ಕಾಮಿಡಿ ಉಪಾಧ್ಯಕ್ಷ ಚಿಕ್ಕಣ್ಣ (Chikkanna) ಹಾಗೂ ಜನಪ್ರಿಯ ಟಿವಿ ಆಂಕರ್ ಅನುಶ್ರೀ (Anushree) ಅವರ ಲವ್ ಸ್ಟೋರಿ ಕಾಂಟ್ರವರ್ಸಿ (lovestory controversy) ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತಿದೆ. ಯೂಟ್ಯೂಬ್ ತೆರೆದರೆ ನೂರಾರು ಇವರಿಬ್ಬರ ಮದುವೆ ಥಂಬ್ ನೇಲ್ ವಿಡಿಯೋಗಳನ್ನು ನೋಡಬಹುದು.
ಸಾಕಷ್ಟು ಬಾರಿ ಇವರಿಬ್ಬರು ಇದೆಲ್ಲ ಸುಳ್ಳು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಆದರೂ ಅನೇಕರ ಮನಸ್ಸಿನಲ್ಲಿ ಇದು ಕ್ಲಿಯರ್ ಆಗಿಲ್ಲ, ಆಗಾಗ ಇದರ ಬಗ್ಗೆಯೇ ಇಬ್ಬರಿಗೂ ಪ್ರಶ್ನೆ ಎದುರಾಗುತ್ತದೆ ಇರುತ್ತದೆ. ಇದೆಲ್ಲಾ ಎಲ್ಲಿಂದ ಶುರು ಆಯ್ತು ಎನ್ನುವುದಕ್ಕೆ ಉಪಾಧ್ಯಕ್ಷ ಸಿನಿಮಾದ (Upadyaksha) ಸಂದರ್ಶನ ಒಂದರಲ್ಲಿ ಚಿಕ್ಕಣ್ಣ ಸ್ಪಷ್ಟತೆ ಕೊಟ್ಟಿದ್ದಾರೆ. ಮತ್ತು ಕಿಚ್ಚ ಸುದೀಪ್ (Kichcha Sudeep) ಅವರು ಕೊಟ್ಟ ಟಾಸ್ಕಿಂದ ಇದೆಲ್ಲಾ ಶುರುವಾಯಿತು ಎಂದು ಶಾ.ಕಿಂಗ್ ಹೇಳಿಕೆ ಕೂಡ ಕೊಟ್ಟಿದ್ದಾರೆ.
ಕಿಚ್ಚ ಸುದೀಪ್ ಅವರ ನಟನೆಯ ಹೆಬ್ಬುಲಿ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ (Hebbuli Audio launch program) ಅನುಶ್ರೀ ಅವರು ನಿರೂಪಕಿಯಾಗಿದ್ದರು ಮತ್ತು ಆ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಕೂಡ ಭಾಗಿಯಾದ್ದರು. ಸ್ಟೇಜ್ ಮೇಲೆ ಚಿಕ್ಕಣ್ಣ ಇರುವಾಗ ಸುದೀಪ್ ಅವರು ಒಂದು ಟಾಸ್ಕ್ (task) ಕೊಟ್ಟಿದ್ದರು.
ಕೊಟ್ಟ ಮಾತು ಉಳಿಸಿಕೊಂಡ ಯಶ್, ಕುಟುಂಬಸ್ಥರ ಕೈ ಸೇರಿದ ಚೆಕ್.!
ನೀವು ಯಾವುದಾದರು ಹುಡುಗಿಗೆ ಪ್ರಪೋಸ್ ಮಾಡುವುದನ್ನು ನಾನು ನೋಡಬೇಕು ಎಂದು ಹೇಳಿದ್ದರು. ಸ್ಟೇಜ್ ಮೇಲೆ ಇದ್ದ ಅನುಶ್ರೀ ಅವರು ಈಗ ನಾನೇ ಆ ಹುಡುಗಿ ಎಂದುಕೊಂಡು ನನಗೆ ಪ್ರಪೋಸ್ ಮಾಡಿ ನೋಡೋಣ ಎಂದು ಹೇಳಿದ್ದರು, ಆಮೇಲೆ ಅವರು ಕೊಟ್ಟಿದ್ದ ಟಾಸ್ಕ್ ನಾನು ಕಂಪ್ಲೀಟ್ ಮಾಡಿದೆ.
ಆದರೆ ಸೋಶಿಯಲ್ ಮೀಡಿಯಾದಲ್ಲಿ ಅದರ ಹಿಂದೆ ಏನು ಮಾತುಕತೆ ಆಯ್ತು ಅದೆಲ್ಲ ಕಟ್ ಆಗಿ ಅವರಿಗೆ ಹೇಗೆ ಬೇಕೋ ಹಾಗೆ ಚೇಂಜ್ ಮಾಡಿಕೊಂಡು ಈ ಹಂತಕ್ಕೆ ಬಂದಿದೆ. ಜನ ಎಷ್ಟು ನಂಬುತ್ತಾರೆ ಎಂದರೆ ಇದು ನಮ್ಮ ಮನೆವರೆಗೂ ಗೊತ್ತಾಗಿ ಅವರು ನಿಜಾನ ಎಂದು ಕೇಳುತ್ತಿದ್ದಾರೆ.
ಮೊನ್ನೆ ಕೂಡ ನಮ್ಮ ಮನೆಯವರೆಲ್ಲಾ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಮೈಸೂರಿಗೆ ಹೋಗಿದ್ದೆವು, ಕೆ.ಎಸ್ ಈಶ್ವರಪ್ಪ ಅವರ ಕುಟುಂಬವು ಕೂಡ ಬಂದಿತ್ತು. ಅವರ ಕುಟುಂಬದವರು ಎಲ್ಲರನ್ನು ನೋಡಿ ನನಗೆ ಅನುಶ್ರೀ ಅವರು ಎಲ್ಲಿ ಬರಲಿಲ್ಲವೇ ಎಂದು ಕೇಳಿದರು ನನಗೆ ಶಾ.ಕ್ ಏನೂ ಹೇಳಬೇಕು ಎಂದು ಗೊತ್ತಾಗಲಿಲ್ಲ ಅಷ್ಟರಲ್ಲಿ ಕೆ. ಎಸ್ ಈಶ್ವರಪ್ಪ ರವರು ಇದು ದೇವಸ್ಥಾನ ಅಲ್ವಾ ಅದಕ್ಕೆ ಏನು ಹೇಳುತ್ತಿಲ್ಲ ಬನ್ನಿ ಬನ್ನಿ ಎಂದು ಕರೆದುಕೊಂಡು ಹೋದರು.
ಡಿ ಬಾಸ್, ಕಿಚ್ಚ, ಯಶ್, ಧ್ರುವ, ನಿಖಿಲ್ ಮನೆ ಅದ್ದೂರಿ ಸಂಕ್ರಾಂತಿ.! ವಿಡಿಯೋ ಇಲ್ಲಿದೆ ನೋಡಿ.!
ಹೀಗೆ ಬಹುತೇಕರು ಇದು ನಿಜ ಎಂದು ನಂಬಿ ಬಿಟ್ಟಿದ್ದಾರೆ ಎಂದು ಉತ್ತರ ಕೊಟ್ಟಿದ್ದಾರೆ. ನಾನು ಎಲ್ಲೇ ಹೋದರು ಈ ಪ್ರಶ್ನೆ ಇದ್ದೇ ಇರುತ್ತದೆ, ನಾನು ಎಷ್ಟು ಸಲ ಕ್ಲಿಯರ್ ಮಾಡಿದರು ಇನ್ನು ಪೂರ್ತಿಯಾಗಿ ಜನ ಇದು ಸುಮ್ಮನೆ ಎಂದು ನಂಬಿಲ್ಲ. ಇದು ನನ್ನ ಜೀವನದ ಅತಿ ದೊಡ್ಡ ಕಾಂಟ್ರವರ್ಸಿ ಎಂದು ಸಂದರ್ಶನದಲ್ಲಿ ನಿರೂಪಕರು ನಿಮ್ಮ ಮೊದಲ ಕಾಂಟ್ರವರ್ಸಿ ಯಾವುದು ಎಂದು ಕೇಳಿದ ಪ್ರಶ್ನೆಗೆ ಚಿಕ್ಕಣ್ಣ ಉತ್ತರಿಸಿದ್ದಾರೆ.
ಇದೇ ಜನವರಿ 26ರಂದು ಚಿಕ್ಕಣ್ಣ ಅವರು ಮೊಟ್ಟಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಉಪಾಧ್ಯಕ್ಷ ಕಾಮಿಡಿ ಎಂಟರ್ಟೈನ್ಸ್ ಸಿನಿಮಾ ರಿಲೀಸ್ ಆಗುತ್ತಿದೆ (Upadyaksha movur release). ಟ್ರೈಲರ್ ಈಗಾಗಲೇ ಸಾಕಷ್ಟು ಭರವಸೆಯನ್ನು ಹುಟ್ಟು ಹಾಕಿದೆ, ಎಲ್ಲರೂ ತಪ್ಪದೇ ಈ ಚಿತ್ರ ನೋಡಿ ಕನ್ನಡ ಚಿತ್ರ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತಿದ್ದೇವೆ.