Saturday, September 30, 2023
Home cinema news ನಾನು ಚಿತ್ರರಂಗದಿಂದ ದೂರ ಉಳಿಯೋಕೆ ಇದೆ ನಿಜವಾದ ಕರಣ ಎಂದು ಕಣ್ಣೀರು ಹಾಕಿದ ನಟಿ ರಕ್ಷಿತಾ...

ನಾನು ಚಿತ್ರರಂಗದಿಂದ ದೂರ ಉಳಿಯೋಕೆ ಇದೆ ನಿಜವಾದ ಕರಣ ಎಂದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್.

ಬಳ್ಳಿಯಂತಿದ್ದ ನಟಿ ರಕ್ಷಿತಾ ಇದ್ದಕ್ಕಿದ್ದ ಹಾಗೇ ದಪ್ಪ ಆಗಿದ್ದು ಹೇಗೆ ಗೊತ್ತ.? ಟಾಪ್ ನಟಿ ಆಗಿದ್ದ ರಕ್ಷಿತಾ ಚಿತ್ರರಂಗದಿಂದ ದೂರ ಉಳಿಯೋಕೆ ಅಸಲಿ ಕಾರಣವೇನು ಗೊತ್ತ.?

ಕ್ರೇಝಿ ಕ್ವೀನ್ ರಕ್ಷಿತಾ(Rakshitha) ಅವರು ತಮ್ಮ ಕ್ಯೂಟ್ ಕ್ಯೂಟ್ ಎಕ್ಸ್ಪ್ರೆಶನ್ ಗಳಿಂದಲೇ ಒಂದು ಸಮಯದಲ್ಲಿ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದ ಚಂದುಳ್ಳಿ ಚೆಲುವೆ. ಕಲೆ ಎನ್ನುವುದು ಇವರಿಗೆ ರಕ್ತವಾಗಿ ಬಂದಿದೆ ಎನ್ನಬಹುದು. ಯಾಕೆಂದರೆ ಇವರ ತಂದೆ ಬಿ.ಸಿ ಗೌರಿಶಂಕರ್ ಅವರು ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಹ ಮತ್ತು ತಾಯಿ ಮಮತಾರಾವ್ ಅವರು ಕೂಡ ಡಾಕ್ಟರ್ ರಾಜಕುಮಾರ್ ಅಂತಹ ಮೇರು ನಟರೊಂದಿಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದ ಪ್ರತಿಭಾನ್ವಿತ ಕಲಾವಿದೆ.

ಹೀಗಾಗಿ ಇವರಿಗೂ ಸಹಜವಾಗಿ ಬಣ್ಣದ ಜಗತ್ತು ಆಕರ್ಷಿಸಿತ್ತು. 2002ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೀರೋ ಆಗಿ ಅಭಿನಯಿಸಿದ್ದ ಅಪ್ಪು ಎನ್ನುವ ಸಿನಿಮಾದಲ್ಲಿ ಇವರು ಕೂಡ ಮೊದಲ ಬಾರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡರು. ಇವರ ನಿಜಶನಾಮಧೇಯ ಶ್ವೇತ ಎಂಬುದಾಗಿತ್ತು. ಪಾರ್ವತಮ್ಮ ರಾಜಕುಮಾರ್ ಅವರೇ ಇವರಿಗೆ ರಕ್ಷಿತಾ(Rakshita) ಎಂದು ಮರು ನಾಮಕರಣ ಮಾಡಿದರು. ಅಂದಿನಿಂದ ಇವರು ಇಂಡಸ್ಟ್ರಿಯಲ್ಲಿ ರಕ್ಷಿತಾ ಎನ್ನುವ ಹೆಸರಿನಿಂದಲೇ ಗುರುತಿಸಿಕೊಂಡರು. ಇದಾದ ಬಳಿಕ ದರ್ಶನ(Darshan) ಅವರ ಜೊತೆ ನಟಿಸಿದ ಕಲಾಸಿಪಾಳ್ಯ ಚಿತ್ರ ಇವರ ವೃತ್ತಿ ಬದುಕಿನಲ್ಲಿ ಬಹುದೊಡ್ಡ ಮಟ್ಟದ ಬ್ರೇಕ್ ನೀಡಿತ್ತು.

ದರ್ಶನ್ ಮತ್ತು ರಕ್ಷಿತಾ ಕೆಮಿಸ್ಟ್ರಿ ಬಹಳ ಚೆನ್ನಾಗಿ ವರ್ಕ್ ಆಗುತ್ತಿದ್ದ ಕಾರಣ ಸಾಲು ಸಾಲಾಗಿ ಮಂಡ್ಯ ಸುಂಟರಗಾಳಿ ಮತ್ತು ಅಯ್ಯ ಸಿನಿಮಾಗಳಲ್ಲಿ ಅಭಿನಯಿಸಿದರು. ಅಷ್ಟು ಸಿನಿಮಾಗಳು ಸೂಪರ್ ಹಿಟ್ ಸಿನಿಮಾಗಳಾಗಿ ಒಳ್ಳೆಯ ಹೆಸರನ್ನು ಕೂಡ ಗಳಿಸಿ ನಿರ್ಮಾಪಕರ ಜೇಬು ತುಂಬಿಸಿತ್ತು. ಸ್ಯಾಂಡಲ್ ವುಡ್ ನ ಸ್ಟಾರ್ ಗಳಾಗಿದ್ದ ಉಪೇಂದ್ರ, ರವಿಚಂದ್ರನ್, ಶಿವರಾಜಕುಮಾರ್, ಸುದೀಪ್, ಶ್ರೀ ಮುರಳಿ,ವಿಜಯ ರಾಘವೇಂದ್ರ ಇವರುಗಳ ಜೊತೆಗೂ ನಾಯಕ ನಟಿಯಾಗಿ ಕಾಣಿಸಿಕೊಂಡು ಡಾಕ್ಟರ್ ವಿಷ್ಣುವರ್ಧನ್ ಅವರಿಗೆ ತಂಗಿಯಾಗಿ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ಇವರು ಕೆಲವೇ ಕೆಲವು ವರ್ಷಗಳು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದರೂ ಸಹಾ ಬಹಳ ಕಡಿಮೆ ಸಿನಿಮಾ ಮಾಡಿದ್ದರು ಇವರಗಿದ್ದ ಕ್ರೇಜ್ ಬೇರೆ ಲೆವೆಲ್ ದೇ ಆಗಿತ್ತು. 2007 ರಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಅವರನ್ನು ಕೈಹಿಡಿದ ರಕ್ಷಿತಾ ಪ್ರೇಮ್ ಅವರು ಆ ಬಳಿಕ ಯಾವ ಸಿನಿಮಾದಲ್ಲೂ ಕೂಡ ನಟಿಸಲಿಲ್ಲ. ಮತ್ತೆ ಇವರನ್ನು ತೆರೆ ಮೇಲೆ ಕಂಡಿದ್ದು ಕಿರುತೆರೆಯ ಸ್ವಯಂವರ ಎನ್ನುವ ರಿಯಾಲಿಟಿ ಶೋ ಅಲ್ಲಿ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಈ ಕಾರ್ಯಕ್ರಮದಲ್ಲಿ ನಿರೂಪಕಿ ಆಗಿ ರಕ್ಷಿತಾ ಪ್ರೇಮ್ ಅವರು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಹೆಸರಿಗೆ ತಕ್ಕಂತೆ ಇದು ಮದುವೆ ಆಗುವ ಜೋಡಿಗಳನ್ನು ಒಂದು ಮಾಡುವ ಕಾರ್ಯಕ್ರಮ ಆಗಿತ್ತು.

ಅದರಲ್ಲಿ ಒಬ್ಬ ಹುಡುಗಿಗೆ ತನಗೆ ಇಷ್ಟ ಬಂದ ಹುಡುಗನನ್ನು ಆರಿಸಿಕೊಳ್ಳುವುದಕ್ಕೆ ಅವಕಾಶಕೊಟ್ಟು ಹುಡುಗರಿಗೆ ಹುಡುಗಿಯನ್ನು ಮೆಚ್ಚಿಸಲು ಟಾಸ್ಕ್ ಕೊಡಲಾಗುತ್ತಿತ್ತು. ಆ ವೇದಿಕೆ ಮೇಲೆ ಹಲವು ಜೋಡಿಗಳು ವಿವಾಹ ನಿಶ್ಚಯ ಮಾಡಿಕೊಂಡು ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ನಂತರದ ದಿನಗಳಲ್ಲಿ ರಕ್ಷಿತಾ ಪ್ರೇಮ್ ಅವರು ಸಿನಿಮಾಗಳ ನಿರ್ಮಾಪಕಿ ಆಗಿ ಕಾಣಿಸಿಕೊಳ್ಳಲು ಶುರು ಮಾಡಿದರು. ಪ್ರೇಮ್ ಅವರ ಅಭಿನಯದ ಮತ್ತು ನಿರ್ದೇಶನದ ಡಿಕೆ ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಿದರು ಮತ್ತು ಈಗ ತಮ್ಮ ರಾಣ ಅವರನ್ನು ಲಾಂಚ್ ಮಾಡುವ ಸಲುವಾಗಿ ಏಕ್ ಲವ್ ಯಾ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಇದರ ಜೊತೆಗೆ ಪ್ರೇಮ್ ಅವರು ನಿರ್ದೇಶನ ಮಾಡುವ ಸಿನಿಮಾ ಕೆಲಸಗಳಲ್ಲಿ ಅವರಿಗೆ ಸಹಕಾರಿ ಆಗುತ್ತಾ ಝೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮವಾದ ಕಾಮಿಡಿ ಕಿಲಾಡಿಗಳು ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿ ಆಗಿಯು ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತಾ ಪ್ರೇಮ್ ಅವರನ್ನು ಎಲ್ಲರೂ ನೀವು ವ್ಯತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಯಾಕೆ ಸಿನಿಮಾ ಮಾಡದೆ ಇರುವ ನಿರ್ಧಾರ ಕೈಗೊಂಡಿರಿ ಎಂದು ಪ್ರಶ್ನಿಸುತ್ತಲೇ ಇದ್ದಾರೆ. ಇದೀಗ ಅದಕ್ಕೆ ಮೌನ ಮುರಿದು ರಕ್ಷಿತಾ ಉತ್ತರಿಸಿದ್ದಾರೆ. ನಾನು ಮದುವೆ ಆದ ಬಳಿಕ ಬೇಗ ತಾಯಿಯಾದೆ ನನ್ನ ಮಗನ ಲಾಲನೆ ಪಾಲನೆ ಅಲ್ಲಿ ಬಿಝಿ ಆದೆ. ಆ ಬಳಿಕ ನನಗೆ ಮತ್ತೆ ಬಣ್ಣ ಹಚ್ಚಬೇಕು ಅನಿಸಲಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.

ಆದರೆ ಹಲವರು ರಕ್ಷಿತ ಅವರು ಮದುವೆಯಾದ ಮೇಲೆ ವಿಪರೀತವಾಗಿ ದಪ್ಪ ಆಗಿರುವುದಕ್ಕೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಅವರು ಅಭಿನಯಿಸುತ್ತಿಲ್ಲ ಎಂದು ತಪ್ಪು ತಿಳಿದುಕೊಂಡಿದ್ದಾರೆ. ರಕ್ಷಿತಾ ಅವರು ಹೇಗಿದ್ದೀರೂ ಕೂಡ ಅವರ ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ ಈಗಲೂ ಸಹ ಸಿನಿಮಾ ಮಾಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ರಕ್ಷಿತಾ ಅವರು ಅವರ ಅಭಿಮಾನಿಗಳ ಮನವಿಗೆ ಮನಗೊಟ್ಟು ಮತ್ತೆ ಸಿನಿಮಾ ಮಾಡಲಿ ಎಂದು ನಾವು ಸಹ ಕೇಳಿಕೊಳ್ಳೋಣ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.

- Advertisment -