ಗ್ಯಾರಂಟಿ ಯೋಜನೆ(Guarantee Schemes) ಜಾರಿಯಾದ ಮೇಲೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ನಡುವೆ ಜಟಾಪಟಿ ಸೃಷ್ಟಿಸಿದ್ದ ಅನ್ನಭಾಗ್ಯ ಯೋಜನೆಯ (Annabhagya ration) ಅಕ್ಕಿ ವಿಷಯ ಮತ್ತೊಮ್ಮೆ ಚರ್ಚೆಯಲ್ಲಿದೆ. ಚುನಾವಣೆ ಪೂರ್ವವಾಗಿ ನೀಡಿದ್ದ ಪ್ರಣಾಳಿಕೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಪಕ್ಷವು ವಾಗ್ದಾನ ನೀಡಿತ್ತು.
ಚುನಾವಣೆಯಲ್ಲಿ ಬಹುಮತ ಬೆಂಬಲದೊಂದಿಗೆ ಅಧಿಕಾರ ಸ್ಥಾಪಿಸಿದ ಸರ್ಕಾರ ಮಾತು ಕೊಟ್ಟ ರೀತಿಯಲ್ಲಿ 10Kg ಅಕ್ಕಿ ನೀಡಲು ದಾಸ್ತಾನು ಕೊರತೆ ಎದುರಾಯಿತು. ಇದಕ್ಕಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಬಳಿ ಅಕ್ಕಿ ಖರೀದಿ ಪ್ರಸ್ತಾಪ ಇಟ್ಟಿತ್ತು, ಆದರೆ ಕೇಂದ್ರ ಸರ್ಕಾರವು ಇದಕ್ಕೆ ಸ್ಪಂದಿಸುವ ಕಾರಣ ಸಿದ್ದರಾಮಯ್ಯ (Siddaramaih) ಅವರ ಕನಸಿನ ಯೋಜನೆಯದ ಅನ್ನಭಾಗ್ಯ ಯೋಜನೆಗೆ ಸ್ವಲ್ಪ ಹೊಡೆತ ಬಿತ್ತು.
ಆದರೂ ಕೂಡ ಪರ ರಾಜ್ಯಗಳಿಂದಾದರೂ ಅಕ್ಕಿ ಖರೀದಿಸಿ ತಂದು ಯೋಜನೆಯನ್ನು ಯಶಸ್ವಿ ಮಾಡಲೇಬೇಕೆಂದು ಶತ ಪ್ರಯತ್ನ ಪಟ್ಟರಾದರೂ ಬೆಲೆ ಹೊಂದಾಣಿಕೆಯಾಗದೆ ಸೋತು ಬದಲಿ ವ್ಯವಸ್ಥೆ ಮಾಡಿದೆ. ಈಗ ಅನ್ನಭಾಗ್ಯ ಯೋಜನೆಯಡಿ ಎಂದಿನಂತೆ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ 5Kg ಜೊತೆಗೆ ರಾಜ್ಯ ಸರ್ಕಾರ ಕೊಡಬೇಕಿದ್ದ 5Kg ಅಕ್ಕಿ ಬದಲು ಪ್ರತಿ ಸದಸ್ಯನಿಗೆ Kgಗೆ 34 ರೂ. ನಂತೆ ಒಬ್ಬ ಸದಸ್ಯನಿಗೆ 170 ರೂ. ಆ ಕುಟುಂಬದ ಮುಖ್ಯಸ್ಥನ ಖಾತೆಗೆ ಜಮೆ ಮಾಡುವ ನಿರ್ಧಾರಕ್ಕೆ ಬಂತು.
ಅಕ್ಕಿ ಖರೀದಿ ಸಾಧ್ಯವಾಗುವವರೆಗೂ ಯಥಾಸ್ತುತಿ ಮುಂದುವರೆಯಲಿದೆ ಎಂದು ಹೇಳಿತ್ತು, ಅಂತೆಯೇ ಜುಲೈ ತಿಂಗಳಿನಿಂದ ಫಲಾನುಭವಿಗಳು ಅನ್ನಭಾಗ್ಯ (Annabhagya amount) ಮತ್ತು ಧನಭಾಗ್ಯವನ್ನು ಪಡೆಯುತ್ತಿದ್ದಾರೆ. ಆದರೆ ಕೊಟ್ಟ ಮಾತಿನಂತೆ ಅಕ್ಕಿಯನ್ನೇ ಕೊಟ್ಟಿದ್ದರೆ ಎಷ್ಟೋ ಹೊಟ್ಟೆಗಳು ತುಂಬುತ್ತಿತ್ತು, ನಿಜವಾಗಿಯೂ ಯೋಜನೆ ಸಾರ್ಥಕವಾಗುತ್ತಿತ್ತು ಎನ್ನುವುದು ಅನೇಕರವಾದವಾದ. ಅದರಲ್ಲೂ ಈಗ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದೆ.
ಬರ ಘೋಷಣೆಯಾಗಿರುವ ತಾಲೂಕುಗಳಲ್ಲಾದರು ಅನ್ನಭಾಗ್ಯ ಯೋಜನೆಗೆ 10Kg ಅಕ್ಕಿಯೇ ದೊರಕುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿತ್ತು ಆದರೆ ಈಗ ಅದಕ್ಕಾಗಿ ಕಾಯುತ್ತಿರುವವರಿಗೆ ರಾಜ್ಯ ಸರ್ಕಾರ ಶಾ’ಕ್ ನೀಡೀದೆ. ಕೇಂದ್ರ ಸರ್ಕಾರದಿಂದ ನೀಡುತ್ತಿರುವ ಅಕ್ಕಿಯಲ್ಲೂ ಕೂಡ 2 Kgಗೆ ಕತ್ತರಿ ಹಾಕಲು ಮುಂದಾಗಿದೆ.
ಕೇಂದ್ರ ಸರ್ಕಾರದಿಂದ ಸಿಗುತ್ತಿರುವ 5Kg ಅಕ್ಕಿಯಲ್ಲಿ 3Kg ಅಕ್ಕಿ ಕೊಟ್ಟು 2Kg ಅಕ್ಕಿ ಬದಲಿಗೆ ರಾಗಿ ವಿತರಿಸುವಂತೆ ಆಹಾರ ಇಲಾಖೆ ಅಧಿಕಾರಿಗಳು ನ್ಯಾಯಬೆಲೆ ಅಂಗಡಿಗಳಿಗೆ ಆದೇಶ ಹೊರಡಿಸಿದ್ದಾರೆ. ರಾಗಿ ಬೇಡ ಅಕ್ಕಿಯೇ ಬೇಕು ಎನ್ನುವವರೆಗೂ ಕೂಡ ಕಡ್ಡಾಯವಾಗಿ ರಾಗಿಯನ್ನು ಪಡೆಯಲು ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರ ಇದ್ದಕ್ಕಿದ್ದ ಹಾಗೆ ಈ ರೀತಿ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎನ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ, ಆಹಾರ ಇಲಾಖೆಯ ಅಧಿಕಾರಿಗಳು ಕೂಡ ಈ ಬಗ್ಗೆ ಸ್ಪಷ್ಟತೆ ನೀಡಲು ನಿರಾಕರಿಸಿದ್ದಾರೆ. ಅನ್ನಭಾಗ್ಯ ಯೋಜನೆ ಬಗ್ಗೆ ಗ್ಯಾರಂಟಿ ಕಾರ್ಡ್ ನೀಡದಾಗ 10Kg ಅಕ್ಕಿಯನ್ನೇ ನೀಡಲಾಗುವುದು.
ಈ ಮೂಲಕ ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡುವುದು ನಮ್ಮ ಗುರಿ, ಕರ್ನಾಟಕದಲ್ಲಿ ಯಾರು ಕೂಡ ಹಸಿದು ಮಲಗಬಾರದು ಎಂದು ಹೇಳುತ್ತಿದ್ದ ರಾಜ್ಯ ಸರ್ಕಾರವು 8Kg ಅಕ್ಕಿ ಮತ್ತು 2Kg ಆಯಾ ಪ್ರದೇಶಗಳಲ್ಲಿ ಬಳಸುವ ರಾಗಿ, ಜೋಳ ಅಥವಾ ಗೋಧಿಯನ್ನು ನೀಡುತ್ತೇವೆ ಎಂದು ಬಳಿಕ ಹೇಳಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಈ ನಿರ್ಧಾರಕ್ಕೆ ಬಂದಿರುವುದು ರಾಜ್ಯ ಸರ್ಕಾರ ಅಕ್ಕಿ ಕೊರತೆ ಎದುರಿಸುತ್ತಿದೆಯೇ ಎಂದು ಗೊಂದಲಕ್ಕೀಡುಮಾಡಿದೆ