Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ʻಗೃಹ ಲಕ್ಷ್ಮೀʼ ಯೋಜನೆಗೆ ಅರ್ಜಿ ಸಲ್ಲಿಸಬೇಕಾ.? SMS ಮಾಡೋದು ಬೇಡ, ಸೇವಾ ಕ್ರೇಂದ್ರಗಳಿಗೆ ಹೋಗೋದು ಬೇಡ ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು.!

Posted on July 22, 2023 By Admin No Comments on ʻಗೃಹ ಲಕ್ಷ್ಮೀʼ ಯೋಜನೆಗೆ ಅರ್ಜಿ ಸಲ್ಲಿಸಬೇಕಾ.? SMS ಮಾಡೋದು ಬೇಡ, ಸೇವಾ ಕ್ರೇಂದ್ರಗಳಿಗೆ ಹೋಗೋದು ಬೇಡ ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಬಹುದು.!

 

ನೀವು ಕೂಡ ʻಗೃಹ ಲಕ್ಷ್ಮೀʼ ಯೋಜನೆಯ ಅರ್ಜಿ ಸಲ್ಲಿಸಲು ಬಯಸುತ್ತಿದ್ದೀರಾ…? ಹಾಗಿದ್ದರೇ ನೀವು ಚಿಂತೆ ಮಾಡಬೇಡಿ. ಈ ಲೇಖನದಲ್ಲಿ ಗೃಹಲಕ್ಷ್ಮೀ ಯೋಜನೆಗೆ ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ನೀಡಲಿದ್ದೇವೆ. ಅರ್ಜಿ ಯಾವ ರೀತಿ ಭರ್ತಿ ಮಾಡಬೇಕು, ಯಾವ ಯಾವ ದಾಖಲೆಗಳು ಬೇಕು ಮತ್ತು ಇತರೆ ಮಾಹಿತಿಗಳನ್ನು ನೀಡಲಾಗುತ್ತದೆ. ಆದ್ದರಿಂದ, ಈ ಲೇಖನವನ್ನು ಪೂರ್ತಿ ಓದಿ ಅರ್ಜಿ ಸಲ್ಲಿಸಿ.

ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ʻಗೃಹ ಲಕ್ಷ್ಮೀʼ (Gruhalakshmi) ಯೋಜನೆಯನ್ನು ಜಾರಿಗೆ ತರಲು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕರ್ನಾಟಕ ಸರ್ಕಾರ ನಿರ್ಧರಿಸಿದ್ದು, ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಗೃಹ ಲಕ್ಷ್ಮೀ ಯೋಜನೆಯ ಉದ್ದೇಶಗಳು

ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳುತ್ತದೆ. ಅದರಂತೆ ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಬಹು ಪ್ರಮುಖವಾಗಿರುತ್ತದೆ. ಮನೆ ಯಜಮಾನಿಯು ಆರ್ಥಿಕವಾಗಿ ಸಬಲೀಕರಣವಾದರೆ, ಕುಟುಂಬ ನಿರ್ವಹಣೆಯು ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2,000 ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಗೃಹ ಲಕ್ಷ್ಮೀ ಯೋಜನೆಗೆ ಯಾರು ಅರ್ಹರು?

ಕರ್ನಾಟಕ ಆಹಾರ ಇಲಾಖೆ ವಿತರಿಸುವ ಅಂತ್ಯೋದಯ (AAP), ಬಿಪಿಎಲ್ (BPL) ಮತ್ತು ಎಪಿಎಲ್ (APL) ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಬ್ಬ ಮಹಿಳೆಗೆ ಮಾತ್ರ ಈ ಯೋಜನೆ ಅನ್ವಯಿಸಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರಾಗಿರುವುದಿಲ್ಲ?

ಈ ಮಾನದಂಡಗಳನ್ನು ಹೊಂದಿರುವವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
* ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ (Income Tax Returns) ಪಾವತಿದಾರರಾಗಿದ್ದಲ್ಲಿ.
*ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ GST ರಿಟರ್ನ್ಸ್ (GST Returns) ಸಲ್ಲಿಸುವವರಾಗಿದ್ದಲ್ಲಿ ಅರ್ಹರಾಗಿರುವುದಿಲ್ಲ.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು

‌-ರೇಷನ್‌ ಕಾರ್ಡ್
-ಆಧಾರ್ ಕಾರ್ಡ್‌
-ಬ್ಯಾಂಕ್‌ ಖಾತೆ ವಿವರ
-ವೋಟರ್‌ ಐಡಿ
-ಫಲಾನುಭವಿಯ ಭಾವಚಿತ್ರ
-ಅಗತ್ಯವಿರುವ ವಿವರಗಳು
-ರೇಷನ್‌ ಕಾರ್ಡ್ ಸಂಖ್ಯೆ
-ಆಧಾರ್ ಸಂಖ್ಯೆ
-ಮೊಬೈಲ್‌ ನಂಬರ್
-ಬ್ಯಾಂಕ್‌ ಖಾತೆ ಸಂಖ್ಯೆ
-IFSC Code
-Aadhaar Seeded Bank Name
-ಪತಿಯ ಆಧಾರ್ ಸಂಖ್ಯೆ
-ಪತಿಯ ಮೊಬೈಲ್‌ ಸಂಖ್ಯೆ

ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?‌

ಈ ಯೋಜನೆಯ ಸೌಲಭ್ಯ ಪಡೆಯಲು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು ಅಥವಾ ಸ್ವಯಂಸೇವಕ “ಪ್ರಜಾಪ್ರತಿನಿಧಿಗಳು” ಮನೆ ಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ ಎಂದು ಸರ್ಕಾರ ತಿಳಿಸಿದೆ.

“ಗೃಹ ಲಕ್ಷ್ಮೀ” ಯೋಜನೆಗೆ ಆನ್‌ಲೈನ್‌ ಅರ್ಜಿ ಸಲ್ಲಿಸುವುದು ಹೇಗೆ?

ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಕಾಯುತ್ತಿರುವವರು ಈಗಾಗಲೇ ಗೃಹ ಜ್ಯೋತಿ ಯೋಜನೆಯ ಅರ್ಜಿ ಸಲ್ಲಿಸಿದ್ದೀರಿ. ಈಗ ಈ ಯೋಜನೆಯ ಆನ್‌ಲೈನ್‌ ಅರ್ಜಿಯು ಆರಂಭವಾಗಿದ್ದು, ಅರ್ಜಿಯನ್ನು ಹೇಗೆ ಭರ್ತಿ ಮಾಡುವುದು ಎಂಬುದನ್ನು ಈ ಕೆಳಗಿನ ಸುಲಭ ವಿಧಾನಗಳ ಮೂಲಕ ತಿಳಿಸಲಾಗಿದೆ. ಅರ್ಹರು ಅರ್ಜಿ ಸಲ್ಲಿಸುವ ಮಾಹಿತಿಯನ್ನು ಪಡೆದು ಅರ್ಜಿ ಭರ್ತಿ ಮಾಡಿ.

How to Register for Gruha Lakshmi scheme in Karnataka?
ಈ ಸುಲಭ ವಿಧಾನಗಳನ್ನು ಅನುಸರಿಸಿ ಹಾಗೂ ಗೃಹಲಕ್ಷ್ಮೀ (Gruhalakshmi) ಯೋಜನೆಯ ಅರ್ಜಿ ಸಲ್ಲಿಸಿ (ಆರ್ಜಿ ಆರಂಭವಾದ ನಂತರ). “ಗೃಹ ಲಕ್ಷ್ಮೀ” ಆನ್‌ಲೈನ್‌ ಅರ್ಜಿ ಸಲ್ಲಿಕೆ ಮಾಡಲು ಎರಡು ವಿಧಾನಗಳು ಇರಬಹುದು.

ಮೊಬೈಲ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

* ಮೊದಲು ಮೊಬೈಲ್‌ನಲ್ಲಿ ʻಗೃಹ ಲಕ್ಷ್ಮೀ ಫೈನಾನ್ಸ್‌ ಸಿವಿʼ ಎಂಬ ಆಪ್‌ ಡೌನ್‌ಲೋಡ್‌ ಮಾಡ್ಕೊಳಿ.
* ಈಗ ಅದರ ಮೇಲೆ ಕ್ಲಿಕ್‌ ಮಾಡಿ ಲಾಗ್‌ ಇನ್‌ ಆಗಿ.
* ಗೃಹ ಲಕ್ಷ್ಮೀ ಯೋಜನೆಗೆ ಅರ್ಹ ಮಹಿಳೆಯ ಮೊಬೈಲ್‌ ನಂಬರ್‌ ಹಾಕಿ ಲಾಗ್‌ ಇನ್‌ ಆಗಿ.
* ಈಗ ನೀವು ಸಲ್ಲಿಸಿದ ಮೊಬೈಲ್‌ ನಂಬರರ್‌ಗೆ ಒಟಿಪಿ ಬರುತ್ತದೆ.
* ಒಟಿಪಿ ಹಾಕಿ ಲಾಗ್‌ ಇನ್‌ ಆಗಿ.
* ಈಗ ಗೃಹ ಲಕ್ಷ್ಮೀ ಯೋಜನೆಯ ಆಪ್‌ ಓಪನ್‌ ಆಗುತ್ತದೆ. ಇದು ಸರ್ಕಾರದ ಅಧಿಕೃತ ಆಪ್‌ ಆಗಿದೆ.
* ಇಲ್ಲಿ ಸ್ಕ್ರೀನ್‌ ಮೇಲೆ 2 ರೀತಿಯ ಅಪ್ಲಿಕೇಷನ್‌ ಕಾಣಿಸುತ್ತದೆ. (ಒಂದು ಹೊಸ ಅರ್ಜಿ ಮತ್ತು ಇನ್ನೊಂದು ಸಲ್ಲಿಸುವ ಅರ್ಜಿ).
* ಇಲ್ಲಿ ಹೊಸ ಅರ್ಜಿ ಮೇಲೆ ಕ್ಲಿಕ್‌ ಮಾಡಬೇಕು.
* ಇಲ್ಲಿ ರೇಷನ್‌ ಕಾರ್ಡ್‌ ನಂಬರ್‌ ಹಾಕಿ ಪರಿಶೀಲಿಸಿ ಕ್ಲಿಕ್‌ ಮಾಡಿದ್ರೆ, ರೇಷನ್‌ ಕಾರ್ಡ್‌ನವರ ಹೆಸರು ಕಾಣಿಸುತ್ತದೆ.
* ಇಲ್ಲಿ ಕೆಳಗೆ ವರ್ಗ ಆಯ್ಕೆ ಮಾಡಬೇಕು, ಮೊಬೈಲ್‌ ನಂಬರ್‌, ಒಟಿಪಿ ಹಾಕಿ ಅರ್ಜಿ ಸಲ್ಲಿಸಬೇಕು.

ಈ ರೀತಿಯಾಗಿ ನೀವು ಮೊಬೈಲ್‌ ಆಪ್‌ ಮೂಲಕ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Useful Information Tags:Gruhalakshmi scheme, How to apply gruhalakshmi scheme

Post navigation

Previous Post: ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್, 2023-24 ನೇ ಸಾಲಿನ ಕಾಲೇಜ್ ಫೀಸ್ ಇರಲ್ಲ.! ಸರ್ಕಾರದ ಅಧಿಕೃತ ಘೋಷಣೆ, ಇದು ಯಾರಿಗೆ ಅನ್ವಯ ಆಗುತ್ತೆ ನೋಡಿ.!
Next Post: Annabhagya scheme: “ಅನ್ನ ಭಾಗ್ಯ” ಯೋಜನೆ ಹಣ ಇನ್ನೂ ನಿಮ್ಮ ಬ್ಯಾಂಕ್‌ ಖಾತೆಗೆ ಬಂದಿಲ್ವಾ.? ಹಾಗಿದ್ರೆ ತಪ್ಪದೆ ಈ ಕೆಲಸ ಮೊದಲು ಮಾಡಿ.! ಹಣ ಖಂಡಿತ ಬರುತ್ತೆ.!

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme