ಒಂದು ಕಾಲದಲ್ಲಿ ಸಮಾಜದಲ್ಲಿ ಆಗುಹೋಗುಗಳ ಬಗ್ಗೆ ಸಿನಿಮಾ ನೋಡಿ ತಿಳಿದುಕೊಳ್ಳುವ ಕಾಲ ಇತ್ತು. ಅಂತಹ ದಿನಗಳಲ್ಲಿ ಬಿಡುಗಡೆ ಆದ ಕನ್ನಡದ ಒಂದು ಚಿತ್ರ ಅಂತ (Antha) . ಇದೇ ಸಿನಿಮಾವು ಅಂಬರೀಶ್ (Ambarish) ಅವರಿಗೆ ರೆಬೆಲ್ ಸ್ಟಾರ್ (rebel star) ಎನ್ನುವ ಬಿರುದು ತಂದು ಕೊಟ್ಟಿತ್ತು. ಯಾಕೆಂದರೆ ಆ ಸಮಯದಲ್ಲಿ ರಾಜಕೀಯದಲ್ಲಿ ಆಗುತ್ತಿದ್ದ ಅನ್ಯಾಯ ಮೋಸ ವಂಚನೆ ಭ್ರಷ್ಟಾಚಾರ ಇಂತವುಗಳಿಗೆಲ್ಲ ಹಿಡಿದ ಕೈ ಕನ್ನಡಿಯಂತೇ ಅಂತ ಸಿನಿಮಾ ತಯಾರಾಗಿತ್ತು.
ಅಂತ ಸಿನಿಮಾದಲ್ಲಿ ನಿಷ್ಠಾವಂತ ಪೊಲೀಸ್ ಅಧಿಕಾರಿ ಒಬ್ಬರು ಸಮಾಜದಲ್ಲಿ ಸಾಮಾನ್ಯ ಜನರಿಗೆ ಮೋಸ ಮಾಡಿ ವಂಚಿಸುತ್ತಿದ್ದವರನ್ನು ತಾನೇ ಶಿಕ್ಷಿಸಿ ಕೊಂದು ನಂತರ ಜೈಲು ಸೇರಿದ್ದ ನಿಜ ಕಥೆಯಿಂದ ಸ್ಪೂರ್ತಿಗೊಂಡು ತಯಾರಾಗಿದ್ದ ಸಿನಿಮಾ ಇದಾಗಿತ್ತು. ಇದೇ ಮೊದಲ ಬಾರಿಗೆ ಇಂತಹ ಪ್ರಯತ್ನ ಕನ್ನಡದಲ್ಲಿ ನಡೆದಿದ್ದು ಆನಂತರ ದೊಡ್ಡ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿತ್ತು.
ಅದೇನೆಂದರೆ ಕ್ರಾಂತಿ ಸಿನಿಮಾದ ವಿಚಾರಗಳ ಕುರಿತು ವಿವಾದಗಳು ಏರ್ಪಟ್ಟು ಆ ಸಮಯದಲ್ಲಿ ಅತಿ ಹೆಚ್ಚಿನ ವಿವಾದ ಹೊಂದಿದ್ದ ಸಿನಿಮಾ ಎನಿಸಿಕೊಂಡಿತು. ನಂತರ ಈ ಸಿನಿಮಾ ರಿಲೀಸ್ ಆಗಬಾರದು ಎಂದು ಕೂಡ ತಡೆ ಬಂದಿತ್ತು ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರು ನ್ಯಾಯಾಲದ ಮೆಟ್ಟಿಲೇರಿ ಸಿನಿಮಾ ಬಿಡುಗಡೆ ಆಗುವಂತೆ ಕೋರಿಕೊಂಡಿದ್ದರು. ಕೊನೆಗೆ ಸುಪ್ರೀಂಕೋರ್ಟ್ (Supreme court ) ವರೆಗೂ ಹೋಗಿದ್ದ ಈ ಸಿನಿಮಾದ ಗಲಾಟೆ ವಿಚಾರಕ್ಕೆ ಕೆಲವೊಂದು ಸೀನ್ಗಳಿಗೆ ಕತ್ತರಿ ಹಾಕಿಸಿ ಬಿಡುಗಡೆಗೆ ಆಗಲು ಒಪ್ಪಿಗೆ ಪಡೆದುಕೊಂಡಿತು.
ನಂತರ ಇದೊಂದು ದೊಡ್ಡ ಇತಿಹಾಸವನ್ನೇ ಬರೆದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಕೂಡ ರಿಮೇಕ್ ಆಗಿ ಹಿಟ್ ಆಯಿತು. ನಂತರ ಅಂತ ಸಿನಿಮಾದ ಕಥಹಂದರವನ್ನು ಇಟ್ಟುಕೊಂಡು ಅದಕ್ಕೆ ಬೇರೆ ಬೇರೆ ಸಿನಿಮಾಗಳು ಕನ್ನಡದಲ್ಲಿ ಬರತೊಡಗಿದವು. ಈ ಸಿನಿಮಾದ ಸೀಕ್ವೆಲ್ ಬರಬೇಕು ಅಂತ ಸಿನಿಮಾದ ಮುಂದುವರಿದ ಭಾಗ ಹೇಗಿರುತ್ತದೆ ಎಂದು ನಾವು ನೋಡಬೇಕು ಎಂದು ಅನೇಕ ಕನ್ನಡಿಗರು ಇಚ್ಛೆ ಪಟ್ಟಿದ್ದರು.
ಅಂತ ಸಿನಿಮಾ ಬಿಡುಗಡೆ ಆದ 15 ವರ್ಷಗಳ ಬಳಿಕ ಅಂದರೆ 1995ರಲ್ಲಿ ಆಪರೇಷನ್ ಅಂತ (Operation Antha) ಎನ್ನುವ ಅಂತ ಸಿನಿಮಾದ ಕಥೆಯ ಮುಂದುವರಿದ ಭಾಗ ತಯಾರಾಗಿತ್ತು. ಈ ಸಿನಿಮಾದ ನಿರ್ದೇಶನವನ್ನು ರಿಯಲ್ ಸ್ಟಾರ್ ಉಪೇಂದ್ರ (Real star Upendra) ಮಾಡಿದ್ದರು. ಆಗಷ್ಟೇ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಎಂಟ್ರಿ ಆಗಿದ್ದ ಉಪೇಂದ್ರ ಅವರು ಓಂ (OM) ಹಾಗೂ ಆಪರೇಷನ್ ಅಂತ ಸಿನಿಮಾವನ್ನು ಒಟ್ಟೊಟ್ಟಿಗೆ ನಿರ್ದೇಶನ ಮಾಡಿದ್ದರು. ಒಂದು ಕಡೆ ಓಂ ಸಿನಿಮಾ ನಿರೀಕ್ಷೆಗೂ ಮೀರಿದ ಗೆಲುವನ್ನು ಪಡೆದು ಕನ್ನಡದಲ್ಲಿ ಹೊಸ ದಾಖಲೆಯನ್ನು ಬರೆಯಿತು.
ಇಂದಿಗೂ ಓಂ ಸಿನಿಮಾ ಹೆಸರು ಕೇಳಿದರೆ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಆದರೆ ಅದೇ ಸಮಯಕ್ಕೆ ಅದೇ ನಿರ್ದೇಶಕನ ಆಪರೇಷನ್ ಅಂತ ಮಾತ್ರ ಅಂಬರೀಶ್ ಅವರೇ ಆಪರೇಷನ್ ಅಂತ ಸಿನಿಮಾದಲ್ಲಿ ನಟಿಸಿದ್ದರು ಕೂಡ ಜನರಿಗೆ ಒಪ್ಪಿಗೆ ಆಗುವುದೇ ಇಲ್ಲ. ಸಿನಿಮಾ ಕಲೆಕ್ಷನ್ ಮಾಡುವುದರಲ್ಲಿ ಸೋತರು ಕೂಡ ನಂತರ ಅನೇಕ ವಿಷಯಗಳಿಗೆ ಸ್ಪೂರ್ತಿ ಆಯಿತು. ಸಮಾಜದ ಭ್ರಷ್ಟಾಚಾರದ ವಿರುದ್ಧ ಮತ್ತು ರಾಜಕೀಯದ ಬಗ್ಗೆ ಕೂಡ ತೋರಿಸಲಾಗಿತ್ತು.
ಅಧಿಕಾರಿಗಳು ಹೇಗೆ ಜನರನ್ನು ವಂಚಿಸಿ ಪವರ್ ಪಡೆದುಕೊಳ್ಳುತ್ತಾರೆ, ನಂತರ ಹೇಗೆ ಮೋಸ ಮಾಡುತ್ತಾರೆ ಎನ್ನುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿತ್ತು. ಆದರೂ ಕೂಡ ಅದ್ಯಾಕೋ ಸಿನಿಮಾ ಅಂದುಕೊಂಡಂತೆ ಸದ್ದು ಮಾಡಲೇ ಇಲ್ಲ. ಉಪೇಂದ್ರ ಅವರು ಸದಾ ಕಾಲ ತಮ್ಮ ನಿರ್ದೇಶನದಲ್ಲಿ ಆದಷ್ಟು ಸರ್ಕಾರದ ಅನ್ಯಾಯಗಳನ್ನು ತೋರಿಸುವ ಪ್ರಯತ್ನವನ್ನು ಅಂದಿನಿಂದ ಮಾಡುತ್ತಲೇ ಇದ್ದಾರೆ, ಅದು ಹೀಗೆ ಮುಂದುವರೆಯಲಿ ಎಂದು ಕೇಳಿಕೊಳ್ಳೋಣ.