವರ್ಷ ಕೂಡ ಶಾಲಾ ಶಿಕ್ಷಕರ ನೇಮಕಾತಿ ನಡೆಸಿ ಶಿಕ್ಷಕರ ಕೊರತೆ ನೀಗಿಸಲಾಗುವುದು ಎನ್ನುವುದನ್ನು ತಿಳಿಸಿದ ಅವರು ಕಾಂಗ್ರೆಸ್ ಸರ್ಕಾರವು ಜಾರಿಗೆ ತರುವ ಜನಪ್ರಿಯ ಯೋಜನೆಗಳ ಬಗ್ಗೆ ಕೊಂಡಾಡಿದ್ದಾರೆ.
ನಾನು ಇಲ್ಲಿಗೆ ಆಟ ಆಡಲು ಬಂದವನು, ಯಾವುದೇ ಕಾರಣಕ್ಕೂ ಕರ್ನಾಟಕ ವಿರೋಧಿ ಆಗಲಾರೆ ಎಂದ ಎಂ.ಎಸ್ ಧೋನಿ.!
ಸರಕಾರ ಅಧಿಕಾರಕ್ಕೆ ಬಂದು 130 ದಿನ ಮಾತ್ರ ಆಗಿದ್ದು, ಐದು ಗ್ಯಾರೆಂಟಿಗಳ ಪೈಕಿ ನಾಲ್ಕು ಗ್ಯಾರೆಂಟಿ ಯೋಜನೆಗಳು ಈಗಾಗಲೇ ಜಾರಿಗೆ ಬಂದಿವೆ ಬಡವರು ಸೇರಿದಂತೆ ಎಲ್ಲಾ ವರ್ಗಗಳ ಜನರಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ನೀಡಿದೆ. ಪ್ರತಿಪಕ್ಷಗಳ ಟೀಕೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ನಮ್ಮ ಕಾರ್ಯಕ್ರಮಗಳ ಮೂಲಕ ನಾವು ಅವರಿಗೆ ಪ್ರತಿಕ್ರಿಸುತ್ತೇವೆ ಎಂದು ಹೇಳಿದ್ದಾರೆ.