ಬಯಲಾಗಿದೆ ವರ್ಷದ ಬಳಿಕ ಪುನೀತ್ ರಾಜಕುಮಾರ್(Puneeth Rajkumar Property) ಅವರ ಒಟ್ಟು ಆಸ್ತಿ ಹಾಗೂ ಅದು ಯಾರ್ಯಾರಿಗೆ ಸೇರಿರಬೇಕು ಎನ್ನುವ ವಿಲ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕರ್ನಾಟಕದ ಆಸ್ತಿ ಈಗ ಇಂತಹ ಮರೆಯದ ಮಾಣಿಕ್ಯ, ಮುತ್ತಿನಂತ ಕಣ್ಮಣಿಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಕರ್ನಾಟಕ ರಾಜಕುಮಾರ ನಿಲ್ಲದ ರಾಜ್ಯದಂತೆ ಬರಡಾಗಿದೆ. ಪುನೀತ್ ರಾಜಕುಮಾರ್(Appu) ಅವರು ಇಹ ಲೋಕದ ಯಾತ್ರೆಯನ್ನು ಮುಗಿಸಿ ವರ್ಷದ ಮೇಲೆ ಕಳೆದರೂ ಕೂಡ ಅವರು ಇಲ್ಲ ಎನ್ನುವ ಸತ್ಯ ನಂಬಲಾಗುತ್ತಿಲ್ಲ ಹಾಗೂ ಅವರನ್ನು ನೆನೆದು ಇಡುತ್ತಿರುವ ಕಣ್ಣೀರು ಕಡಿಮೆ ಆಗಿಲ್ಲ.
ಪ್ರತಿನಿತ್ಯ ಕೂಡ ಅಭಿಮಾನಿಗಳು ತಮ್ಮ ಮಾತಿನಲ್ಲಿ ಅಪ್ಪು ಅವರ ಹೆಸರನ್ನು ನೂರು ಬಾರಿ ನೆನೆಯುತ್ತಾರೆ ಹಾಗೂ ಮೀಡಿಯಾ ಮತ್ತು ಸೋಶಿಯಲ್ ವಿಡಿಯೋಗಳಲ್ಲಿ ಸಾಕಷ್ಟು ಫೋಟೋಗಳು ವಿಡಿಯೋಗಳು ಮತ್ತು ಅಪ್ಪು ಅವರ ಕುರಿತ ಸುದ್ದಿ ಸತತವಾಗಿ ಹರಿದಾಡುತ್ತಲೇ ಇದೆ. ಹೀಗಾಗಿ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಅನಿಸುವುದೇ ಇಲ್ಲ. ಈ ರೀತಿ ಜನ ಮನದಲ್ಲಿ ಶಾಶ್ವತವಾಗಿ ಇರುವಂತಹ ಸಾಧನೆ ಮಾಡಿ ದೈವ ಸ್ಥಾನಕ್ಕೆ ಏರಿರುವ ಪುನೀತ್ ಅವರು ಈವರಿಗೆ ಸಂಪಾದನೆ ಮಾಡಿರುವ ಆಸ್ತಿ ಮೌಲ್ಯ ಎಷ್ಟು ಎನ್ನುವ ಚರ್ಚೆಯೂ ಆಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂಬ ಟೈಟಲ್ ಅನ್ನು ಕನ್ನಡ ಚಿತ್ರರಂಗದಿಂದ ಪಡೆದಿರುವ ಇವರು ಬಾಲ ನಟನಾಗಿ ಸಿನಿಮಾ ರಂಗಕ್ಕೆ ಪ್ರವೇಶ ಪಡೆದವರು.
ಆನಂತರ ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ನಿರ್ಮಾಪಕನಾಗಿ ತಾಯಿಗೆ ಸಹಾಯಕ್ಕೆ ನಿಂತಿದ್ದವರು ಪುನಃ ಹೀರೋ ಆಗಿ ಸೆಕೆಂಡ್ ಇನ್ನಿಂಗ್ ಶುರು ಮಾಡಿದ ಅಪ್ಪು ಕೋಟಿ ಗಟ್ಟಲೇ ಸಂಭಾವನೆಯನ್ನು ಪಡೆಯುತ್ತಿದ್ದರು. ಪಡೆದ ಹಣದಲ್ಲಿ ಪರರ ಸಹಾಯಕ್ಕೂ ಮೀಸಲು ಇಡುತ್ತಿದ್ದರು. ಬಲಗೈ ಕೊಟ್ಟದ್ದು ಎಡಗೈಗೂ ತಿಳಿಯಬಾರದು ಎಂಬಂತೆ ಎಲ್ಲವನ್ನು ರಹಸ್ಯವಾಗಿ ಇಟ್ಟಿದ್ದರಾದರು ಆ ಪರಮಾತ್ಮನ ಮನ ಎಷ್ಟು ವಿಶಾಲವಾಗಿತ್ತು ಎನ್ನುವುದು ಅವರ ಸಾವಿನ ನಂತರ ಬಯಲಾಗಿ ಹೋಯಿತು. ಹೀರೋ ಅಲ್ಲದೆ ನಿರ್ಮಾಪಕನಾಗಿ ಪ್ರೊಡಕ್ಷನ್ ಕೂಡ ಶುರು ಮಾಡಿದ್ದ ಇವರು ಪಿ ಆರ್ ಕೆ ಪ್ರೊಡಕ್ಷನ್ ಶುರು ಮಾಡಿ ಧಾರವಾಹಿಗಳನ್ನು ನಿರ್ಮಾಣ ಮಾಡಿದ್ದರು ಮತ್ತು ಸಿನಿಮಾಗಳನ್ನು ಕೂಡ ಮಾಡುವ ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಕನಸು ಕಂಡಿದ್ದರು.
ಜೊತೆ ಜೊತೆಗೆ ಹಲವಾರು ಉದ್ಯಮಗಳಲ್ಲಿ ತಮ್ಮನ್ನು ತೊಡಸಿಕೊಂಡು ಹೀಗೆ ನಾನಾ ಕಡೆಗಳಿಂದ ಆದಾಯ ಪಡೆಯುತ್ತಿದ್ದರು. ತಂದೆ ರಾಜ್ ಕುಮಾರ್(Dr Rajkumar) ಅವರ ಆಸ್ತಿಯನ್ನು ಕೂಡ ಮೂರು ಜನ ಮಕ್ಕಳಿಗೆ ಸಮನಾಗಿ ಭಾಗ ಮಾಡಿಕೊಡಲಾಗಿತ್ತು. ತಂದೆ ಆಸ್ತಿ ಜೊತೆಗೆ 80 ಕೋಟಿ ಅಷ್ಟು ಹಣವನ್ನು ಸ್ವಂತವಾಗಿ ಪುನೀತ್ ಅವರು ಸಂಪಾದನೆ ಮಾಡಿದ್ದಾರೆ. ಅದರಲ್ಲಿ ಮೈಸೂರಿನ ಶಕ್ತಿ ಧಾಮಕ್ಕಾಗಿ ಕೋಟಿಗಟ್ಟಲೆ ಹಣವನ್ನು ಠೇವಣಿ ಇಟ್ಟಿದ್ದಾರೆ. ವೃದ್ದಾಶ್ರಮಗಳು ಅನಾಥಾಶ್ರಮಗಳು ಗೋಶಾಲೆಗಳಿಗೂ ಸಹ ಇವರ ಕಡೆಯಿಂದ ದೇಣಿಗೆ ಹೋಗುತ್ತಿತ್ತು. ಈಗಲೂ ಸಹ ಅವರ ಅನುಪಸ್ಥಿತಿಯಲ್ಲಿ ಅಶ್ವಿನಿ ಅವರು ಇದನ್ನೆಲ್ಲಾ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ಪುನೀತ್ ರಾಜಕುಮಾರ್ ಅವರು ಬೆಂಗಳೂರಿನ ಶಿವನಗರದಲ್ಲಿ ತೋಟ ಹೊಂದಿದ್ದಾರೆ ಹಾಗೂ ದೊಡ್ಡದಾದ ಒಂದು ಬಂಗಲೆ ಸಹ ಹೊಂದಿದ್ದಾರೆ. ತಂದೆಯ ಗಾಜನೂರಿನಲ್ಲಿ ಜಮೀನು ಹಾಗೂ ಬಂಗಲೆಯನ್ನು ಸಹ ಹೊಂದಿದ್ದಾರೆ, ಎಲ್ಲಾ ಸೇರಿ ಒಟ್ಟಾರೆ 200 ಕೋಟಿಗಿಂತಲೂ ಹೆಚ್ಚಿನ ಆಸ್ತಿ ಇವರಿಗೆದೆ ಎಂದು ಹೇಳಲಾಗುತ್ತಿದೆ. ಇಷ್ಟಿದ್ದರೂ ಮಗಳು ಧೃತಿ ವಿದೇಶದಲ್ಲಿ ಸ್ಕಾಲರ್ಶಿಪ್ ಪಡೆದು ಓದುತ್ತಿದ್ದಾರೆ. ಇದನ್ನು ಪುನೀತ್ ರಾಜಕುಮಾರ್ ಹಾಗೂ ರಾಘಣ್ಣ ಅವರೇ ಹೆಮ್ಮೆಯಿಂದ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ. ಅಗರ್ಭ ಶ್ರೀಮಂತೆ ಆಗಿದ್ದರೂ ಕೂಡ ಸಿಂಪಲ್ ಆಗಿ ಬದುಕುತ್ತಿರುವ ಧೃತಿ ಗುಣವನ್ನು ಹಾಡಿ ಹೋಗಳುತ್ತಿದ್ದಾರೆ.
ಹಾಗಾದರೆ ಪುನೀತ್ ರಾಜಕುಮಾರ್ ಅವರು ಹೊಂದಿರುವ ಈ ಎಲ್ಲಾ ಆಸ್ತಿ ಯಾರಿಗೆ ಸೇರಬೇಕು ಎಂದು ವಿಲ್ ಆಗಿದೆಯಾ ಎಂದರೆ ಹೌದು. ಇತ್ತೀಚಿಗೆ ಬಂದ ಮಾಹಿತಿಗಳ ಪ್ರಕಾರ ಪುನೀತ್ ರಾಜಕುಮಾರ್ ಅವರು ಈ ಮೊದಲೇ ವಿಲ್ ಮಾಡಿ ಇಟ್ಟಿದರಂತೆ. ಆ ವಿಲ್ ನ ಪ್ರಕಾರ ಇವರ ಒಟ್ಟು ಆಸ್ತಿಯಲ್ಲಿ ಪತ್ನಿ ಅಶ್ವಿನಿ ಹಿರಿಯ ಮಗಳು ಧೃತಿ ಹಾಗೂ ಕಿರಿಯ ಮಗಳು ವಂದನ ಅವರಿಗೆ ಪಾಲು ಸೇರಬೇಕು ಅದರ ಜೊತೆಗೆ ಸ್ವಲ್ಪ ಭಾಗವನ್ನು ರಾಘಣ್ಣ ಅವರಿಗೆ ಸಹ ಕೊಡಬೇಕು ಎಂದು ಇದೆಯಂತೆ. ಈ ರೀತಿ ಮಾಹಿತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು ಇದು ಅವರ ಕುಟುಂಬದವರೇ ಹೇಳಿಕೊಂಡಿದ್ದಾರೆ ಎನ್ನುವ ಬಗ್ಗೆ ಯಾವುದೇ ನಿಖರ ಪುರಾವೆ ಇಲ್ಲ. ಆದರೆ ಜನರು ಮಾತ್ರ ಪುನೀತ್ ರಾಜಕುಮಾರ್ ಅವರೇ ಕರ್ನಾಟಕದ ಆಸ್ತಿ ಮತ್ತು ಪುನೀತ್ ರಾಜಕುಮಾರ್ ಅವರು ಗಳಿಸಿರುವ ಇಷ್ಟು ಕೋಟಿ ಅಭಿಮಾನಿಗಳಿದ್ದಾರೆ, ಅವರು ಗಳಿಸಿರುವ ಈ ಜನರ ಪ್ರೀತಿಯೇ ಅವರ ನಿಜವಾದ ಆಸ್ತಿ ಎನ್ನುವ ದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ.