Tuesday, October 3, 2023
Home Viral News ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣ ಮಾಡುವಾಗಲೂ ಅಪ್ಪು ಅವರನ್ನು ನೆನೆದು ಭಾವುಕರಾದ ಅಶ್ವಿನಿ. ಈ ವಿಡಿಯೋ...

ಬಳ್ಳಾರಿಯಲ್ಲಿ ಅಪ್ಪು ಪ್ರತಿಮೆ ಅನಾವರಣ ಮಾಡುವಾಗಲೂ ಅಪ್ಪು ಅವರನ್ನು ನೆನೆದು ಭಾವುಕರಾದ ಅಶ್ವಿನಿ. ಈ ವಿಡಿಯೋ ನೋಡಿದ್ರೆ ನಿಜಕ್ಕೂ ಕರಳು ಚೂರ್ ಅನ್ನುತ್ತೆ.

ಜನವರಿ 21 ಶುಕ್ರವಾರ ಬಳ್ಳಾರಿ ಉತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಭಾಗವಾಗಿ ಪುನೀತ್ ರಾಜಕುಮಾರ್ ಅವರ 23 ಅಡಿ ಎತ್ತರದ ಪ್ರತಿಮೆಯನ್ನು ಲೋಕಾವರಣ ಮಾಡಬೇಕು ಎನ್ನುವುದು ಅಲ್ಲಿದ್ದ ಅಪ್ಪು ಅಭಿಮಾನಿಗಳ ಆಸೆ ಆಗಿತ್ತು. ಇದರ ಜೊತೆಗೆ ಅಲ್ಲೇ ಪಕ್ಕದಲ್ಲಿದ್ದ ಕ್ರೀಡಾಪಾರ್ಟ್ ಮತ್ತು ಕೆರೆ ಒಂದಕ್ಕೂ ಸಹ ಅಪ್ಪು ಅವರನ್ನು ಹೆಸರನ್ನು ಇಡಬೇಕು ಎಂದು ಕೋರಿಕೆ ಸಲ್ಲಿಸಿದ್ದರು. ಇದೆಲ್ಲವನ್ನು ಶ್ರೀ ರಾಮುಲು(Shree Ramulu) ಅವರೇ ಹೆಗಲಿಗೆ ಹಾಕಿಕೊಂಡು ಅಚ್ಚುಕಟ್ಟಾಗಿ ಎಲ್ಲಾ ಕಾರ್ಯವನ್ನು ನಡೆಸಿ ಅದ್ದೂರಿಯಾಗಿ ಕಾರ್ಯಕ್ರಮವನ್ನು ಸಹ ಆಯೋಜಿಸಿದ್ದರು.

ಇದಕ್ಕೆ ಅಪ್ಪು ಅವರ ಸಹೋದರ ರಾಘವೇಂದ್ರ ರಾಜಕುಮಾರ್(Raghanna) ಮತ್ತು ಪ್ರೀತಿಯ ಮಡದಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಅತಿಥಿಗಳಾಗಿ ಕರೆಸಿ ಪುನೀತ್ ರಾಜಕುಮಾರ್ ಅವರ ಸಾವಿರಾರು ಸಂಖ್ಯೆಯ ಅಭಿಮಾನಿಗಳ ನಡುವೆ ಕಾರ್ಯಕ್ರಮವನ್ನು ನಡೆಸಲಾಯಿತು. ಅಪ್ಪು ಅವರ 23 ಅಡಿ ಎತ್ತರದ ಪ್ರತಿಮೆ ಕರ್ನಾಟಕದಲ್ಲಿರುವ ಅತಿ ಎತ್ತರದ ಅಪ್ಪು ಪ್ರತಿಮೆ ಆಗಿದೆ. ಇದು ಲೋಕಾವರಣ ಗೊಳ್ಳುತ್ತಿದ್ದಂತೆ ಅಪ್ಪು ಅವರ ಮಡದಿ ಅಶ್ವಿನಿ ಅವರು ಕಣ್ಣಲ್ಲಿ ನೀರು ತುಂಬಿಕೊಂಡು ಕಣ್ಣೀರಿಟ್ಟಿದ್ದಾರೆ.

ಇದೇ ರೀತಿ ಪುನೀತ ಪರ್ವ(Puneeth parva) ಕಾರ್ಯಕ್ರಮದಲ್ಲಿ ಕೂಡ ಅಶ್ವಿನಿ ಅವರಿಗೆ ಆಗಿತ್ತು. ವೇದಿಕೆ ಮೇಲೆ ಇಡೀ ರಾಜಕುಮಾರ್ ಕುಟುಂಬವು ಬಂದು ಪುನೀತ್ ರಾಜಕುಮಾರ್ ಅವರನ್ನು ನೆನೆದು ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಈ ಹಾಡನ್ನು ಹಾಡುತ್ತಿದ್ದರು. ಹಾಡು ಮುಗಿಯುವ ತನಕ ಕುಟುಂಬಸ್ಥರ ಗೌರವಕ್ಕಾಗಿ ಕಷ್ಟಪಟ್ಟು ಅವಡುಗಚ್ಚಿಕೊಂಡು ವೇದಿಕೆ ಮೇಲೆ ನಿಂತಿದ್ದ ಅಶ್ವಿನಿ ಪುನೀತ್ ಅವರು ಹಾಡು ಮುಗಿಯುತ್ತಿದ್ದಂತೆ ವೇದಿಕೆ ಹಿಂದೆ ಹೋಗಿ ಗಳಗಳನೆ ಅಳುತ್ತಿದ್ದ ದೃಶ್ಯ ಎಲ್ಲರ ಕರುಳನ್ನು ಕೂಡ ಚುರ್ ಎನಿಸಿತು.

ಮಗಳು ವಂದನ(Vandana) ಎಷ್ಟೇ ಸಮಾಧಾನ ಮಾಡುವ ಪ್ರಯತ್ನ ಮಾಡಿದರು ಅಶ್ವಿನ್ ಅವರ ಕಣ್ಣೀರು ನಿಲ್ಲುತ್ತಿರಲಿಲ್ಲ. ಈಗ ಇದೇ ರೀತಿ ಬಳ್ಳಾರಿ ಉತ್ಸವ ಕಾರ್ಯಕ್ರಮದಲ್ಲೂ ಕೂಡ ಆಗಿದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದುಃಖ ಪಟ್ಟಿದ್ದಾರೆ. ಅಪ್ಪು ಅವರ ಅಗಲಿಕೆ ನಂತರ ಅವರ ಎಲ್ಲಾ ಜವಾಬ್ದಾರಿಗಳನ್ನು ಒಪ್ಪಿಕೊಂಡಿದ್ದಾರೆ. ಕುಟುಂಬವನ್ನು ನಡೆಸುವುದರ ಜೊತೆಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನು ಅಪ್ಪು ಅವರ ಕನಸಂತೆ ಚೆನ್ನಾಗಿ ಓದಿಸಿ ಯಶಸ್ವಿ ಮಹಿಳೆಯರನ್ನಾಗಿ ಮಾಡಬೇಕಾದ ಜವಾಬ್ದಾರಿಯು ಸಹ ಇವರಿಗೆ ಇದೆ.

ಇದರ ಜೊತೆಗೆ ಅಪ್ಪು ಅವರು ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನಿರ್ಮಿಸಿದ ಪಿಆರ್‌ಕೆ ಪ್ರೊಡಕ್ಷನ್(PRK production)ನ ಸಂಪೂರ್ಣ ಜವಾಬ್ದಾರಿಯನ್ನು ಸಹ ಇವರೇ ಹೊತ್ತುಕೊಳ್ಳಬೇಕು. ಇದೆಲ್ಲವನ್ನು ಸಹ ಅಪ್ಪು ಅವರ ಹೆಸರಿಗೆ ಕಿಂಚಿತ್ತು ಚ್ಯುತಿ ಬಾರದಂತೆ ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಇವರು ಸಧ್ಯಕ್ಕೆ ಅಪ್ಪು ಅಭಿಮಾನಿಗಳಿಗೆ ಇರುವ ಒಂದೇ ಒಂದು ಆಸರೆ ಎನ್ನಬಹುದು. ಅಪ್ಪು ಅವರಂತೆ ಅಶ್ವಿನಿ ಅವರ ಸಹ ಅಭಿಮಾನಿಗಳ ಸಹಾಯಕ್ಕಾಗಿ ನಿಂತಿದ್ದಾರೆ.

ಇವರು ಅಪ್ಪು ಅವರಂತೆ ಕಷ್ಟ ಹೇಳಿಕೊಂಡು ಬರುವವರಿಗೆ ಯಾವುದೇ ಪ್ರಚಾರ ಬಯಸದೆ ಕೈಲಾದಷ್ಟು ಸಹಾಯ ಮಾಡಿ ಸಾಂತ್ವನ ಹೇಳಿ ಕಳಿಸುತ್ತಿದ್ದಾರೆ. ಇಷ್ಟೆಲ್ಲಾ ಮಾಡುವುದರ ಜೊತೆಗೆ ಅಪ್ಪು ಅವರ ಸ್ಥಾನವನ್ನು ತುಂಬುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಎಷ್ಟೇ ಹೊರಪ್ರಪಂಚಕ್ಕೆ ಗಟ್ಟಿಯಾಗಿ ನಿಲ್ಲುವ ಧೈರ್ಯ ಮಾಡುತ್ತಿದ್ದರು ಒಳಗಿನ ಅವರ ಹೃದಯ ಅಪ್ಪು ಅವರು ಇಲ್ಲದೆ ವಿಲವಿಲ ಎಂದು ಒದ್ದಾಡುತ್ತಿರುವುದು ಕಣ್ಣೆದುರೇ ಕಾಣುತ್ತಿದೆ. ಅಪ್ಪು ಅವರನ್ನು ಕಳೆದುಕೊಂಡ ದಿನದಿಂದ ಅವರಿಗಾಗಿ ಕಣ್ಣೀರಿಡದ ಜೀವವೇ ಈ ನಾಡಿನಲ್ಲಿ ಇಲ್ಲ ಅನ್ನಬಹುದು.

ಪ್ರತಿದಿನ ಕೂಡ ಒಂದು ಬಾರಿಯಾದರೂ ಇಡೀ ನಾಡಿನ ಜನ ಅಪ್ಪು ಅವರು ನೆನೆಯುತ್ತಾರೆ. ಇಷ್ಟೆಲ್ಲ ಪ್ರೀತಿಯನ್ನು ಅಭಿಮಾನಿಗಳು ತೋರುತಿರುವಾಗ ಅಪ್ಪು ಅವರ ಕುಟುಂಬಕ್ಕೆ ಅವರ ಅ-ಗ-ಲಿ-ಕೆ ನೋವು ಎಷ್ಟು ಇರಬಹುದು ಎನ್ನುವುದನ್ನು ಅಳತೆ ಮಾಡಲು ಅಸಾಧ್ಯ. ಅದರಲ್ಲೂ ಮಕ್ಕಳ ಪಾಲಿಗೆ ಮತ್ತು ಮುದ್ದು ಮಡದಿಯ ಪಾಲಿಗೆ ಹಾಗೂ ಸ್ನೇಹಿತರಂತಿದ್ದ ಅಣ್ಣಂದಿರ ಪಾಲಿಗಂತೂ ಈ ದುಃಖ ನುಂಗಲಾರದ ತುಪ್ಪ.

ಹಾಗಾಗಿ ಅಪ್ಪು ಅವರನ್ನು ನೆನೆದು ಅಶ್ವಿನಿ ಅವರು ಕಣ್ಣೀರಿಟ್ಟಿದ್ದಾರೆ. ಜೊತೆಗೆ ಇತ್ತೀಚೆಗೆ ಆಗುತ್ತಿರುವ ಅಪ್ಪು ದಚ್ಚು ಫ್ಯಾನ್ವಾರ್(Fan war) ನೋಡಿ ಅಪ್ಪು ಬಗ್ಗೆ ಅಪಪ್ರಚಾರ ಆಗುತ್ತಿರುವುದರಿಂದ ಕೂಡ ಮನನೊಂದು ಅವರು ಅಪ್ಪು ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ, ಅಪ್ಪು ಇರುವವರಿಗೆ ಎಂದು ಕೂಡ ಈ ರೀತಿ ಅವರ ಹೆಸರು ದುರ್ಬಳಕೆ ಆಗಿರಲಿಲ್ಲ ಈಗ ಈ ಪರಮಾತ್ಮನ ಹೆಸರನ್ನು ಬಳಸಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದ್ದರಲ್ಲ ಎಂದು ಸಹ ಅಶ್ವಿನಿ ಅವರ ಕಣ್ಣು ತುಂಬಿ ಬಂದಿರಬಹುದು. ಅದೇನೇ ಇದ್ದರೂ ಅಶ್ವಿನಿ ಅವರು ಕರ್ನಾಟಕದ ಜನತೆಗಾಗಿ ತಮ್ಮೆಲ್ಲ ದುಃಖವನ್ನು ಮರೆಯಬೇಕಿದೆ. ಇಡೀ ಕರ್ನಾಟಕದ ಅಪಾರ ಅಭಿಮಾನಿಗಳ ಪ್ರೀತಿ ಅಶ್ವಿನಿ ಅವರ ಪಾಲಿಗೆ ಇದೆ ಎನ್ನಬಹುದು.

- Advertisment -