Big Boss
ಇದೇ ಭಾನುವಾರ ಕನ್ನಡ ಬಿಗ್ ಬಾಸ್ ಸೀಸನ್ -11 ರ (Bigboss -11) ಗ್ರಾಂಡ್ ಫಿನಾಲೆ ನಡೆದು 11ನೇ ಸೀಸನ್ ಕೂಡ ಯಶಸ್ವಿಯಾಗಿ ಮುಕ್ತಾಯ ಕಂಡಿದೆ. ಕುರಿಗಾಹಿ ಹನುಮಂತ ಪ್ರೇಕ್ಷಕರ ಅಪೇಕ್ಷೆಯಂತೆ ವಿನ್ನರ್ ಆಗಿದ್ದರೆ, ಈವರೆಗೂ ಅದ್ಭುತವಾಗಿದೆ ಆಟವಾಡಿದ್ದ ತ್ರಿವಿಕ್ರಮ್ ರನ್ನರ್ ಅಪ್ ಆಗಿ ಹೊರ ಬಿದ್ದಿದ್ದಾರೆ.
ಸತತವಾಗಿ ಮೂರು ತಿಂಗಳಿಗಿಂತ ಹೆಚ್ಚು ಕಾಲ ಈ ಸಮಯಕ್ಕೆ ಬಿಗ್ ಬಾಸ್ ಕಾರ್ಯಕ್ರಮ ನೋಡುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಅಭಿಮಾನಿಗಳಿಗೆ ಸೋಮವಾರದಿಂದಲೇ ಮುಂದಿನ ಸೀಸನ್ ಬಗ್ಗೆ ಕುತೂಹಲ ಹೆಚ್ಚಾಗಿದೆ. ಮುಂದಿನ ಸೀಸನ್ ದೊಡ್ಮನೆ ಸೇರುವ ಆಟಗಾರರು ಯಾರು ಎನ್ನುವುದು ಮಾತ್ರವಲ್ಲದೆ ಕಾರ್ಯಕ್ರಮ ನಡೆಸಿಕೊಡುವವರು ಯಾರು ಎನ್ನುವ ವಿಚಾರದಿಂದ ಕೂಡ ತನ್ನ ನಿರೀಕ್ಷೆ ಹೆಚ್ಚಿಸಿದೆ.
ಯಾಕೆಂದರೆ ಸ್ವತಃ ಕಿಚ್ಚ ಸುದೀಪ್ (Kicha Sudeep) ಅವರೇ ತಾವು ಇನ್ನು ಮುಂದೆ ಬಿಗ್ ಬಾಸ್ ನಿರೂಪಣೆ ಮಾಡುವುದಿಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ. ಬಿಗ್ ಬಾಸ್ ಸೀಸನ್ 11ರ ಆರಂಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಕಿಚ್ಚ ಸುದೀಪ್ ರವರೇ ಚಾನೆಲ್ ಅವರ ಒತ್ತಾಯದ ಮೇರೆಗೆ ಈ ಸೀಸನ್ ಒಪ್ಪಿಕೊಳ್ಳಬೇಕಾಯಿತು, ನಾನಾ ಕಾರಣಗಳಿಂದ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡಲು ಆಗುತ್ತಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಸ್ವಯಂ ತಾವೇ ಈ ಸೀಸನ್ ಕೊನೆಯ ನಿರೂಪಣೆಯನ್ನು ಖಚಿತಪಡಿಸಿ ಬಿಟ್ಟರು. ಆಗಿನಿಂದ ಮುಂದಿನ ಸೀಸನ್ ಹೋಸ್ಟ್ ಮಾಡಲು ಯಾರು ಅರ್ಹರು ಎನ್ನುವ ಚರ್ಚೆ ನಡೆಯುತ್ತಲೇ ಇದೆ ಮತ್ತು ಈ ಪಟ್ಟಿಯಲ್ಲಿ ಕನ್ನಡದ ಅನೇಕ ಸ್ಟಾರ್ ಹೀರೋಗಳ ಹೆಸರುಗಳು ಕೂಡ ಕೇಳಿ ಬರುತ್ತಿದೆ.
ಸೀಸನ್ 11ರ ಆರಂಭಕ್ಕೂ ಮುನ್ನವೇ ಇಂತಹ ಗುಮಾನಿ ಇದ್ದಿದ್ದು ನಿಜ. ಪೂರಕವೆಂಬಂತೆ ಪ್ರೊಮದಲ್ಲೂ ಕೂಡ ಕನ್ಫ್ಯೂಸ್ ಮಾಡಲಾಗಿತ್ತು. ಆಗ ಜನ ಸೀಸನ್ 11ರ ನಿರೂಪಕ ರಿಷಬ್ ಶೆಟ್ಟಿ ಆಗಿರಬಹುದು ಎಂದು ತೀರ್ಮಾನ ಮಾಡಿ ಬಿಟ್ಟಿದ್ದರು ಈಗ ಮತ್ತೆ ಅವರ ಹೆಸರೇ ಕೇಳಿ ಬರುತ್ತಿದೆ.
ಆದರೆ ರಿಷಬ್ ಶೆಟ್ಟಿ ಅವರು ತಮ್ಮ ಅನೇಕ ಪ್ರಾಜೆಕ್ಟ್ ಗಳಲ್ಲಿ ಬಿಸಿ ಆಗಿದ್ದಾರೆ ಅಲ್ಲದೆ ಇದೇ ಅವರ ನಿರೂಪಣೆಯ ಮೊದಲ ರಿಯಾಲಿಟಿ ಶೋ ಕೂಡ ಆಗಿರುವುದರಿಂದ ಬಿಗ್ ಬಾಸ್ ಹ್ಯಾಂಡಲ್ ಮಾಡಲಾಗುತ್ತದೆಯೇ ಎನ್ನುವ ಅನುಮಾನ ಹಾಗೂ ಕುತೂಹಲ ಇದೆ ಮತ್ತು ಈ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಹೆಸರು ಹೊರತೆನಾಗಿಲ್ಲ.
ಯಶ್ ಅವರು ಕೂಡ ಇಂಟರ್ನ್ಯಾಷನಲ್ ಪಾನ್ ಸಿನಿಮಾ ಮಾಡುವ ಕನಸು ಹೊಂದಿರುವುದರಿಂದ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವುದು ಅನುಮಾನ ಇದೆ ಮತ್ತು ಯಶ್ ಅವರಿಗೂ ಕೂಡ ಇದೇ ಅವರ ನಿರೂಪಣೆಯ ಮೊದಲ ರಿಯಾಲಿಟಿ ಶೋ ಮುಂದುವರೆದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಮೇಶ್ ಅರವಿಂದ್, ಗೋಲ್ಡನ್ ಸ್ಟಾರ್ ಗಣೇಶ್ ರವರ ಹೆಸರುಗಳು ಕೂಡ ಕೇಳಿ ಬರುತ್ತಿವೆ.
ಈಗಾಗಲೇ ಇವರು ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ಜನರ ಮನಸ್ಸಿನಲ್ಲಿ ಸ್ಥಾನ ಗಿಟ್ಟಿಸಿರುವುದರಿಂದ ಬಿಗ್ ಬಾಸ್ ಕಾರ್ಯಕ್ರಮ ನಡೆಸಿ ಕೊಡುವುದಕ್ಕೆ ಇವರಲ್ಲಿ ಒಬ್ಬರನ್ನು ಆರಿಸಿಕೊಂಡರೆ ಸೂಕ್ತ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಅಕುಲ್ ಬಾಲಾಜಿ ಹೆಸರು ಕೂಡ ಕೇಳಿಬರುತ್ತದೆ. ನಿಮ್ಮ ಪ್ರಕಾರ ಯಾರು ಬಿಗ್ ಬಾಸ್ ನಿರೂಪಕರಾಗಬೇಕು? ಎನ್ನುವುದನ್ನು ಕಾಮೆಂಟ್ ಮಾಡಿ ತಿಳಿಸಿ.