ಅಪ್ಪು ಹಾಗೂ ದಚ್ಚು ಒಟ್ಟಿಗೆ ಕಾಣಿಸಿಕೊಂಡಿದ್ದ ಅರಸು ಸಿನಿಮಾಗಾಗಿ ದರ್ಶನ್ ಪಡೆದಿದ್ದ ಸಂಭಾವನೆ ಎಷ್ಟು ಗೊತ್ತಾ.? ಅಪ್ಪು (Appu) ಇಂದು ದೈಹಿಕವಾಗಿ ನಮ್ಮೊಡನೆ ಇರದೆ ಇರಬಹುದು, ಆದರೆ ಕರುನಾಡ ಜನರ ಮನಸ್ಸಿನಲ್ಲಿ ಅವರಿಗೆ ಶಾಶ್ವತವಾಗಿ ದೇವರ ಸ್ಥಾನ ಇದೆ. ಆದರೆ ಅಪ್ಪು ಅವರು ಮರಣ ಹೊಂದಿದ ಬಳಿಕ ಕರ್ನಾಟಕದಲ್ಲಿ ಅವರ ಹೆಸರಿನಲ್ಲಿ ಫ್ಯಾನ್ಗಳ ಫ್ಯಾನ್ಸ್ವಾರ್ (Fans war) ಶುರು ಆಗಿದೆ. ಅಪ್ಪು (Appu ) ಹಾಗೂ ದಚ್ಚು (Dachchu) ಅಭಿಮಾನಿಗಳು ಪರಸ್ಪರ ಒಬ್ಬರಿಗೊಬ್ಬರು ಕಚ್ಚಾಡಿಕೊಂಡು ನಮ್ಮ ಹೀರೋ ಹೆಚ್ಚು, ನಮ್ಮ ಹೆಚ್ಚು ಎಂದು ಕಿತ್ತಾಡಿಕೊಳ್ಳುತ್ತಿದ್ದಾರೆ.
ಅಪ್ಪು ಇರುವವರಿಗೆ ಒಂದು ದಿನವೂ ಕೂಡ ಯಾವ ನಟರ ಜೊತೆಗೂ ಈ ರೀತಿ ವಾರ್ ಮಾಡಿಕೊಂಡವರಲ್ಲ, ನಮ್ಮ ಕನ್ನಡ ಭಾಷೆಯ ಎಲ್ಲಾ ನಟರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದವರು ಮತ್ತು ಪರಭಾಷೆ ನಟರೊಂದಿಗೂ ಕೂಡ ಬಹಳ ಆತ್ಮೀಯತೆ ಇಟ್ಟುಕೊಂಡಿದ್ದವರು. ತೆಲುಗಿನ ಖ್ಯಾತ ನಟ ಜೂನಿಯರ್ ಎನ್ಟಿಆರ್ (Jn.NTR) ಅಪ್ಪು ಅವರಿಗಾಗಿ ಬಂದು ಗೆಳೆಯ ಗೆಳೆಯ ಎನ್ನುವ ಹಾಡನ್ನು ಚಕ್ರವ್ಯೂಹ ಸಿನಿಮಾಗಾಗಿ ಹಾಡಿ ಕೊಟ್ಟಿದ್ದರು ಇದು ಅಪ್ಪು ಸ್ನೇಹಕ್ಕೆ ಇರುವ ಬೆಲೆ.
ಇಂದು ಇಡೀ ದೇಶವೇ ಅಪ್ಪು ಅವರನ್ನು ಕೊಂಡಾಡುತ್ತಿದೆ ಹಾಗೂ ಬೇರೆ ದೇಶದ ಮಾಧ್ಯಮಗಳಲ್ಲಿ ಅಪ್ಪು ಸಾ.ವಿ.ನ ಸುದ್ದಿ ಪ್ರಸಾರವಾಗುವಷ್ಟು ಅಪ್ಪು ಹೆಸರು ಜಗಜಾಹಿರಾಗಿದೆ. ಆದರೆ ಕರ್ನಾಟಕದಲ್ಲಿ ಅಪ್ಪುವಿನ ಸಾ.ವಿ.ನ ಬಳಿಕ ಆಗುತ್ತಿರುವ ಈ ನಡವಳಿಕೆ ರಾಜವಂಶದ ಹಾಗೂ ದರ್ಶನ್ ಅವರ ನಿಜವಾದ ಅಭಿಮಾನಿಗಳಿಗೆ ಬೇಸರವಾಗಿದೆ. ದರ್ಶನ್ (Darshan) ಅವರು ಸಹ ಅಪ್ಪು ಅವರ ಬಗ್ಗೆ ಎಂದು ಬಹಿರಂಗವಾಗಿ ಕೆಟ್ಟದಾಗಿ ಎಲ್ಲೂ ಮಾತನಾಡಿಲ್ಲ, ಅಪ್ಪು ಇರುವ ತನಕ ಉತ್ತಮ ಸ್ನೇಹಿತರಾಗಿದ್ದರು.
ಅಪ್ಪು ಸಾ.ವಿ.ನ ನಂತರವೂ ಎಲ್ಲಾ ಕಡೆಯೂ ಅವರ ಪರವಾಗಿ ಮಾತನಾಡಿದ್ದಾರೆ. ನಮಗೆ ಅಣ್ಣಾವ್ರ ಕುಟುಂಬದ ಋಣವಿದೆ ಅವರ ಮನೆ ಅನ್ನ ತಿಂದುಕೊಂಡು ಬೆಳೆದಿದ್ದೇವೆ ಎಂದು ಹೇಳಿಕೊಳ್ಳುವ ದರ್ಶನವರು ತಮ್ಮ ಕ್ರಾಂತಿ (Kranthi) ಸಿನಿಮಾದ ಕೆಲಸವನ್ನು ಅಪ್ಪು ಸಾ.ವಿ.ನ ಕಾರಣ 11 ದಿನ ನಿಲ್ಲಿಸಿರುವುದನ್ನು ಸಹ ಹೇಳಿಕೊಂಡಿದ್ದಾರೆ. ಇಷ್ಟು ಅಪ್ಪು ಬಗ್ಗೆ ಪ್ರೀತಿ ಹಾಗೂ ವಿಶ್ವಾಸ ಹೊಂದಿದ್ದ ದರ್ಶನ್ ವ್ಯಕ್ತಿತ್ವದ ಬಗ್ಗೆ ಹಾಗೂ ರಾಜ್ ಕುಟುಂಬದ ಜೊತೆ ದರ್ಶನ್ ಗಿದ್ದ ಒಡನಾಟದ ಬಗ್ಗೆ ಸಂದರ್ಶನದಲ್ಲಿ ರಾಘಣ್ಣ (Raghanna) ಸಹ ಹೇಳಿಕೊಂಡಿದ್ದಾರೆ.
ಅರಸು (Arasu) ಸಿನಿಮಾ ಪುನೀತ್ ರಾಜಕುಮಾರ್ ಅವರ ನಟನೆಯ ಒಂದು ಅತ್ಯುತ್ತಮ ಚಿತ್ರ. ಪುನೀತ್ ರಾಜಕುಮಾರ್, ರಮ್ಯಾ, ಮೀರಾ ಜಾಸ್ಮಿನ್, ದರ್ಶನ್, ಆದಿತ್ಯ, ಶ್ರೇಯ ಹೀಗೆ ಬಹು ತಾರ ಬಳಗವನ್ನು ಹೊಂದಿದ್ದ ಸೂಪರ್ ಹಿಟ್ ಚಿತ್ರ ಅರಸು. ಈ ಚಿತ್ರದಲ್ಲಿ ದರ್ಶನ್ ಮತ್ತು ಆದಿತ್ಯ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾವನ್ನು ದರ್ಶನ್ ಮಾಡುತ್ತಾರೆ ಇಲ್ಲವೋ ಇಲ್ಲವಾ ಎನ್ನುವ ಅನುಮಾನದಲ್ಲಿಯೇ ಮೊದಲಿಗೆ ಚಿತ್ರತಂಡ ಇತ್ತಂತೆ.
ದರ್ಶನ್ ಅವರು ಹೇಳಿದ ತಕ್ಷಣವೇ ಖಂಡಿತವಾಗಿಯೂ ಮಾಡುತ್ತೇನಿ ಎಂದು ಒಪ್ಪಿಕೊಂಡು ಮಾಡಿದರಂತೆ ಮತ್ತು ಸಂಭಾವನೆ ವಿಚಾರದಲ್ಲಿ ಮೊದಲೇ ಕಂಡೀಶನ್ ಕೂಡ ಹಾಕಿದ್ದರಂತೆ ,ದುಡ್ಡು ಕೊಟ್ಟರೆ ನಾನು ಬರುವುದಿಲ್ಲ ಎಂದು. ಆದರೂ ಅಪ್ಪು ಹಾಗೂ ರಾಘಣ್ಣ ಮಾತನಾಡಿಕೊಂಡು ಮನಸ್ಸಿಗೆ ಸಮಾಧಾನ ಆಗುತ್ತಿಲ್ಲ ಎಂದು ಹೇಳಿ ಒಂದು ದುಬಾರಿ ವಾಚನ್ನು ದರ್ಶನ್ ಅವರಿಗೆ ಸಂಭಾವನೆ ಬದಲಾಗಿ ಉಡುಗೊರೆ ಎನ್ನುವ ರೀತಿಯಲ್ಲಿ ಕೊಟ್ಟಿದ್ದರಂತೆ.
ದರ್ಶನ್ ಅವರ ಹೃದಯ ಎಷ್ಟು ಸ್ನೇಹಮಯವಾದದ್ದು ಎಂದು ಇದರಿಂದ ತಿಳಿಯುತ್ತದೆ. ಆದರೆ ಇತ್ತೀಚಿಗೆ ಆಗುತ್ತಿರುವ ಬೆಳವಣಿಗೆಗಳಿಂದ ರಾಜ್ ಕುಟುಂಬ ಹಾಗೂ ದರ್ಶನ್ ಅವರ ನಡುವೆ ದ್ವೇ.ಷ ಬೆಳೆಯುವಂತೆ ಆಗಿದೆ. ದರ್ಶನ್ ಅವರ ಮೇಲೆ ಹೊಸಪೇಟೆಯಲ್ಲಿ ಆದ ಇನ್ಸಿಡೆಂಟ್ ಇದಕ್ಕೆ ತುಪ್ಪ ಸುರಿದ ರೀತಿ ಆಗಿದೆ. ಹೊಸಪೇಟೆಯನ್ನು ಮೊದಲಿಂದಲೂ ರಾಜ್ ಕುಟುಂಬದ ಅಖಾಡ ಎಂದೇ ಕರೆಯಲಾಗುತ್ತಿದೆ. ಈ ರೀತಿ ಅಪ್ಪು ಅಭಿಮಾನಿಗಳೇ ಮಾಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ರಾಜ್ ಕುಟುಂಬವನ್ನೇ ಇದಕ್ಕೆ ಹೊಣೆ ಮಾಡುತ್ತಿದ್ದಾರೆ.
ಆದರೆ ಈವರೆಗೆ ದರ್ಶನ್ ಅವರು ಎಲ್ಲೂ ಸಹ ಬಹಿರಂಗವಾಗಿ ಯಾವ ಸ್ಟಾರ್ ನಟರನ್ನೂ ಇದಕ್ಕೆ ಹೊಣೆ ಮಾಡಿಲ್ಲ. ಸ್ವತಃ ಶಿವಣ್ಣ ಅವರೇ ಈ ಆ.ಕ್ಸಿ.ಡೆಂ.ಟ್ ಆದ ಬಳಿಕ ದರ್ಶನ್ ಪರ ನಿಂತವರಲ್ಲಿ ಮೊದಲಿಗರು, ವಿಷಯ ತಿಳಿಯುತ್ತಿದ್ದಂತೆ ಶಿವಣ್ಣ (Shivanna) ಅವರ ಇನ್ಸ್ಟಾಗ್ರಾಮ್ ಅಲ್ಲಿ ಆ ರೀತಿ ನಡೆದುಕೊಂಡವರ ನಡವಳಿಕೆ ವಿರುದ್ಧ ಖಂಡನೆ ವ್ಯಕ್ತಪಡಿಸಿದ್ದರು. ಶಿವಣ್ಣ ಅವರ ಜೊತೆಗೂ ಸಹ ದರ್ಶನ್ ಅವರು ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ದೇವರ ಮಗ ಎನ್ನುವ ಸಿನಿಮಾದಲ್ಲಿ ಖಳನಾಯಕನಾಗಿ ದರ್ಶನ್ ಅವರು ಅಭಿನಯಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ