ಹಲವು ಕಲಾವಿದರು ಗಳಿಗೆ ಅಪ್ಪು ಹೆಲ್ತ್ ಕಾರ್ಡ್ ವಿತರಿಸಿದ ಅಶ್ವಿನಿ ಪುನೀತ್ ಮತ್ತು ಕಾವೇರಿ ಆಸ್ಪತ್ರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Powerstar Puneeth Rajkumar ) ದೇವಮಾನವನಂತೆ ಭೂಮಿಗೆ ಬಂದು ಜನರನ್ನು ಹೇಗೆ ಪ್ರೀತಿಸಬೇಕು ಇತರರ ಕಷ್ಟಗಳಿಗೆ ಹೇಗೆ ಸ್ಪಂದಿಸಬೇಕು ಎನ್ನುವ ಪಾಠವನ್ನು ಕಲಿಸಿ ಹೃದಯ ವೈಶಾಲತೆ ಮೆರೆದು ಕಣ್ಮರೆಯಾಗಿ ಹೋದ ಕನ್ನಡದ ಕಣ್ಮಣಿ. ಇಂದು ಅವರು ಹಾಕಿಕೊಟ್ಟ ದಾರಿಯಲ್ಲಿ ಹೆಜ್ಜೆ ಇಡುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth) ಅವರು ಆದಷ್ಟು ಅಪ್ಪು ಅವರ ಸ್ಥಾನವನ್ನು ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.
ಅಪ್ಪು ಅವರಂತೆ ಇವರು ಸಹ ಸಮಾಜ ಸೇವೆಯಲ್ಲಿ ತಮ್ಮನ್ನು ತೊಲಗಿಸಿಕೊಂಡು ವರ್ಷದಿಂದ ತಮ್ಮ ಕೈಲಾದಷ್ಟು ಜನ ಸೇವೆ ಮಾಡುತ್ತಲೇ ಬಂದಿದ್ದಾರೆ. ಈಗ ಅಪ್ಪು ಅವರ ಹೆಸರಲ್ಲಿ ಕನ್ನಡ ಸಿನಿಮಾ ಕಲಾವಿದರು ಗಳಿಗೆ ಉಪಯೋಗವಾಗುವಂತಹ ಹೆಲ್ತ್ ಕಾರ್ಡ್ (Health card) ಅನ್ನು ಕಾವೇರಿ ಆಸ್ಪತ್ರೆಯ (Cauvery Hospital) ಸಹಯೋಗದೊಂದಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ವಿತರಿಸಿದ್ದಾರೆ .
ಇಂದು ನಡೆದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆರ್ ಅಶೋಕ್ (R.Ashok) ಅವರು ಕಾಣಿಸಿಕೊಂಡಿದ್ದರು. ಜೊತೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ಸ್ವತಃ ವೇದಿಕೆ ಮೇಲೆ ನಿಂತು ಹಲವಾರು ಕಲಾವಿದರನ್ನು ಕರೆಸಿ ಈ ಕಾರ್ಡ್ ವಿತರಣೆ ಮಾಡಿದ್ದಾರೆ. ಅಷ್ಟಕ್ಕೂ ಇದು ಯಾವ ಕಾರ್ಡ್ ಎಂದು ಹೇಳುವುದಾದರೆ ಅಪ್ಪು ಹೆಸರಲ್ಲಿ ಕೊಡುತ್ತಿರುವ ಅಪ್ಪು ಅಮರ ಹೆಲ್ತ್ ಪ್ರಿವಿಲೇಜ್ ಕಾರ್ಡ್ (Appu adara health prevelize card) .
ಕಾವೇರಿ ಆಸ್ಪತ್ರೆ ಸಹಯೋಗದೊಂದಿಗೆ ಇಂದು ಇದರ ಉದ್ಘಾಟನೆ ಸಮಾರಂಭ ನಡೆದಿತ್ತು. ಸಾಯಿ ಸಂಗಮ ಡೈನೋಸ್ಟಿಕ್ಸ್ ಮತ್ತು ಹೆಲ್ತ್ ಕೇರ್ (Sai Sangama diagnostic sand healthcare) ಆಸ್ಪತ್ರೆಯಿಂದ ಅಪ್ಪು ಅಮರ ಹೆಲ್ತ್ ಪ್ರಿವಲೆಜ್ ಕಾರ್ಡ್ ಅನ್ನು ವಿತರಿಸಲಾಯಿತು. ಈಗಷ್ಟೇ ಕೆಲ ದಿನಗಳ ಹಿಂದೆ ಆರ್ ಅಶೋಕ್ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇದೆ ಸಾಯಿ ಸಂಗಮ ಡಯೋಗ್ನೋಸ್ಟಿಕ್ಸ್ ಮತ್ತು ಹೆಲ್ತ್ ಕೇರ್ ಆಸ್ಪತ್ರೆಯ ಉದ್ಘಾಟನೆ ಸಮಾರಂಭವನ್ನು ಕೂಡ ಮಾಡಿದ್ದರು.
ಅಂದೇ ಈ ವಿಷಯದ ಬಗ್ಗೆ ಚರ್ಚೆ ನಡೆದು ಈಗ ಕಲಾವಿದರಿಗೋಸ್ಕರ ಈ ವ್ಯವಸ್ಥೆಯನ್ನು ಕಾರ್ಯ ರೂಪಕ್ಕೆ ತರಲಾಗಿದೆ. ಟೆಲಿವಿಜನ್ ಅಸೋಸಿಯೇಷನ್ ಎಲ್ಲ ಸದಸ್ಯರಿಗೂ ಕೂಡ ಈ ಕಾಡನ್ನು ವಿತರಿಸಬೇಕು ಎನ್ನುವ ಯೋಜನೆ ಇದೆ. ಆದರೆ ಸಾಂಕೇತಿಕವಾಗಿ ವೇದಿಕೆ ಮೇಲೆ ಕೆಲವು ಕಲಾವಿದರನ್ನಷ್ಟೇ ಕರೆದು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕೈಯಿಂದಲೇ ಈ ಕಾರ್ಡನ್ನು ಕೊಡಿಸಲಾಗಿದೆ.
ಕಿರುತೆರೆ ಮತ್ತು ಹಿರಿತೆರೆಯ ಹಿರಿಯ ಕಲಾವಿದರಾದ ರಾಧಮ್ಮ, ಡಿಂಗ್ರಿ ನಾಗರಾಜ್, ಉದಯ ಶ್ರೀ, ಅಮರನಾಥ್ ಆರಾಧ್ಯ, ಶಿವಕುಮಾರ್ ಆರಾಧ್ಯ, ಟೆನ್ನಿಸ್ ಕೃಷ್ಣ, ಶಂಕರ್ ಭಟ್, ರೇಖಾ ದಾಸ್ ಮತ್ತು ಪ್ರೊಡಕ್ಷನ್ ಮ್ಯಾನೇಜರ್ ಹರ್ಷ, ರಾಜು ನಾಯಕ್, ಲೋಕೇಶ್ ಸೇರಿದಂತೆ ಟೆಲಿವಿಜನ್ ಇಂಡಸ್ಟ್ರಿಯಲ್ಲಿ ತಂತ್ರಜ್ಞರಾಗಿ ಕೆಲಸ ಮಾಡುತ್ತಿರುವ ಹಲವರಿಗೆ ಈ ಹೆಲ್ತ್ ಕಾರ್ಡನ್ನು ವಿತರಿಸಲಾಯಿತು.
ಈ ಯೋಜನೆ ಮುಖ್ಯ ಉದ್ದೇಶ ಹಿರಿಯ ಕಲಾವಿದರು, ಕೆಲವು ಹಾಸ್ಯ ಕಲಾವಿದರು ಮತ್ತು ಸಹಕಲಾವಿದರು ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇವರೆಲ್ಲರಿಗೂ ಉಪಯೋಗ ಆಗಬೇಕು ಎನ್ನುವ ಸಕಾರಣದಿಂದ ಈ ಯೋಜನೆಯನ್ನು ತರಲಾಗಿದೆ.
ಈ ಕಾರ್ಡ್ ಇದ್ದವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ಸಿಗುತ್ತದೆ ಎಂದು ಭರವಸೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಲಾವಿದರಿಗೂ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿಕೊಳ್ಳಲಾಗಿದೆ. ಅಪ್ಪು ಹೆಸರಿನಲ್ಲಿ ಈಗಾಗಲೇ ಸಾಕಷ್ಟು ಒಳ್ಳೆ ಕೆಲಸಗಳು ಜರುಗಿದ್ದು ಇದು ಸಹ ಅವರ ಹೆಸರನ್ನು ಅಮರವಾಗಿ ಇಡುವ ಉದ್ದೇಶದಿಂದ ನಡೆಸಲಾಗುತ್ತಿದೆ.