Skip to content

Namma Sandalwood

  • Home
  • Viral News
  • Useful Information
  • cinema news
  • Entertainment
  • News
  • Devotional
  • Serial News
  • Job News
  • Toggle search form

ಅಪ್ಪು ಜೊತೆ ಆಕ್ಟ್ ಮಾಡಲು ಚಾನ್ಸ್ ಸಿಕ್ರು ನಟಿ ಮೇಘಾನ ರಾಜ್ ರೆಜೆಕ್ಟ್ ಮಾಡಿದ್ಯಾಕೆ ಗೊತ್ತ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.

Posted on February 25, 2023February 25, 2023 By Admin No Comments on ಅಪ್ಪು ಜೊತೆ ಆಕ್ಟ್ ಮಾಡಲು ಚಾನ್ಸ್ ಸಿಕ್ರು ನಟಿ ಮೇಘಾನ ರಾಜ್ ರೆಜೆಕ್ಟ್ ಮಾಡಿದ್ಯಾಕೆ ಗೊತ್ತ.? ಇದರ ಹಿಂದಿರುವ ಉದ್ದೇಶ ಗೊತ್ತದ್ರೆ ನಿಜಕ್ಕೂ ನೀವು ಆಶ್ಚರ್ಯ ಪಡ್ತಿರಾ.

 

ಮೇಘನಾ ರಾಜ್ ಕನ್ನಡದ ಹೆಸರಾಂತ ಕಲಾವಿದೆ. ಎಲ್ಲಕ್ಕಿಂತ ಮಿಗಿಲಾಗಿ ಚಿಕ್ಕ ವಯಸ್ಸಿಗೆ ದೊಡ್ಡ ಸಂ.ಕ.ಟ.ವನ್ನು ನುಂಗಿಕೊಂಡು ನಿಂತ ದಿಟ್ಟ ಮಹಿಳೆ. ಮೇಘನಾ ರಾಜ್ ಅವರು ಪ್ರತಿಭಾನ್ವಿತ ನಟಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದೇ ಕಾರಣಕ್ಕಾಗಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ ನಾಲ್ಕು ಭಾಷೆಯಲ್ಲಿ ಕೂಡ ಬೇಡಿಕೆ ಗಿಟ್ಟಿಸಿಕೊಂಡಿದ್ದಾರೆ. ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳೊಂದಿಗೆ ನಟಿಸಿ ಸೈ ಎನಿಸಿಕೊಂಡಿರುವ ಇವರು ಈ ಎರಡು ಚಿತ್ರರಂಗದ ಸ್ಟಾರ್ ಹೀರೋಯಿನ್ ಎಂದೇ ಹೇಳಬಹುದು.

ಮೇಘನಾ ರಾಜ್ ಅವರು ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂತಾದ ಸ್ಟಾರ್ ಹೀರೋಗಳಿಗೆ ನಾಯಕನಟಿ ಆಗಿರುವುದು ಅಲ್ಲದೆ, ಕನ್ನಡದ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಂಡು ಆ ಚಿತ್ರಗಳನ್ನು ಗೆಲ್ಲಿಸಿದ್ದಾರೆ. ಇಷ್ಟೆಲ್ಲಾ ಪ್ರತಿಭೆ ಜೊತೆಗೆ ಸೌಂದರ್ಯ ಕೂಡ ಹೊಂದಿರುವ ಈಕೆ ಚಿತ್ರರಂಗಕ್ಕೆ ಬರಬೇಕು ಎನ್ನುವುದು ಅವರ ಕುಟುಂಬದ ಆಸಕ್ತಿ ಆಗಿರಲಿಲ್ಲ. ಮೂಲತಃ ಮೇಘನ ರಾಜ್ ಅವರ ತಂದೆ-ತಾಯಿ ಇಬ್ಬರೂ ಕೂಡ ಕಲಾವಿದರು, ತಂದೆ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಜೋಷಾಯಿ ಪೋಷಕ ಪಾತ್ರಧಾರಿಯಾಗಿ ಅನೇಕ ವರ್ಷಗಳಿಂದ ಇಂಡಸ್ಟ್ರಿಯಲ್ಲಿದ್ದಾರೆ.

ಅವರ ಕುಟುಂಬದಲ್ಲಿ ಎಲ್ಲರೂ ಸಹ ವಿದ್ಯಾವಂತರೇ ಆ ಕಾರಣ ಸಿನಿಮಾಗೆ ಯಾವಾಗ ಬೇಕಾದರೂ ಬರಬಹುದು ಆದರೆ ಅವಕಾಶ ಕಡಿಮೆಯಾಗುತ್ತಿದ್ದಂತೆ ಬದುಕಿಗಾಗಿ ಏನು ಮಾಡುವುದು ಹಾಗಾಗಿ ಮೊದಲು ವಿದ್ಯಾಭ್ಯಾಸ ಮುಗಿಯಲಿ ಎನ್ನುವುದೇ ಅವರೆಲ್ಲರೂ ಇಚ್ಛೆ ಆಗಿತ್ತು. ಓದಿನಲ್ಲಿ ಮುಂದಿದ್ದ ಮೇಘನಾ ರಾಜ್ ಅವರನ್ನು ಡಾಕ್ಟರ್ ಮಾಡಬೇಕು ಎನ್ನುವುದು ಅವರ ತಂದೆಯ ಕನಸಾಗಿತ್ತು. ಆದರೆ ಮೇಘನಾ ರಾಜ್ ಅವರು ಬೆಳೆಯುತ್ತಿದ್ದಂತೆ ಪದವಿ ಮುಗಿದ ಬಳಿಕ ಅವರೇ ಇಷ್ಟ ಪಟ್ಟು ಅಭಿನಯವನ್ನೇ ಆಯ್ದುಕೊಂಡರು.

ಜೊತೆಗೆ ಕನ್ನಡದ ಜೊತೆ ಪರಭಾಷೆ ಸಿನಿಮಾಗಳನ್ನು ಕೂಡ ನಟಿಸಿ ಗೆದ್ದು ಬೀಗಿದರು. ಈ ಕುರಿತ ಮಾಹಿತಿಯನ್ನು ಸ್ವತಃ ಸುಂದರರಾಜ್ ಅವರೇ ಕನ್ನಡ ಸುದ್ದಿ ಮಾಧ್ಯಮ ಒಂದರ ಸಂದರ್ಶನ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ನನ್ನ ಮಗಳನ್ನು ನೋಡಿ ಮಲಯಾಳಂ ಖ್ಯಾತ ನಿರ್ದೇಶಕರು ಒಂದು ಮಾತು ಹೇಳಿದ್ದರು. ನಿಮ್ಮ ಮಗಳು ಮುಂದೆ ಸಕ್ಸಸ್ ಫುಲ್ ವುಮೆನ್ ಆಗುತ್ತಾರೆ ಎಂದು ಆದರೆ ಮುಂದೆ ಆಗುವ ವಿದ್ಯಾಮಾನ್ಯಗಳೆಲ್ಲ ಅವರಿಗೆ ಅರಿವಿಲ್ಲದಿದ್ದರೂ ಕೂಡ ಆ ಮಾತು ಅವರ ಬಾಯಿಂದ ಬಂದಿತ್ತು.

ಇಂದು ನನ್ನ ಮಗಳು ಅದೇ ರೀತಿ ಆಗಿದ್ದಾಳೆ ಬಾಲ್ಯದಿಂದ ಕೂಡ ನಾನು ಅವಳನ್ನು ಬಹಳ ಪ್ಯಾಂಪರ್ ಮಾಡುತಿದ್ದೆ ಅವಳಿಗೆ ಏನಾದರೂ ಆದರೆ ಸಹಿಸಿಕೊಳ್ಳುವ ಶಕ್ತಿ ನನಗಿರಲಿಲ್ಲ. ಆದರೆ ಈಗ ನನ್ನ ಮಗಳು ಬಹಳ ಗಟ್ಟಿಯಾಗಿದ್ದಾಳೆ, ನನಗೆ ತಾಯಿ ಸಮಾನವಾಗಿ ಎಲ್ಲಾ ವಿಷಯದಲ್ಲಿ ಕೂಡ ಗೈಡ್ ಮಾಡುತ್ತಾಳೆ ಎಂದು ಮಗಳ ಬಗ್ಗೆ ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಮೇಘನಾ ರಾಜ್ ಅವರ ಸಿನಿಮಾ ವಿಷಯ ಬಂದಾಗ ಅಪ್ಪು ಅವರ ಜೊತೆ ಮೇಘನಾ ರಾಜ್ ಅವರು ನಟಿಸಬೇಕಿತ್ತು ಎನ್ನುವ ವಿಷಯವನ್ನು ಕೂಡ ಸುಂದರ್ ರಾಜ್ ಅವರು ಹೇಳಿದ್ದಾರೆ.

ನಾವು ಚಿತ್ರರಂಗಕ್ಕೆ ಸಂಬಂಧಪಟ್ಟ ಯಾವುದೇ ವಿಷಯ ಇದ್ದರೂ ಅಣ್ಣಾವ್ರ ಮನೆಯಲ್ಲಿ ಅದರ ಕುರಿತು ಚರ್ಚೆ ಮಾಡುತ್ತಿದ್ದೆವು. ಆ ಸಮಯದಲ್ಲೆಲ್ಲ ನನ್ನ ಮಗಳನ್ನು ಕೂಡ ಜೊತೆಗೆ ಕರೆದುಕೊಂಡು ಹೋಗುತ್ತಿದ್ದೆ. ಹೀಗಾಗಿ ಪಾರ್ವತಮ್ಮ ಮತ್ತು ಅಣ್ಣಾವ್ರು ಇವರೆಲ್ಲ ಚಿಕ್ಕ ವಯಸ್ಸಿನಿಂದಲೂ ನನ್ನ ಮಗಳನ್ನು ನೋಡಿದ್ದರು. ಅವರ ಮನೆಯಲ್ಲಿ ಚೆನ್ನ ಎನ್ನುವ ವ್ಯಕ್ತಿ ಇದ್ದ ಆತನ ಮೇಘನಾ ಅನ್ನು ಬಹಳ ಇಷ್ಟಪಡುತ್ತಿದ್ದ. ಅವನೇ ಪಾರ್ವತಮ್ಮ ಅವರ ಬಳಿ ಹೋಗಿ ಮೇಘನಾ ರಾಜ್ ಅವರು ಬಹಳ ಚೆನ್ನಾಗಿದ್ದಾರೆ ವಜ್ರೇಶ್ವರಿ ಕಂಬೈನ್ಸ್ ಇಂದ ಅವರನ್ನು ಹಾಕಿಕೊಂಡು ಸಿನಿಮಾ ಮಾಡಿ ಎಂದು ಹೇಳಿದನಂತೆ.

ಹಾಗಾಗಿ ಪಾರ್ವತಮ್ಮ ಅವರು ಪುನೀತ್ ರಾಜಕುಮಾರ್ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟಿಸಲು ಮೇಘನಾ ರಾಜ್ ಅವರಿಗೆ ಆಫರ್ ನೀಡಿದ್ದರಂತೆ. ಅನೇಕ ನಾಯಕಿಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅವರದ್ದೇ, ಜೊತೆಗೆ ಕಲಾವಿದರ ಮಕ್ಕಳುಗಳು ಎಂದರೆ ಇನ್ನೂ ಹೆಚ್ಚಿನ ಪ್ರೀತಿ ಇರುತ್ತಿತ್ತು. ಹಾಗಾಗಿ ಸ್ವತಃ ಅವರೇ ಈ ಆಫರ್ ಅನ್ನು ಕೊಟ್ಟಿದ್ದರು. ಬಹುಶಃ ಅದು ಅಭಿ ಸಿನಿಮಾ ಆಗಿರಬಹುದು, ಆಗ ನನ್ನ ಮಗಳು 9ನೇ ತರಗತಿ ಓದುತ್ತಿದ್ದಳು. ಅಷ್ಟು ಚಿಕ್ಕ ವಯಸ್ಸಿಗೆ ಇಂಡಸ್ಟ್ರಿ ಬೇಡ ಒಂದು ವೇಳೆ ಇಲ್ಲಿಗೆ ಬಂದರೆ ಅವಳಿಗೆ ಓದಿನಲ್ಲಿ ಆಸಕ್ತಿ ಹೊರಟು ಹೋಗಬಹುದು ಎನ್ನುವ ಕಾರಣಕ್ಕೆ ಈಗ ಬೇಡ ಮುಂದೆ ನೋಡೋಣ ಎಂದು ನಾವು ನಿರ್ಧರಿಸಿದೆವು. ಆದರೆ ವಿಧಿ ಆಟ ಏನೇನೋ ಆಗಿ ಹೋಯಿತು ಎಂದು ಆ ಅವಕಾಶವನ್ನು ತಪ್ಪಿಸಿದ್ದಕ್ಕಾಗಿ ಸುಂದರ್ ರಾಜು ಅವರು ಬಹಳ ಬೇಸರ ಮಾಡಿಕೊಂಡು ಅದರ ಬಗ್ಗೆ ಹೇಳಿಕೊಂಡಿದ್ದಾರೆ.

cinema news Tags:Appu, Meghana Chiru, Meghana Raj, Powerstar Puneeth Rajkumar, Puneeth, Sundar Raj

Post navigation

Previous Post: ರವಿಚಂದ್ರನ್ ತಮ್ಮ ನಟ ಬಾಲಾಜಿ, ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದಿದ್ದು ಯಾಕೆ ಗೊತ್ತಾ.? ಇವರ ತ್ಯಾಗದ ಹಿಂದಿರುವ ಉದ್ದೇಶ ತಿಳಿದ್ರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.
Next Post: ಸುದೀಪ್ ಧರಿಸಿರುವ ವಾಚ್ ಬೆಲೆ ಎಷ್ಟು ಗೊತ್ತಾ.? ಇದರ ನಿಖರ ಬೆಲೆ ತಿಳಿದ್ರೆ ನಿಜಕ್ಕೂ ಬಾಯಿ ಮೇಲೆ ಬೆರಳಿಡ್ತೀರಾ.

Leave a Reply Cancel reply

Your email address will not be published. Required fields are marked *

  • Home
  • About Us!
  • Contact Us !
  • Privacy Policy
  • Disclaimer
  • Terms and Conditions

Recent Posts

  • Ramya: ನಾವು ಎಲ್ಲಾ ಮುಸಲ್ಮಾನರನ್ನು ಕೆಟ್ಟವರು ಅಂತ ಹೇಳೋಕೆ ಆಗಲ್ಲ.! ನಟಿ ರಮ್ಯಾ !
  • Hema: ಫಿಕ್ಸ್ ಆಗಿದ್ದ ಮದುವೆ ಕ್ಯಾನ್ಸಲ್ ಆಯ್ತು.! ದುಡ್ಡು ತಗೊಂಡ ಫ್ರೆಂಡ್ ಕ್ಯಾರೆಕ್ಟರ್ ಬಗ್ಗೆ ಮಾತಡ್ದ.! ಆ್ಯಂಕರ್ ಹೇಮ ಜೀವನದಲ್ಲಿ ಬಂದ ಕಷ್ಟಗಳೆಷ್ಟು ಗೊತ್ತಾ.?
  • Dr Rajkumar: ಅಣ್ಣಾವ್ರು, ಅಂಬಿ, ಶಂಕ್ರಣ್ಣ, ವಿಷ್ಣುದಾದಾ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ಯಾವುದು ಕಥೆ ಏನಾಯ್ತು ಗೊತ್ತಾ.?
  • Anupama Gowda: ಇನ್ನೂ ಮದುವೆಯಾಗದೇ ಇರುವುದಕ್ಕೆ ಕಾರಣ ಈ ಬಿಚ್ಚಿಟ ಅನುಪಮ ಗೌಡ.!
  • Prema: ಕೊನೆಗೂ ಡಿ’ವೋ’ರ್ಸ್ ಬಗ್ಗೆ ಮಾತನಾಡಿದ ನಟಿ ಪ್ರೇಮ.! ಅಷ್ಟಕ್ಕೂ ನಟಿ ಬಾಳಲ್ಲಿ ನಡೆದದ್ದೇನು ನೋಡಿ.!

Copyright © 2025 Namma Sandalwood.

Powered by PressBook WordPress theme