ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging star Darshan) ಅವರ ಹುಟ್ಟುದ ಹಬ್ಬ (birthday) ಇದೆ. ದರ್ಶನ್ ಅಭಿಮಾನಿಗಳ ಪಾಲಿಗಂತೂ ಇದು ಯಾವ ಯುಗಾದಿ ಹಾಗೂ ದೀಪಾವಳಿ ಹಬ್ಬಕ್ಕಿಂತ ಕಡಿಮೆ ಇಲ್ಲ. ಈಗಾಗಲೇ ದರ್ಶನ್ ಅವರು ಹುಟ್ಟುಹಬ್ಬಕ್ಕೆ ಕೇಕು ಹಾರ ತುರಾಯಿ ತಂದು ಹಣ ವ್ಯರ್ಥ ಮಾಡಬಾರದು ಎಂದು ಕೇಳಿಕೊಂಡಿದ್ದಾರೆ ಸಾಧ್ಯವಾದರೆ ಕೈಲಾದಷ್ಟು ದವಸ ಧಾನ್ಯ ತಂದು ಕೊಡಿ ಅದನ್ನು ಅವಶ್ಯಕತೆ ಇರುವವರಿಗೆ ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಸೂಚನೆ ಕೊಟ್ಟಿದ್ದಾರೆ.
ಅದರಂತೆ ಅಭಿಮಾನಿಗಳು ಅದಕ್ಕೆ ತಯಾರು ಮಾಡಿಕೊಳ್ಳುವುದರ ಜೊತೆಗೆ ಡಿ ಬಾಸ್ ಇಂದ ಹುಟ್ಟು ಹಬ್ಬದ ಪ್ರಯುಕ್ತ ನಮಗೇನಾದರೂ ವಿಶೇಷ ಅಪ್ಡೇಟ್ ಸಿಗುತ್ತದಾ ಎಂದು ಕಾಯುತ್ತಿದ್ದಾರೆ. ಬಲವಾದ ಮೂಲಗಳ ಪ್ರಕಾರ ಅಭಿಮಾನಿಗಳಿಗಾಗಿ ಈ ಬಾರಿ ದರ್ಶನ್ ಅವರ ಡಿ56 (D56) ಸಿನಿಮಾದ ಚಿತ್ರತಂಡ ಈ ಸಿನಿಮಾದ ಟೀಸರ್ ಝಲಕ್ (Teaser) ಮತ್ತು ಆ ಸಿನಿಮಾದ ಟೈಟಲ್ ಅನ್ನು ಲಾಂಚ್ (Title launch ) ಮಾಡುತ್ತದೆ, ಅದಕ್ಕಾಗಿ ಭರ್ಜರಿಯಾಗಿ ತಯಾರಿಯೂ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು.
ಆದರೆ ಆ ಸಂತಸ ಸುದ್ದಿ ಅಭಿಮಾನಿಗಳಿಗೆ ತಲುಪುವ ಮುನ್ನ ವಿಶೇಷ ರೀತಿಯಾಗಿ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ (Fan’s) ಟ್ರಬ್ಯೂಟ್ (tribute) ಸಲ್ಲಿಸಿದ್ದಾರೆ. ಈಗಾಗಲೇ ಅಭಿಮಾನಿಗಳು ದರ್ಶನ್ ಅವರನ್ನು ಎಷ್ಟು ಇಷ್ಟಪಡುತ್ತಾರೆ ಹಾಗೂ ದರ್ಶನ್ ಅವರಿಗೆ ಅವರ ಅಭಿಮಾನಿಗಳ ಮೇಲೆ ಎಷ್ಟು ಅಭಿಮಾನ ಇದೆ ಎನ್ನುವುದು ಕರ್ನಾಟಕಕ್ಕೆ ತಿಳಿದಿದೆ. ದರ್ಶನ್ ಅವರು ಪ್ರತಿ ಬಾರಿ ಸೋತಾಗಲು ಅವರನ್ನು ಕೈ ಹಿಡಿದಿರುವುದು ಅವರ ಅಭಿಮಾನಿಗಳು ಮಾತ್ರ.
ಹಾಗಾಗಿ ಅವರನ್ನೇ ತಮ್ಮ ಸೆಲೆಬ್ರಿಟಿಸ್ ಎಂದು ದರ್ಶನ್ ಅವರು ಕರೆಯುತ್ತಾರೆ. ದರ್ಶನ್ ಅವರ ಮೇಲಿರುವ ಅಭಿಮಾನಕ್ಕೆ ಕ್ರಾಂತಿ (Kranthi) ಸಿನಿಮಾ ಗೆದ್ದಿರುವುದೇ ಸಾಕ್ಷಿ ಎಲ್ಲ ಮೀಡಿಯಾಗಳು ದರ್ಶನವರನ್ನು ಬ್ಯಾನ್ ಮಾಡಿದರು ದರ್ಶನ್ ಸೆಲೆಬ್ರಿಟಿಗಳು ಅದನ್ನು ಹೆಗಲಿಗೆ ಹೊತ್ತುಕೊಂಡು ಪ್ರಚಾರ ಮಾಡಿ ಸಿನಿಮಾವನ್ನು ಗೆಲ್ಲಿಸಿಯೇ ಬಿಟ್ಟರು. ಸಿನಿಮಾ ನೂರು ಕೋಟಿ ಕ್ಲಬ್ ದಾಟಿದ್ದು ಆಯಿತು
ಈಗ ಆ ಸಂತೋಷದಿಂದ ದರ್ಶನ್ ಅವರು ಅವರ ಅಭಿಮಾನಿಗಳಿಗೆ ವಿಶೇಷ ರೀತಿಯಾಗಿ ಧನ್ಯವಾದ ಅರ್ಪಿಸುವ ಉದ್ದೇಶದಿಂದ ತಮ್ಮ ಎದೆ ಮೇಲೆ ನನ್ನ ಪ್ರೀತಿಯ ಸೆಲೆಬ್ರಿಟಿಸ್ ಎಂದು ಹಚ್ಚೆ (Tatoo) ಹಾಕಿಸಿಕೊಂಡಿದ್ದಾರೆ.
ಈಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಅದರ ವಿಡಿಯೋ ವೈರಲ್ ಆಗುತ್ತಿದೆ. ಈ ಮೂಲಕ ದರ್ಶನವರು ಇಡೀ ಪ್ರಪಂಚದಲ್ಲಿ ಅಭಿಮಾನಿಗಳಿಗಾಗಿ ಮೊದಲ ಬಾರಿಗೆ ಹಚ್ಚೆ ಹಾಕಿಸಿಕೊಂಡ ಸ್ಟಾರ್ ನಟ ಎನ್ನುವ ಖ್ಯಾತಿಯನ್ನು ಹೊಂದಿದ್ದಾರೆ ಮತ್ತು ದರ್ಶನ್ ಅವರು ಅಚ್ಚ ಕನ್ನಡದಲ್ಲಿ ಟ್ಯಾಟು ಹಾಕಿಸಿಕೊಂಡಿರುವುದು ಇನ್ನಷ್ಟು ಕನ್ನಡಿಗರ ಮನ ಗೆದ್ದಿದೆ. ಇದುವರೆಗೆ ಅಭಿಮಾನಿಗಳು ಅಭಿಮಾನದಿಂದ ತಮ್ಮ ಫೇವರೆಟ್ ಸ್ಟಾರ್ಗಳ ಹೆಸರನ್ನು, ಸಿನಿಮಾ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುತ್ತಿದ್ದರು.
ಆದರೆ ಮೊದಲ ಬಾರಿಗೆ ತಮ್ಮ ಅಭಿಮಾನಿಗಳಿಗೋಸ್ಕರ ಸ್ಟಾರ್ ನಟರೊಬ್ಬರು ಈ ರೀತಿ ಮಾಡಿದ್ದಾರೆ. ದರ್ಶನ್ ಅವರಿಗೆ ಈಗಾಗಲೇ ಇಡೀ ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳು ಹೊಂದಿರುವ ನಟ ಎನ್ನುವ ಬಿರುದು ಕೂಡ ಇದೆ. ದರ್ಶನ್ ಅವರ ಈ ನಡೆ ಅಭಿಮಾನಿಗಳಿಗೆ ಸಂತಸ ಹಾಗೂ ನೋವು ಎರಡನ್ನು ತಂದಿದೆ. ನಮಗಾಗಿ ದರ್ಶನ್ ಅವರು ಇಷ್ಟು ನೋವು ತಿನ್ನುತ್ತಿದ್ದಾರಲ್ಲ ಎಂದು ಅಭಿಮಾನಿಗಳು ಮತ್ತೊಮ್ಮೆ ಆನಂದ ಭಾಷ್ಪವನ್ನು ದರ್ಶನ್ ಅವರಿಗಾಗಿ ಸುರಿಸುತ್ತಿದ್ದಾರೆ.
ದರ್ಶನ್ ಅವರು ಈ ಟ್ಯಾಟು ಹಾಕಿಸಿಕೊಳ್ಳುವ ಮುನ್ನ ನನಗಾಗಿ ನನ್ನ ಸೆಲೆಬ್ರಿಟಿಸ್ ಗಳು ಅಷ್ಟೊಂದು ಮಾಡಿದ್ದಾರೆ ಅದರ ಮುಂದೆ ಇದ್ಯಾವುದೂ ಲೆಕ್ಕ ನನ್ನ ಕಡೆಯಿಂದ ಒಂದು ಚಿಕ್ಕ ಅರ್ಪಣೆ ಅಷ್ಟೇ ಎಂದು ಹೇಳಿ ಟ್ಯಾಟು ಹಾಕಿಸಿಕೊಂಡಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ ಹಾಗೂ ದರ್ಶನ್ ಅವರು ಟ್ಯಾಟೋ ಹಾಕಿಸಿಕೊಂಡಿರುವ ಈ ವಿಡಿಯೋ ನಿಮಗೆ ಇಷ್ಟ ಆದರೆ ಲೈಕ್ ಕೊಟ್ಟು ಶೇರ್ ಮಾಡಿ.