ಬಾಲಿವುಡ್ ಬೆಡಗಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರರವರು (Shilpa Shetty husband Raj Kundra) ಹೆಸರಾಂತ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಆದರೆ ಕಳೆದ ವರ್ಷ ಅ’ಶ್ಲೀ’ಲ ಸಿನಿಮಾ (porn movies) ತಯಾರಿಕೆ ಆರೋಪದ ಮೇಲೆ ಜೈಲು (jail) ಸೇರಿದ್ದರು. ಸದ್ಯಕ್ಕೆ ಬೇಲ್ ಮೇಲೆ ಬಿಡುಗಡೆ ಆಗಿರುವ ಇವರು ತಮ್ಮ ಅಭಿನಯದ ಹಾಗೂ ನಿರ್ಮಾಣದ ರಾಜ್ ಕುಂದ್ರ UT-69 ಸಿನಿಮಾವನ್ನು (UT-69 Movie Raj Kundra biopic) ತೆರೆ ಮೇಲೆ ತರುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಈ ಚಿತ್ರವು ಅವರ ಬಯೋಪಿಕ್ ಆಗಿದ್ದು ಸಿನಿಮಾದಲ್ಲಿ ಅಶ್ಲೀಲ ಸಿನಿಮಾ ತಯಾರಿಕೆ ಆರೋಪದ ಮೇಲೆ ಅವರು ಜೈಲು ಸೇರಿದ ಸನ್ನಿವೇಶಗಳನ್ನು ಆಧರಿಸಿ ಕಥೆ ಎಣೆದು ತೋರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೂ ಕೂಡ ನೆಗೆಟಿವ್ ಕಮೆಂಟ್ ಗಳೇ ಹೆಚ್ಚಾಗುತ್ತಿದ್ದು ಜನರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಕೂಡ ಇದೆ.
ಸದ್ಯಕ್ಕೀಗ ತಮ್ಮ ಹೊಣೆಗಾರಿಕೆಯ ಚಿತ್ರವನ್ನು ಜನರಿಗೆ ತಲುಪಿಸುವ ಸಲುವಾಗಿ ಪ್ರೊಮೋಷನ್ ಕಾರ್ಯದಲ್ಲಿ ಪಾಲ್ಗೊಂಡಿರುವ ರಾಜ್ ಕುಂದ್ರಾ ರವರು ಸಂದರ್ಶನಗಳನ್ನು ಪಾಲ್ಕೊಳ್ಳುತ್ತಿದ್ದಾರೆ. ಇದೇ ರೀತಿ ಸಂದರ್ಶನ ಒಂದರಲ್ಲಿ ಅವರ ಮೇಲೆ ಆರೋಪ ಬಂದ ಆ ದಿನ ಹಾಗೂ ಆನಂತರದ ಪರಿಣಾಮ ಮತ್ತು ಜೈಲಿನಲ್ಲಿ ಅವರು ಕಳೆದ ಕ್ಷಣಗಳ ಬಗ್ಗೆ ಪ್ರಶ್ನೆಗಳನ್ನು ಎದುರಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಅವರು ಆ ಸಮಯದಲ್ಲಿ ಪತ್ನಿ ಶಿಲ್ಪ ಶೆಟ್ಟಿ ಅವರು ಹೇಳಿದ ಒಂದು ಮಾತಿನ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಅದೇನೆಂದರೆ ಪೋರ್ನ್ ಸಿನಿಮಾಗಳ ತಯಾರಿಕೆ ಮತ್ತು ಡಿಸ್ಟ್ರಿಬ್ಯುಶನ್ ಆರೋಪ ಬಂದ ಅವಮಾನವನ್ನು ಸಹಿಸಲಾಗದೆ ಶಿಲ್ಪ ಶೆಟ್ಟಿ ಅವರು ರಾಜಕುಂದ್ರಕ್ಕೆ ದೇಶ ಬಿಟ್ಟು ಹೋಗಿ ಎಂದು ಹೇಳಿದ್ದರಂತೆ.
ರಾಜ ಕುಂದ್ರರವರು ಲಂಡನ್ ನಲ್ಲಿ ಹುಟ್ಟಿ ಬೆಳೆದವರು, ಶಿಲ್ಪಶೆಟ್ಟಿಯವರಿಗಾಗಿ ಇಂಡಿಯಾದಲ್ಲಿ ನೆಲೆಸಿದ್ದಾರೆ ಎಂದು ಹೇಳಬಹುದು. ಅದಕ್ಕಾಗಿ ಅವರಿಗೆ ಈ ಕ’ಷ್ಟ ಬಂದ ಸಮಯದಲ್ಲಿ ಶಿಲ್ಪ ಶೆಟ್ಟಿ ಅವರು ನೀವು ವಿದೇಶದಲ್ಲಿ ವಾಸಿಸಲು ಬಯಸುತ್ತೀರಾ ರಾಜ್? ನೀವು ಲಂಡನ್‌ನಲ್ಲಿಯೇ ಹುಟ್ಟಿ ಬೆಳೆದವರು.
ಆದರೆ ನಾನು ಇಲ್ಲಿರಲು ಬಯಸಿದ್ದರಿಂದ, ಎಲ್ಲವನ್ನೂ ತೊರೆದು ನನಗೆಂದು ಬಂದು ಇಲ್ಲಿದ್ದೀರಿ. ಆದರೆ ನೀವು ಬಯಸಿದರೆ, ನಾನು ಕೆಲಸ ಕೆಲಸ ಮಾಡುತ್ತೇನೆ. ನಾವು ದೇಶವನ್ನು ಬಿಡೋಣ, ವಿದೇಶಕ್ಕೆ ಹೋಗೋಣ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರೆಂದು ರಾಜ್ ಕುಂದ್ರ ಹೇಳಿಕೊಂಡಿದ್ದಾರೆ ನಾನು ಭಾರತವನ್ನು ಪ್ರೀತಿಸುತ್ತೇನೆ ಮತ್ತು ನಾನು ಭಾರತವನ್ನು ಬಿಡದಿರಲು ನಿರ್ಧರಿಸಿರುವುದಾಗಿ ಆ ಸಂದರ್ಭದಲ್ಲಿ ನಾನು ಶಿಲ್ಪಾಗೆ ಹೇಳಿದ್ದೆ ಎಂದು ಹೇಳಿದ್ದಾರೆ.
ಜೈಲಿನಲ್ಲಿ ಕಳೆದ ಅನುಭವಗಳ ಬಗ್ಗೆ ಕೂಡ ಮಾತನಾಡಿದ ಅವರು ಅದು ನನಗೆ ಬಹಳ ಅವಮಾನಕರವಾದ ಸಂಗತಿ ಆಗಿತ್ತು. ನಾನು ನಿಜವಾಗಿಯೂ ಕುಗ್ಗಿ ಹೋಗಿದ್ದೆ, ಆ ಪದವನ್ನು ಕೂಡ ಬಳಸುವ ನನಗೆ ಇಷ್ಟ ಇಲ್ಲ. ನನ್ನ ಇಮೇಜ್ ಹಾಳಾಗಿ ಹೋಯಿತು ಸಾಲದಕ್ಕೆ ನನ್ನ ಹೆಂಡತಿ ಮಕ್ಕಳು ಹಾಗು ಪೋಷಕರನ್ನು ಕೂಡ ಮೀಡಿಯಾದವರು ಬೆನ್ನತ್ತಿದ್ದರು.
ನನಗೆ ಹೊರಗೆ ಏನಾಗುತ್ತಿದೆ ಎನ್ನುವ ಎಲ್ಲ ವಿಚಾರಗಳು ಕೂಡ ಒಳಗೆ ತಿಳಿಯುತ್ತಿತ್ತು, ಸಮಯದಲ್ಲಿ ನಾನು ಬಹಳಷ್ಟು ನೋ’ವು ಅನುಭವಿಸಿದ್ದೆ ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ರಾಜ್ ಕುಂದ್ರ ಅವರ UT-69 ಸಂಬಂಧಿತ ವಿಷಯಗಳು ಹರಿದಾಡುತ್ತಿತ್ತು ತಕ್ಕಮಟ್ಟಿಗೆ ಸಿನಿಮಾ ಬಗ್ಗೆ ಆಕರ್ಷಣೆ ಉಂಟು ಮಾಡುತ್ತಿದೆ ಆದರೆ ಜನ ಹೇಗೆ ಸ್ವೀಕರಿಸುತ್ತಾರೆ ಕಾದು ನೋಡೋಣ.